ಮೊಳಕಾಲ್ಮೂರು ತಾಲೂಕಿನ ಸೂಲೇನಹಳ್ಳಿ ಮೊರಾರ್ಜಿ ದೇಸಾಯಿ ಹಾಗೂ ಯರ್ರೇನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಜಿಲ್ಲಾ ಉಪ ವಿಭಾಗಾಧಿಕಾರಿ ಮಹಬೂಬ್ ಜಿಲಾನಿ ಖುರೇಶಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸೂಲೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ಅವರಣದಲ್ಲಿ ಆಕರ್ಷಕ ಧ್ವಜಗಳನ್ನು ನಿರ್ಮಿಸಲು ಉಪವಿಭಾಗಾಧಿಕಾರಿ ಖುದ್ದು ತಾವೇ ಕಂಬಗಳನ್ನು ನೆಡಲು ಸ್ಥಳ ನಿಗದಿ ಮಾಡಿ, ಮರಗಳಲ್ಲಿನ ಕವಲು ಕೊಂಬೆಗಳನ್ನು ತೆರವುಗೊಳಿಸಿ ಮರಗಳ ಬೆಳೆವಣಿಗೆಗೆ ಸಹಕರಿಸುವಂತೆ ಪ್ರಭಾರ ಪ್ರಾಚಾರ್ಯ ರಮೇಶ್‌ಗೆ ಸೂಚಿಸಿದರು.
ಕೆಲ ಹೊತ್ತು ಮಕ್ಕಳ ಜೊತೆ ಅಗತ್ಯ ಚರ್ಚೆ ನಡೆಸಿ ಶಾಲಾ ಆವರಣ, ಸ್ಟೋರ್ ರೂಂ, ಮಕ್ಕಳು ಮಲಗುವ ಕೊಠಡಿಗಳನ್ನು ಪರಿಶೀಲಿಸಿ ಡೈನಿಂಗ್ ಹಾಲ್ ಪ್ರವೇಶಿಸಿ ವಿದ್ಯಾರ್ಥಿಗಳ ಜೊತೆ ಊಟದ ರುಚಿ ಸವಿದರು. ನಂತರ ಯರ್ರೇನಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ತೆರಳಿ ಶಾಲೆಯ ಸಿಸಿಟಿವಿಯಲ್ಲಿ ಶಿಕ್ಷಕರು ಬೋಧಿಸುವ ಪರಿಯನ್ನು ವೀಕ್ಷಿಸಿದರು. ನಂತರ ಎಲ್ಲಾ ಶಿಕ್ಷಕರನ್ನು ಕರೆಸಿಕೊಂಡು ನೀವುಗಳು ನನಗಿಂತ ಸೀನಿಯರ್ ಇದ್ದೀರಾ, ಸರಕಾರಿ ಕೆಲಸಕ್ಕೆ ಸೇರಿ ನಾನಿನ್ನು ಒಂದು ವರ್ಷವಾಗಿದೆ ನನ್ನಿಂದ ನೀವು ಹೇಳಿಸಿಕೊಳ್ಳದಂತೆ ನೀವು ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.ಶಾಲೆಯಲ್ಲಿ ಸ್ಪೋಟ್ಸ್ ರೂಂ, ಲ್ಯಾಬ್, ವಿದ್ಯಾರ್ಥಿಗಳ ಕೊಠಡಿ ವೀಕ್ಷಿಸಿ, ಸರಬರಾಜಾಗಿದ್ದ ಸೊಳ್ಳೆ ಪರದೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಕೂಡಲೇ ವಿದ್ಯಾರ್ಥಿನಿಯರಿಗೆ ಹಸ್ತಾಂತರಿಸಬೇಕು. ಮಕ್ಕಳಿಗೆ ಪಾಠದ ಜೊತೆಯಲ್ಲಿ ಶಿಸ್ತು ಕಲಿಸುವುದು ಖಡ್ಡಾಯವಾಗಿದೆ. ಒಂಭತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಶೇವಿಂಗ್ ಸೆಟ್ ಕೊಡಿಸಿ ಇವರಿಗೆ ಶೇವ್ ಮಾಡಿಕೊಳ್ಳುವ ವಿಧಾನವನ್ನು ವಿವರಿಸಬೇಕು ಎಂದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



