ಚಿತ್ರದುರ್ಗ: ಮಹಿಳೆಯರಿಗೆ ಗೌರವ ಕೂಡುವುದರ ಬಗ್ಗೆ ಬರೀ ಬಾಯಿ ಮಾತಿನಲ್ಲಿ ಹೇಳುವುದನ್ನು ಬಿಟ್ಟು ನಿಜವಾಗಿ ಮಹಿಳೆಯರಿಗೆಗೌರವ ಕೊಡುವುದನ್ನು ಕಲಿಯಬೇಕಿದೆ ಎಂದು ಸಮಾಜವಾದಿಪಾರ್ಟಿಯ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮೀಕಾಂತ ಹೇಳಿದರು.ಯು.ಪಿ.ಯ ಮಾಜಿ ಸಂಸದೆ ದಿ. ಫೋಲನ್ ದೇವಿ ಹುತಾತ್ಮ ದಿನದ ಅಂಗವಾಗಿ ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಒಂದು ನೆನಪು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದಅವರುಮಹಿಳೆಯರಿಗೆ ಗೌರವವನ್ನು ನೀಡುತ್ತೇವೆ ಎಂದು ಬರೀ ಬಾಯಿ ಮಾತಿನಲ್ಲಿ ಹೇಳಲಾಗುತ್ತಿದೆ, ಅದರೆ ನಿಜವಾಗಿಯೂ ಮಹಿಳೆಯರಿಗೆಸಮಾಜದಲ್ಲಿ ಗೌರವ ಸಿಗುತ್ತಿಲ್ಲ, ನಮ್ಮ ಹಿಂದೆ ನಡೆದಂತಹ ಚರಿತ್ರೆಯನ್ನು ಓದಿದಾಗ ಮಾತ್ರ ನಮ್ಮಲ್ಲಿ ಬದಲಾವಣೆ ಸಾಧ್ಯವಿದೆ.ಸಮುದಾಯದಲ್ಲಿ ನೊಂದ ಮಹಿಳೆಯರಿಗೆ ಪ್ರಜ್ಞಾವಂತರಾದವರು ಅವರಿಗೆ ಅನ್ಯಾಯವಾದಾಗ ನ್ಯಾಯವನ್ನು ಕೂಡಿಸುವಕಾರ್ಯವನ್ನು ಮಾಡಬೇಕಾದ್ದು ಎಲ್ಲರ ಕರ್ತವ್ಯವಾಗಿದೆ ಎಂದರು.
ಇದೇ ಹಿನ್ನಲೆಯಲ್ಲಿ ಯು.ಪಿ.ಯ ಮಾಜಿ ಸಂಸದೆ ದಿ. ಫೋಲನ್ ದೇವಿಯ ತಮ್ಮ ಬದುಕಿನಲ್ಲಿ ಕಷ್ಟ, ನೋವು, ದೌರ್ಜನ್ಯ,
ದಬ್ಬಾಳಿಕೆಯನ್ನು ಅನುಭವಿಸಿದ್ದು ಅದನ್ನು ಅವರು ಮೆಟ್ಟಿ ನಿಲ್ಲುವ ಸಲುವಾಗಿ ಡಕಾಯಿತಿಯಾದಳು ಇದರಿಂದ ತನ್ನ ಮೇಲೆ ದೌರ್ಜನ್ಯದಬ್ಬಾಳಿಕೆ, ಅತ್ಯಾಚಾರ ಮಾಡಿದಂತಹವರನ್ನು ಮಟ್ಟ ಹಾಕುವ ಕಾರ್ಯವನ್ನು ಮಾಡಿದರು, ತದ ನಂತರ ಇದು ತಪ್ಪು ಎಂದುಗೊತ್ತಾಗಿ ಅಂದಿನ ಪ್ರಧಾನ ಮಂತ್ರಿ ಇಂದಿರಾಗಾಂಧಿ ಮುಂದೆ ಶರಣಾಗಿ ಶಿಕ್ಷೆಯನ್ನು ಅನುಭವಿಸಿದ ನಂತರಹೊರಗೆ ಬಂದ ಇವರನ್ನು ಗುರುತಿಸಿ ನಮ್ಮ ಸಮಾಜವಾದಿ ಪಾರ್ಟಿ ಮುಖಂಡರಾದ ಮುಲಾಯಂಸಿಂಗ್ ಯಾದವ್ ಟಿಕೇಟ್ ನೀಡಿ ಲೋಕಸಭಾ ಸದಸ್ಯರನ್ನಾಗಿ ಮಾಡಿದ ಕೀರ್ತಿ ನಮ್ಮ ಪಾರ್ಟಿಗೆ ಇದೆ ಎಂದರು.
