ಚಿತ್ರದುರ್ಗ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ಕೊಡುಗೆ ಅಪಾರ
ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ಗುಣಗಾನ ಮಾಡಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದಿವಂಗತರುಗಳಾದ ರಾಜೀವ್ಗಾಂಧಿ ಹಾಗೂ ಡಿ.ದೇವರಾಜ ಅರಸುರವರಜನ್ಮದಿನಾಚರಣೆಯಲ್ಲಿ ಇಬ್ಬರು ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ರಾಜೀವ್ಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಅನೇಕರು ವಿರೋಧಿಸಿದರು. ಯಾವುದನ್ನು ಲೆಕ್ಕಿಸದೆ ವಿಜ್ಞಾನ-ತಂತ್ರಜ್ಞಾನದಲ್ಲಿಭಾರತದ ಕಡೆ ಬಲಿಷ್ಟ ರಾಷ್ಟ್ರಗಳು ತಿರುಗಿ ನೋಡುವಂತೆ ಮಾಡಿದರು. ಹಿಂದುಳಿದ ವರ್ಗಗಳ ಹರಿಕಾರ ಡಿ.ದೇವರಾಜಅರಸುರವರು 20 ಅಂಶಗಳ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಚಾಚೂ ತಪ್ಪದೆ ಅನುಷ್ಟಾನಕ್ಕೆ ತಂದರು. ಜನತಾ ಮನೆ, ವಿಧವಾವೇತನ, ಪದವೀಧರರಿಗೆ ಸ್ಟೈಫಂಡ್ ಕೊಟ್ಟರು ಎಂದು ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಬೆಳೆಯಬೇಕೆಂಬ ದೂರ ದೃಷ್ಟಿರಾಜೀವ್ಗಾಂಧಿರವರಲ್ಲಿದ್ದ ಪರಿಣಾಮ ತಂತ್ರಜ್ಞಾನದಲ್ಲಿ ದೇಶ ಮುಂದುವರೆದಿದೆ. ಹದಿನೆಂಟು ವರ್ಷದ ಯುವ ಜನಾಂಗಕ್ಕೆಮತದಾನದ ಹಕ್ಕು ನೀಡಿದರು. ಅದೆ ರೀತಿ ಡಿ.ದೇವರಾಜ ಅರಸುರವರು ಹಿಂದುಳಿದವರು, ಶೋಷಿತರು, ಧಮನಿತರ ಪರವಾಗಿಅನೇಕ ಕಾಯಿದೆಗಳನ್ನು ಜಾರಿಗೊಳಿಸಿದರು ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಮಾತನಾಡುತ್ತ ತುಳಿತಕ್ಕೊಳಗಾದವರಿಗೆ ಧ್ವನಿ ಕೊಟ್ಟಂತ ಧೀಮಂತ ನಾಯಕ
ದೇವರಾಜಅರಸುರವರುಬಸವಂತಪ್ಪನವರಜೊತೆಸೇರಿಕೊಂಡುಮಲಹೊರುವಪದ್ದತಿಯನ್ನುನಿರ್ಮೂಲನೆಗೊಳಿಸಿದರು.ಉಳುವವನೆಭೂಮಿಯಒಡೆಯಎನ್ನುವಕಾಯಿದೆಜಾರಿಗೆತಂದರು.ಭಾರತವಿಜ್ಞಾನತಂತ್ರಜ್ಞಾನದಲ್ಲಿಮುಂದುವರೆದಿದೆಯೆಂದರೆರಾಜೀವ್ಗಾಂಧಿರವರ ದೂರದೃಷ್ಟಿ ಕಾರಣ ಎಂದರು.ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಗುರುತಿಸಬೇಕೆಂಬಹೆಬ್ಬೆಯಕೆಯಿಂದ ಅನೇಕ ದೇಶಗಳನ್ನು ಸುತ್ತಾಡಿದ ರಾಜೀವ್ಗಾಂಧಿರವರು ಹೊರದೇಶಗಳಲ್ಲಿದ್ದ ಭಾರತದ 76 ವಿಜ್ಞಾನಿಗಳನ್ನುಕರೆಸಿಕೊಂಡು ಸಂಪನ್ಮೂಲಗಳನ್ನು ಒದಗಿಸಿ ಮೊಬೈಲ್ ಕಂಪ್ಯೂಟರ್ಗಳನ್ನು ಕಂಡು ಹಿಡಿದ ಫಲವಾಗಿ ಎಲ್ಲರ ಕೈಯಲ್ಲಿಹರಿದಾಡುತ್ತಿವೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ಗೆ ಶಕ್ತಿ ತುಂಬಿದರೆಂದು ತಿಳಿಸಿದರು.ಹಿಂದುಳಿದ ವರ್ಗಗಳ ಧೀಮಂತ ನಾಯಕರೆನಿಸಿಕೊಂಡಿದ್ದ ಡಿ.ದೇವರಾಜ ಅರಸುರವರು ಬಡವರಿಗಾಗಿ ಅನೇಕ ಯೋಜನೆಗಳನ್ನುಜಾರಿಗೆ ತಂದರು. ಈ ಇಬ್ಬರು ಮಹಾನ್ ನಾಯಕರುಗಳ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವಂತೆಹೇಳಿದರು.
ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ ಭಾರತ ವಿಜ್ಞಾನ ತಂತ್ರಜ್ಞಾನದಲ್ಲಿಬಲಶಾಲಿಯಾಗಿದೆಯೆಂದರೆ ರಾಜೀವ್ಗಾಂಧಿರವರೆ ಕಾರಣ. ಮೊಬೈಲ್ ಕಂಪ್ಯೂಟರ್ ಅವರ ಕೊಡುಗೆ. ಅದೇ ರೀತಿತಳಸಮುದಾಯ, ಶೋಷಿತರು, ಹಿಂದುಳಿದವರಿಗೆ ರಾಜಕೀಯವಾಗಿ ಶಕ್ತಿ ತುಂಬಿದ್ದು ಡಿ.ದೇವರಾಜ ಅರಸು ಎಂದುನೆನಪಿಸಿಕೊಂಡರು.ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ ಮಾತನಾಡುತ್ತ ಹಿಂದುಳಿದವರಲ್ಲಿ ಶಕ್ತಿ ತುಂಬಿದವರೆಂದರೆ ಡಿ.ದೇವರಾಜ ಅರಸುರವರುಎನ್ನುವುದನ್ನು ಯಾರು ಮರೆಯಬಾರದು. ಹಾಗಾಗಿ ಹಿಂದುಳಿದವರು ಸಂಘಟನೆಯಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕೆಂದುಮನವಿ ಮಾಡಿದರು.ಜಿಲ್ಲಾ ಗ್ಯಾರೆಂಟಿ ಅನುಷ್ಟಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್ಕುಮಾರ್,
ರಾಜೀವ್ಗಾಂಧಿ ಪಂಚಾಯತ್ರಾಜ್ ಅಧ್ಯಕ್ಷ ಅನಂತ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ನಜ್ಮತಾಜ್,
ಎಸ್.ಎನ್.ರವಿಕುಮಾರ್, ನ್ಯಾಯವಾದಿಗಳಾದ ಹೆಚ್.ಓ.ಜಗದೀಶ್ ಗುಂಡೇರಿ, ಸುದರ್ಶನ್, ಕರ್ನಾಟಕ ಪ್ರದೇಶ ಮಹಿಳಾ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನಿರಾ, ಕಾರ್ಮಿಕ ವಿಭಾಗದ ಅಧ್ಯಕ್ಷ ಸೈಯದ್ ಮೊಹಿದ್ದೀನ್, ಪರಿಶಿಷ್ಟ ಪಂಗಡ ವಿಭಾಗದಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಹೆಚ್.ಅಂಜಿನಪ್ಪ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಮರ್ಥರಾಯ್, ವಸೀಂ, ಪ್ರಕಾಶ್, ಶಶಿ,ಜಿ.ವಿ.ಮಧುಗೌಡ, ಎ.ಸಾಧಿಕ್ವುಲ್ಲಾ, ನಗರಸಭೆ ನಾಮ ನಿರ್ದೇಶನ ಸದಸ್ಯ ಶಬ್ಬೀರ್ಭಾಷ, ಚಾಂದ್ಪೀರ್, ರೇಣುಕ, ರಮೇಶ್ಇನ್ನು ಅನೇಕರು ಜಯಂತಿಯಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







