ಕೇಂದ್ರ ಸರ್ಕಾರ 2026ರಲ್ಲಿ ನಡೆಸಲಿರುವ ಜನ, ಜಾತಿಗಣತಿಯಲ್ಲಿ ಎಲ್ಲರು ಸಹಾ ಸಕ್ರಿಯವಾಗಿ ಭಾಗವಹಿ ಸುವುದರ ಮೂಲಕತಮ್ಮ ಮಾಹಿತಿಯನ್ನು ನೀಡಿ ಮುಂದಿನ ದಿನದಲ್ಲಿ ಸರ್ಕಾರದಿಂದ ಸಿಗುವಂತ ವಿವಿಧ ರೀತಿಯ ಸೌಲಭ್ಯಗಳನ್ನು ಮುಂದಾಗುವಂತೆಸಹಾ ಉಸ್ತುವಾರಿ ಸುಧಾಕರ್ ರೆಡ್ಡಿ ಕರೆ ನೀಡಿದರು.ಕರ್ನಾಟಕ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಚಿತ್ರದುರ್ಗದ ವತಿಯಿಂದ ಕೇಂದ್ರ ಸರ್ಕಾರ ಘೋಷಿಸಿರುವ ಜಾತಿ ಜನಗಣತಿಕಾರ್ಯದ ಬಗ್ಗೆ ಹಿಂದುಳಿದ ವರ್ಗಗಳ ಜನಜಾಗೃತಿ ಮೂಡಿಸುವ ಕುರಿತು ತಿರುಮಲ ಕಲ್ಯಾಣ ಮಂಟಪದಲ್ಲಿಹಮ್ಮಿಕೊಳ್ಳಲಾಗಿದ್ದ ಹಿಂದುಳಿದ ವರ್ಗಗಳ ವಿಭಾಗ ಮಟ್ಟದ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿಅಧಿಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಠ ಸರ್ಕಾರವಾಗಿದೆ ಜನತೆಯಿಂದ ರಕ್ತವನ್ನು ಹೀರುವುದರ ಮೂಲಕ ತೆರಿಗೆಯ
ರೂಪದಲ್ಲಿ ಹಣವನ್ನು ವಸೂಲಿ ಮಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳ ಸೇರಿ ಜನರೊಂದಿಗೆ ಜೂಜಾಟವನ್ನುಆಡುತ್ತಿದ್ದಾರೆ.
ರಾಜ್ಯದಲ್ಲಿ ಯಾವುದೇ ಆಭೀವೃದ್ದಿಯಾಗುತ್ತಿಲ್ಲ
ರಾಜ್ಯದಲ್ಲಿ ಯಾವುದೇ ಆಭೀವೃದ್ದಿಯಾಗುತ್ತಿಲ್ಲ, ಓಬಿಸಿ ಜನಾಂಗಕ್ಕೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ಏನು ಬೇಕಾದರೂ ಸಹಾ ಮಾಡುವಂತ ಕಾರ್ಯವನ್ನು ಮುಖ್ಯಮಂತ್ರಿಗಳುಮಾಡುತ್ತಿದ್ದಾರೆ. ಭ್ರಷ್ಠಾಚಾರದಿಂದ ಮಾರುಕಟ್ಟೆಯಲ್ಲಿ ದರಗಳು ಏರಿಕೆಯಾಗುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಜನ ಹಿತಕ್ಕಿಂತ ತಮ್ಮಅಧಿಕಾರದ ಹಿತ ಹೆಚ್ಚಾಗಿದೆ. ಜನತೆ ತೊಂದರೆ ಪಟ್ಟವರು ಸಹಾ ತಾವು ಮಾತ್ರ ಚನ್ನಾಗಿ ಇರಬೇಕೆಂದು ಬಯಸುತ್ತಾರೆ. ತಮ್ಮಪಕ್ಷದ ಶಾಸಕರೇ ಸರ್ಕಾರದ ಬಗ್ಗೆ ತೆಗಳುತ್ತಿದ್ದರು ಸಹಾ ಮುಖ್ಯಮಂತ್ರಿಗಳು ಕಾರೇ ಎನ್ನುತ್ತಿಲ್ಲ, ತಮ್ಮ ಪಂಚ ಗ್ಯಾರೆಂಟಿಗಾಗಿತೆರಿಗೆಯನ್ನು ಹೆಚ್ಚಳ ಮಾಡಿ ಜನತೆಯನ್ನು ಲೂಟಿ ಮಾಡುತ್ತಿದೆ ಎಂದ ಅವರು, ಪ್ರಪಂಚದಲ್ಲಿ ಬಹುತೇಕ ರಾಷ್ಟ್ರಗಳು ನಮ್ಮ ದೇಶದಪ್ರಧಾನ ಮಂತ್ರಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ. ಕೇಂದ್ರದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಎನ್.ಡಿ,ಎಸರ್ಕಾರದಿಂದ ಮಾತ್ರ ಓಬಿಸಿ ಜನಾಂಗಕ್ಕೆ ನ್ಯಾಯ ಸಿಗಲು ಸಾಧ್ಯವಿದೆ. ಮೋದಿಯವರು ಎಲ್ಲಾ ಜನಾಂಗವನ್ನು ಸಹಾ ಜೊತೆಯಲ್ಲಿತೆಗೆದುಕೊಂಡು ಹೋಗುವುದರ ಮೂಲಕ ಸರ್ವರನ್ನು ಬಾಳಲು ಅವಕಾಶವನ್ನು ಕಲ್ಪಿಸಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯರುಗಳಾದ ಕೇಶವ ಪ್ರಸಾದ್ ಮಾತನಾಡಿ, ಜಾತಿ ಗಣತಿಯನ್ನು ಪ್ರತಿ 10 ವರ್ಷಕ್ಕೊಮ್ಮೆ ನಡೆಸಬೇಕು
ಎಂದಿದ್ದರು ಸಹಾ ಹಿಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರ ಸರಿಯಾದ ರೀತಿಯಲ್ಲಿ ಜಾತಿಗಣತಿಯನ್ನು ನಡೆಸದೇ ಇದರ ಬಗ್ಗೆ
ನಿರಾಸಕ್ತಿಯನ್ನು ತೋರಿತ್ತು, ನೆಹರು ಜಾತಿಗಣತಿಗೆ ವಿರೋಧ ಇದ್ದರು. ಇಂದಿರಾಗಾಂಧಿ, ರಾಜೀವಗಾಂಧಿ, ನರಸಿಂಗರಾವ್,
ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಗಳು ಜಾಗತಿಗಣತಿಯನ್ನು ಮಾಡುವಲ್ಲಿ ನಿರಾಸಕ್ತಿಯನ್ನು ಮೂಡಿಸಿದ್ದರು. ರಾಜ್ಯ
ಸರ್ಕಾರ ಜಾತಿಗಣತಿಗಾಗಿ ಹಲವಾರು ಆಯೋಗಗಳನ್ನು ರಚನೆ ಮಾಡಿ ಅವರಿಂದ ವರದಿಯನ್ನು ಪಡೆದರು ಸಹಾ ಜಾರಿ ಮಾಡುವಲ್ಲಿಮಾತ್ರ ಹಿನ್ನಡೆಯಾಗಿದೆ. 802 ಜಾತಿಗಳಲ್ಲಿ ಕೇವಲ 156 ಜಾತಿಗಳಿಗೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ ಉಳಿದ ಜಾತಿಗಳಿಗೆಯಾವ ಪ್ರಾತಿನಿದ್ಯವೂ ಸಹಾ ಸಿಕಿಲ್ಲ, ಕೇಂದ್ರ ಸರ್ಕಾರ 2026ರಲ್ಲಿ 13000 ಕೋಟಿ ವೆಚ್ಚದಲ್ಲಿ ಜಾತಿ-ಜನಗಣತಿಯನ್ನು ಮಾಡಲುಮುಂದಾಗಿದೆ. ರಾಜ್ಯ ಸರ್ಕಾರಗಳಿಗೆ ಯಾವುದೇ ಜಾತಿ-ಜನಗಣತಿಯನ್ನು ಮಾಡುವ ಅಧಿಕಾರ ಇಲ್ಲ ಎಂದು ತಿಳಿಸಿದರು.
