ಬೆಂಗಳೂರು: ರಾಜ್ಯಾದ್ಯಂತ ಅಭಿಮಾನಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನಟ ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ದಿವಂಗತ ನಟ ಬಾಲಕೃಷ್ಣ ಅವರ ಕುಟುಂಬ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.ನಟ ಬಾಲಕೃಷ್ಣ ಅವರಿಗೆ ಸೇರಿದ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣು ವರ್ಧನ್ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದ್ದು, ಈ ವಿಚಾರ ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಭಿಮಾನಿಗಳು ಈ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವಂತೆಯೇ ಈ ಕುರಿತು ನಟ ಬಾಲಕೃಷ್ಣ ಕುಟುಂಬ ಸದಸ್ಯರು ಪ್ರತಿಕ್ರಿಯೆ ನೀಡಿದ್ದಾರೆ.ಘಟನೆ ಕುರಿತು ಖಾಸಗಿ ಸುದ್ದಿಮಾಧ್ಯಮದೊಂದಿಗೆ ಮಾತನಾಡಿರುವ ನಟ ಬಾಲಕೃಷ್ಣ ಅವರ ಪುತ್ರಿ ಗೀತಾ ಬಾಲಕೃಷ್ಣ ಅವರು ‘ನಾನು ಆ ಜಾಗಕ್ಕೆ ಸಂಬಂಧಿಸಿದಂತೆ 2004 ರಲ್ಲಿಯೇ ಕೇಸು ದಾಖಲಿಸಿದ್ದೆ. 2010 ರಲ್ಲಿ ವಿಷ್ಣುವರ್ಧನ್ ಅವರ ಸಮಾಧಿ ವಿವಾದ ಬಂತು. ಭಾರತಿಯವರಿಗಾಗ್ಲಿ….ವಿಷ್ಣು ಅವರ ಟ್ರಸ್ಟ್ ಗೆ 2 ಎಕರೆ ಕೊಡ್ತಿನಿ ಎಂದು ಆಗಲೇ ಹೇಳಿದ್ದೆ’ ಎಂದರು.
ಇದೇ ವೇಳೆ ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರಕ್ಕೆ ಬಾಲಣ್ಣ ಕುಟುಂಬದ ಆಂತರಿಕ ಸಮಸ್ಯೆ ಕಾರಣ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೀತಾ ಅವರು, ‘ನನಗೂ ಗೊತ್ತಿಲ್ಲದೆ ಹಲವು ವಿಚಾರಗಳು ಆ ಜಾಗದಲ್ಲಿ ನಡೆಯುತ್ತಿವೆ. ಹೈಕೋರ್ಟ್ ಆರ್ಡರ್ ಒಂದರ ಅನ್ವಯ ನೆಲಸಮ ಮಾಡಿದ್ದಾರೆ ಎಂದು ಗೊತ್ತಾಯ್ತು. ಆದರೆ ವಿಷ್ಣುವರ್ಧನ್ ಅವರ ಸಮಾಧಿಯನ್ನು ಯಾರಿಗೂ ತಿಳಿಸದೆ ಹೀಗೆ ಮಾಡಬಾರದಿತ್ತು. ನನ್ನ ಇಬ್ಬರು ತಮ್ಮಂದಿರು ಈಗ ಇಲ್ಲ. ಕೊನೆಯ ತಮ್ಮ ಕಾರ್ತಿಕ್ನಿಂದಲೇ ಇದೆಲ್ಲ ಆಗುತ್ತಿದೆ. ನನ್ನ ಕೊನೆಯ ತಮ್ಮ ಕಾರ್ತಿಕ್ ನಿಂದಲೇ ಇದೆಲ್ಲ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಸಿನೆಸ್ ಕಾರಣ
ನಮ್ಮ ತಂದೆ ತಾಯಿ ನಿಧನರಾದ ಬಳಿಕ ನಮ್ಮ ಒಡಹುಟ್ಟಿದ ಸಂಬಂಧ ಮುಗಿದಿತ್ತು, ಒಡನಾಟ ಇರಲಿಲ್ಲ, ಇದೆಲ್ಲ ನಡೀತಿರೋದು ನನ್ನ ಗಮನಕ್ಕೆ ಬಂದಿರಲಿಲ್ಲ. ನನ್ನ ಜೀವಕ್ಕೆ ಬೆದರಿಕೆ ಹಾಕಿದ್ದಾರೆ, ಕಾರ್ತೀಕ್ ಗೆ ರಾಜಕಾರಣಿಗಳ ಪರಿಚಯ ಚೆನ್ನಾಗಿದೆ. ನನಗೆ ಎಲ್ಲದರ ಮಾಹಿತಿ ಇದೆ. ಆದರೆ ನನ್ನ ಜೀವಕ್ಕೂ ಅಪಾಯ ಇದೆ. ದೊಡ್ಡದಾಗಿ ಬ್ಯುಸಿನೆಸ್ ಮಾಡೋಕೆ ಹೀಗ್ ಮಾಡಿದ್ದಾರೆ. ನನ್ನ ಕುಟುಂಬದವರಿಗೂ ನನಗೂ ಸಂಪರ್ಕ ಇಲ್ಲ. ಈಗ ಏನೇ ಮಾಡಿದರೂ ಕಾನೂನು ಮುಖಾಂತರ ಮಾಡಬೇಕು. ಆ ಸ್ಥಳದಲ್ಲಿ ನಾಲ್ಕು ಜನಕ್ಕೆ ಹಕ್ಕಿದೆ. ಆದರೆ ಅಲ್ಲಿ ಮೋಸ ನಡೆದಿದೆ. ಸಾಕ್ಷಿ ಸಮೇತ ಕೋರ್ಟ್ ಗೆ ಕಳಿಸ್ತಿನಿ, ವಿಷ್ಣುವರ್ಧನ್ ನಮ್ಮ ತಂದೆಗೆ ಮಗನ ಥರ ಇದ್ದರು. ಅವರನ್ನ ಈ ತರ ನೆಲಮಟ್ಟ ಮಾಡಿರೋದು ಸರಿ ಅಲ್ಲ. ಕೋಟಿಗಟ್ಟಲೆ ಲಾಭ ಸಿಗ್ತಿದೆ ಅದಕ್ಕೆ ಮಾಲ್ ಕಟ್ಟೋದಕ್ಕೆ ಯೋಜನೆ ಮಾಡಿದ್ದಾರೆ ಎಂದು ಗೀತಾ ಹೇಳಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