ಮಾಜಿ ಸಂಸದೆ ದಿ. ಫೋಲನ್ ದೇವಿ ಡಕಾಯಿತಿ ಮಾಡಿ ಐಶ್ವರ್ಯವನ್ನೆಲ್ಲಾ ಬಡವರಿಗೆ ದಾನ ಮಾಡುವುದರ ಮೂಲಕ
ಅವರಿಗೆ ಎಲ್ಲಾ ರಾಣಿ ಎಂದು ಎನ್ನಿಸಿಕೊಂಡಿದ್ದಳು. ಎಲ್ಲರಿಗೂ ಸಹಾ ಶಿಕ್ಷಣ ಆರೋಗ್ಯ, ದೀಪ. ನೀರಿನ ವ್ಯವಸ್ಥೆಯಾಗಬೇಕೆಂದುಬಯಸಿದ್ದರು. ನಮ್ಮ ಮುಂದಿನ ಪೀಳೀಗೆಗೆ ಇವರ ಬಗ್ಗೆ ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ ಈ ಹಿನ್ನೆಲೆಯಲ್ಲಿ ಇಂತಹಕಾರ್ಯಕ್ರಮವನ್ನು ಸಮಾಜವಾದಿ ಪಾರ್ಟಿ ವತಿಯಿಂದ ಏರ್ಪಡಿಸಲಾಗಿದೆ ಎಂದು ಲಕ್ಷ್ಮೀಕಾಂತ ತಿಳಿಸಿದರು.ಲೇಖಕರಾದ ಹೆಚ್.ಅನಂದ ಕುಮಾರ್ ಮಾತನಾಡಿ, 1963 ರಲ್ಲಿ ಉತ್ತರ ಪ್ರದೇಶದ ಕುಗ್ರಾಮದಲ್ಲಿ ಜನಿಸಿದ ಪೂಲನ್‍ದೇವಿಗೆಪೋಷಕರು 11 ನೇ ವರ್ಷಕ್ಕೆ ವಿವಾಹ ಮಾಡುತ್ತಾರೆ. ಅಪಾರ ನೋವು, ಹಿಂಸೆ, ಅವಮಾನಗಳನ್ನು ಅನುಭವಿಸಿದ ಈಕೆ ಚಂಬಲ್ಕಣಿವೆಯಲ್ಲಿ ಡಕಾಯಿತಿ ಮೂಲಕ ದೋಚುತ್ತಿದ್ದ ಎಲ್ಲವನ್ನು ಬಡವರಿಗೆ ಹಂಚುತ್ತಿದ್ದಳು. ಫೋಲನ್ ದೇವಿಯ ವಯಸ್ಸಿಗೆ ಬರುತ್ತಿದ್ದೆಯೇಸೇಡನ್ನು ತಿರಿಸಿಕೊಳ್ಳಬೇಕೆಂದುಡಕಾಯಿತಿಗುಂಪಿಗೆಸೇರಿಕೊಂಡಾಗಲೂಸಹ್ಳಾ ಅಲ್ಲಿಯೂ ಸಹಾ ರ್ದರ್ಜನ್ಯ ದಬ್ಬಾಳಿಕೆಅತ್ಯಾಚಾರವನ್ನು ಎದುರಿಸಬೇಕಾಯಿತು. ಇದನ್ನು ಸಹಿಸಿಕೊಂಡು ತದ ನಂತರ ತನ್ನದೆ ಗುಂಪನ್ನು ಕಟ್ಟಿ ತನ್ನ ಮೇಲೆದಬ್ಬಾಳಿಗೆ ದೌರ್ಜನ್ಯ ಅತ್ಯಚಾರ ಮಾಡಿದವರನ್ನು ಪತ್ತೆ ಮಾಡಿ ಅವರನ್ನು ಸಾಯಿಸುವುದರ ಮೂಲಕ ತನ್ನ ಸೇಡನ್ನುತೀರಿಸಿಕೊಂಡಿದ್ದಾರೆಎಂದರು.