ದೇಶದಲ್ಲಿಕಾಂಗ್ರೆಸ್ ಸರ್ಕಾರ ಯಾವುದೆ ಸಮಯದಲ್ಲಿ ಜಾತಿ ಗಣತಿಯನ್ನು ಮಾಡಿಸಿಲ್ಲ
ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಚಿತ್ರದುರ್ಗದಲ್ಲಿ ಶೇ.80 ರಷ್ಟು ಹಿಂದುಳಿದ ವರ್ಗದವರು ಇದ್ದಾರೆ. ದೇಶದಲ್ಲಿಕಾಂಗ್ರೆಸ್ ಸರ್ಕಾರ ಯಾವುದೆ ಸಮಯದಲ್ಲಿ ಜಾತಿ ಗಣತಿಯನ್ನು ಮಾಡಿಸಿಲ್ಲ, ಈಗ ನಮ್ಮ ಮೋದಿಯವರು ಈ ಕೆಲಸವನ್ನುಪ್ರಾರಂಭ ಮಾಡಲಿದ್ದಾರೆ. ರಾಜ್ಯ ಸರ್ಕಾರಕ್ಕೆ ಜಾತಿಗಣತಿಯನ್ನು ಮಾಡುವ ಅಧಿಕಾರ ಇಲ್ಲ ಆದರೂ ಸಹಾ ಮತಕ್ಕಾಗಿ ಜನತೆಗೆಮೋಸ ಮಾಡುವ ಉದ್ದೇಶದಿಂದ ಜಾತಿಗಣತಿ ನೆಪದಲ್ಲಿ ಹಣವನ್ನು ವ್ಯಯ ಮಾಡುತ್ತಿದೆ. ಮೀಸಲಾತಿಯನ್ನು ಪಡೆಯಲು ಜಾತಿಗಣತಿಅನಿವಾರ್ಯವಾಗಿದೆ. ಇದನ್ನು ಮಾಡುವುದರಿಂದ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ತಿಳಿಯಬಹುದಾಗಿದೆ. ಜಾತಿ-ಜನಗಣತಿಯ ಬಗ್ಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಸಮಾವೇಶ ನಡೆದಿದ್ದು ಈಗ ವಿಭಾಗವಾರು ಮಟ್ಟದಲ್ಲಿ ನಡೆಯುತ್ತಿದ್ದು ಮುಂದಿನದಿನಮಾನದಲ್ಲಿ ಜಿಲ್ಲಾ, ತಾಲ್ಲೂಕು ಹೋಬಳಿ ಮಟ್ಟದಲ್ಲಿ ಸಮಾವೇಶ ನಡೆಯಲಿದೆ ಎಂದರು.
ಮಾಜಿ ಸಚಿವರಾದ ಹರತಾಳ್ ಹಾಲಪ್ಪ ಮಾತನಾಡಿ, ಈಗ ಎಲ್ಲಾ ಸಮುದಾಯಕ್ಕೆ ಪರ್ವ ಕಾಲ ಪ್ರಾರಂಭವಾಗಿದೆ.
ಮೀಸಲಾತಿಯಿಂದಾಗಿ ಮಾನವರಾಗಿ ಶಿಕ್ಷಣವನ್ನು ಪಡೆಯಲಾಗಿದೆ. ಸಿದ್ದರಾಮಯ್ಯ ರವರು ಜಾತಿ ಗಣತಿಯ ವರದಿಯನ್ನು ಜಾರಿಮಾಡುತ್ತಾರೆ ಎಂಬ ನಂಬಿಕೆ ಇತ್ತು ಆದರೆ ಈಗ ಈ ನಂಬಿಕೆ ಇಲ್ಲವಾಗಿದೆ ಏಕೆಂದರೆ ಸಿದ್ದರಾಮಯ್ಯ ರವರು ತಮ್ಮ ಅಧಿಕಾರಕ್ಕಾಗಿವರದಿಯನ್ನು ಮೂಲೆಗೆ ತಳ್ಳಿದ್ದಾರೆ. 2026ರಲ್ಲಿ ನಡೆಯುವ ಜಾತಿ-ಜನಗಣಿತಿಯಲ್ಲಿ ಸರಿಯಾದ ರೀತಿಯ ಮಾಹಿತಿಯನ್ನುನೀಡುವುದರ ಮೂಲಕ ನಿಮ್ಮ ತೆರಿಗೆಯ ಪಾಲನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರುಗಳಾದ ಎನ್ ರವಿಕುಮಾರ್, ಶಾಸಕರಾದ ಎಂ ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷರಾದಕೆ.ಟಿ. ಕುಮಾರಸ್ವಾಮಿ, ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ್, ಅಂಬಿಕಾ ಹುಲಿನಾಯ್ಕರ್, ಸೋಮಶೇಖರ್, ಬಿಜೆಪಿ ಮಾಜಿಅಧ್ಯಕ್ಷರಾದ ಮುರಳಿ, ಬಾಬು ಪತ್ತರ್, ಲಕ್ಷ್ಮೀಕಾಂತ್, ವೆಂಕಟೇಶ್ ಯಾದವ್, ತಿಮ್ಮಣ್ಣ, ಕಲ್ಲೇಶ್, ಸುಂದೀಪು ಗುಡಾರ್ಪಿ,ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಅಭೀನಂದನ್, ಮಹಾಲಿಂಗಪ್ಪ, ರಾಮಣ್ಣ, ಲಿಂಗರಾಜು, ಪ್ರಸಾದ್,ಶಂಕರ್ ಚಾರ್, ಗೋವಿಂದಪ್ಪ, ಗೋಪಾಲ ಜಾಧವ್ ಹಾಗೂ ಓಬಿಸಿ ಸಮುದಾಯದ ಎಲ್ಲಾ ಮುಖಂಡರುಗಳು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



