Close Menu
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
What's Hot

ಮೋದಿ ಬಂದ ಮೇಲೆ ರಕ್ಷಣಾ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ಆಗಿದೆ ಗೊತ್ತೇ; ಶಾಸಕ ಎಂ.ಚಂದ್ರಪ್ಪ

ಪ್ರತಿದಿನ ಭಾರತ ಮಾತೆಯ ವೀರ ಪುತ್ರರ ಧೈರ್ಯವನ್ನು ನೆನಪಿಸಿಕೊಳ್ಳಬೇಕು – ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಕಾಂತರಾಜ್ ವರದಿಯನ್ನು ಮೇಲ್ಜಾತಿಯವರು ಮೂಲೆಯಲ್ಲಿ ಕೂರಿಸಿದ್ದಾರೆ – ರಾಮಚಂದ್ರಪ್ಪ

Facebook X (Twitter) Instagram
  • ಪ್ರಮುಖ ಸುದ್ದಿ
  • ನಮ್ಮ ಚಿತ್ರದುರ್ಗ
  • ಬಯಲುಸೀಮೆ ನೋಟ
Facebook X (Twitter) Instagram
Bayaluseeme Times | ಬಯಲುಸೀಮೆ ಟೈಮ್ಸ್
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
Subscribe
Bayaluseeme Times | ಬಯಲುಸೀಮೆ ಟೈಮ್ಸ್
Home»ನಮ್ಮ ಚಿತ್ರದುರ್ಗ»ಶಿಕ್ಷಣದಿಂದ ಬದುಕು ಸುಂದರವಾಗುತ್ತದೆ – ಸಚಿವ ಶಿವರಾಜ್ ತಂಗಡಗಿ
ನಮ್ಮ ಚಿತ್ರದುರ್ಗ

ಶಿಕ್ಷಣದಿಂದ ಬದುಕು ಸುಂದರವಾಗುತ್ತದೆ – ಸಚಿವ ಶಿವರಾಜ್ ತಂಗಡಗಿ

Times of bayaluseemeBy Times of bayaluseemeJuly 19, 2025No Comments4 Mins Read
Share WhatsApp Facebook Twitter Telegram Copy Link
Follow Us
Google News Flipboard
Share
Facebook Twitter LinkedIn Pinterest Email Copy Link

ಚಿತ್ರದುರ್ಗ: ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ನಿಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಿ, ಉನ್ನತ ಸ್ಥಾನದಲ್ಲಿದ್ಧಾಗಸಮಾಜ ಹಾಗೂ ಮಠ ಮಾಡಿದ ಸೇವೆಯನ್ನು ಮರೆಯದೇ ಬೇರೆಯವರಿಗೆ ನಿಮ್ಮ ಕೈಲಾದ ಸೇವೆಯನ್ನು ಮಾಡಿ ಎಂದುವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ತಂಗಡಗಿ ಕರೆ ನೀಡಿದರು.ನಗರದ ಹೊರ ವಲಯದ ಭೋವಿ ಗುರುಪೀಠದಲ್ಲಿ ನಡೆದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರಸ್ವಾಮೀಜಿಯವರ 16ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 27ನೇ ಲಾಂಛನ ದೀಕ್ಷಾ ಮಹೋತ್ಸವ, 40ನೇ ವಸಂತೋತ್ಸವದನಿಮಿತ್ತ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ವಧೂ-ವರರ ಸಮಾವೇಶ, ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದಸಚಿವರು, ಇಂದಿನ ದಿನಮಾನದಲ್ಲಿ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡಿ ಸಿಹಿಯನ್ನು ಹಂಚಿದರೆ ನಮ್ಮ ಇಮ್ಮಡಿ ಶ್ರೀಗಳು ತಮ್ಮಹುಟ್ಟು ಹಬ್ಬದ ದಿನದಂದು ಪ್ರತಿಭಾವಂತ ಮಕ್ಕಳನ್ನು ಕರೆಯಿಸಿ ಅವರಿಗೆ ಸ್ಕಾಲರ್ ಶಿಪ್ ಹಾಗೂ ಸನ್ಮಾನವನ್ನು ಮಾಡಿ ಶಿಕ್ಷಣಕ್ಕೆಸಹಾಯವಾಗುವ ರೀತಿಯಲ್ಲಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಸಂತೋಷವನ್ನು ಉಂಟು ಮಾಡಿದೆ ಎಂದರು.

