ಮಳೆಗಾಲದ ಸಮಯದಲ್ಲಿ ವಾತಾವರಣ ತಂಪಾಗಿರುವಾಗ ತುಂಬಾ ಮನಸ್ಸಿಗೆ ಆಹ್ಲಾದಕರವಾಗಿರುತ್ತದೆ. ಇದರಿಂದ ತುಂಬಾ ಜನರು ಬಿಸಿ ಬಿಸಿಯಾಗಿ ತಿನ್ನಬೇಕೆಂದು ಬಯಸುತ್ತಾರೆ. ಈ ಸೀಸನ್‌ನಲ್ಲಿ ಸ್ವೀಟ್ ಕಾರ್ನ್ ಹೆಚ್ಚಾಗಿ ದೊರೆಯುತ್ತದೆ. ಸ್ವೀಟ್ ಕಾರ್ನ್ ಹೆಚ್ಚಾಗಿ ತಿನ್ನುತ್ತಾರೆ. ಕಿರಿಯರು ಹಾಗೂ ಹಿರಿಯರು ಎನ್ನುವ ವ್ಯತ್ಯಾಸವಿಲ್ಲದೆ ಸ್ವೀಟ್ ಕಾರ್ನ್ ತಿನ್ನುತ್ತಾರೆ. ಇದರೊಂದಿಗೆ ಸ್ವೀಟ್ ಕಾರ್ನ್ ಪರೋಟಾ, ಸ್ವೀಟ್ ಕಾರ್ನ್ ಪಿಜ್ಜಾ, ಸಮೋಸಾ ಹೀಗೆ ವಿವಿಧ ತಿಂಡಿಗಳಿಗೆ ಬೇಡಿಕೆಯು ಹೆಚ್ಚಿರುತ್ತದೆ.ಕಾರ್ನ್ ಹಾಕಿದ ಆಹಾರಗಳನ್ನೇ ಮಕ್ಕಳು ಹೆಚ್ಚಾಗಿ ಸೇವಿಸುತ್ತಾರೆ. ಸಿಹಿ ಕಾರ್ನ್‌ನಲ್ಲಿ ದೇಹದ ಆರೋಗ್ಯಕ್ಕೆ ಪೂರಕವಾಗುವಂತಹ ಅನೇಕ ಪೌಷ್ಟಿಕಾಂಶಗಳು ಕೂಡ ಇದರಲ್ಲಿವೆ. ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಸ್ವೀಟ್ ಕಾರ್ನ್ ಸೇವಿಸಬಾರದು. ಹಾಗಾದರೆ, ಯಾರೆಲ್ಲಾ ಸ್ವೀಟ್ ಕಾರ್ನ್ ಸೇವಿಸಬಾರದು ಎಂಬುದನ್ನು ನೋಡೋಣ.
ಸ್ವೀಟ್ ಕಾರ್ನ್ನಿಂದ ದೊರೆಯುವ ಲಾಭಗಳೇನು?
ಸ್ವೀಟ್ ಕಾರ್ನ್‌ನಲ್ಲಿ ಪ್ರೋಟೀನ್, ಫೈಬರ್, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಅಗತ್ಯವಾದ ವಿಟಮಿನ್‌ಗಳು, ಖನಿಜಗಳು ಇವೆ. ಮೆಕ್ಕೆಜೋಳ ತಿನ್ನುವುದರಿಂದ ದೇಹದಲ್ಲಿನ ಅನೇಕ ಪೌಷ್ಟಿಕಾಂಶಗಳ ಕೊರತೆ ನಿವಾರಣೆಯಾಗುತ್ತದೆ. ಇವುಗಳನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಮೆಕ್ಕೆಜೋಳದಲ್ಲಿ ಫೈಬರ್ ಅಂಶ ಅಧಿಕ ಇರುತ್ತದೆ.ಸ್ವೀಟ್ ಕಾರ್ನ್ನಿಂದ ತಯಾರಿಸಿದ ತಿಂಡಿ ಸ್ವೀಟ್ ಕಾರ್ನ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಸ್ವೀಟ್ ಕಾರ್ನ್‌ನಲ್ಲಿ ವಿಟಮಿನ್ ಸಿ, ಫೋಲೆಟ್, ಬಿ3, ಬಿ5, ಬಿ6, ಬೀಟಾ-ಕೆರೋಟಿನ್ ಕೂಡ ಹೊಂದಿರುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡಲು ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಇರುತ್ತವೆ. ಇವು ಆರೋಗ್ಯಕ್ಕೆ ಪೂರಕವಾಗಿವೆ. ಸ್ವೀಟ್ ಕಾರ್ನ್‌ನಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆದ್ರೆ, ಕೆಲವು ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವವರು ತಿನ್ನಬಾರದು ಎಂದು ಆರೋಗ್ಯ ತಜ್ಞರು ವಿವರಿಸುತ್ತಾರೆ.
