ಡಿಜಿಟಲ್ ಪಾವತಿಗಳ ಜಗತ್ತಿನಲ್ಲಿ, ಭಾರತೀಯರು ದಿನದಿಂದ ದಿನಕ್ಕೆ ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (UPI) ಉಪಯೋಗ ಹೆಚ್ಚಿಸುತ್ತಿದ್ದಾರೆ. ಈಗ ಈ ಸೇವೆ ಮತ್ತಷ್ಟು ವೇಗವಾಗಿ ಹಾಗೂ ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಆಗಸ್ಟ್ 1ರಿಂದ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.ಈ ಹೊಸ ಮಾರ್ಗಸೂಚಿಗಳಂತೆ, ದಿನಕ್ಕೆ ನೀವು ಬದಲಾವಣೆ ಮಾಡಿದಾಗ ಬ್ಯಾಲೆನ್ಸ್ ಚೆಕ್ ಮಾಡುವ ಗರಿಷ್ಟಾವಧಿ 50 ಬಾರಿ ಮಾತ್ರವಿರಲಿದೆ. ಈ ಹಿಂದೆ ಕೆಲವರು ನಿರಂತರವಾಗಿ ಬ್ಯಾಲೆನ್ಸ್ ಚೆಕ್ ಮಾಡಿ ಸರ್ವರ್ ಮೇಲೆ ಒತ್ತಡ ಹೆಚ್ಚಿಸುತ್ತಿದ್ದರು. ಇದನ್ನು ತಡೆಗಟ್ಟಲು ಹೊಸ ನಿಯಮ ಜಾರಿಯಾಗುತ್ತಿದೆ.ಅದೇ ರೀತಿ, ಮೊಬೈಲ್ ನಂಬರ್‌ಗೆ ಲಿಂಕ್ ಮಾಡಲಾದ ಖಾತೆಗಳ ಮಾಹಿತಿ ಪರಿಶೀಲನೆ ದಿನಕ್ಕೆ 25 ಬಾರಿ ಮಾತ್ರ ಅನುಮತಿ ಇರುತ್ತದೆ. ಈ ನಿಯಮಗಳು ಬ್ಯಾಂಕ್ ಸೇವೆಗಳ ಮೇಲೆ ಅನಗತ್ಯ ಒತ್ತಡವನ್ನು ಕಡಿಮೆ ಮಾಡಲಿದೆ ಮತ್ತು ಮೋಸದ ಪ್ರಯತ್ನಗಳನ್ನು ತಡೆಯಲಿದೆ.
ಆಟೋಪೇ ಕೂಡ ನಿಯಂತ್ರಣಕ್ಕೆ ಒಳಪಡಲಿದೆ. ಉದಾಹರಣೆಗೆ ನೆಟ್ ಪಿಕ್ಸ್, ಮ್ಯೂಚುಯಲ್ ಫಂಡ್ ಸಬ್‌ಸ್ಕ್ರಿಪ್ಶನ್‌ಗಳಂತಹ ಪಾವತಿಗಳು ಇನ್ನು ಮುಂದೆ ಮೂರು ಕಾಲಮಾನದ ಒಳಗೆ ಮಾತ್ರ ನಡೆಯಲಿದೆ. ಬೆಳಿಗ್ಗೆ 10 ಗಂಟೆಯೊಳಗೆ, ಮಧ್ಯಾಹ್ನ 1 ರಿಂದ ಸಂಜೆ 5ರೊಳಗೆ ಹಾಗೂ ರಾತ್ರಿ 9:30 ನಂತರ. ಇದರಿಂದ ಪೀಕ್ ಅವರ್ನಲ್ಲಿ ಸರ್ವರ್‌ಗೆ ಬರುವ ಒತ್ತಡ ಕಡಿಮೆಯಾಗಲಿದೆ.
ಇನ್ನೊಂದು ಮಹತ್ವದ ಬದಲಾವಣೆ ಎಂದರೆ ಫೇಲಾದ ಪಾವತಿಗಳ ಸ್ಥಿತಿಯನ್ನು ದಿನಕ್ಕೆ ಕೇವಲ 3 ಬಾರಿ ಮಾತ್ರ ಚೆಕ್ ಮಾಡಬಹುದಾಗಿದೆ. ಹಾಗೂ ಎರಡನೆಯ ಪರೀಕ್ಷೆಗೂ ಮೊದಲನೆಯದಕ್ಕೂ ಕನಿಷ್ಠ 90 ಸೆಕೆಂಡು ಅಂತರ ಇರಬೇಕು. ಈ ನಿಯಮವು ಡಿಜಿಟಲ್ ವಹಿವಾಟುಗಳ ಸ್ಥಿರತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.ಹೆಚ್ಚಾಗಿ ತಪ್ಪು ಖಾತೆಗೆ ಹಣ ಹೋಗುವುದನ್ನು ತಡೆಯಲು, ಪಾವತಿ ಮಾಡುವ ಮೊದಲು ರಿಸೀವರ್‌ನ ಬ್ಯಾಂಕ್ ಹೆಸರನ್ನು ತೋರಿಸುವ ವ್ಯವಸ್ಥೆ ಜುಲೈ 1ರಿಂದಲೇ ಜಾರಿಯಲ್ಲಿದೆ. ಇದು ನಿಖರ ಪಾವತಿಗೆ ನೆರವಾಗಲಿದೆ ಮತ್ತು ಮೋಸದ ಶಂಕೆ ತಗ್ಗಿಸುತ್ತದೆ.ಪಾವತಿ ರಿವರ್ಸಲ್ ಕೂಡ ನಿಯಂತ್ರಣಕ್ಕೆ ಒಳಪಡಲಿದೆ. 30 ದಿನಗಳ ಅವಧಿಯಲ್ಲಿ ಒಬ್ಬ ಬಳಕೆದಾರ ಕೇವಲ 10 ಬಾರಿ ಮಾತ್ರ ಈ ಸೇವೆ ಬಳಸಬಹುದು. ಅದೇ ವ್ಯಕ್ತಿ ಅಥವಾ ಸಂಸ್ಥೆಯಿಂದ 5 ಬಾರಿ ಮಾತ್ರ ರಿವರ್ಸ್ ಮಾಡಲು ಅವಕಾಶ.NPCI, ಬ್ಯಾಂಕುಗಳು ಮತ್ತು UPI ಆ್ಯಪ್‌ಗಳು API ಬಳಸುವ ವಿಧಾನವನ್ನು ನಿಗದಿಪಡಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇದರ ಮೂಲಕ ಎಲ್ಲಾ ಉಪಯೋಗಗಳು ಸುಧಾರಿತವಾಗಿ ನಡೆಯಲು ಸಾದ್ಯವಾಗುತ್ತದೆ. ಬಳಕೆದಾರರು ತಮ್ಮ ಪಾವತಿ ಮತ್ತು ಬ್ಯಾಲೆನ್ಸ್ ಚೆಕ್ ಪದೇಪದೇ ಮಾಡುವುದು ಕಡಿಮೆ ಮಾಡಿ, ಪಿಕ್ ಅವರ್ಸ್ ಹೊರತುಪಡಿಸಿ ಪಾವತಿಗಳನ್ನು ನಿರ್ವಹಿಸುವುದು ಸೂಕ್ತ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