ನಮ್ಮ ಸಮಾಜದ ಬಂಧುಗಳು ಶಿಕ್ಷಣಕ್ಕೆ ಹೆಚ್ಚಿನ ಅದ್ಯತೆಯನ್ನು ನೀಡಬೇಕಿದೆ

ನಮ್ಮ ಸಮಾಜದ ಬಂಧುಗಳು ಶಿಕ್ಷಣಕ್ಕೆ ಹೆಚ್ಚಿನ ಅದ್ಯತೆಯನ್ನು ನೀಡಬೇಕಿದೆ. ಯಾವೂತ್ತು ನಾವು ಶಿಕ್ಷಣವಂತರಾಗುತ್ತೇವೆ ಅಂದುನಮ್ಮ ಸಮಾಜ ಅಭೀವೃದ್ದಿಯಾಗುವ ಸಾಧ್ಯತೆ ಇದೆ. ಅಂಬೇಡ್ಕರ್ ರವರು ನಿಡಿದ ಸಂದೇಶದಂತೆ ಶಿಕ್ಷಣ, ಹೋರಾಟ
ಸಂಘಟನೆಯಿಂದ ಮಾತ್ರ ನಮ್ಮ ಅಭೀವೃದ್ದಿಯಾಗಲು ಸಾಧ್ಯವಿದೆ ಎಂದಿದ್ದಾರೆ ಇದನ್ನು ನಾವುಗಳು ನಮ್ಮ ಬದುಕಿನಲ್ಲಿ
ಆಳವಡಿಸಿಕೊಳ್ಳಬೇಕಿದೆ. ನಾನು ಸಹಾ ಸಮಾಜದ ಸಂಘಟನೆಯಿಂದಲೇ ರಾಜಕೀಯ ಜೀವನವನ್ನು ಪ್ರಾರಂಭ ಮಾಡಲಾಗಿದೆ ಈಹಿಂದೆ ನಮ್ಮಲ್ಲಿ ಸಂಘಟನೆ ಇರಲಿಲ್ಲ ನಮ್ಮ ಬೆನ್ನಿಗೆ ಯಾವ ಮಠಗಳು ಸಹಾ ಇರಲಿಲ್ಲ, ಆಗ ಅರಿವು, ಹೋರಾಟ, ಶಿಕ್ಷಣದ ಕೊರತೆಇತ್ತು, ಈ ಹಿನ್ನಲೆಯಲ್ಲಿ ಮಠವನ್ನು ಸ್ಥಾಪನೆ ಮಾಡುವುದರ ಮೂಲಕ ಸಂಘಟಿತರಾಗಲು ಮುಂದಾದವೇ, ಈ ಹಿಂದೆ ನಮ್ಮನ್ನುಯಾರೂ ಸಹಾ ಕೇಳುವವರಿಲ್ಲ, ಆದರೆ ಈಗ ಸಮಾಜ ಸಂಘಟನೆಯ ಜೊತೆಗೆ ಶಿಕ್ಷಣದ ಅರಿವು ಸಹಾ ಆಗುತ್ತಿದೆ ಎಂದರು.

ಇಂದಿನ ಇಮ್ಮಡಿ ಶ್ರೀಗಳನ್ನು ನಮ್ಮ ಮಠಕ್ಕೆ ಸ್ವಾಮಿಗಳಾಗಿ ಮಾಡಬೇಕಾದರೆ ಹಲವಾರು ಅಡೆ ತಡೆಗಳು ಬಂದವು ನಮ್ಮ ಮೇಲೆಹಾಗೂ ಆರವಿಂದ ಲಿಂಬಾವಳಿ ಮೇಲೆ ಕೇಸ್‍ಗಳನ್ನು ಹಾಕಲಾಯಿತು ನಮ್ಮ ಮೇಲೆ ಕೇಸ್ ಹಾಕಿದರು ಪರವಾಗಿಲ್ಲ ನಮ್ಮ ಸಮಾಜಸಂಘಟನೆ ಮುಖ್ಯ ಎಂದು ಅವುಗಳನ್ನು ಎದುರಿಸಲಾಯಿತು. ಅಂದೇ ನಿರ್ಧಾರವನ್ನು ಮಾಡಿ ನಮ್ಮ ಸಮಾಜ ಎಚ್ಚರವಾಗುತ್ತದೆಎಂಬ ನಂಬಿಕೆ ಇತ್ತು ಈಗ ಅದರಂತೆ ಆಗಿದೆ ನಮ್ಮ ಸಮಾಜ ಎಚ್ಚರಗೊಂಡಿದೆ ಶಿಕ್ಷಣವಂತರಾಗಿದ್ದಾರೆ ಎಂದ ಅವರು, ಭೋವಿಸಮಾಜ ಸಂಘಟನೆಯಾಗುತ್ತಿದೆ ಎಂಬ ನಂಬಿಕೆ ಬೇರೆ ಸಮುದಾಯದಲ್ಲಿಯೂ ಕಂಡು ಬರುತ್ತಿದೆ, ಬೇರೆ ಸಮಾಜವನ್ನು ಪ್ರೀತಿವಿಶ್ವಾಸದಿಂದ ನೋಡಿದರೆ ಅವರು ಸಹಾ ನಮ್ಮನ್ನು ಅವರು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ.ಇದರಿಂದ ಚುನಾವಣೆಯಲ್ಲಿ ನಮ್ಮ ಸಮುದಾಯದವರು ಗೆಲ್ಲುತ್ತಿದ್ದಾರೆ ಇದ್ದೆಲ್ಲಾ ಬೇರೆಯವರ ಸಮಾಜದ ಕಾಣಿಕೆಯಾಗಿದೆ ಎಂದುಸಚಿವರು ತಿಳಿಸಿದರು.

