ಚಿತ್ರದುರ್ಗ: ಹಳೆ ಕಾಲದಲ್ಲಿ ಕೆರೆ, ಬಾವಿ, ಹೊಂಡದ ನೀರುಗಳನ್ನು ಕುಡಿದು ಜನ ಆರೋಗ್ಯವಾಗಿರುತ್ತಿದ್ದರು. ಈಗ ಎಲ್ಲರೂ ಒತ್ತಡದಜೀವನ ಸಾಗಿಸುತ್ತಿರುವುದರಿಂದ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದುಜಿಲ್ಲಾಪ್ರಧಾನಮತ್ತುಸತ್ರನ್ಯಾಯಾಧೀಶರಾದ ರೋಣ ವಾಸುದೇವ್ ತಿಳಿಸಿದರು.ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘಇವರುಗಳ ಸಹಯೋಗದೊಂದಿಗೆವಕೀಲರ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಹೃದಯ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ ರಕ್ತ ಸಂಚಾರವಾಗಲಿದೆ. ಜೀವನ ಶೈಲಿ ಹಾಗೂ ಬದಲಾದ ಆಹಾರ ಪದ್ದತಿಯಿಂದಹೃದಯಾಘಾತಗಳು ಜಾಸ್ತಿಯಾಗುತ್ತಿವೆ. ಹಾಗಾಗಿ ಮದ್ಯಪಾನ, ಧೂಮಪಾನ ಸೇರಿದಂತೆ ದುಶ್ಚಟಗಳಿಂದ ದೂರವಿದ್ದು, ಉತ್ತಮಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಹೇಳಿದರು.ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಮಾತನಾಡಿ ಮೂವತ್ತು ವರ್ಷದಾಟಿದವರಿಗೆ ಮಧುಮೇಹ, ರಕ್ತದೊತ್ತಡ ಶೇ.30 ರಷ್ಟಿರುತ್ತದೆ.ಅತಿಯಾದರಕ್ತದೊತ್ತಡ,ಸಕ್ಕರೆಕಾಯಿಲೆಯಿಂದಲೂಹೃದಯಾಘಾತ ಸಂಭವಿಸುವ ಸಾಧ್ಯತೆಗಳಿರುತ್ತವೆ. ನಿರ್ಲಕ್ಷೆ ಮಾಡಬಾರದು. ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಂಡುಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ವಕೀಲರುಗಳಿಗೆ ಸಲಹೆ ನೀಡಿದರು.ಆಗಿಂದಾಗ್ಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ಚೆಕ್ ಮಾಡಿಸಿಕೊಳ್ಳುತ್ತಿರಬೇಕು. ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆಗಳುಕೆಲವೊಮ್ಮೆ ಹೃದಯಾಘಾತಕ್ಕೆ ಕಾರಣವಾಗಬಹುದು. ಬೊಜ್ಜು, ಏರ್ ಪಲುಷನ್ ಇವುಗಳಿಂದಲೂ ಹೃದಯಾಘಾತವಾಗುವಸಾಧ್ಯತೆಗಳಿವೆ. ಕೊಬ್ಬಿನಾಂಶ ಅತಿಯಾಗದಂತ ಆಹಾರಗಳನ್ನು ಸೇವಿಸಬೇಕು. ಮದ್ಯಪಾನ, ಧೂಮಪಾನದಿಂದ ದೂರವಿದ್ದು,ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕೆಲವೊಮ್ಮೆ ಎದೆ ಉರಿಯಾಗುವುದನ್ನು ಗ್ಯಾಸ್ಟ್ರಿಕ್ ಎಂದು ತಿಳಿದು ಉದಾಸೀನಮಾಡುವುದುಂಟು. ನೋವು ಕಾಣಿಸಿಕೊಂಡಾಗ ಕೂಡಲೆ ವೈದ್ಯರನ್ನು ಸಂಪರ್ಕಿಸಿ. ಉತ್ತಮ ಜೀವನ ಶೈಲಿ, ಆರೋಗ್ಯ ಪದ್ದತಿಯಿಂದಹೃದಯಾಘಾತವನ್ನುತಡೆಗಟ್ಟಬಹುದುಎಂದುಹೇಳಿದರು.
ನಿರ್ದೇಶಕರು ಮತ್ತು ಡೀನ್ ಚಿತ್ರದುರ್ಗದ ಡಾ.ಬಿ.ವೈ.ಯುವರಾಜ್ ಮಾತನಾಡಿ ನೀರು ದೇಹಕ್ಕೆ ಅತಿ ಮುಖ್ಯ. ಬೆಳಿಗ್ಗೆ ಎದ್ದ ಕೂಡಲೆಎಲ್ಲರೂ ನೀರು ಕುಡಿಯುವುದು ಸಹಜ. ಆದರೆ ಬಾಟಲ್ ನೀರು ಆರೋಗ್ಯಕ್ಕೆ ಹಾನಿಯಾಗಬಹುದು. ಕ್ಯಾನ್ಸರ್ ಬರುವಲಕ್ಷಣಗಳಿರುತ್ತವೆ. ಜೀವಕ್ಕೆ ಬೇಕಾದ ನೀರನ್ನು ಯಾರು ಕುಡಿಯುತ್ತಿಲ್ಲ. ಎಲ್ಲರೂ ಫಿಲ್ಟರ್ ನೀರಿಗೆ ಮಾರು ಹೋಗಿದ್ದಾರೆ. ಅಸಿಡಿಟಿಜಾಸ್ತಿಯಾದಾಗ ದೇಹದಲ್ಲಿ ಬೇರೆ ಬೇರೆ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎಂದರು.ವಕೀಲರ ಸಂಘದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ ಮಾತನಾಡುತ್ತ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮುಂದುವರೆದಂತೆಲ್ಲಾಕಾಯಿಲೆಗಳು ಜಾಸ್ತಿಯಾಗುತ್ತಿವೆ. ತಾಂತ್ರಿಕ ಯುಗದಲ್ಲಿ ಬದಲಾದ ಜೀವನ ಶೈಲಿ, ಫಾಸ್ಟ್ ಫುಡ್ಗಳಿಂದಲೂ ಹೃದಯಾಘಾತಸಂಭವಿಸಬಹುದು. ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಹಾಗಾಗಿ ಪ್ರಾಣ ಉಳಿಸುವ ವೈದ್ಯರುಗಳನ್ನು ದೇವರಂತೆಕಾಣುತ್ತೇವೆಂದು ನುಡಿದರು.ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಡಾ.ಮೇಘ ಜಿ.ಹೆಚ್. ವಕೀಲರಸಂಘದ ಉಪಾಧ್ಯಕ್ಷಬಿ.ಎಂ.ಅನಿಲ್ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್ ಇವರುಗಳುವೇದಿಕೆಯಲ್ಲಿದ್ದರು.ನ್ಯಾಯಾಧೀಶರುಗಳು ಹಾಗೂ ವಕೀಲರುಗಳು ಹೃದಯ ಆರೋಗ್ಯ ತಪಾಸಣಾ ಶಿಬಿರದಲ್ಲಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







