ಕಾಂಗ್ರೆಸ್ ತನ್ನ ಮೂಲ ಐಡಿಯಾಲಜಿ ಬಿಡುವುದಿಲ್ಲ. ಜನ ಬದುಕಿದ್ದರೆ ಇಂಥ ಗ್ಯಾರಂಟಿಯಿಂದಲೇ ಹೊರತು, ಸುಳ್ಳು ಪ್ರಚಾರದಿಂದ ಅಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿ, ಮೋದಿ ಉದ್ಯೋಗ ಕೊಡುವುದಾಗಿ ಹೇಳಿದರು, ಕೊಟ್ರಾ..? 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದರು ಕೊಟ್ರಾ? ರೈತರಿಗೆ ಆದಾಯ ದ್ವಿಗುಣ ಗೊಳಿಸುವುದಾಗಿ ಹೇಳಿದರು, ಮಾಡಿದರೆ..?ಮೋದಿ ಸುಳ್ಳಿನ ಸರದಾರ ಎಂದು ಕಟುವಾಗಿ ಟೀಕಿಸಿದರು.ಮೋದಿಯವರೇ, ರಾಜ್ಯದಲ್ಲಿ ನಿಮ್ಮ ಮತ್ತು ನಿಮ್ಮ ಶಿಷ್ಯರ ಕೊಡುಗೆ ಏನು ಎಂಬುದನ್ನು ತಿಳಿಸಿ.ಟಿವಿಯಲಿ ಕಾಣಿಸಿ ಕೊಳ್ಳಬೇಕು. ಮಣಿಪುರದಲ್ಲಿ ಕೋಮು ಗಲಭೆಯಾದರೂ ಹೋಗದೆ 42 ದೇಶಕ ಹೋಗಿದ್ದೀರಿ. ಜನರಿಗೆ ಸಿದ್ದರಾಮಯ್ಯ ಮೊದಲ ಪ್ರಾಧಾನ್ಯತೆ. ಆದರೆ ಬಿಜೆಪಿಯವರಿಗೆ ಟೀಕೆಯಷ್ಟೇ ಗೊತ್ತು. ಮಾಡುವುದು ಬರೀ ಭ್ರಷ್ಟಾ ಚಾರ. ಜನರಿಗೆ ನೀವು ಏನು ಮಾಡಿದ್ದೀರ ಎಂದು ಅವರು ಪ್ರಶ್ನಿಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



