ಗರಿಯಾಬಂದ್: ಆರ್ಸಿಬಿ ನಾಯಕ ರಜತ್ ಪಾಟೀದಾರ್ ಎಂದು ಛತ್ತೀಸ್ಗಢದ 21 ವರ್ಷದ ಯುವಕನಿಗೆ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಕರೆ ಮಾಡಿದ ಘಟನೆ ನಡೆದಿದೆ. ರಜತ್ ಬಳಸುತ್ತಿದ್ದ ಸಿಮ್ ಕಾರ್ಡ್ ಕೆಲವು ತಿಂಗಳುಗಳಿಂದ ನಿಷ್ಕ್ರಿಯವಾಗಿತ್ತು. ಟೆಲಿಕಾಂ ನಿಯಮ ಪ್ರಕಾರ 90 ದಿನಗಳ ಕಾಲ ಬಳಸದಿರುವ ಸಿಮ್ ಬೇರೆಯವರಿಗೆ ನೀಡಲಾಗುತ್ತದೆ. ಹೀಗಾಗಿ ರಜತ್ ಬಳಸುತ್ತಿದ್ದ ಅದೇ ನಂಬರನ ಸಿಮ್ ಮನೀಶ್ಗೆ ಸಿಕ್ಕಿದೆ. ವಾಟ್ಸಾಪ್ ಸಕ್ರಿಯಗೊಳಿಸಿದ ಮನೀಶ್ಗೆ ರಜತ್ ಫೋಟೋಕಾಣಿಸಿದೆ. ಅಲ್ಲದೆ, ಇತ್ತೀಚೆಗೆ ಆ ನಂಬರ್ಗೆ ಕೊಹ್ಲಿ, ವಿಲಿಯರ್ಸ್, ಯಶ್ ದಯಾಳ್ ಕರೆ ಮಾಡಿದ್ದಾರೆ. ಯಾರೋ ತಮಾಷೆಗಾಗಿ ಮಾಡುತ್ತಿದ್ದಾರೆ ಎಂದು ಭಾವಿಸಿ ಮನೀಶ್ ಸುಮ್ಮನಾಗಿದ್ದಾರೆ. ಬಳಿಕ ಸ್ವತಃ ರಜತ್ ಕರೆ ಮಾಡಿದ್ದು, ದಯವಿಟ್ಟು ನನ್ನ ಸಿಮ್ ಹಿಂದಿರುಗಿಸಿ ಎಂದಿದ್ದಾರೆ. ಇದನ್ನೂ ತಮಾಷೆಯ ಕರೆ ಎಂದು ಮನೀಶ್ ಭಾವಿಸಿದ್ದಾರೆ. ಬಳಿಕ ರಜತ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಮನೀಶ್ ಮನೆಗೆ ಆಗಮಿಸಿದ್ದು, ಅವರಿಗೆ ಮನೀಶ್ ಸಿಮ್ ಹಿಂದಿರುಗಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







