ಫಹಾದ್ ಫಾಸಿಲ್ ಹೆಸರು ಕೇಳದ ಸಿನಿಮಾ ಪ್ರೇಮಿಗಳಿಲ್ಲ. ಮಲಯಾಳಂ ನಟ ಫಹಾದ್ ಈಗ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಅವರ ನಟನೆಗೆ ಫಿದಾ ಆಗದವರಿಲ್ಲ. ಫಹಾದ್ ಫಾಸಿಲ್ ಈಗ ಮಲಯಾಳಂ ಮಾತ್ರವೇ ಅಲ್ಲದೆ ಹಲವಾರು ಭಾಷೆಗಳ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಯಾವ ಪಾತ್ರಗಳೂ ಸವಾಲೆ ಅಲ್ಲವೇನೋ ಎಂಬಂತೆ ನಟಿಸುತ್ತಾರೆ ಫಹಾದ್. ಸಖತ್ ಬೇಡಿಕೆಯ ನಟರಾಗಿರುವ ಫಹಾದ್, ಬೇಡಿಕೆಗೆ ತಕ್ಕಂತೆ ಕೋಟ್ಯಂತರ ರೂಪಾಯಿ ಸಂಭಾವನೆಯನ್ನೂ ಪಡೆಯುತ್ತಾರೆ. ಆದರೆ ಫಹಾದ್ಗೆ ಟ್ಯಾಕ್ಸಿ ಡ್ರೈವರ್ ಆಗುವ ಆಸೆಯಂತೆ.ನಟರುಗಳು ನಿವೃತ್ತಿ ಹತ್ತಿರ ಬರುತ್ತಿದ್ದಂತೆ ಯಾವುದಾದರೂ ರಾಜಕೀಯ ಪಕ್ಷ ಸೇರಿಕೊಂಡು ಚುನಾವಣೆಗೆ ನಿಂತು ರಾಜಕಾರಣಿಯಾಗಿ ಆರಾಮವಾಗಿ ಜೀವನ ಕಳೆಯುತ್ತಾರೆ. ಇನ್ನು ಕೆಲವರು ಸಿನಿಮಾ ನಿರ್ಮಾಣ ಸಂಸ್ಥೆಗಳನ್ನು ತೆರೆದು ಸಿನಿಮಾ ಮಾಡುತ್ತಾ ಜೀವನ ಕಳೆಯುತತಾರೆ. ಆದರೆ ಫಹಾದ್ ಫಾಸಿಲ್ಗೆ ನಟನೆಯಿಂದ ನಿವೃತ್ತರಾದ ಬಳಿಕ ಟ್ಯಾಕ್ಸಿ ಡ್ರೈವರ್ ಆಗಬೇಕು ಎಂಬ ಆಸೆಯಂತೆ. ಹೀಗೆಂದು ಅವರೇ ಹೇಳಿಕೊಂಡಿದ್ದಾರೆ.
2020 ರಲ್ಲಿ ಫಹಾದ್ ಫಾಸಿಲ್ ಈಗಿನಷ್ಟು ಜನಪ್ರಿಯ ನಟ ಆಗಿರಲಿಲ್ಲ. ಆಗ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದಂತೆ, ನಿವೃತ್ತರಾದ ಬಳಿಕ ಬಾರ್ಸಿಲೋನಾ ದೇಶದಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಟ್ಯಾಕ್ಸಿ ಓಡಿಸಬೇಕು ಎಂಬುದು ಅವರ ಆಸೆ ಎಂದು ಹೇಳಿಕೊಂಡಿದ್ದರು. ಇತ್ತೀಚೆಗೆ ಹಾಲಿವುಡ್ ರಿಪೋರ್ಟರ್ ಮಾಡಿರುವ ಸಂದರ್ಶನದಲ್ಲಿ ಮತ್ತೆ ಅದೇ ಪ್ರಶ್ನೆ ಕೇಳಲಾಯ್ತು, ಈಗಲೂ ನಿಮಗೆ ಅದೇ ಆಸೆ ಇದೆಯೇ ಎಂದಾಗ ಫಹಾದ್, ಖಂಡಿತ ಹೌದು ಎಂದಿದ್ದಾರೆ.ಇತ್ತೀಚೆಗೆ ಕೆಲವು ದಿನಗಳ ಹಿಂದೆ ನಾನು ಸ್ಪೇನ್ನಲ್ಲಿದ್ದೆ. ಆಗಲೂ ಸಹ ನನಗೆ ಅದೇ ಐಡಿಯಾ ತಲೆಯಲ್ಲಿ ಓಡಿತು. ಆದರೆ ಜನಕ್ಕೆ ನಾನು ಸಾಕು ಎಂದಾಗಲಷ್ಟೆ ನಾನು ಆ ಕೆಲಸಕ್ಕೆ ಹೋಗುತ್ತೀನಿ ಎಂದಿದ್ದಾರೆ. ಮಾತು ಮುಂದುವರೆಸಿ, ತಮಾಷೆಯ ವಿಷಯ ಪಕ್ಕಕ್ಕಿಟ್ಟಿರೆ, ಟ್ಯಾಕ್ಸಿ ಡ್ರೈವಿಂಗ್ ಕೆಲಸ ಒಂದೊಳ್ಳೆ ಕೆಲಸ. ಬೇರೆಯವರ ಪ್ರಯಾಣ ಅಥವಾ ಗುರಿಗೆ ನೀವು ಚಾಲಕರಾಗುವುದು, ಬೇರೆಯವರನ್ನು ಅವರ ಗಮ್ಯಕ್ಕೆ ತಲುಪಿಸುವುದು ಎಷ್ಟೊಳ್ಳೆ ಕೆಲಸ ಅಲ್ಲವೆ ಎಂದು ಹೇಳಿದ್ದಾರೆ.
ಫಹಾದ್ ಫಾಸಿಲ್ ನಟನೆಯ ‘ಮಾರೀಸನ್’ ತಮಿಳು ಸಿನಿಮಾ 25ರಂದು ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಫಹಾದ್ ಕಳ್ಳನ ಪಾತ್ರದಲ್ಲಿ ನಟಿಸಿದ್ದಾರೆ. ವಡಿವೇಲು ಸಹ ಸಿನಿಮಾನಲ್ಲಿದ್ದಾರೆ. ‘ಒದುಮ್ ಕುತ್ತಿರ ಇದುಮ್ ಕುತ್ತಿರ’ ಹೆಸರಿನ ಮಲಯಾಳಂ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಡೋಂಟ್ ಟ್ರಬಲ್ ದಿ ಟ್ರಬಲ್’ ಹೆಸರಿನ ತೆಲುಗು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಕರಾಟೆ ಚಂದ್ರನ್’ ಮತ್ತು ‘ಪೇಟ್ರಿಯಾಟ್’ ಹೆಸರಿನ ಇನ್ನೆರಡು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಪುಷ್ಪ 3’, ತಮಿಳಿನ ‘ವಿಕ್ರಂ 2’ ಸಿನಿಮಾಗಳಲ್ಲಿಯೂ ನಟಿಸುವವರಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



