ಚಿತ್ರದುರ್ಗ: ನಿವೃತ್ತ ನ್ಯಾ. ನಾಗ ಮೋಹನ್ ದಾಸ್ ರವರ ಆಯೋಗ ಅಲೆಮಾರಿಗಳಿಗೆ ಶೇ. 1ರಷ್ಟು ಮೀಸಲಾತಿಯನ್ನು ನೀಡುವಂತೆ ನಿರ್ದೇಶನ ನೀಡಿದ್ದರು ಸಹ ರಾಜ್ಯ ಸರ್ಕಾರ ಇದನ್ನು ನೀಡದೆ ಬೇರೆ ಜಾತಿಗಳಲ್ಲಿ ನಮ್ಮ ಸಮುದಾಯವನ್ನು ಸೇರಿಸುವುದರ ಮೂಲಕ ನಮಗೆಅನ್ಯಾಯವನ್ನು ಮಾಡಿದೆ ಎಂದು ಅಖಿಲ ಕರ್ನಾಟಕ ಕೂರಚ ಮಹಾ ಸಂಘದಪ್ರಧಾನಕಾರ್ಯದರ್ಶಿವೈ.ಕುಮಾರ್ಸರ್ಕಾರದಕ್ರಮವನ್ನು ಖಂಡಿಸಿದರು.ಚಿತ್ರದುರ್ಗನಗರದಪ್ರವಾಸಿಮಂದಿರದಲ್ಲಿಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಮಗೆ ಮೀಸಲಾತಿಬೇಕೆಂದು ಹಲವಾರುವರ್ಷಗಳಿಂದ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬರಲಾಗಿತ್ತು, ಇದರಂತೆ ಸರ್ಕಾರ ನಾಗ ಮೋಹನ್ ದಾಸ್ ರವರಆಯೋಗವನ್ನು ರಚನೆ ಮಾಡುವುದರ ಮೂಲಕ ಪರಿಶಿಷ್ಟ ಜಾತಿಗಳಿಗೆಮೀಸಲಾತಿಯನ್ನುಹಂಚಿಕೆಮಾಡುವುದರಬಗ್ಗೆದತ್ತಾಂಶವನ್ನು ಸಂಗ್ರಹ ಮಾಡಲು ಸೂಚನೆಯನ್ನು ನೀಡಿತ್ತು ಅದರಂತೆ ಆಯೋಗ ರಾಜ್ಯದಲ್ಲಿ ಸಮೀಕ್ಷೆಯನ್ನು ನಡೆಸುವುದರಮೂಲಕ ಎಲ್ಲಾ ಸಮುದಾಯಗಳಿಗೂ ಅನ್ಯಾಯವಾಗದ ರೀತಿಯಲ್ಲಿ ಮಿಸಲಾತಿಯನ್ನು ಹಂಚಿಕೆ ಮಾಡಿತು ಇದರಲ್ಲಿ ನಮ್ಮಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿಯನ್ನು ನೀಡಿತ್ತು, ಆದರೆ ಅ, 19 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿಮುಖ್ಯಮಂತ್ರಿಗಳು ನಮ್ಮ ಪಾಲಿಗೆ ಬಂದಿದ್ದ ಶೆ.1ರ ಮೀಸಲಾತಿಯನ್ನು ಬೇರೆ ಸಮುದಾಯಗಳಲ್ಲಿ ಸೇರಿಸುವುದರ ಮೂಲಕಅದರಲ್ಲಿ ನಿಮ್ಮ ಪಾಲನ್ನು ತೆಗೆದುಕೊಳ್ಳಿ ಎಂದಿದೆ ಆದರೆ ನಮ್ಮ ಜೊತೆಯಲ್ಲಿನ ಸಮುದಾಯಗಳು ಬಲಾಢ್ಯರಾಗಿದ್ದು ಅವರೊಂದಿಗೆಹೋರಾಡುವ ಶಕ್ತಿ ನಮ್ಮ ಸಮುದಾಯಕ್ಕೆ ಇಲ್ಲವಾಗಿದೆ, ಈ ಮುಂಚಿನಂತೆ ಆಯೋಗ ಹೇಳಿದಂತೆ ನಮ್ಮ ಸಮುದಾಯಕ್ಕೆ ಶೇ.1ರಷ್ಟುಮೀಸಲಾತಿಯನ್ನು ನೀಡುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ನಾಗ ಮೋಹನ್ ದಾಸ ಆಯೋಗ ಮಾಡಿದ ಶಿಫಾರಸ್ಸಿನಂತೆ ನಮ್ಮ ಸಮುದಾಯಕ್ಕೆ ಶೇ.1ರಷ್ಟು ಮೀಸಲಾತಿಯನ್ನು ಸರ್ಕಾರನೀಡದೇ ಹೋದರೆ ಇದರ ಬಗ್ಗೆಉಗ್ರವಾದಹೋರಾಟವನ್ನುರೂಪಿಸಲಾಗುವುದು. ಇದರ ಬಗ್ಗೆ ನಮ್ಮ ಸಮುದಾಯದವರಸಭೆಯನ್ನು ಕರೆಯುವುದರ ಮೂಲಕ ಮುಂದಿನ ಹೋರಾಟದ ರೂಪು ರೇಷೆಗಳನ್ನು ನಿರ್ಧಾರ ಮಾಡಲಾಗುವುದು. ಈ ಮೀಸಲಾತಿಇದ್ದರೆ ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆ ಅನುಕೂಲವಾಗಲಿದೆ. ನಮ್ಮಲ್ಲಿ ಬಡತನ ಇದೆ ನಾವುಗಳುಅಲೆಮಾರಿಯಾಗಿದ್ದು, ಸರಿಯಾದ ಸೂರು ಇಲ್ಲವಾಗಿದೆ, ಇದರಲ್ಲಿ ನಮಗೆ ಬಂದ ಮೀಸಲಾತಿಯನ್ನು ಬೇರೆಯವರೊಂದಿಗೆಹಂಚಿಕೊಳ್ಳುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಮನದಟ್ಟು ಮಾಡಿದರು.ಮಾದಿಗ ಸಮುದಾಯದ ಎಡಗೈ, ಬಲಗೈ ಸಮುದಾಯಕ್ಕೆ ಶೇ.6 ರಷ್ಟು ಮೀಸಲಾತಿಯನ್ನು ನೀಡಲಾಗಿದೆ ಇವುಗಳಲ್ಲಿ ಸಮುದಾಯಇರುವುದು ಕಡಿಮೆ ಆದರೆ ನಮ್ಮ ಸಮುದಾಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನಾಂಗ ಇದೆ ಇದರಿಂದ ನಮಗೆ ಅನ್ಯಾಯವಾಗುತ್ತದೆನಮ್ಮನ್ನು ಬೇರೆ ಜಾತಿಯಲ್ಲಿ ಸೇರ್ಪಡೆ ಮಾಡದೆ ಪ್ರತ್ಯೇಕವಾಗಿ ನಮಗೆ ಮೀಸಲಾತಿಯನ್ನು ನೀಡುವಂತೆ ಮನವಿ ಮಾಡಿ ಇದರ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಮ್ಮ ಸಮಸ್ಯೆಯನ್ನು ತಿಳಿಸಲಾಗುವುದೆಂದರು.ಅಲೆಮಾರಿ ಸಮುದಾಯದ ಜಿಲ್ಲಾಧ್ಯಕ್ಷ ನಾಗರಾಜ್ ಮಾತನಾಡಿ, ನಾಗ ಮೋಹನ್ ದಾಸ್ ಆಯೋಗ ನಮ್ಮ ಸಮುದಾಯ ತೀರ ಹಿಂದೆಉಳಿದಿದೆ, ಇವರು ಯಾವುದರಲ್ಲೂ ಸಹ ಪ್ರಗತಿಯನ್ನು ಹೊಂದಿಲ್ಲ ಇವರಲ್ಲಿ ಶಿಕ್ಷಣ, ರಾಜಕೀಯವಾಗಿ, ನೌಕರಿಯನ್ನುಪಡೆದವರು ಇಲ್ಲವಾಗಿದ್ದಾರೆ ಇದರಿಂದ ಇವರಿಗೆ ಶೇ.1ರಷ್ಟು ಮೀಸಲಾತಿಯನ್ನು ನೀಡಿ ಎಂದು ತಿಳಿಸಿದೆ, ಆದರೆಮುಖ್ಯಮಂತ್ರಿಗಳಾದಸಿದ್ದರಾಮಯ್ಯರವರುತಮ್ಮರಾಜಕೀಯಕ್ಕಾಗಿ ನಮಗೆ ಬಂದ ಮೀಸಲಾತಿಯನ್ನು ಬೇರೆಯವರಿಗೆನೀಡುವುದರ ಮೂಲಕ ನಮಗೆ ಅನ್ಯಾಯ ಮಾಡಿದ್ದಾರೆ. ಕೂರಚ, ಕೂರಮ, ಲಂಬಾಣಿ, ಭೋವಿ ಅಲೆಮಾರಿ ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿಯನ್ನು ನೀಡಲಾಗಿದೆ ಆದರೆ ಇವರುಗಳ ಜೊತೆಯಲ್ಲಿ ನಮ್ಮ ಸಮುದಾಯ ಹೋರಾಟ ಮಾಡಿಮೀಸಲಾತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಇದರಿಂದ ನಮ್ಮ ಸಮುದಾಯಕ್ಕೆ ಪ್ರತ್ಯೇಕವಾಗಿ ಶೇ.1ರಷ್ಟುಮೀಸಲಾತಿಯನ್ನು ನೀಡುವಂತೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸುಡುಗಾಡು ಸಿದ್ದರ ಮುಖಂಡರಾದ ಬಾಬು, ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ್ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







