ಚಿತ್ರದುರ್ಗ : ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅಂಗಡಿ ಮುಂಗಟ್ಟುಗಳ ಮೇಲೆ ಶೇ.60 ರಷ್ಟು ಕನ್ನಡ ನಾಮಫಲಕಅಳವಡಿಸದಿರುವವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ನಗರಸಭೆಪೌರಾಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ವ್ಯಾಪಾರಿ ಮಳಿಗೆಗಳು, ಅಂಗಡಿ, ಹೋಟೆಲ್, ಆಸ್ಪತ್ರೆ ಸೇರಿದಂತೆ ವ್ಯಾಪಾರ ವಹಿವಾಟು ನಡೆಸುವವರು ಶೇ.60 ರಷ್ಟು ಕನ್ನಡನಾಮಫಲಕ ಅಳವಡಿಸಬೇಕೆಂದು ಸರ್ಕಾರದ ನಿಯಮವಿದೆ. ಯಾರು ಪಾಲಿಸುತ್ತಿಲ್ಲ. ನಗರಸಭೆಯಿಂದ ಪರವಾನಗಿ ನೀಡುವಾಗಶೇ.60 ರಷ್ಟು ಕನ್ನಡ ಬಳಕೆಯಾಗಬೇಕೆಂದು ಕಡ್ಡಾಯಗೊಳಿಸಬೇಕು.ಪರವಾನಗಿ ಪಡೆದಿರುವವರು ಶೇ.60 ರಷ್ಟು ಕನ್ನಡ ನಾಮಫಲಕವಾಕದೆ ಇಂಗ್ಲಿಷ್ ನಾಮಫಲಕಗಳನ್ನು ವೈಭವಿಕರಿಸುವವರಿಗೆದಂಡ ವಿಧಿಸಬೇಕು.
ಸಿ.ಸಿ. ಟಿ.ವಿ. ಅಳವಡಿಸದ ಕಾರಣ ಅಲ್ಲಲ್ಲಿ ಕಳ್ಳತನಗಳು ಜಾಸ್ತಿಯಾಗುತ್ತಿವೆ. ಸ್ವಚ್ಚತೆಗೂ ಆದ್ಯತೆ ನೀಡುತ್ತಿಲ್ಲವೆಂದು ಕರುನಾಡವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ನಗರಸಭೆ ವಿರುದ್ದ ಪೌರಾಯುಕ್ತರಿಗೆ ದೂರಿದರು.ಕರುನಾಡ ವಿಜಯಸೇನೆ ಮಹಿಳಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ನಗರಾಧ್ಯಕ್ಷ ಅವಿನಾಶ್, ವಿದ್ಯಾರ್ಥಿಘಟಕದ ಅಖಿಲೇಶ್, ಕಾರ್ಯದರ್ಶಿ ಜಗದೀಶ್, ಶಶಿ, ವಿಜಯಬಾಬು ಇವರುಗಳು ಈ ಸಂದರ್ಭದಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



