ಚಿತ್ರದುರ್ಗ: ವಿದ್ಯಾರ್ಥಿಗಳು ತಾವು ಗಳಿಸುವ ಅಂಕಗಳ ಜೊತೆಗೆ ಕೌಶಲ್ಯವನ್ನು ಸಹಾಯಗಳಿಸಬೇಕಿದೆ, ಮುಂದೆ ಇದು ಉಪಯೋಗವಾಗಲಿದೆಎಂದು ಎಸ್,ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವ ಕುಮಾರ ಶ್ರೀಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಚಿತ್ರದುರ್ಗ ನಗರದ ಗಾರೇಹಟ್ಟಿ ರಸ್ತೆಯಲ್ಲಿನ ಎಸ್.ಜೆ.ಎಂ.ವಿದ್ಯಾ ಪೀಠದ ಮತ್ತು ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಬ್ರಹನ್ಮಠಸಂಯುಕ್ತ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2025-26ನೇಸಾಲಿನ ವಿದ್ಯಾರ್ಥಿ ವೇದಿಕೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಇಂದಿನ ದಿನಮಾನದಲ್ಲಿ ನೀವುಗಳಿಸುವ ಅಂಕಗಳಿಗೆ ಹೆಚ್ಚಿನ ಮಾನ್ಯತೆ ಇಲ್ಲಇದರೊಂದಿಗೆ ಯಾವುದಾದರಲ್ಲಿ ಕೌಶಲ್ಯವನ್ನು ಸಹಾಗಳಿಸಬೇಕಿದೆ. ಇದು ನಿಮ್ಮ ಮುಂದಿನ ಜೀವನಕ್ಕೆ ಉಪಯೋಗವಾಗಲಿದೆನಿಮಗೆ ಉತ್ತಮರಾದವರು ಮಾರ್ಗದರ್ಶಕರಾಗಿರಬೇಕು ಯಾವುದೇ ಸಿನಿಮಾದವರು ನಿಮ್ಮ ಜೀವನಕ್ಕೆಮಾರ್ಗದರ್ಶಕರಾಗಬಾರದು, ಅವರು ನೋಡುವುದಕ್ಕೆ ಸಿನಿಮಾದಲ್ಲಿ ಮಾತ್ರ ಚನ್ನಾಗಿ ಇರುತ್ತಾರೆ ಆದರೆ ಅವರ ಜೀವನ ತುಂಬ ಗಲೀಜಾಗಿರುತ್ತದೆ. ನೀವು ಭ್ರಮೆಯಿಂದ ಹೊರಗಡೆ ಬನ್ನಿ ಈ ವಯಸ್ಸಿನಲ್ಲಿ ನೀವು ತೆಗೆದುಕೊಳ್ಳುವ ನಿರ್ಣಯಗಳನ್ನು ನಿಮ್ಮ ಜೀವನದಲ್ಲಿ ಸಾಧನೆಯನ್ನು ಮಾಡಬಹುದಾಗಿದೆ ಎಂದರು.
ನೀವು ಬೇರೆಯವರಿಗೆ ನಮಸ್ಕಾರ ಮಾಡುವುದಕ್ಕಿಂತ ನಿಮಗೆ ಬೇರೆಯವರು ನಮಸ್ಕಾರ ಮಾಡು ವಂತಾ ಗಬೇಕಿದೆ, ಪ್ರಯತ್ನಶೀಲರಾಗಿ ಕ್ರೀಯಾಶೀಲರಾಗಿ ಸಮಯವನ್ನು ಕಳೆಯ ಬೇಡಿ ಒಂದು ನಿಮಿಷ ಹಾಳಾದರೆ ಒಂದು ದಿನ ಹಾಳಾದಂತೆ ಮುಂದೆಸಮಯಕ್ಕೆ ಬೆಲೆಯನ್ನು ನೀಡಲು ಸಾಧ್ಯವಿಲ್ಲ, ಈಗ ಒಂದು ಕ್ಷಣವನ್ನು ವ್ಯರ್ಥ ಮಾಡದೆ ಸದುಪಯೋಗವನ್ನು ಪಡಿಸಿಕೊಳ್ಳಬೇಕಿದೆ.ಸರ್ಕಾರದಿಂದ ರಾಜ್ಯದಲ್ಲಿ ನಡೆಸುವ ಅನುದಾನ ಅನುದಾನ ರಹಿತ ಕಾಲೇಜಿನಲ್ಲಿ ಅಭ್ಯಾಸವನ್ನು ಮಾಡಿದ ಒಂದೇ ಒಂದುವಿದ್ಯಾರ್ಥಿ ಮೆಡಿಕಲ್ ಸೀಟನ್ನು ಪಡೆದಿಲ್ಲ. ನಮ್ಮ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಭೋಧನೆಯನ್ನುಮಾಡಿದರೆ ಮಕ್ಕಳು ಮುಂದೆ ಉತ್ತಮವಾದ ಪ್ರಗತಿಯನ್ನು ಹೊಂದಲು ಸಾಧ್ಯವಿದೆ ಎಂದರು.
