ಚಿತ್ರದುರ್ಗ: ರಾಜ್ಯ ಸರ್ಕಾರ ಬಯೋಡೀಜೆಲ್‌ಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ ಇದರಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಸಹಾ ಇದರಘಟಕಗಳನ್ನು ಪ್ರಾರಂಭಿಸುವ ಚಿಂತನೆ ನಡೆದಿದೆ ಎಂದು ಜೈವಿಕ ಇಂಧನ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಸ್.ಇ.ಸುಧೀಂದ್ರತಿಳಿಸಿದ್ದಾರೆ.ಚಿತ್ರದುರ್ಗ ನಗರದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀಮತಿ ಜಯ್ಯಮ್ಮ ನಿವಾಸಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ನಿಗಮಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಚಿವರಾದ ಪ್ರಿಯಾಂಕ ಖರ್ಗೆಯವರು ಇದರ ಬಗ್ಗೆ ಬಹಳವಾದ ಆಸಕ್ತಿಯನ್ನು ಹೊಂದಿದ್ದಾರೆ. ನಮ್ಮಲ್ಲಿ ಸಿಗುವಂತ ವಿವಿಧ ರೀತಿಯ ತ್ಯಾಜ್ಯ ವಸ್ತುಗಳಿಂದಡಿಜೆಲ್ ತಯಾರು ಮಾಡುವ ಬಗ್ಗೆ ಈಗಾಗಲೇ ಸಂಶೋಧನೆಗಳು ನಿಗಮದವತಿಯಿಂದ ನಡೆಯುತ್ತಿದೆ ಇದ್ದಲ್ಲದೆ ಈ ಹಿಂದೆ ನಡೆದಸಂಶೋಧನೆಯ ಫಲವಾಗಿ ಡಿಜೆಲ್‌ನ್ನು ತಯಾರು ಮಾಡಿ ನಮ್ಮ ಸರ್ಕಾರದ ವಿವಿಧ ವಾಹನಗಳಿಗೆ ಹಾಕಿ ಓಡಿಸಲಾಗುತ್ತಿದೆ.ಇದರಿಂದ ಪರಿಸರ ಮಾಲಿನ್ಯವಾಗುವುದಿಲ್ಲ, ಮಾನವರಿಗೂ ಸಹಾ ಯಾವುದೇ ರೀತಿಯಿಂದಲೂ ಸಹಾ ಹಾನಿಯಾವುದಿಲ್ಲ ಎಂದರು.
ಒಂದು ಕಾಲದಲ್ಲಿ ಮುಚ್ಚುವ ಸ್ಥಿತಿಯಲ್ಲಿದ್ದ ಜೈವಿಕ ಇಂಧನ ಅಭೀವೃದ್ದಿ ಮಂಡಳಿಯನ್ನು ಇದು ಅಗತ್ಯವಾದ ಮಂಡಳಿಯಾಗಿದೆ ಎಂದುರಾಜ್ಯದಲ್ಲಿ 2009ರ ಪಾಲಿಸಿಯನ್ನು ರಾಷ್ಟ್ರದಲ್ಲಿ ಅಳವಡಿಕೆ ಮಾಡಿಕೊಳ್ಳಲಾಗಿದೆ, 2019ರಲ್ಲಿ ಇದರ ಬಗ್ಗೆ ಕಾನೂನು ಆಗುತ್ತದೆ,ಇದರ ಬಗ್ಗೆ ರಾಜ್ಯದಲ್ಲಿಯೂ ಸಹಾ ಪಾಲಿಸಿಯನ್ನು ಮಾಡಬೇಕೆಂದು ವಿಧಾನಸೌಧಲ್ಲಿ ಇದರ ಬಗ್ಗೆ ಚರ್ಚೆಯನ್ನು ಮಾಡಲಾಗಿದೆ.ಇದರ ಬಗ್ಗೆ ಮಾಡಲಿಸ್ ಅಧ್ಯಕ್ಷರು ಇದರ ಬಗ್ಗೆ ಚರ್ಚೆ ಮಾಡಿ ಮುಂದಿನ ದಿನದಲ್ಲಿ ಇದಕ್ಕೆ ಜೀವ ಇದೆ ಎಂದಿದ್ದಾರೆ. ಇದನ್ನುನಮ್ಮ ರಾಜ್ಯದಲ್ಲಿ ಅಳವಡಿಕೆ ಮಾಡಿಕೊಡಲು ಮನವಿ ಮಾಡಿದ್ದಾರೆ, ಇದರ ಬಗ್ಗೆ ಬೆಂಗಳೂರಿನಲ್ಲಿ ೮ ಕೋಟಿ ವೆಚ್ಚದಲ್ಲಿಸಂಶೋಧನ ಕೇಂದ್ರ ಇದೆ ಇದರಲ್ಲಿ ಬಯೋ ಡಿಜೆಲ್ ತಯಾರಿಕೆಯ ಬಗ್ಗೆ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿರುತ್ತವೆ.ತ್ಯಾಜ್ಯ ವಸ್ತುಗಳಿಂದ ವಿವಿಧ ರೀತಿಯ ಉತ್ಪನ್ನಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರುಚಿತ್ರದುರ್ಗದಲ್ಲಿ ಜಾಗವನ್ನು ನೀಡಿದರೆ ಇಲ್ಲಿಯೂ ಸಹಾ ಮಂಡಳಿವತಿಯಿಂದ ಸಂಶೋಧನ ಕೇಂದ್ರವನ್ನು ನಿರ್ಮಾಣಮಾಡಲಾಗುವುದು. ಇದರ ಬಗ್ಗೆ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಗಮನ ನೀಡಬೇಕಿದೆ. ಜೈವಿಕ ಇಂಧನ ಮುಂದಿನ ದಿನದಲ್ಲಿಉಪಯುಕ್ತವಾದ ವಸ್ತುವಾಗಲಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಆಸಕ್ತಿಯನ್ನು ತೋರಿಸಿದ್ದಾರೆ ಇದನ್ನು ರಾಜ್ಯದಲ್ಲಿಉತ್ತಮಪಡಿಸುವಂತೆ ಸೂಚನೆಯನ್ನು ನೀಡಿದ್ದಾರೆ ಇದರ ಘಟಕಗಳನ್ನು ರಾಜ್ಯದಲ್ಲಿ ಪ್ರಾರಂಭ ಮಾಡುವಂತೆ ನಿರ್ದೇಶನ ನೀಡಿದ್ದಾರೆಎಂದ ಅವರು, ವೆಸ್ಟ್‌ನ್ನು ಸಹಾ ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿ ಅದನ್ನು ಮರು ಬಳಕೆ ಮಾಡುವಂತೆ ಆಗಬೇಕಿದೆಇದರ ಬಗ್ಗೆ ಚಿಂತನೆಯನ್ನು ನಡೆಸುವಂತೆ ಸೂಚಿಸಿದ್ದಾರೆ ಎಂದರು.
