ಚಿತ್ರದುರ್ಗ: ಭಾರತ ಐತಿಹಾಸಿಕವಾಗಿ ಬೌದ್ಧ ಧರ್ಮ, ಕರ್ನಾಟಕ ಐತಿಹಾಸಿಕ ಬಸವ ತತ್ವದ ತವರಾಗಿದೆ. ಇವೆರಡು ಮಹಾಸಾದ್ವಿಕಧರ್ಮಗಳಾಗಿವೆ. ಇಬ್ಬರು ಮಹನೀಯರ ಕೊಡುಗೆ ಬಹುದೊಡ್ಡದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯಗಳ ಇಲಾಖೆಯ ಸಚಿವರಾದ ಎಂ.ಬಿ. ಪಾಟೀಲ್ ತಿಳಿಸಿದರು.ಚಿತ್ರದುರ್ಗ ನಗರದ ಬೃಹನ್ಮಠದ ಆವರಣದಲ್ಲಿನ ಅನುಭವ ಮಂಟಪದಲ್ಲಿ ಭಾನುವಾರ ಬಸವ ನಾಡಿನಲ್ಲಿ ಬುದ್ದ ಸ್ಮರಣೆ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು,ಬಸವಣ್ಣನ ನಾಡಿನಲ್ಲಿ ಬುದ್ಧನ ಸ್ಮರಣೆ ಅವಿಸ್ಮರಣೀಯ, ಐತಿಹಾಸಿಕಕಾರ್ಯಕ್ರಮ. ಚಿತ್ರದುರ್ಗದ ಪರಿಸರವೂ ಬೌದ್ಧ ಧರ್ಮ ಮಾರ್ಗದಲ್ಲಿ ನಡೆದಿದೆ. ಅದಕ್ಕೆ ನಿದರ್ಶನವೆಂಬಂತೆ ಅಶೋಕನ ಕಾಲದಅನೇಕ ಶಾಸನಗಳು ಇಲ್ಲಿವೆ. ಈ ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣನ ಸಂಸ್ಕೃತಿಯನ್ನು ಕೂಡ ನಾವಿಲ್ಲಿ ಕಾಣಬಹುದು. ಬುದ್ಧಮತ್ತು ಬಸವ ಭಾರತ ಕಂಡ ಅತ್ಯಂತ ಶ್ರೇಷ್ಠ ಸುಧಾರಕರು. ಭಿನ್ನ ದಾರಿಯಲ್ಲಿ ನಡೆದು ತಮ್ಮ ಕಾಲಘಟ್ಟದಲ್ಲಿ ಶೋಷಿತರ,ದೀನದಲಿತರ, ನೊಂದವರ ಪರವಾಗಿ ಧ್ವನಿ ಎತ್ತಿದವರು. ಅಹಿಂಸೆ, ಸಮಾನತೆ, ಮಾನವೀಯತೆ, ಕಾರುಣ್ಯ ಪ್ರಮುಖ ತತ್ವಗಳಾಗಿವೆ.