ಈ ಸಮಯದಲ್ಲಿ ದೇಶದ ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿಯವರು ಇವರನ್ನು ಭೇಟಿ ಮಾಡಿ ಇವರ ಮನವೂಲಿಸಿ
ಕಾನೂನಿಗೆ ಒಪ್ಪಿಸಿದರು, ಇದಾದ ಮೇಲೆ ಶಿಕ್ಷೆಯನ್ನು . ಸಮಾಜವಾದಿ ಎನ್ನುವುದು ಎಲ್ಲರನ್ನು ಅಪ್ಪಿಕೊಳ್ಳುವ ಪಾರ್ಟಿ.ಹಾಗಾಗಿಪೂಲನ್‍ದೇವಿಗೆ ಸಂಸದೆಯಾಗಲು ಅವಕಾಶ ಒದಗಿಸುತ್ತದೆ. ಹೆಣ್ಣನ್ನು ಶೋಷಣೆ ಮಾಡುವ ಹಕ್ಕು ಯಾರಿಗೂ ಇಲ್ಲ. ಎಲ್ಲರಭಾವನೆಗಳನ್ನು ಗೌರವಿಸಬೇಕು. ಪೂಲನ್‍ದೇವಿ ಇತಿಹಾಸದ ಪುಟಗಳಲ್ಲಿ ದೀರೋದಾತ್ತೆಯಾಗಿ ಮೆರೆದಿದ್ದಾಳೆಂದುಸ್ಮರಿಸಿದರು.ಕರ್ನಾಟಕ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಗಿರೀಶ್‍ನಾಯ್ಕ ಆರ್. ಮಾತನಾಡಿ ಹಿಂಸೆ ಅವಮಾನವನ್ನು ಸಹಿಸಿಕೊಂಡಪೂಲನ್‍ದೇವಿಯ ಜೀವನ ಚರಿತ್ರೆಯನ್ನು ಕೇಳಿದಾಗ ಮೈ ರೋಮಾಂಚನವಾಗುತ್ತದೆ. ಕೊನೆಗೆ ಆಕೆ ಸಂವಿಧಾನಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್‍ರವರಅನುಯಾಯಿಯಾಗಕೆಟ್ಟವ್ಯವಸ್ಥೆವಿರುದ್ದಹೋರಾಡುತ್ತಾಳೆಂದು ನೆನಪಿಸಿಕೊಂಡರು.ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಸಮಾಜವಾದಿ ಪಾರ್ಟಿಎಸ್.ಟಿ. ಘಟಕದ ಅಧ್ಯಕ್ಷ ಡಾ.ಟಿ.ಶಿವಣ್ಣ, ಅಲ್ಪಸಂಖ್ಯಾತರಘಟಕದ ಜಿಲ್ಲಾಧ್ಯಕ್ಷ ಮೆಹಬೂಬ್‍ಬಾಷಾ ಎಸ್. ನ್ಯಾಯವಾದಿ ಗುರುಮೂರ್ತಿಮಹಲಿಂಗಪ್ಪ ಮಾತನಾಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