ನಮ್ಮ ಸಮಾಜದ ಬಾಂಧವರು ಬೇರೆಯವರಿಗೆ ಮಾತನ್ನು ಕೂಡುವುದಿಲ್ಲ

ನಮ್ಮ ಸಮಾಜದ ಬಾಂಧವರು ಬೇರೆಯವರಿಗೆ ಮಾತನ್ನು ಕೂಡುವುದಿಲ್ಲ ಆದರೆ ಒಮ್ಮೆ ಮಾತನ್ನು ಕೂಟ್ಟರೆ ಆಯಿತು ಅವರನ್ನುಜೀವ ಇರುವವರೆಗೂ ಕಾಯುತ್ತೇವೆ. ಕಲ್ಲು ಬಂಡೆಯತೆ ರಕ್ಷಣೆಯನ್ನು ಮಾಡಲಾಗುತ್ತದೆ. ನಮ್ಮ ಸಮಾಜ ಬೇರೆ
ಸಮಾಜದವರೊಂದಿಗೆ ಬೆರತು ಅವರ ಪ್ರೀತಿ ವಿಶ್ವಾಸವನ್ನು ಗಳಿಸುವಂತ ಕೆಲಸವನ್ನು ಮಾಡಲಾಗುತ್ತಿದೆ. ಇಲ್ಲಿಗೆ ಬಂದವರುಸುಮ್ಮನೆ ಕಾರ್ಯಕ್ರಮ ನೋಡಿಕೊಂಡು ಉಟವನ್ನು ಮಾಡಿ ಹೋಗುವುದಲ್ಲ ಬಂದವರೆಲ್ಲಾ ಮಠಕ್ಕೆ ಕಾಣಿಕೆಯನ್ನು ನೀಡುವುದರಮೂಲಕ ಸಹಾಯವನ್ನು ಮಾಡಬೇಕಿದೆ ಎಂದ ಸಚಿವರು, ಈಗ ನಮ್ಮ ಬೆನ್ನ ಹಿಂದೆ ಗುರುಗಳು ಇದ್ದಾರೆ ನಮ್ಮ ಮುಂದೆ ಗುರಿಇರಬೇಕಿದೆ. ನಮ್ಮ ಸಮಾಜ ಶಿಕ್ಷಣವನ್ನು ಪಡೆಯಬೇಕಿದೆ. ನಾವು ಹೋರಾಟಕ್ಕೆ ಇಳಿಯಬೇಕಿದೆ. ಸಂಘಟನೆಯನ್ನು ಮಾಡಬೇಕಿದೆಈ ಮೂರು ಕಡೆಯಿಂದ ನಮ್ಮ ಸಮಾಜ ಬಲಗೂಳ್ಳಬೇಕಿದೆ ಎಂದು ಶಿವರಾಜ್ ತಿಳಿಸಿದರು.
ಶಾಸಕರಾದ ಮಾನಪ್ಪ ವಜ್ಜಲ್ ಮಾತನಾಡಿ, ಭೋವಿ ಸಮಾಜದ ಶ್ರೀಗಳು ಸಮಾಜದ ಯಾವುದೇ ಕಾರ್ಯಕ್ರಮವಾದರೂ ಸಹಾತಪ್ಪದೆ ಭಾಗವಹಿಸುತ್ತಾರೆ. ಭಕ್ತರ ಮನೆಗಳಿಗೆ ಭೇಟಿ ನೀಡುವುದರ ಮೂಲಕ ಹಗಲು ರಾತ್ರಿ ಎನ್ನದೆ ಕಾಲಿಗೆ ಚಕ್ರವನ್ನು ಕಟ್ಟಿಕೊಂಡುಸಮಾಜವನ್ನು ಸಂಘಟಿಸುತ್ತಿದ್ದಾರೆ, ಭೋವಿ ಸಮಾಜ ಇಷ್ಟು ಬಲಿಷ್ಠವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ, ಬೆಳೆಯಲು ಶ್ರೀಗಳಪರಿಶ್ರಮ ಕಾರಣವಾಗಿದೆ.

ಗುರುಗಳು ನಮಗೆ ಏನು ಮಾಡಿಲ್ಲ ಎನ್ನದೆ ಗುರುಗಳಿಗಾಗಿ ನಾವು ಏನು ಮಾಡಿದ್ದೇವೆ ಎಂದು
ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಿದೆ. ಭೋವಿ ಸಮಾಜವನ್ನು ಒಂದು ಕಡೆಯಲ್ಲಿ ಕೂಡಿಸಬೇಕೆಂಬ ದೃಷ್ಟಿಯಿಂದ ಅವರಹುಟ್ಟು ಹಬ್ಬದ ನೆಪದಲ್ಲಿ ನಾವೆಲ್ಲಾ ಸಂಘಟಿತರಾಗುತ್ತಿದ್ದೇವೆ ಎಂದರು.ದೇವರಾಜು ಅರಸ್ ವಿದ್ಯಾ ಸಂಸ್ಥೆಯ ಸಿಇಓ ರಘುಚಂದನ್ ಮಾತನಾಡಿ, ನಮ್ಮ ಭೋವಿ ಸಮಾಜ ಈ ಹಿಂದೆ ಎಲ್ಲಿ ಇತ್ತುಎಂಬುದಾಗಿ ಹುಡುಕಬೇಕಿತ್ತು ಆಗ ನಮಗೆ ಯಾರ ಬೆಂಬಲವೂ ಇರಲಿಲ್ಲ ರಾಜಕೀಯವಾಗಿ ನಮ್ಮವರು ಯಾರೂ ಸಹಾ ಇರಲಿಲ್ಲ,ನಾವು ಸಂಘಟಿತರಾಗುವುದರ ಮೂಲಕ ನಮ್ಮ ಶಕ್ತಿಯ ಪ್ರದರ್ಶನವನ್ನು ಮಾಡಬೇಕಿದೆ. ಕೋಟೆಗಳು ಇತಿಹಾಸವನ್ನು ಹೇಳುತ್ತೇವೆ
ಆದರೆ ಕೋಟೆಯನ್ನು ಕಟ್ಟಿದವರು ನಾವು ಎಂಬುದನ್ನು ತಿಳಿಸಬೇಕಿದೆ. ನಮ್ಮ ಮಕ್ಕಳು ಶಿಕ್ಷಣವನ್ನು ಪಡೆಯುವುದರ ಮೂಲಕಜೀವನದಲ್ಲಿ ಉನ್ನತವಾದ ಸ್ಥಾನವನ್ನು ಪಡೆಯಬೇಕಿದೆ. ನಮ್ಮ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ಸಹಾ ಸಹಾಯಸಿಗುವಂತಾಗಬೇಕಿದೆ ಎಂದರು.

