ಹೊಳಲ್ಕೆರೆ: ಮಂತ್ರಿಯಾಗಿ ಬಂದವರು ಏನು ಮಾಡಿದರು. ನಿಮ್ಮ ಪರವಾಗಿ ದುಡಿಯುವವರಿಗೆ ಶಕ್ತಿ ತುಂಬಿ ಹುಮ್ಮಸ್ಸು ನೀಡಿ. ಇನ್ನುಮೂರು ವರ್ಷಗಳ ಕಾಲ ಅಧಿಕಾರವಿದೆ. ರಾಜ್ಯದಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. ಹೆದರಿಸಿ ಹಣ ತಂದು ಕೆಲಸ ಮಾಡಿಸುವ ಯೋಗ್ಯತೆಯಿಟ್ಟುಕೊಂಡಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ತಾಲ್ಲೂಕಿನ ಬಿದರೆಕೆರೆ ಗ್ರಾಮದಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ನೂತನ ಚೆಕ್ಡ್ಯಾಂ ನಿರ್ಮಾಣ ಕಾಮಗಾರಿಗೆ ಸೋಮವಾರ
ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಯಾರನ್ನು ಮೆಚ್ಚಿಸಲು ನಾನು ಬಂದಿಲ್ಲ. 31 ವರ್ಷದ ಹಿಂದೆ ಶಾಸಕನಾದವನು. ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದುಅರ್ಥಮಾಡಿಕೊಂಡಿದ್ದೇನೆ. ಸಮಸ್ಯೆಗಳನ್ನು ಹೇಳದಿದ್ದರೂ ಎಲ್ಲಿ ಏನು ಕೆಲಸ ಮಾಡಿದರೆ ಜನರಿಗೆ ಉಪಯೋಗವಾಗುತ್ತದೆಂದುತಿಳಿದುಕೊಂಡು ನನ್ನ ಮೈಯಲ್ಲಿ ಹನಿ ರಕ್ತವಿರುವತನಕ ನಿಮ್ಮಗಳ ಸೇವೆ ಮಾಡುತ್ತ ಋಣ ತೀರಿಸುತ್ತೇನೆಂದರು.ಕಳ್ಳಬೆಕ್ಕಿನಂತ ಓಡಾಡಿ ಐದು ವರ್ಷಕ್ಕೊಮ್ಮೆಬಂದುಓಟುಹಾಕಿಸಿಕೊಳ್ಳುವುದಲ್ಲ. ನಾಟಕ ತುಂಬಾ ದಿನ ನಡೆಯಲ್ಲ.ಚುನಾವಣೆಯಲ್ಲಿ ಮತ ಹಾಕುವುದು ಐದು ಸೆಕೆಂಡಿನ ಕೆಲಸ. ನಿಮ್ಮ ಮನೆ ಮಗನಾಗಿ ದುಡಿಯುವವರನ್ನು ಕೈಬಿಡಬೇಡಿ. ಎಲ್ಲೆಲ್ಲಿಕೆರೆಗಳು ತುಂಬಿಸಲು ಅವಕಾಶವಿಲ್ಲವೋ ಅಲ್ಲೆಲ್ಲಾ ಚೆಕ್ ಡ್ಯಾಂಗಳನ್ನು ಕಟ್ಟಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದುಉಚಿತ ಗ್ಯಾರೆಂಟಿಗಳಿಗೆ ಹಣ ಖರ್ಚು ಮಾಡಿದ್ದಾರೆ. ಆದರೂ ನಾನು ಕೋಟಿ ಕೋಟಿ ಹಣ ತಂದು ಪ್ರತಿನಿತ್ಯವೂ ಕಾಮಗಾರಿಗಳನ್ನುಮಾಡಿಸುತ್ತಿದ್ದೇನೆ. ಬದ್ದತೆಯಿದೆ. ಚಿಕ್ಕಜಾಜೂರಿನ ಕೋಟೆಹಾಳ್ ಬಳಿ ಹದಿಮೂರುವರೆ ಎಕರೆ ಜಾಗದಲ್ಲಿ ಐದು ನೂರು ಕೋಟಿರೂ.ಗಳ ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ. ಜೋಗ್ಫಾಲ್ಸ್ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ಪೂರೈಕೆಯಾಗಲಿದ್ದು, ನಂತರ ಎಲ್ಲಾ ಸಬ್ಸ್ಟೇಷನ್ಗಳಿಗೆ ಸರಬರಾಜಾಗಲಿದೆ. 850 ಕೋಟಿ ರೂ.ಗಳ ವೆಚ್ಚದಲ್ಲಿ ತಾಲ್ಲೂಕಿನಾದ್ಯಂತಸಬ್ ಸ್ಟೇಷನ್ಗಳನ್ನು ಕಟ್ಟಿಸುತ್ತಿದ್ದೇನೆ. ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆಗೂ ಶುದ್ದ ಕುಡಿಯುವನೀರು ಪೂರೈಸುವುದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ರೈತನ ಬದುಕು ಹಸನಾಗಬೇಕೆಂದು ಚೆಕ್ಡ್ಯಾಂಗಳನ್ನು ಕಟ್ಟಿಸಿ ಗುಡ್ಡದ ನೀರು ಹರಿದು ಬರುವಂತೆ ಮಾಡಿದ್ದೇನೆ. ಎಲ್ಲಾ ಕಡೆ
ಸಿ.ಸಿ.ರಸ್ತೆ ನಿರ್ಮಾಣವಾಗಿದೆ. ಸರ್ಕಾರದಿಂದ ಹಣ ತಂದು ಕೆಲಸ ಮಾಡಿಸುವ ಸಾಮಥ್ರ್ಯವಿದೆ ಎಂದು ನುಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ದಾನವೇಂದ್ರ ದಾನೇಶ್, ಕುಮಾರಣ್ಣ, ಸದಸ್ಯರುಗಳಾದ ಭಾರತಿಬಾಯಿ, ಭಾರತಿ, ಓಂಕಾರಪ್ಪ,
ಮಲ್ಲಪ್ಪ, ರಘುಕುಮಾರ್, ಆನಂದಪ್ಪ, ಪ್ರವೀಣಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







