ಸ್ವತಃ ಸಚಿವರೇ ಭರವಸೆ ನೀಡಿದರೂ ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್ ಗೇಟನ್ನು ತೆರವು ಮಾಡಿಲ್ಲ ಎಂದು ಕೋಪಗೊಂಡು ಶಾಸಕಿ ಕರೆಮ್ಮ ಜಿ.ನಾಯಕ ಅವರು ಟೋಲ್ಗೇಟ್ ಮುಂದೆಯೇ ಅಹೋರಾತ್ರಿ ಧರಣಿ ನಡೆಸುತ್ತಿರುವ ಜಿಲ್ಲೆಯ ಘಟನೆ ರಾಯಚೂರು ದೇವದುರ್ಗದಲ್ಲಿ ನಡೆದಿದೆ.ರಾಯಚೂರಿನಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಿಂಥಣಿ ಸೇತುವೆಯಿಂದ ಕಲಮಲಾ ಕ್ರಾಸ್ ರಸ್ತೆಯ ಮಧ್ಯೆ ಕಾಕರಗಲ್ನಲ್ಲಿ 40 ಕಿ.ಮೀ. ವ್ಯಾಪ್ತಿಯಲ್ಲಿ ಆವೈಜ್ಞಾನಿಕವಾಗಿ 2 ಟೋಲ್ ಗೇಟುಗಳನ್ನು ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಶಾಸಕಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ಶರಣ ಪ್ರಕಾಶ ಅವರ ಗಮನ ಸೆಳೆದಿದ್ದರು. ಆಗ ನೀವು ಸಭೆ ಮುಗಿಸಿ ಹೋಗುವುದರೊಳಗೆ ಟೋಲ್ ತೆಗೆಸುವೆ ಎಂದು ಸಚಿವರು ಭರವಸೆ ನೀಡಿದ್ದರು.ಸಭೆ ಬಳಿಕ ತೆರಳುತ್ತಿದ್ದ ಶಾಸಕಿಗೆ ಕಾಕರ ಗಲ್ ಟೋಲ್ಗೇಟ್ನಲ್ಲಿ ಇನ್ನೂ ಶುಲ್ಕ ವಸೂಲಿ ಮಾಡುತ್ತಿರುವುದು ಕಾಣಿಸಿದೆ.ಇದರಿಂದ ಆಕ್ರೋಶಗೊಂಡ ಅವರು ತಮ್ಮ ಬೆಂಬಲಿಗರೊಂದಿಗೆ ಅಹೋರಾತ್ರಿ ಧರಣಿ ಕುಳಿತರು. ರಸ್ತೆಯಲ್ಲಿಯೇ ಮಲಗಿ ಪ್ರತಿಭಟಿಸಿದ್ದಾರೆ. ಅನೇಕ ಬಾರಿ ಟೋಲ್ಗೇಟ್ ರದ್ದು ಪಡಿಸಲು ಒತ್ತಾಯಿಸಿದರೂ ಪ್ರಯೋಜನವಿಲ್ಲ. ಸಚಿವರ ಭರವಸೆಯೂ ಸುಳ್ಳಾಗಿದೆ ಎಂದು ಶಾಸಕಿ ದೂರಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