ಸಮಾರಂಭದ ಸಾನಿಧ್ಯವನ್ನು ವಹಿಸಿದ್ದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ.

ಸಮಾರಂಭದ ಸಾನಿಧ್ಯವನ್ನು ವಹಿಸಿದ್ದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಯವರು ಮಾತನಾಡಿ,ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಯಾರಿಗೆ ಅಕ್ಷರ ಪ್ರಜ್ಞೆ ಇದ್ದೆಯ ಅವರು ಇತಿಹಾಸವನ್ನು ಬರೆದುಕೊಂಡಿದ್ದಾರೆ, ಯಾವಸಮುದಾಯಗಳು ಕಾಯಕ ಶ್ರಮವನ್ನು ನಂಬಿ ಬೆವರನ್ನು ಸುರಿಸುತ್ತಾ ಅಕ್ಷರದ ಪ್ರಜ್ಞೆಯನ್ನು ಕಳೆದುಕೊಂಡಿದ್ದರೂ ಅವರಿಗೆಭವ್ಯವಾದ ಇತಿಹಾಸ ಇದ್ದರೂ ಸಹಾ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳಲಾಗಿಲ್ಲ, ಕೋಟೆ, ಡ್ಯಾಂ, ಕಟ್ಟಡಗಳನ್ನು ನಿರ್ಮಾಣಮಾಡಿದವರು ವಡ್ಡರೇ ಆಗಿದ್ದರೂ ಸಹಾ ಇತಿಹಾಸವನ್ನು ಉಳಿಸಿಕೊಳ್ಳಲು ಬರೆಸಿಕೊಳ್ಳಲಾಗಿಲ್ಲ, ನಮ್ಮ ಇತಿಹಾಸವನ್ನು ನಾಮೇಬರೆಯಬೇಕಾದರೆ ನಾವು ಅಕ್ಷರದ ವಾರಸುದಾರಿಕೆಯನ್ನು ಪಡೆಯವುದು ಅಗತ್ಯವಾಗಿದೆ. ಅಕ್ಷರ ಪ್ರಜ್ಞೆಯನ್ನು ಮೂಡಿಸಿಕೊಳ್ಳಬೇಕಿದೆ ಎಂದರು.ಭೋವಿ ಗುರು ಪೀಠ ಶಿಕ್ಷಣಕ್ಕೆ ಪ್ರಥಮವಾದ ಆದ್ಯತೆಯನ್ನು ನೀಡುವುದರ ಮೂಲಕ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು
ಅವರ ಶಿಕ್ಷಣಕ್ಕೆ ಮುಂದಾಗಿದೆ. ನಮ್ಮ ಸಮಾಜದಿಂದ ಪ್ರತಿಭಾ ಪುರಸ್ಕಾರಕ್ಕೆ ಶೇ 90 ರಷ್ಟು ಅಂಕಗಳನ್ನು ಪಡೆದ 600 ಮಕ್ಕಳನ್ನುಸನ್ಮಾನಿಸಲಾಗುತ್ತಿದೆ. ಈಗ ಸಮುದಾಯ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಅಕ್ಷರದ ಜಾಗೃತಿಯಾಗುತ್ತಿದೆ ಎಂದ ಶ್ರೀಗಳುಶಿಕ್ಷಣವನ್ನು ಪಡೆದವರೆಲ್ಲಾ ಸರ್ಕಾರದ ಉದ್ಯೋಗ ಸಿಗುತ್ತದೆ ಎಂಬ ನಂಬಿಕೆ ಇಲ್ಲ, ಈ ಹಿನ್ನಲೆಯಲ್ಲಿ ಶಿಕ್ಷಣವನ್ನು ಕಲಿತವರುಸರ್ಕಾರದ ಉದ್ಯೋಗವನ್ನು ಕಾಯದೇ ನಮ್ಮ ಕಾಲ ಮೇಲೆ ನಾವು ನಿಲ್ಲುವಂತ ಕಾರ್ಯವಾಗಬೇಕಿದೆ.

ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸ್ಕಾಲರ್ಶಿಪ್‍ನ್ನು ನೀಡುವಂತ ಕಾರ್ಯವನ್ನು ಮಾಡಿ

ಸರ್ಕಾರದಿಂದ ಉದ್ಯೋಗದನೆಪದಲ್ಲಿ ವೇತವನ್ನು ಪಡೆಯದೇ ಸರ್ಕಾರದ ಖಜಾನೆಯನ್ನು ತುಂಬಿಸುವಂತ ಕಾರ್ಯವಾಗಬೇಕಿದೆ. ಈ ಜಗತ್ತಿನಲ್ಲಿ ಹಣ ಮತ್ತುಅಧಿಕಾರಕ್ಕೆ ಬಹಳ ಗೌರವಯಿದೆ. ನಿಮ್ಮ ಕೌಶಲ್ಯವನ್ನು ಬಳಸಿ ಉದ್ದಿಮೆಯನ್ನು ಸ್ಥಾಪನೆ ಮಾಡಿದಾಗ ಬೇರೆಯವರು ನಿಮ್ಮ ಬಳಿಬರುತ್ತಾರೆ ಎಂದು ಶ್ರೀಗಳು ತಿಳಿಸಿದರು.ಹುಟ್ಟು ಬಡತನ ಇರಬಹುದು ಆದರೆ ಬಡವನಾಗಿ ಸಾಯುವುದು ತುಂಬ ತಪ್ಪಾಗುತ್ತದೆ ಕಾಯಕ ಪ್ರಜ್ಞೆಯಿಂದ ಬೆಳೆಯವ
ಕಾರ್ಯವನ್ನು ಮಾಡಿದಾಗ ಅ ಸಮಾಜ ಬೆಳೆಯುತ್ತಾ ಹೋಗುತ್ತದೆ. ಸರ್ಕಾರ ಕಲಿಯವ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸ್ಕಾಲರ್ಶಿಪ್‍ನ್ನು ನೀಡುವಂತ ಕಾರ್ಯವನ್ನು ಮಾಡಿ ಮಕ್ಕಳ ಶಿಕ್ಷಣಕ್ಕೆ ದಾರಿ ದೀಪವಾಗಬೇಕಿದೆ. ಇಲ್ಲವಾದಲ್ಲಿ ಮಕ್ಕಳು ಶಿಕ್ಷಣದಿಂದವಂಚಿತರಾಗುತ್ತಾರೆ ಇದರ ಬಗ್ಗೆ ಸರ್ಕಾರ ಆಲೋಚನೆಯನ್ನು ಮಾಡಿ ಸಕಾಲಕ್ಕೆ ಸರಿಯಾಗಿ ಮಕ್ಕಳಿಗೆ ಸ್ಕಾಲರಶಿಪ್ ತಲುವುವಂತಕಾರ್ಯಾ ವಾಗಬೇಕಿದೆ. ನಮ್ಮ ಮಠಕ್ಕೆ ಉತ್ತಮವಾದ ಶಿಷ್ಯರು ಸಿಕ್ಕಿದ್ದಾರೆ. ನಮ್ಮ ಪುಣ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಮಾಜ್ ಮುಖಂಡರಾದ ರವಿ ಮಾಕಳಿ, ಆನಂದಪ್ಪ, ಮಂಜುನಾಥ ಪ್ರಸಾದ್, ಸಂಸದರಾಧ ತುಕಾರಂ, ಭೋವಿಅಭೀವೃದ್ದಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಸಾಹಿತಿಗಳಾದ ಸಿದ್ದರಾಮಯ್ಯ, ಮಾಜಿ ಶಾಸಕರಾದ ನಾರಾಯಣಸ್ವಾಮಿ,ಮುನಿರಾಮಪ್ಪ, ನೇರ್ಲಗುಂಟೆ ರಾಮಪ್ಪ, ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಜಯ್ಯಣ್ಣ, ಸೇರಿದಂತೆ ಇತರರು ಭಾಗವಹಿಸಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿ‌ನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

