ಚಿತ್ರದುರ್ಗ: ಮೋದಿಯವರು ನಮ್ಮ ಹೆಣ್ಣು ಮಕ್ಕಳ ಸಿಂಧೂರ ಅಳಿಸಿ ಹಾಕಿದವ ಉಗ್ರರನ್ನು ಸದೆಬಡಿದು ಪಾಠ ಕಲಿಸಿದ್ದೇವೆ. ಕಾಂಗ್ರೆಸ್ ಪಕ್ಷದವರು ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಎಂ ಮಾತನಾಡಿ, ನಿನ್ನೆ ಸಚಿವ ಮಧು ಬಂಗಾರಪ್ಪ ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಸತ್ತ ಮೇಲೆ ಬಂದು ರಾಜಕೀಯ ಮಾಡ್ತಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನವರು ಬಾಂಬೆಯಲ್ಲಿ 187 ಮಂದಿ ಸತ್ತರು. ಆಗ ಅವರು ಏನು ಮಾಡಿದ್ರು ಆರೋಪಿಗಳಿಗೆ ಬಿರಿಯಾನಿ ಕೊಟ್ಟು ಸಾಕಿದರು. ಪಾಕಿಸ್ತಾನದ ಮೇಲೆ ಯುದ್ಧ ಮಾಡುವ ಧೈರ್ಯ ಕಾಂಗ್ರೆಸ್ ಸರ್ಕಾರಕ್ಕೆ ಇತ್ತಾ..ಆದ್ರೆ ಮೋದಿಯವರು ಮುಲಾಜಿಲ್ಲದೆ ಯುದ್ಧ ಮಾಡಿ ಉಗ್ರರನ್ನು ಸದೆಬಡಿದು ಬುದ್ಧಿ ಕಲಿಸಿದ್ದೇವೆ. ಆ ಧಮ್ ಕಾಂಗ್ರೆಸ್ ಪಕ್ಷಕ್ಕೆ ಇದ್ಯ ಎಂದು ವಾಗ್ದಾಳಿ ನಡೆಸಿದರು.ಇನ್ನು ಧರ್ಮಸ್ಥಳ ಪ್ರಕರಣದಲ್ಲಿ ಅನಾಮಿಕ ಹೇಳಿದ ಎಂದು SIT ರಚನೆ ಮಾಡಿದ್ದೀರಾ, 15 ದಿನಗಳಿಂದ ಧರ್ಮಸ್ಥಳದ ಬಗ್ಗೆ ಅವಹೇಳನ ಮಾಡೋದೇ ಆಯ್ತು. ಅಲ್ಲಿ ಅನಾಮಿಕ ಹೇಳಿದ್ದಂತೆ ಏನು ಸಿಕ್ಕಿಲ್ಲ. ಕೇವಲ ಸರ್ಕಾರದ ಹಣ ಪೋಲು ಮಾಡಿದ್ದೀರಾ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಅನ್ನೋದು ಪತ್ತೆ ಆಗಬೇಕು. ಸೌಜನ್ಯ ಕೇಸ್ ಬೇಕಾದ್ರೆ ಮತ್ತೊಮ್ಮೆ ತನಿಖೆ ಮಾಡಲಿ. ಆದರೆ ಇದರ ಹೆಸರಿನಲ್ಲಿ ಮಂಜುನಾಥ ಸ್ವಾಮಿಗೆ ಅವಮಾನ ಮಾಡೋದು ಸರಿಯಲ್ಲ. ಅನಾಮಿಕ ಕೊನೆಗೆ ಸರ್ಕಾರಕ್ಕೆ ಮುಸುಕು ಹಾಕಿ ಮೂರ್ಖರನ್ನಾಗಿ ಮಾಡಿದ್ದಾನೆ ಎಂದು ಹೇಳಿದರು. ಸಿದ್ದರಾಮಯ್ಯ ಸುತ್ತಮುತ್ತ ಟಿಪ್ಪು ಗ್ಯಾಂಗ್ ಇದೇ ಅನ್ನೋದು ಅನುಮಾನ ಇದೆ. ಯೂಟ್ಯೂಬರ್ ಸಮೀರ್ ಟಿಪ್ಪು ಗ್ಯಾಂಗ್ ನಲ್ಲಿ ಇದ್ದಾನೆ ಈ ಕುರಿತು ಸಂಪೂರ್ಣ ತನಿಖೆ ಆಗಬೇಕು. ಧರ್ಮದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಡೀ3 NIA ಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಇನ್ನು ಹರಿಪ್ರಸ ವಾರು RSS ಭಾರತದ ತಾಲಿಬಾನ್ ಎಂದು ಹೇಳಿದ್ದಾರೆ. ಅವರಿಗೆ ನಾಲಿಗೆಗೆ ಎಲುಬಿಲ್ಲ. RSS ಇರುವ ಕಾರಣಕ್ಕೆ ದೇಶ ಉಳಿದಿದೆ. ಇಲ್ಲದಿದ್ದರೆ ಕಾಂಗ್ರೆಸ್ ನವರು ಮಿನಿ ಪಾಕಿಸ್ತಾನ ಮಾಡ್ತಿದ್ರು. ಇನ್ಮುಂದೆ ಯಾವುದೇ ಯುದ್ಧ ಅದಾಗ ಕಾಂಗ್ರೆಸ್ ನವರನ್ನು ವಿಮಾನದಲ್ಲಿ ಕಳಿಸಬೇಕು. ದೇಶದ ಸೈನಿಕರನ್ನೇ ನಂಬಲ್ಲ ಇವರು ಅದ್ಕೆ ಯುದ್ಧ ಭೂಮಿಗೆ ಇವರನ್ನು ಕಳಿಸಬೇಕು ಎಂದು ಕಿಡಿ ಕಾರಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







