ಹೊಳಲ್ಕೆರೆ : ಬಡವರಿಗೆ ನಿವೇಶನ ನೀಡಿ ಮನೆ ಕಟ್ಟಿಸಿಕೊಟ್ಟರೆ ನೆಮ್ಮದಿಯಾಗಿರುತ್ತಾರೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ತಾಲ್ಲೂಕಿನ ಈಚಘಟ್ಟ ಗ್ರಾಮದಲ್ಲಿ 95 ಲಕ್ಷ ರೂ.ವೆಚ್ಚದಲ್ಲಿ ಆಶ್ರಯ ಬಡಾವಣೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿಮಾತನಾಡಿದರು.ನಾಲ್ಕು ಎಕರೆ ಜಾಗದಲ್ಲಿ ಸಿ.ಸಿ.ರಸ್ತೆ ಮಾಡಿಸಿ ಸೈಟ್‍ಗಳನ್ನು ವಿತರಿಸಲಾಗುವುದು. ರೈತರಿಗೆ ನೀರು ವಿದ್ಯುತ್ ಕೊಡುವುದು ನನ್ನಜವಾಬ್ದಾರಿ. ಭದ್ರಾ ಜಲಾಶಯದಿಂದ ಇನ್ನು ಮೂರು ನಾಲ್ಕು ತಿಂಗಳಲ್ಲಿ ನೀರು ಹರಿಯಲಿದ್ದು. ತಾಲ್ಲೂಕಿನ ಎಲ್ಲಾ ಕೆರಗಳುತುಂಬುತ್ತವೆ. ರೈತರ ಬದುಕು ಕಷ್ಟವಿದೆ ಎನ್ನುವುದು ಗೊತ್ತು. ಹಿರಿಯೂರಿನ ವಾಣಿ ವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆಮನೆಗೆ ಫಿಲ್ಟರ್ ನೀರು ಕೊಡುತ್ತೇನೆ. ಅದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆ. ಯಾರಿಂದಲೂ ಏನನ್ನುಹೇಳಿಸಿಕೊಂಡು ಕೆಲಸ ಮಾಡುವ ಎಂ.ಎಲ್.ಎ.ನಾನಲ್ಲ. 31 ವರ್ಷದ ಹಿಂದೆ ಭರಮಸಾಗರದಿಂದ ಸ್ಪರ್ಧಿಸಿ ಶಾಸಕನಾದವನು.
ಅಲ್ಲಿಂದ ಇಲ್ಲಿಯವರೆಗೂ ಮತದಾರರ ಋಣ ತೀರಿಸುವ ಕೆಲಸದಲ್ಲಿ ತೊಡಗಿದ್ದೇನೆಂದು ಹೇಳಿದರು.ಇಲ್ಲಿಂದ ದಗ್ಗೆವರೆಗೂ ರಸ್ತೆ ಮಾಡಿಸುತ್ತೇನೆ. ಶಿವಗಂಗಾ, ಹೆಚ್.ಡಿ.ಪುರ ಸೇರಿದಂತೆ ಎಲ್ಲಾ ಕೆರೆಗಳಿಗೂ ನೀರು ತುಂಬಿಸುತ್ತೇನೆ.
ಇದರಿಂದ ರೈತರ ತೋಟಗಳು ಒಣಗುವುದಿಲ್ಲ ಎಂದರು.ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಾಜಣ್ಣ, ಕಾಂತರಾಜ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪರಮೇಶ್ವರಪ್ಪ, ಡಿಸಿಸಿ.ಬ್ಯಾಂಕ್‍ನ ಪ್ರವೀಣ್‍ಕುಮಾರ್, ಕಲ್ಲಪ್ಪ, ಅಂಕಳಪ್ಪ ಹಾಗೂ ಗ್ರಾಮದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿರಿದ್ದರು
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