ಜೀರ್ಣಕ್ರಿಯೆ ಸಮಸ್ಯೆ ಹೊಂದಿರುವವರು
ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರು, ಸ್ವೀಟ್ ಕಾರ್ನ್‌ನಿಂದ ದೂರವಿರಬೇಕು. ಮೆಕ್ಕೆಜೋಳದಲ್ಲಿ ಹೆಚ್ಚಿನ ಫೈಬರ್ ಇರುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಇರುವವರು ಹೆಚ್ಚು ಫೈಬರ್ ಮಾಡಬಾರದು. ಒಂದು ವೇಳೆ ತಿಂದರೆ, ಸ್ವೀಟ್ ಕಾರ್ನ್ ಹೆಚ್ಚಾಗಿ ತಿನ್ನುವುದರಿಂದ , ಹೊಟ್ಟೆ ನೋವು, ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಮೆಕ್ಕೆಜೋಳ ಸೇವಿಸಿದರೆ, ಮತ್ತಷ್ಟು ಈ ಸಮಸ್ಯೆಯು ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಗ್ಲುಟನ್ ಸಮಸ್ಯೆಯಿಂದ ಬಳಲುತ್ತಿರುವವರು
ಗ್ಲುಟೆನ್ ಸಮಸ್ಯೆಯಿಂದ ಬಳಲುತ್ತಿರುವವರು ಸ್ವೀಟ್ ಕಾರ್ನ್ ತಿನ್ನಬಾರದು. ಮೆಕ್ಕೆಜೋಳದಲ್ಲಿ ಅಧಿಕ ಪ್ರಕಾರ ಗ್ಲುಟೆನ್ ಇರುತ್ತದೆ. ಇದರಿಂದ ಗ್ಲುಟೆನ್ ಸಮಸ್ಯೆ ಇರುವವರು ಸೇವಿಸಬಾರದು. ಒಂದು ವೇಳೆ ನಿರ್ಲಕ್ಷಿಸಿ ಸೇವಿಸಿದರೆ, ಗ್ಯಾಸ್ಟ್ರಿಕ್ ಸಮಸ್ಯೆ ಬರುತ್ತವೆ. ಜೊತೆಗೆ ಮೆಕ್ಕೆಜೊಳ ತಿಂದ ನಂತರ ನೀರು ಕೂಡ ಕುಡಿಯಬಾರದು. ಜೀರ್ಣಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಸ್ವೀಟ್ ಕಾರ್ನ್ ತಿಂದ ತಕ್ಷಣ ನೀರು ಕುಡಿದರೆ ಹೊಟ್ಟೆ ನೋವು ಬರಬಹುದು.
ಪೆಲ್ಲಾಗ್ರಾ ಕಾಯಿಲೆಯಿಂದ ಬಳಲುವವರು ಇದನ್ನು ತಿನ್ನಬಾರದು
ಪೆಲ್ಲಾಗ್ರಾ ಕಾಯಿಲೆಯು ವಿಟಮಿನ್ ಬಿ3 ಕೊರತೆಯಿಂದ ಉಂಟಾಗುತ್ತದೆ. ಆದರೆ, ಸ್ವೀಟ್ ಕಾರ್ನ್ ಸೇವಿಸುವುದರಿಂದ ಹೊಟ್ಟೆ ಬೇಗನೆ ತುಂಬುತ್ತದೆ. ನಿಮ್ಮ ಆಹಾರದಲ್ಲಿ ಮೆಕ್ಕೆಜೋಳವನ್ನು ಸೇವಿಸಿದರೆ ದೇಹದಲ್ಲಿ ಅಗತ್ಯವಾದ ಹೆಚ್ಚಿನ ಖನಿಜಗಳು ಹಾಗೂ ವಿಟಮಿನ್ ಕೊರತೆ ಉಂಟಾಗಬಹುದು. ಇದರಿಂದಾಗಿ ಪೆಲ್ಲಾಗ್ರಾಸ್ ಕಾಯಿಲೆ ಬರುವ ಅಪಾಯವೂ ಇದೆ. ಈ ಆರೋಗ್ಯ ಸಮಸ್ಯೆ ಇರುವವರು ಸ್ವೀಟ್ ಕಾರ್ನ್ ಸೇವಿಸುವ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ.
