ಭಾರತದಲ್ಲಿ ಹಲವು ಸ್ಟಾರ್ ನಟರುಗಳಿದ್ದಾರೆ. ತೆರೆಯ ಮೇಲೆ ದುಷ್ಟರನ್ನು ಶಿಕ್ಷಿಸುವ, ಶಿಷ್ಟರನ್ನು ರಕ್ಷಿಸುವ, ಬಡವರಿಗೆ ಸಹಾಯ ಮಾಡುವ, ವಿಶಾಲ ಗುಣ ಹೊಂದಿರುವ ‘ಹೀರೋ’ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇವರಲ್ಲಿ ಹಲವಾರು ಮಂದಿ ಕೇವಲ ತೆರೆಯ ಮೇಲಷ್ಟೆ ಹೀರೋಗಳು, ತೆರೆಯ ಹಿಂದೆ ಕಾಮ, ಕ್ರೋಧ, ಲೋಭ, ಮದ, ಮತ್ಸರ ತುಂಬಿರುವ ಸಾಮಾನ್ಯ ಮನುಷ್ಯರು. ತೆರೆಯ ಮೇಲೆ ಹಾಗೂ ತೆರೆಯ ಹೊರಗೆಯೂ ‘ಹೀರೋ’ ಆಗಿ ಬದುಕುತ್ತಿರುವವರು ಬೆರಳೆಣಿಕೆಯಷ್ಟು ನಟರು ಮಾತ್ರ. ಅವರಲ್ಲಿ ಒಬ್ಬರು ನಟ ರಾಘವ್ ಲಾರೆನ್ಸ್.ಸಾಮಾನ್ಯ ಕಾರು ಕ್ಲೀನರ್ ಆಗಿದ್ದವರು ತಮ್ಮ ಸ್ವಂತ ಪ್ರತಿಭೆಯಿಂದಾಗಿ ಇಂದು ತಮಿಳಿನ ಸ್ಟಾರ್ ನಟರುಗಳ ಸಾಲಿನಲ್ಲಿ ನಿಂತಿದ್ದಾರೆ. ಅದ್ಭುತ ಡ್ಯಾನ್ಸರ್ ಅಗಿದ್ದ ರಾಘವ್ ಲಾರೆನ್ಸ್, ಸಿನಿಮಾ ಹಾಡುಗಳಲ್ಲಿ ಹಿಂದಿನ ಸಾಲಿನಲ್ಲಿ ಡ್ಯಾನ್ಸ್ ಮಾಡುವವರಾಗಿದ್ದವರು, ಬಳಿಕ ಸ್ವಂತ ಪರಿಶ್ರಮದಿಂದ ಲೀಡ್ ಡ್ಯಾನ್ಸರ್ ಆಗಿ ಬಳಿಕ ಕೊರಿಯಾಗ್ರಫರ್ ಆದರು. ಬಳಿಕ ನಟರಾಗಿಯೂ ಹೆಸರು ಮಾಡಿದರು. ಈಗ ತಮಿಳಿನ ಸ್ಟಾರ್ ನಟ ಮತ್ತು ನಿರ್ದೇಶಕರಾಗಿದ್ದಾರೆ. ಆದರೆ ರಾಘವ್ ಲಾರೆನ್ಸ್ ತಮ್ಮ ನಟನೆಯಷ್ಟೆ ತಾವು ಮಾಡುವ ಸಮಾಜ ಮುಖಿ ಕಾರ್ಯದಿಂದಲೂ ದೊಡ್ಡ ಮಟ್ಟದ ಹೆಸರು ಗಳಿಸಿದ್ದಾರೆ.ಸ್ವತಃ ಕಿತ್ತು ತಿನ್ನುವ ಬಡತನ ಕಂಡು ಬಂದಿರುವ ರಾಘವ್ ಲಾರೆನ್ಸ್ಗೆ ಬಡವರು, ಅಂಗವಿಕಲರು, ವೃದ್ಧರ ಮೇಲೆ ಅಪಾರ ಅಕ್ಕರೆ. ರಾಘವ್ ಲಾರೆನ್ಸ್ ಈಗಾಗಲೇ ನೂರಾರು ಮಂದಿ ಬಡ, ಅನಾಥ ಮಕ್ಕಳನ್ನು ದತ್ತು ಪಡೆದು ಅವರ ಜೀವನ ನಿರ್ವಹಣೆಗೆ ಸಹಾಯ ಮಾಡುತ್ತಿದ್ದಾರೆ. ಸಹಾಯ ಕೇಳಿ ಬರುವ ಹಲವರಿಗೆ ರಾಘವ್ ಸಹಾಯ ಮಾಡಿದ್ದಾರೆ. ಇದೀಗ ತಮ್ಮ ಸ್ವಂತ ಮನೆಯನ್ನೇ ಬಡ ಮಕ್ಕಳ ಶಿಕ್ಷಣಕ್ಕಾಗಿ ಶಾಲೆಯನ್ನಾಗಿ ಬದಲಾಯಿಸಿಬಿಟ್ಟಿದ್ದಾರೆ. ರಾಘವ್ ಅವರ ಈ ಕಾರ್ಯಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.ಈ ಬಗ್ಗೆ ಮಾತನಾಡಿರುವ ರಾಘವ್, ‘ನಾನು ಡ್ಯಾನ್ಸ್ ಮಾಸ್ಟರ್ ಆಗಿದ್ದಾಗ ದುಡಿದ ಹಣದಿಂದ ಖರೀದಿ ಮಾಡಿದ ಮೊದಲ ಮನೆಯನ್ನು ನಾನು ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಾಲೆಯನ್ನಾಗಿ ಪರಿವರ್ತನೆ ಮಾಡುತ್ತಿದ್ದೇನೆ. ಆ ಮನೆಯಲ್ಲಿ ಮೊದಲಿಗೆ ಅನಾಥ ಮಕ್ಕಳ ವಸತಿಗಾಗಿ ಮೀಸಲಿರಿಸಿದ್ದೆ. ಆದರೆ ಆ ಮಕ್ಕಳು ಬೆಳೆದು ದೊಡ್ಡವರಾಗಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಈಗ ಆ ಮನೆಯನ್ನು ಉಚಿತ ಶಾಲೆಯಾಗಿ ಬದಲಾಯಿಸುತ್ತಿದ್ದೇನೆ’ ಎಂದಿದ್ದಾರೆ.ಈ ಘೋಷಣೆಗೆ ಒಂದು ದಿನ ಮುಂಚೆಯಷ್ಟೆ, ರೈಲಿನಲ್ಲಿ ಸಿಹಿ ಮಾರಾಟ ಮಾಡುತ್ತಿದ್ದ ವೃದ್ಧ ವ್ಯಕ್ತಿಯ ಚಿತ್ರವೊಂದನ್ನು ಟ್ವೀಟ್ ಮಾಡಿ ಈ ಶ್ರಮಜೀವಿ ದಂಪತಿಗೆ ಕೆಲ ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದರು. ಅಲ್ಲದೆ ಇವರಿಂದ ಸಿಹಿ ಖರೀದಿ ಮಾಡಿ ಎಂದು ಮನವಿ ಸಹ ಮಾಡಿದ್ದರು. ಆ ಘಟನೆಯಾಗಿ 24 ಗಂಟೆಯೊಳಗೆ ಮತ್ತೊಂದು ಮಹತ್ ಕಾರ್ಯದ ಘೋಷಣೆಯನ್ನು ರಾಘವ್ ಮಾಡಿದ್ದಾರೆ. ಅಂದಹಾಗೆ ರಾಘವ್ ಲಾರೆನ್ಸ್ ತಮ್ಮ ‘ಕಾಂಚನಾ 4’ ಸಿನಿಮಾ ಘೋಷಣೆ ಮಾಡಿದ್ದಾರೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಮತ್ತು ನೋರಾ ಫತೇಹಿ ಸಹ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







