ಬೆಂಗಳೂರು: ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ ಅಧ್ಯಾಯ 1’ ಶೂಟಿಂಗ್ ಮುಕ್ತಾಯಗೊಂಡಿದ್ದು, ಅಕ್ಟೋಬರ್ 2ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಗೊಳ್ಳಲಿದೆ. ಚಿತ್ರದ ಮೇಕಿಂಗ್ ವೀಡಿಯೋ ಬಿಡುಗಡೆಯಾಗಿದ್ದು, 2.06 ನಿಮಿಷಗಳ ವೀಡಿಯೋಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 20 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ಈ ಮೂಲಕ ಸಿನಿಮಾ ಚಿತ್ರೀಕರಣ ಮುಗಿದಿರುವುದಾಗಿ ಚಿತ್ರತಂಡ ಅಧಿ ಕೃತವಾಗಿ ತಿಳಿಸಿದೆ.ಬಹುಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ವಿಡಿಯೋದಲ್ಲಿ ಕಾಂತಾರ ಜಗತ್ತಿನ ಅಗಾಧತೆ ಕಟ್ಟಿಕೊಡಲಾಗಿದೆ. ಕಾಂತಾರ ಚಿತ್ರದ ಸೆಟ್ಗಳ ವೈಭವವನ್ನು, ಸಾವಿರಾರು ಮಂದಿಗಳ ಶ್ರಮವನ್ನು, ಅಪರೂಪದ ಚಿತ್ರೀಕರಣ ತಾಣಗಳ ಸಣ್ಣ ಪರಿಚಯವನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.
ಹಿನ್ನೆಲೆ ಧ್ವನಿಯಲ್ಲಿ ಈ ಸಿನಿಮಾ ಮೇಕಿಂಗ್ ಬಗ್ಗೆ ವಿವರಿಸಿರುವ ರಿಷಬ್ ಶೆಟ್ಟಿ, ‘ನನ್ನ ನೆಲದ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕು ಅಂತ ನನ್ನದೊಂದು ಕನಸು, ನಮ್ಮ ಊರು, ನಮ್ಮ ಜನ, ನಮ್ಮ ನಂಬಿಕೆಗಳು. ನಾನು ಆ ಕನಸಿನ ಬೆನ್ನು ಹತ್ತುವುದಕ್ಕೆ ಶುರು ಮಾಡಿದಾಗ ಸಾವಿರಾರು ಜನ ನನ್ನ ಬೆನ್ನ ಹಿಂದೆ ನಿಂತರು. 3 ವರ್ಷಗಳಪರಿಶ್ರಮ, 250 ದಿನಗಳ ಚಿತ್ರೀಕರಣ. ಎಷ್ಟೇ ಕಷ್ಟ ಬಂದರೂ ನಾನು ನಂಬಿದ ದೈವ ನನ್ನ ಕೈ ಬಿಡಲಿಲ್ಲ. ಪ್ರತಿದಿನ ಸೆಟ್ನಲ್ಲಿ ಸಾವಿರಾರು ಜನರನ್ನು ನೋಡುತ್ತಿದ್ದಾಗ ನನಗೆ ಕಾಡುತ್ತಿದ್ದ ವಿಷಯ ಒಂದೇ. ಇದು ಕೇವಲ ಸಿನಿಮಾ ಅಲ್ವ, ಇದೊಂದು ಶಕ್ತಿ. ಕಾಂತಾರದ ಪ್ರಪಂಚಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. ಎಂದಿದ್ದಾರೆ. ಸಿನಿಮಾದ ಮೇಕಿಂಗ್ ವೀಡಿಯೋ ನೋಡಿದ ಸಿನಿಮಾ ತಜ್ಞರು ಈ ಸಿನಿಮಾ ಬಿಸಿನೆಸ್ ವಿಚಾರದಲ್ಲಿ ಎಲ್ಲಾ ದಾಖಲೆ ಮುರಿಯುವ ಸಾಧ್ಯತೆ ಎನ್ನುತ್ತಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