ಒಂದು ಕಾಲದಲ್ಲಿ ಕಾಲೇಜಿನ ಲೈಫ್ ಗೋಲ್ಡನ್ ಲೈಫ್ ಎನ್ನುತ್ತಿದ್ದರು ಅದರೆ ಈಗ ಕಾಲೇಜಿನ ಲೈಫ್ ಕಾಂಪಿಟೇಟಿವ್ ಲೈಫ್ ಆಗಿದೆಇಂದಿನ ಸ್ಪಾರ್ಧಾತ್ಮಕ ಯುಗದಲ್ಲಿ ಕಾಲೇಜಿನಲ್ಲಿಯೇ ಎಲ್ಲವನ್ನು ಕಲಿಯ ಬೇಕಿದೆ ಇದಕ್ಕೆ ತಕ್ಕ ತಯಾರಿಯನ್ನು ಸಹಾಮಾಡಿಕೊಳ್ಳಬೇಕಿದೆ ಇದಕ್ಕಾಗಿ ನಮ್ಮ ಬೃಹನ್ಮಠದಲ್ಲಿಯೂ ಸಹಾ ಮಕ್ಕಳಿಗೆ ಅಗತ್ಯವಾದ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದತರಬೇತಿಯನ್ನು ನೀಡಲಾಗುವುದು ಇದಕ್ಕೆ ಎಲ್ಲರು ಸಹಕಾರ ನೀಡಬೇಕಿದೆ. ಇಂದಿನ ದಿನಮಾನದಲ್ಲಿ ಜಗತ್ತು ತೆರೆದು ಕೂತ್ತಿದೆ,ಇದಕ್ಕೆ ನಮ್ಮ ಮಕ್ಕಳು ಸಿದ್ದರಾಗಬೇಕಿದೆ. ಸಂಕಲ್ಪ ಮಾಡುವುದರ ಮೂಲಕ ತಮ್ಮ ಗುರಿಯನ್ನು ಸಾಧಿಸಿ ಎಂದು ಶ್ರೀಗಳು ಕರೆ ನೀಡಿದರು.
ಬೆಳೆಯಬೇಕು ಎಂಬ ವ್ಯಕ್ತಿಗೆ ಉತ್ಸಾಹ ಇದ್ದಲ್ಲಿ ಏನು ಬೇಕಾದರೂ ಸಹಾ ಸಾಧನೆಯನ್ನು ಮಾಡುತ್ತಾನೆ. ನಿಮ್ಮ ಅಭಿರುಚಿಗಳನ್ನುಹವ್ಯಾಸಗಳನ್ನು ಬದಲಾವಣೆ ಮಾಡಿಕೊಳ್ಳಿ, ಸೋಮಾರಿತನದಿಂದ ವರ್ತಿಸಬೇಡಿ, ಸದಾ ಕ್ರೀಯಾಶ್ರೀಲರಾಗಿ ಇರಬೇಕಿದೆ ಇದರಿಂದ ಮಾತ್ರ ಪ್ರಗತಿಯನ್ನು ಸಾಧಿಸಲು ಸಾಧ್ಯವಿದೆ. ಮನೆಯಲ್ಲಿ ಪೋಷಕರು ತಮ್ಮ ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲಲಿ ಎಂದುಬಯಸುತ್ತಾರೆ. ಇದರಿಂದ ಬಡವರ ಮಕ್ಕಳು ಮೆಡಿಕಲ್ ಸೀಟು ಸಿಗುವಂತೆ ಮಾಡಲು ಸಾಧ್ಯವಿದೆ. ಛಲದಿಂದ ಏನನ್ನಾದರೂ ಸಹಾಸಾಧಿಸಬಹುದಾಗಿದೆ. ಬಡತನದಿಂದ ಬೆಳೆದ ವ್ಯಕ್ತಿ ದೇಶದಲ್ಲಿ ಏನನ್ನಾದರೂ ಸಹಾ ಸಾಧನೆಯನ್ನು ಮಾಡಲು ಸಾಧ್ಯವಿದೆ ಎಂದುಶ್ರೀಗಳು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ. ತಿಮ್ಮಯ್ಯ ಮಾತನಾಡಿ, ಮಕ್ಕಳಿಗೆಪ್ರತಿಭಾ ಪುರಸ್ಕಾರ ಮಾಡುವುದು ಬೇರೆ ಮಕ್ಕಳಿಗೆ ಸ್ಪೂರ್ತಿಯಾಗಲಿ ಮುಂದಿನ ದಿನದಲ್ಲಿ ನಾವು ಸಹಾ ಈ ರೀತಿಯಾದ ಪ್ರತಿಭಾಪುರಸ್ಕಾರಕ್ಕೆ ಒಳಗಾಗಬೇಕೆಂಬ ಛಲ ಬರಲಿ ಎಂದು ಮಾಡಲಾಗುತ್ತದೆ. ಕಾಲೇಜಿಗೆ ಹೊಸದಾಗಿ ಬರುವ ವಿದ್ಯಾರ್ಥಿಗಳು ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅಭಯ ಹಸ್ತವನ್ನು ನೀಡುವ ಕಾರ್ಯಕ್ರಮ ಸ್ವಾಗತವಾದ ಕಾರ್ಯವಾಗಿದೆ. ನಮ್ಮ ಮುಂದಿರುವ ಎರಡು ವರ್ಷವನ್ನು ಸರಿಯಾದ ರೀತಿಯಲ್ಲಿ ಬಳಕೆಯನ್ನು ಮಾಡಿಕೊಂಡರೆ ಅದು ನಿಮ್ಮ ಬದುಕಿನಲ್ಲಿ ದಾರಿ ದೀಪವಾಗಲಿದೆ. ಎರಡುವರ್ಷದ ವಿದ್ಯಾಭ್ಯಾಸ ಸರಿಯಾದ ರೀತಿಯಲ್ಲಿ ಮಾಡಿದರೆ ಮುಂದಿನ 50 ವರ್ಷ ಚನ್ನಾಗಿ ಇರಲು ಸಾಧ್ಯವಿದೆ. ವಿದ್ಯಾಭ್ಯಾಸ ಬಿಟ್ಟುಬೇರೆ ಕಡೆಗಳಲ್ಲಿ ಸಕ್ರಿಯವಾಗಿ ಇದ್ದರೆ ತಮ್ಮ ಮುಂದಿನ ಜೀವನ ಕಷ್ಟವಾಗಲಿದೆ. ನಮ್ಮ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳುಪಿಯು ಅಭ್ಯಾಸಕ್ಕೆ ಬೇರೆ ಕಡೆಗೆ ಹೋಗುವುದರಿಂದ ನಮ್ಮ ಜಿಲ್ಲೆಯ ಫಲಿತಾಂಶ ಕಡಿಮೆಯಾಗಲು ಸಾಧ್ಯವಿದೆ ಆದರೂ ಸಹಾಜಿಲ್ಲೆಯಲ್ಲಿ ಫಲಿತಾಂಶವನ್ನು ಉತ್ತಮ ಗೊಳಿಸಲು ಬೇಕಾದ ಸಕಲವಾದ ಕಾರ್ಯವನ್ನು ಈಗಿನಿಂದಲೇ ಕೈಗೊಳ್ಳಲಾಗಿದೆ ಎಂದರು. 2025ನೇ ಸಾಲಿನಲ್ಲಿ ದ್ವೀತೀಯ ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯನ್ನು ಹೊಂದಿದ ವಿದ್ಯಾರ್ಥಿಗಳಾದ ಕಲಾವಿಭಾಗದ ಕೆ.ರಾಹುಲ್. ಆರ್, ಲೀಲಾವತಿ, ವಿಜ್ಞಾನ ವಿಭಾಗದ ವಿಕಾಸ ಹೆಚ್. ವಾಣೀಜ್ಯ ವಿಭಾಗದ ತಶ್ವಿನಿ ಜಿ.ಎಸ್.ರವರನ್ನುಸನ್ಮಾನಿಸಲಾಯಿತು. ಇದರೊಂದಿಗೆ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹೆಚ್.ಎಂ ಬಸವರಾಜಪ್ಪ,ಹಾಗೂ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದ ನಿಲಯ ಪಾಲಕರಾದ ಶ್ರೀಮತಿ ಅನಿತ ಡಿ.ಎಸ್.ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಆದ್ಯಕ್ಷತೆಯನ್ನು ಬೃಹನ್ಮಠ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಎಂ.ಜಿ.ರಾಜೇಶ್ ವಹಿಸಿದ್ದರು.ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಮಲ್ಲೇಶ್ ಟಿ.ಆರ್. ಹಾಗೂ ಎಸ್.ಜೆ.ಎಂ.ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಎನ್.ಬಿ ಭಾಗವಹಿಸಿದ್ದರು.ವಿದ್ಯಾರ್ಥಿ ಕೋಟೇಶ್ ಪ್ರಾರ್ಥಿಸಿದರೆ, ಸುರಕ್ಷಾ ಸ್ವಾಗತಿಸಿದರು, ಶಿವಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು, ಮೋನಿಕ ನೃತ್ಯಪ್ರದರ್ಶನ ಮಾಡಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



