ಚಿತ್ರದುರ್ಗ : ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಿಲ್ಲಾಸ್ಪತ್ರೆಯಲ್ಲಿ ಇನ್ನರ್‍ವೀಲ್ಹ್ ಕ್ಲಬ್‍ನಿಂದ ಎಂಬತ್ತು ಬಾಣಂತಿಯರಿಗೆ
ಪೌಷ್ಠಿಕಾಂಶದ ಕಿಟ್‍ಗಳನ್ನು ವಿತರಿಸಲಾಯಿತು.ಬಾಣಂತಿಯರಿಗೆ ಹೆಸರುಕಾಳು, ರವೆ, ಬೆಲ್ಲದ ಪೌಷ್ಟಿಕಾಂಶ ಕಿಟ್‍ಗಳನ್ನು ನೀಡಿ ಮಾತನಾಡಿದ ಮೆದೆಹಳ್ಳಿ ಗ್ರಾಮ ಪಂಚಾಯಿತಿಸದಸ್ಯೆ ವನಜಾ ಅನಂತರಾಜು ಎರಡು ವರ್ಷಗಳ ಕಾಲ ಬಾಣಂತಿಯರು ಮಗುವಿದೆ ಎದೆಹಾಲು ಉಣಿಸಿದರೆ ಮಕ್ಕಳುಆರೋಗ್ಯವಾಗಿರುತ್ತಾರೆಂದು ಹೇಳಿದರು.
ಇನ್ನರ್‍ವೀಲ್ಹ್ ಕ್ಲಬ್ ಅಧ್ಯಕ್ಷೆ ವೀಣ ಜಯರಾಂ ಮಾತನಾಡಿ ಬಾಣಂತಿಯರು ಪೌಷ್ಠಿಕ ಆಹಾರಗಳನ್ನು ಸೇವಿಸುವುದರಿಂದ ಎದೆಹಾಲುವೃದ್ದಿಯಾಗುತ್ತದೆ. ಇದರಿಂದ ಮಕ್ಕಳಿಗೆ ಸತತವಾಗಿ ಎರಡು ವರ್ಷಗಳಾದರು ಹಾಲುಣಿಸಬಹುದು ಎಂದು ಸಲಹೆ ನೀಡಿದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ಇನ್ನರ್‍ವೀಲ್ಹ್ ಕ್ಲಬ್ ಕಾರ್ಯದರ್ಶಿ ಶೋಭ ರಾಮಚಂದ್ರ, ಸ್ತ್ರೀರೋಗ ತಜ್ಞರು ಹಾಗೂ ಗಾಯತ್ರಿ ಶಿವರಾಂ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



