ಚಿತ್ರದುರ್ಗ : ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿರುವ ಹಿರಿಯರ ಇತಿಹಾಸವನ್ನು ಮಕ್ಕಳು ತಿಳಿದುಕೊಂಡುದೇಶಾಭಿಮಾನ ಮೈಗೂಡಿಸಿಕೊಳ್ಳುವಂತೆ ಮೇದಾರ ಗುರುಪೀಠದ ಮೇದಾರ ಕೇತೇಶ್ವರಸ್ವಾಮಿಜಿ ತಿಳಿಸಿದರು.
ಸೀಬಾರ ಸಮೀಪವಿರುವ ಮೇದಾರ ಕೇತೇಶ್ವರ ಮಠದ ಆವರಣದಲ್ಲಿರುವ ನವೀನ್ ಪ್ರೌಢಶಾಲೆಯಲ್ಲಿ 79 ನೇ
ಸ್ವಾತಂತ್ರ್ಯೋತ್ಸವದ ನಿಮಿತ್ತ ಮಕ್ಕಳಿಗೆ ನೋಟ್ ಬುಕ್ಬ್ಯಾಗ್ಗಳನ್ನು ವಿತರಿಸಿ ಮಾತನಾಡಿದರು.ದೇಶದ ಸ್ವಾತಂತ್ರ್ಯೋತ್ಸವವನ್ನು ಪ್ರತಿಯೊಬ್ಬರು ಹಬ್ಬದ ರೀತಿಯಲ್ಲಿ ಸಂಭ್ರಮಿಸಬೇಕು. ಮಕ್ಕಳಿಗೆ ಆಸ್ತಿ ಮಾಡುವ ಬದಲು
ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ಮಾಡಬೇಕು. ಬುದ್ದ ಎಂದರೆ ಬೀಜ, ಬಸಣ್ಣನೆಂದರೆ ಮರ, ಅಂಬೇಡ್ಕರ್ ಎಂದರೆ ಫಲವಿದ್ದಂತೆ.ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನತೆಯಿದೆ ಎಂದು ಹೇಳಿದರು.
ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ ಚಳಿ, ಮಳೆಯನ್ನು ಲೆಕ್ಕಿಸದೆ ದೇಶದ ಸೈನಿಕರು ಗಡಿಯಲ್ಲಿಕಾಯುತ್ತಿರುವುದರಿಂದ 140 ಕೋಟಿ ಜನರು ಸುರಕ್ಷಿತವಾಗಿದ್ದಾರೆ. ದೇಶದ ಸ್ವಾತಂತ್ರ್ಯಕಾಗಿ ಹೋರಾಡಿ ಮಡಿದ ಹಿರಿಯರವಿಚಾರಗಳನ್ನು ಮಕ್ಕಳು ತಿಳಿದುಕೊಳ್ಳಬೇಕು. ಮೊಬೈಲ್ನಿಂದ ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ. ವಿಜ್ಞಾನ-ತಂತ್ರಜ್ಞಾನದಲ್ಲಿ ದೇಶಮುಂದುವರೆದಿದೆ. ಭಾರತದ ರಾಷ್ಟ್ರಪತಿಯಾಗಿದ್ದ ವಿಜ್ಞಾನಿ ಅಬ್ದುಲ್ ಕಲಾಂ ನಮ್ಮ ದೇಶದ ಕೀರ್ತಿ ಏನೆಂಬುದನ್ನು ಜಗತ್ತಿಗೆತೋರಿಸಿದರೆಂದು ನೆನಪಿಸಿಕೊಂಡರು.ಲೇಖಕ ಹೆಚ್.ಆನಂದ್ಕುಮಾರ್ ಮಾತನಾಡಿ ಗೌತಮ ಬುದ್ದನಆಸೆಯಂತೆಎಲ್ಲರೂನಡೆದುಕೊಂಡಿದ್ದರೆಭಾರತನಂ.1ನೇಸ್ಥಾನದಲ್ಲಿರುತ್ತಿತ್ತು.ಗಾಂಧಿ,ನೆಹರು,ಸುಬಾಶ್ಚಂದ್ರಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್ಬಹದ್ದೂರ್ಶಾಸ್ತ್ರಿಇವರುಗಳ ಕೊಡುಗೆ ದೇಶಕ್ಕೆಅಪಾರ. ದೇಶಕ್ಕಾಗಿ ಹೋರಾಡಿದ ಹಿರಿಯರನ್ನು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸ್ಮರಿಸುವುದು ಎಲ್ಲರಕರ್ತವ್ಯವಾಗಬೇಕೆಂದರು.ಸೋಮಶೇಖರ್, ಕೃಷ್ಣವೇಣಿ, ಮೋಹನ್ ಇವರುಗಳು ವೇದಿಕೆಯಲ್ಲಿದ್ದರು.ಶಿಕ್ಷಕರು ಹಾಗೂ ಮಕ್ಕಳು ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







