ಚಿತ್ರದುರ್ಗ: ರೈತರಿಗೆ ಯೂರಿಯ ಗೊಬ್ಬರ ಸಿಗುತ್ತಿಲ್ಲ, ಇದರಿಂದ ನಾವು ಹೇಗೆ ಬಿತ್ತನೆ ಮಾಡಬೇಕು ಎಂದು ರೈತರು ಆಕ್ರೋಶಗೊಂಡು ಚಿತ್ರದುರ್ಗದ ಕೃಷಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಮಳೆ ಬಂದು ರೈತರು ಭೂಮಿಯನ್ನ ಹಸನು ಮಾಡಿಕೊಂಡು ಗೊಬ್ಬರಕ್ಕಾಗಿ ಹೆಣಗಾಡಿದ್ದು ಗೊಬ್ಬರ ಸಿಗದೆ ರೈತರು ಹೈರಾಣಾಗಿದ್ದಾರೆ. ಇದರಿಂದಾಗಿ ರೈತರು ಇಂದು ಬೆಳಗ್ಗೆ ಚಿತ್ರದುರ್ಗದ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಗೊಬ್ಬರ ಅಭಾವದ ವಿರುದ್ಧ ರೈತರು ತಮ್ಮ ಆಕ್ರೋಷವನ್ನ ಹೊರ ಹಾಕಿದ್ದು ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಖಾಸಗಿಯಾಗಿ ಹೆಚ್ಚುವರಿ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿದ್ದು ಗೋಡೋನ್ ನಲ್ಲಿ ಗೊಬ್ಬರ ದಾಸ್ತಾನು ಇದ್ದರು ಇಲ್ಲ ಎಂದು ಹೇಳುತ್ತಿದ್ದಾಗಿ ರೈತರು ಕೃಷಿ ಇಲಾಖೆ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ.
ಇನ್ನೂ ಈ ವೇಳೆ ಪ್ರತಿಕ್ರಿಯೆ ನೀಡಿದ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಅವರು ಮಾತನಾಡಿದ್ದು ಜಿಲ್ಲೆಯಲ್ಲಿ ಮಳೆ ಪ್ರಾರಂಭವಾಗಿದ್ದು ಪೂರ್ವ ಮುಂಗಾರು ನಲ್ಲಿ ಉತ್ತಮ ಮಳೆಯಾಗಿದೆ. 15 20 ದಿನಗಳ ಮುಂಚಿತವಾಗಿ ಮಳೆ ಪ್ರಾರಂಬವಾಗಿದ್ದು ಬಿತ್ತನೆ ಸಹ ಆರಂಭವಾಗಿದೆ. ಮೇಲು ಗೊಬ್ಬರ ಕೊಡುವ ಹಂತದಲ್ಲಿದ್ದು ರೈತರು ಯೂರಿಯಾ ಗೊಬ್ಬರ ಪೂರೈಕೆಗೆ ಬೇಡಿಕೆ ಸಲ್ಲಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 26643 ಟನ್ ಗೊಬ್ಬರ ಬೇಡಿಕೆ ಇದ್ದು 8339 ಟನ್ ಇದ್ದು ಒಟ್ಟಾರೆ 22856 ಟನ್ ಪೂರೈಕೆಯಾಗಿದ್ದು ತುರ್ತಾಗಿ ಇನ್ನೂ ಕೂಡ ಗೊಬ್ಬರ ಬೇಕಿದ್ದು ಮೇಲಾಧಿಕಾರಿಗಳು ಬೇರೆ ಜಿಲ್ಲೆಯಿಂದ ಗೊಬ್ಬರ ಪೂರೈಕೆ ಮಾಡುತ್ತಿದ್ದು ನಮ್ಮ ಜಿಲ್ಲೆಯ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಜಿಲ್ಲೆಗೆ ಬೇಕಾದ ಗೊಬ್ಬರವನ್ನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಂಜುನಾಥ್ ಭರವಸೆ ನೀಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