ಭಾರತ ಐತಿಹಾಸಿಕವಾಗಿ ಬೌದ್ಧ ಧರ್ಮ, ಕರ್ನಾಟಕ ಐತಿಹಾಸಿಕ ಬಸವ ತತ್ವದ ತವರಾಗಿದೆ. ಇವೆರಡು ಮಹಾಸಾದ್ವಿಕ
ಧರ್ಮಗಳಾಗಿವೆ. ಇಬ್ಬರು ಮಹನೀಯರ ಕೊಡುಗೆ ಬಹುದೊಡ್ಡದಿದೆ. ಟಿಬೆಟ್ ಏಳನೇ ಶತಮಾನದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದೆಎಂದರು.ವಿಶ್ವದ ಹಲವು ರಾಷ್ಟ್ರಗಳು ಅನುಸರಿಸುತ್ತಿವೆ. 1950 ರಲ್ಲಿ 3,500 ಕಿ.ಮೀ ಗಡಿ ಹೊಂದಿತ್ತು. ನಮ್ಮೊಂದಿಗೆ ಉತ್ತಮ ಬಾಂಧವ್ಯವಿದೆ.ಅಂದಿನ ಪ್ರಧಾನಿಯಾಗಿದ್ದ ನೆಹರೂ ಭಾರತದಲ್ಲಿ, ಸಿಎಂಗಳಾಗಿದ್ದ ರಾಷ್ಟ್ರನಾಯಕ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರುಕರ್ನಾಟಕದಲ್ಲಿ ಟಿಬೆಟಿಯನ್ನರಿಗೆ ಆಶ್ರಯ ಕಲ್ಪಿಸಿದರು. ರಾಜ್ಯದಲ್ಲೂ ಅವರ ಸಂಖ್ಯೆ ಹೆಚ್ಚಿದೆ. ಸೌಹಾರ್ದಯುತ ಸಂಬಂಧವಿದೆ.ಹೀಗಾಗಿ ಭಾರತೀಯ ಸಮಾಜ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಬಸವಣ್ಣ ಎಲ್ಲ ವರ್ಗದವರನ್ನು ಕೂಡಿಸಿ, ಕಾಯಕ ಮತ್ತು ದಾಸೋಹಸಂಸ್ಕೃತಿ ಬೆಳೆಸಿದರು. ಅಸ್ಪಶ್ಯತೆ ವಿರುದ್ಧ ಹೋರಾಡಿದರು. ಬಸವ ಧರ್ಮ ಜಾತ್ಯತೀತ ಧರ್ಮ. ಬಸವಾದಿ ಶರಣರ ಚಿಂತನೆ, ಆಶಯಈಡೇರಿಸುವ ನಿಟ್ಟಿನಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ. ಹೀಗಾಗಿ ಹರಿದು ಹಂಚಿ ಹೋಗಿದೆ. ಒಗ್ಗೂಡಿಸುವ ಕೆಲಸ ಆಗಬೇಕಿದೆ. ವಿಶ್ವ3ನೇ ಮಹಾಯುದ್ಧದ ಹಂತದಲ್ಲಿದೆ. ಇದರ ಹಿಂದಿನ ಹಿತಾಸಕ್ತಿಯನ್ನು ಬುದ್ಧ, ಬಸವನ ಅನುಯಾಯಿಗಳು ಅರ್ಥ ಮಾಡಿಕೊಳ್ಳಬೇಕುಎಂದು ತಿಳಿಸಿದರು.
ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದ ಕೆ.ಎಚ್. ಮುನಿಯಪ್ಪಮಾತನಾಡಿ, ಬೌದ್ಧಧರ್ಮವೂ ಅತ್ಯಂತ ಪುರಾತನವಾದುದು. ದಕ್ಷಿಣ ಭಾರತದಲ್ಲಿ 4-5ನೇ ಶತಮಾನದಲ್ಲಿದ್ದ ಕುರುಹುಗಳನ್ನು ಪತ್ತೆ ಹಚ್ಚಿ
ಪುನರುಜ್ಜೀವನಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದ ಅವರು. ಬೌದ್ಧ, ಬಸವ, ಜೈನ ಧರ್ಮ ಶಾಂತಿ ಮಂತ್ರ ಪಠಿಸಿದೆ.
ಜಗತ್ತಿಗೆ ಧರ್ಮ ಬೋಧನೆ ಮಾಡುವಲ್ಲೂ ಶ್ರಮಿಸಿವೆ. 12ನೇ ಶತಮಾನದ ಬಸವಣ್ಣನ ತತ್ವಾದರ್ಶ, ಬುದ್ಧನ ಅಷ್ಠಾಂಗ
ಮಾರ್ಗಸಮರ್ಪಕವಾಗಿ ಸಾರಿದ್ದರೆ, ವಿಶ್ವಶಾಂತಿಗೆ ಮನ್ನಣೆ ದೊರೆಯುತ್ತಿತ್ತು ಎಂದು ಅಭಿಪ್ರಾಯಪಟ್ಟರು.ಮಾರಸಂದ್ರ ಮುನಿಯಪ್ಪ ಮಾತನಾಡಿ, ಬುದ್ಧ ನೊಂದವರಿಗಾಗಿ ರಾಜ ಮನೆತನ ಬಿಟ್ಟರು. ಮಾನವತಾ ಧರ್ಮ ಪ್ರತಿಪಾದಿಸಿದರು.
