ಬೆಂಗಳೂರು: ಹಿಂದಿನ ವರ್ಷಗಳಲ್ಲಿ ಆಗಿರುವ ವಹಿವಾಟಿನ ಮಾಡಿಕೊಳ್ಳುತ್ತೇವೆ ಎಂದು ಸರಕು ಮತ್ತು ಸೇವಾ ತೆರಿಗೆ
ದಾಖಲೆಗಳನ್ನು ವ್ಯಾಪಾರಿಗಳು ಇಟ್ಟುಕೊಂಡಿಲ್ಲವಾದ ಕಾರಣ ಹಳೇ ಲೆಕ್ಕ ಕೇಳಬೇಡಿ. ಹೊಸದಾಗಿ ಜಿಎಸ್ಟಿ ನೋಂದಣಿ ಸಂಬಂಧಿಸಿದಂತೆ ನೋಟಿಸ್ ಸ್ವೀಕರಿಸಿರುವ ವ್ಯಾಪಾರಿಗಳು ತೆರಿಗೆ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಿಗಳು ಹಣ್ಣು, ತರಕಾರಿ, ಚಹ, ಬೇಕರಿ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಅವರಿಗೆ, ಜಿಎಸ್ಟಿ ತೆರಿಗೆ ಮುಂತಾದವುಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಈಗ ಏಕಾಏಕಿ ಲಕ್ಷಾಂತರ ರು. ವ್ಯಾಪಾರ ಮಾಡಿರುವ ಕುರಿತು ಲೆಕ್ಕ ಕೊಡಿ ಎಂದು ನೋಟಿಸ್ ನೀಡಿದ್ದಾರೆ. ಅದರ ಲೆಕ್ಕವನ್ನು ಬಡ ಪ್ಯಾಚಾರಿಗಳು ಎಲ್ಲಿಂದ ತರುತ್ತಾರೆ? ಈಗ ಅದಕ್ಕಾಗಿ ಸಾವಿರಾರು ರು. ಖರ್ಚು ಮಾಡಿ ‘ಕಾರ್ಟಡ್್ರಡ್ ಅಕೌಂಟೆಂಟ್ಗಳನ್ನು (ಸಿಎ) ನೇಮಿಸಿಕೊಳ್ಳಬೇಕಾಗುತ್ತದೆ. ಬಿಲ್ ಗಳನ್ನು ಒದಗಿಸಬೇಕಾಗುತ್ತದೆ. 15 ದಿನಗಳಲ್ಲಿ ಅದೆಲ್ಲಾ ಸಾಧ್ಯವೇ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಷತ್ತಿನ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಪ್ರಶ್ನಿಸಿದ್ದಾರೆ.ಹಣ್ಣು, ತರಕಾರಿ, ಚಹಾ, ಬ್ರೆಡ್, ತಂಬಾಕು ಉತ್ಪನ್ನಗಳು ಸೇರಿದಂತೆ ಅನೇಕ ವಸ್ತು ಗಳನ್ನು ಮಾರಲಾಗಿದೆ, ಖರೀದಿ ಮಾಡಲಾಗಿದೆ. ಅವುಗಳ ದಾಖಲೆಗಳನ್ನು ಯಾರೂ ಇಟ್ಟುಕೊಂಡಿರುವುದಿಲ್ಲ. ಅವುಗಳನ್ನು ಈಗ ಎಲ್ಲಿಂದ ತರುವುದು? ಎಂದಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



