ಹೊಳಲ್ಕೆರೆ : ನಮ್ಮ ದೇಶದ ವೀರ ಯೋಧರು ಕಟ್ಟೆಚ್ಚರ ವಹಿಸಿ ಗಡಿಗಳಲ್ಲಿ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಕಾವಲು
ಕಾಯುತ್ತಿರುವುದರಿಂದ 140 ಕೋಟಿ ಜನರು ಸುರಕ್ಷಿತವಾಗಿದ್ದಾರೆಂದು ಶಾಸಕ ಡಾ.ಎಂ.ಚಂದ್ರಪ್ಪ ಸೈನಿಕರ ಧೈರ್ಯವನ್ನು ಕೊಂಡಾಡಿದರು.ಪಟ್ಟಣದಲ್ಲಿ ಆಚರಿಸಿದ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾಜಿ ಸೈನಿಕ ಮಂಜುನಾಥ್ರವರನ್ನು ಸನ್ಮಾನಿಸಿ
ಮಾತನಾಡಿ, ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದರು 26 ಅಮಾಯಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿ, ರಕ್ಷಣಾ ಮಂತ್ರಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ದಿಟ್ಟ ನಿರ್ಧಾರ ತೆಗೆದುಕೊಂಡ ಪರಿಣಾಮ ವೀರ ಯೋಧರು ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ತಂಗುದಾಣಗಳನ್ನು ಹುಡುಕಿ ಧ್ವಂಸಗೊಳಿಸದ್ದರಿಂದ ಇನ್ನು ಮುಂದೆ ನಿಮ್ಮ ತಂಟೆಗೆ ಬರುವುದಿಲ್ಲ. ಯುದ್ದ ನಿಲ್ಲಿಸಿ ಎಂದು ಪಾಕಿಸ್ತಾನ ಗೋಗರೆಯಿತು. ಇದರಿಂದ ನೆರೆಯ ರಾಷ್ಟ್ರಗಳು ನಮ್ಮ ದೇಶದಪರಾಕ್ರಮವನ್ನು ಹೊಗಳಿವೆ ಎಂದು ಹೇಳಿದರು.
ಶತ್ರು ರಾಷ್ಟ್ರಗಳ ಯುದ್ದ ವಿಮಾನಗಳನ್ನು ಹುಡುಕಿ ಸಂಹಾರ ಮಾಡುವಂತ ಬ್ರಹ್ಮೋಸ್ ಕ್ಷಿಪಣಿಯನ್ನು ನಮ್ಮ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಬೇರೆ ದೇಶಗಳು ನಮ್ಮ ದೇಶದ ಯುದ್ದ ಕ್ಷಿಪಣಿಗಳನ್ನು ಖರೀಧಿಸಲು ತುದಿಗಾಲಲ್ಲಿ ನಿಂತಿವೆ. ಕಾರ್ಗಿಲ್ ಯುದ್ದವನ್ನುಸಮರ್ಥವಾಗಿ ಎದುರಿಸಿದ ನಮ್ಮ ದೇಶದ ವೀರ ಯೋಧರುಗಳನ್ನು ಸನ್ಮಾನಿಸುವುದು ಪ್ರತಿಯೊಬ್ಬರ ಕರ್ತವ್ಯ. ಒಂದು ಕಾಲದಲ್ಲಿಭಾರತವನ್ನು ಹಾವಾಡಿಗರ ದೇಶವೆಂದು ನೆರೆಯ ರಾಷ್ಟ್ರದವರು ಅಪಹಾಸ್ಯ ಮಾಡುತ್ತಿದ್ದರು. ನರೇಂದ್ರಮೋದಿರವರು ಭಾರತದಪ್ರಧಾನಿಯಾದ ಮೇಲೆ ನಮ್ಮ ದೇಶದ ಚಿತ್ರಣವೇ ಬದಲಾಗಿದೆ. ಇಡಿ ವಿಶ್ವವೇ ನಮ್ಮ ದೇಶದ ಪ್ರಧಾನಿಯನ್ನು ರತ್ನಗಂಬಳಿ ಹಾಸಿಆಹ್ವಾನಿಸುವಂತಾಗಿದೆ. ಇಂದಿನ ಯುವ ಜನಾಂಗ ಭಾರತ ದೇಶನಮ್ಮದು ಎನ್ನುವ ಅಭಿಮಾನವನ್ನು ಮೈಗೂಡಿಸಿಕೊಳ್ಳಬೇಕೆಂದುಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರುಗಳಾದ ಆರ್.ಎ.ಅಶೋಕ್, ಬಸವರಾಜ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ರಂಗಸ್ವಾಮಿ, ಗಿರೀಶ್ ಹಿಂದೂ,
ನಟರಾಜ್, ಧೃವಕುಮಾರ್, ವಿಜಯ್
ರೂಪ ಸುರೇಶ್ ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