bayaluseeme times ads (2)
education shivraj tangadagi super
Follow on Google News Follow on Instagram
Share. Facebook Twitter Telegram WhatsApp
Previous Articleಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಭೋದಿಸಿದ ರಾಜ್ಯಪಾಲ ಗೆಹ್ಲೋಟ್
Next Article ವ್ಯಾಯಾಮ ಶಾಲೆಯ ಸ್ಥಳದಲ್ಲಿ ಅಂಗನವಾಡಿ ಕಟ್ಟದಂತೆ ಪ್ರತಿಭಟನೆ
Times of bayaluseeme
  • Website

Related Posts

ಮೋದಿ ಬಂದ ಮೇಲೆ ರಕ್ಷಣಾ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ಆಗಿದೆ ಗೊತ್ತೇ; ಶಾಸಕ ಎಂ.ಚಂದ್ರಪ್ಪ

July 27, 2025

ಪ್ರತಿದಿನ ಭಾರತ ಮಾತೆಯ ವೀರ ಪುತ್ರರ ಧೈರ್ಯವನ್ನು ನೆನಪಿಸಿಕೊಳ್ಳಬೇಕು – ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

July 27, 2025

ಕಾಂತರಾಜ್ ವರದಿಯನ್ನು ಮೇಲ್ಜಾತಿಯವರು ಮೂಲೆಯಲ್ಲಿ ಕೂರಿಸಿದ್ದಾರೆ – ರಾಮಚಂದ್ರಪ್ಪ

July 27, 2025
Add A Comment
Leave A Reply Cancel Reply

Advertisement
Latest Posts

ಮೋದಿ ಬಂದ ಮೇಲೆ ರಕ್ಷಣಾ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ಆಗಿದೆ ಗೊತ್ತೇ; ಶಾಸಕ ಎಂ.ಚಂದ್ರಪ್ಪ

ಪ್ರತಿದಿನ ಭಾರತ ಮಾತೆಯ ವೀರ ಪುತ್ರರ ಧೈರ್ಯವನ್ನು ನೆನಪಿಸಿಕೊಳ್ಳಬೇಕು – ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಕಾಂತರಾಜ್ ವರದಿಯನ್ನು ಮೇಲ್ಜಾತಿಯವರು ಮೂಲೆಯಲ್ಲಿ ಕೂರಿಸಿದ್ದಾರೆ – ರಾಮಚಂದ್ರಪ್ಪ

ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಿ – ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2025 Bayaluseeme Time. Designed by Bayaluseeme time
  • Privacy Policy
  • Terms
  • Accessibility

Type above and press Enter to search. Press Esc to cancel.