ಮಧುಮೇಹಿಗಳು ಏನು ಮಾಡಬೇಕು..?
ಮಧುಮೇಹಿಗಳು ತಮ್ಮ ಆಹಾರದಲ್ಲಿ ಅಧಿಕ ಪ್ರಮಾಣದಲ್ಲಿ ಸ್ವೀಟ್ ಕಾರ್ನ್ ಅನ್ನು ಸೇವಿಸಬಾರದು. ಪ್ರತಿನಿತ್ಯ ಸ್ವೀಟ್‌ಕಾರ್ನ್ ತಿನ್ನುವುದರಿಂದ ಮಧುಮೇಹಕ್ಕೆ ಕಾರಣವಾಗಬಹುದು. ಪ್ರತಿದಿನ ಒಂದು ಮೆಕ್ಕೆಜೋಳವನ್ನು ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಏರಿಕೆಯಾಗುತ್ತದೆ. ಇದರಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ. ದೇಹದಲ್ಲಿ ಉರಿಯೂತ, ಜೀರ್ಣಾಂಗ ವ್ಯವಸ್ಥೆಯಲ್ಲಿ ಗ್ಯಾಸ ಸಂಗ್ರಹವಾಗಲು ಕಾರಣವಾಗಿರುತ್ತದೆ. ಮಧುಮೇಹಿಗಳು ಸ್ವೀಟ್ ಕಾರ್ನ್ ತಿನ್ನಬಾರದು. ನಿಮಗೆ ಸೇವಿಸಬೇಕು ಎನಿಸಿದರೆ ವೈದ್ಯರ ಸಲಹೆ ಪಡೆಯುವುದು ಮುಖ್ಯ ಎಂದು ತಜ್ಞರು ತಿಳಿಸುತ್ತಾರೆ.
ಈ ಕಾಯಿಲೆಗಳನ್ನು ಹೊಂದಿರುವವರು ಸೇವಿಸಬಾರದು
ಚರ್ಮ ರೋಗಗಳಿಂದ ಬಳಲುತ್ತಿವವರು ಮೆಕ್ಕೆಜೋಳ ತಿನ್ನಬಾರದು. ಸೀಮಿತ ಪ್ರಮಾಣದಲ್ಲಿ ಮೆಕ್ಕೆಜೋಳವನ್ನು ತಿನ್ನುವುದು ಒಳ್ಳೆಯದು. ಸ್ವೀಟ್ ಕಾರ್ನ್ನಲ್ಲಿ ಇರುವ ಅಧಿಕ ಪ್ರಮಾಣ ಪ್ರೋಟೀನ್ ಕೂಡು ಕೆಲವು ಜನರಲ್ಲಿ ಚರ್ಮ ರೋಗಗಳಿಗೆ ಕಾರಣವಾಗುತ್ತದೆ.ಹಲ್ಲಿನ ನೋವಿನಿಂದ ಬಳಲುವವರು ಸ್ವೀಟ್ ಕಾರ್ನ್ ಅನ್ನು ಹೆಚ್ಚು ತಿನ್ನಬಾರದು. ಸ್ವೀಟ್ ಕಾರ್ನ್ ತುಂಬಾ ಸಿಪ್ಪೆ ಇರುತ್ತದೆ. ಇದನ್ನು ಕಚ್ಚಿ ತಿನ್ನಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ತಿನ್ನ ನಂತರ ಹಲ್ಲುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಇಲ್ಲದಿದ್ದರೆ, ನಿಮ್ಮ ಸಮಸ್ಯೆಗಳು ಹೆಚ್ಚಾಗುವ ಅಪಾಯವಿರುತ್ತದೆ.ತೂಕ ಕಡಿಮೆ ಮಾಡುವವರು ಸ್ವೀಟ್ ಕಾರ್ನ್ ಅಧಿಕ ಪ್ರಮಾಣದಲ್ಲಿ ತಿನ್ನಬಾರದು. ಮೆಕ್ಕೆಜೋಳದಲ್ಲಿ ಅಧಿಕ ಫ್ರೋಟೀನ್, ಸಕ್ಕರೆ ಇರುತ್ತದೆ. ಅಧಿಕವಾಗಿ ಪ್ರಮಾಣ ಸೇವಿಸಿದರೆ, ತೂಕ ಹೆಚ್ಚಾಗಲು ಕಾರಣವಾಗುತ್ತದೆ ಎಂದು ಆರೋಗ್ಯ ಸಲಹೆ ನೀಡುತ್ತಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