ಜೈವಿಕ ಇಂಧನ ಬಗ್ಗೆ ಪಾಲಿಸಿ ಬಂದಾಗ ರಾಜ್ಯ ಅಲ್ಲದೆ ರಾಷ್ಟ್ರಕ್ಕೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭೀವೃದ್ದಿ ಮಂಡಳಿ
ಮಾದರಿಯಾಗಲಿದೆ. ಚಿತ್ರದುರ್ಗದಲ್ಲಿ ಮಂಡಳಿಯವತಿಯಿಂದ ಯಾವ ರೀತಿಯಾದ ಉಪಯೋಗವನ್ನು ಮಾಡಬೇಕೆಂದು
ರೂಪರೇಷಗಳನ್ನು ತಯಾರು ಮಾಡಲಾಗಿದೆ. ಇಲ್ಲಿಗೆ ನಮ್ಮ ಮಂಡಳಿಯ ತಂಡವನ್ನು ಕಳುಹಿಸಿ ಯಾವ ರೀತಿ ಮಾಡಬೇಕೆಂದುಅಲೋಚನೆಯನ್ನು ನಡೆಸಲಾಗುವುದು. ಉತ್ತಮ ಗುಣಮಟ್ಟದಲ್ಲಿ ಇಂಧನ ತಯಾರು ಮಾಡಿದರೆ ಅದನ್ನು ನೇರವಾಗಿ ವಾಹನಗಳಿಗೆಬಳಕೆಯನ್ನು ಮಾಡಬಹುದಾಗಿದೆ, ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪಾಲಿಸಿಯನ್ನು ಮಾಡಲಾಗಿದೆ ಅದು ಅನುಮತಿ ಪಡೆದುಪಾಲಿಸಿಯಾಗಿ ಹೊರ ಬಂದಲ್ಲಿ ನಮ್ಮ ಮಂಡಳಿ ಮತ್ತಷ್ಟು ಉಪಯುಕ್ತವಾದ ಕಾರ್ಯವನ್ನು ಮಾಡಬಹುದಾಗಿದೆ ಎಂದು ಸುಧಿಂದ್ರತಿಳಿಸಿದರು.ಆ. 11 ರಿಂದ ವಿಧಾನ ಸಭೆಯ ಅಧಿವೇಶನ ಪ್ರಾರಂಭವಾಗಲಿದ್ದು ಇದರಲ್ಲಿ ಈ ಪಾಲಿಸಿಯ ಬಗ್ಗೆ ಚರ್ಚೆಯಾಗಿ ಕಾನೂನಾಗಿರೂಪುಗೊಳ್ಳುವ ನಿರೀಕ್ಷೆ ಇದೆ. ನಮ್ಮ ಸಂಶೋಧನ ಕೇಂದ್ರಕ್ಕೆ ನೇಪಾಳ್ ಪ್ರಧಾನ ಮಂತ್ರಿ ಹಾಗೂ ಮಾಲಿಡಿಸ್ ಅಧ್ಯಕ್ಷರು ಸಹಾಭೇಟಿ ಮಾಡಲು ಅಸಕ್ತಿಯನ್ನು ಹೊಂದಿದ್ದಾರೆ. ನಮ್ಮ ಕೆಲಸದ ಬಗ್ಗೆಯೂ ಸಹಾಸ ಚರ್ಚೆ ಮಾಡಲಿದ್ದಾರೆ. ಕೇಂದ್ರ ಸರ್ಕಾರದಸಚಿವರು ಸಹಾ ನಮ್ಮ ಕಾರ್ಯವನ್ನು ಹೊಗಳಿದ್ದಾರೆ. ಸಂಶೋಧನಾ ಕೇಂದ್ರಕ್ಕೆ ಇತ್ತೀಚೆಗೆ 30 ಲಕ್ಷ ರೂಗಳನ್ನು ಬಳಕೆಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀಮತಿ ಜಯ್ಯಮ್ಮ, ಜಿ.ಪಂ. ಮಾಜಿ ಅಧ್ಯಕ್ಷರಾದ ಬಾಲರಾಜ್,
ಕೆಪಿಸಿಸಿ ವಕ್ತಾರ ಬಾಲಕೃಷ್ಣ ಯಾದವ್, ಗುರುರಾಜ್ ಶೆಟ್ಟಿ, ಆಶ್ರಫ್, ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