ಬಸವಣ್ಣ ಸ್ಥಾಪಿಸಿದ್ದು, ಜಾತಿಯಲ್ಲ. ಅದೊಂದು ಪವಿತ್ರವಾದ ಧರ್ಮ. ಇಬ್ಬರೂ ಮಹನೀಯರು ವಿಶ್ವ ಸಂತರು ಎಂದು ಬಣ್ಣಿಸಿಅಂಬೇಡ್ಕರ್ ಅವರು ಮತದಾನದ ಹಕ್ಕು ನೀಡಿದ್ದರಿಂದಾಗಿ ಶೋಷಿತ, ದಲಿತ, ಹಿಂದುಳಿದವರು ಜನಪ್ರತಿನಿಧಿಯಾಗಲುಸಹಕಾರಿಯಾಗಿದೆ. ಬುದ್ಧ, ಬಸವ, ಅಶೋಕ ಚಕ್ರವರ್ತಿ, ಅಂಬೇಡ್ಕರ್ ಇವರೆಲ್ಲರೂ ನಮ್ಮ ತಾತಂದಿರು ಎಂಬುದನ್ನುಮರೆಯಬಾರದು ಎಂದರು.ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಮದಾರ ಗುರು ಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಟಿಬೆಟ್ಬೌದ್ಧ ಗುರು ದಲೈ ಲಾಮಾ ಅವರು ಅನಾರೋಗ್ಯ ಕಾರಣಕ್ಕೆ ಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಕಳುಹಿಸಿದ್ದಾರೆ. ಅದಕ್ಕಾಗಿ ನೇರಪ್ರಸಾರದ ಮೂಲಕ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ ಎಂದರು.ದಲೈ ಲಾಮಾ ಅವರ ಸಂದೇಶವನ್ನು ಓದಿದ ಗೋಪಿನಾಥ್ ಕರುಣೆ ಮತ್ತು ಮೈತ್ರಿಯ ಬದುಕು ಅತ್ಯಂತ ಶ್ರೇಷ್ಠವಾದುದು.ನಿಜಲಿಂಗಪ್ಪ ಅವರು ನನಗೆ ತುಂಬಾ ಆತ್ಮೀಯ ಗೆಳೆಯರಾಗಿದ್ದರು. ಕಠಿಣ ದಿನಗಳಲ್ಲಿ ಸಹಕಾರ ನೀಡಿದರು. ಹೀಗಾಗಿ ಕರ್ನಾಟಕದಲ್ಲಿಬೌದ್ಧಿಕ, ಸಾಂಸ್ಕೃತಿಕವಾಗಿ ಧರ್ಮ ಸ್ಥಾಪನೆಗೆ ಕಾರಣವಾಯಿತು. ಸತ್ಯ, ಅಹಿಂಸೆಗೆ ಆದ್ಯತೆ ನೀಡಿರುವ ಭಾರತದ ಕುರಿತು ನಮಗೆ ಹೆಚ್ಚಿನ ಗೌರವವಿದೆ. ಇಲ್ಲಿನ ಪುರಾತನ ಸಂಸ್ಕೃತಿ, ಮೌಲ್ಯಗಳು ಜಾಗೃತಿ ಮೂಡಿಸುವಲ್ಲೂ ಮುಂಚೂಣಿಯಲ್ಲಿವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಿವಲಿಂಗಾನಂದ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಪ್ರಸನ್ನಾನಂದಪುರಿ ಸ್ವಾಮೀಜಿ, ಡಾ. ಬಸವಕುಮಾರಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಮಿಕ ಸಚಿವ ಸಂತೋಷ್ ಲಾಡ್,ಜಿಲ್ಲಾ ಉಸ್ತುವಾರಿಸಚಿವ ಡಿ. ಸುಧಾಕರ್, ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಶಾಸಕರಾದ ಕೆ.ಸಿ. ವೀರೇಂದ್ರ ಪಪ್ಪಿ, ಟಿ. ರಘುಮೂರ್ತಿ ಇತರರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







