ಕೋಟೆ ನಾಡು ಚಿತ್ರದುರ್ಗದಲ್ಲಿ ಬೆಚ್ಚಿ ಬೀಳಿಸುವಂತಹ ಅಪರಾಧ ಪ್ರಕರಣವೊಂದು ನಡೆದಿದೆ. ನಿನ್ನೆ ನಗರದ ಹೊರವಲಯದ ಗೋನೂರು ಸಮೀಪ ವರ್ಷಿತಾ ಎಂಬ ಸುಮಾರು 20 ವರ್ಷದ ಯುವತಿಯ ಶವ ಸಿಕ್ಕಿತ್ತು. ಬಳಿಕ ಪೊಲೀಸರು ಆಕೆಯ ಗುರುತು ಪತ್ತೆ ಹಚ್ಚಿ ತನಿಖೆ ಮಾಡಿದಾಗ ವರ್ಷಿತಾ ಮೂಲತಃ ಕೋವೆರಹಟ್ಟಿ ಗ್ರಾಮದ ತಿಪ್ಪೇಸ್ವಾಮಿ ಹಾಗೂ ಜ್ಯೋತಿ ದಂಪತಿಯ ಮಗಳು ಎಂಬುದು ತಿಳಿದಿದೆ. ಯುವತಿ ವರ್ಷಿತ ಚಿತ್ರದುರ್ಗದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ BA ಓದುತ್ತಿದ್ದು, ಆಗಸ್ಟ್ 14ರಂದು ಹಾಸ್ಟೆಲ್ ಯಿಂದ ನಾನು ಮನೆಗೆ ಹೋಗುತ್ತಿದ್ದೇನೆ ಎಂದು ಲೆಟರ್ ಕೊಟ್ಟು ಚೇತನ್ ಎಂಬ ಹುಡುಗನ ಜೊತೆ ಹೋಗಿದ್ದಾಳೆ. ಬಳಿಕ ಮನೆಯವರು ಎರಡ್ಮೂರು ಬಾರಿ ಕರೆ ಮಾಡಿದ್ದಾರೆ ಆಕೆ ಕೊನೆಯದಾಗಿ ಆಕೆಯ ತಾಯಿಯ ಜೊತೆ ಮಾತನಾಡಿದ್ದು, ಆರೋಪಿ ಚೇತನ್ ಜೊತೆ ಹೋಗುವುದಾಗಿ ಹೇಳಿ ಹೋಗಿದ್ದಾಳೆ. ಬಳಿಕ ವರ್ಷಿತ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಇದರಿಂದ ಆತಂಕಗೊಂಡ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಮಗಳ ಶವ ಗುರುತು ಪತ್ತೆ ಮಾಡಿದ್ದು, ಮಗಳ ಶವದ ಸ್ಥಿತಿ ಕಂಡು ಪೋಷಕರು ಕಣ್ಣೀರಾಕಿದರು.
ಇನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ವರ್ಷಿತ ಮೊಬೈಲ್ ಚೆಕ್ ಮಾಡಿದಾಗ ಚೇತನ್ ಎಂಬ ಹುಡುಗನ ಆಕೆಗೆ ಕರೆ ಮಾಡಿರುವುದು ಪತ್ತೆಯಾಗಿದೆ. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆ ಪಾಪಿ ಎಲ್ಲ ಸತ್ಯವನ್ನು ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಆರೋಪಿ ಚೇತನ್ ಹಾಗೂ ವರ್ಷಿತಾ ಮಧ್ಯೆ ಲವ್ ಆಗಿತ್ತಂತೆ. ಆದರೆ ಆರೋಪಿ ಚೇತನ್ ಗೆ ಭಯಾನಕ ಕಾಯಿಲೆಯೊಂದು ಇದ್ದದ್ದನ್ನು ತಿಳಿದ ವರ್ಷಿತಾ ಬೇರೊಬ್ಬನನ್ನು ಲವ್ ಮಾಡ್ತಿದ್ದಳು ಎಂಬ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿತ್ತಂತೆ. ಇದರಿಂದಾಗಿ ಕೋಪಗೊಂಡ ಆರೋಪಿ ಚೇತನ್ ಆಕೆಯನ್ನು ಕರೆದುಕೊಂಡು ಕೊಲೆ ಮಾಡಿ ಸುಟ್ಟು ಹಾಕಿರಬಹುದು ಎಂದು ಶಂಕಿಸಲಾಗಿದೆ. ಇನ್ನು 14ರಂದು ಅಂದು ಹಾಸ್ಟೆಲ್ ಯಿಂದ ಹೋದ ಆರೋಪಿ ಚೇತನ್ ಹಾಗೂ ವರ್ಷಿತಾ 4 ದಿನ ಎಲ್ಲಿಗೆ ಹೋಗಿದ್ದರು..? ಅಷ್ಟು ದಿನ ಮನೆಯವರು ಯಾರು ಆಕೆಗಾಗಿ ಹುಡುಕಾಟ ನಡೆಸಲಿಲ್ವಾ..? ಎಂಬ ಪ್ರಶ್ನೆಗಳು ಹುಟ್ಟಿದ್ದು, ಪೊಲೀಸರು ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ವಿಚಾರಣೆಯ ಬಳಿಕವಷ್ಟೇ ಘಟನೆಯ ಸತ್ಯ ಸತ್ಯತೆ ಏನೆಂದು ಬಹಿರಂಗವಾಗಬೇಕಿದೆ.
ಘಟನೆ ಖಂಡಿಸಿ ವಿವಿಧ ಸಂಘಟನೆಗಳ ಬೃಹತ್ ಪ್ರತಿಭಟನೆ
ಇನ್ನು ಯುವತಿಯ ಹತ್ಯೆಯನ್ನು ಖಂಡಿಸಿ ಇಂದು ಚಿತ್ರದುರ್ಗ ನಗರದಲ್ಲಿ ಎಬಿವಿಪಿ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದರು. ಆಸ್ಪತ್ರೆಯ ಮುಂಭಾಗ ರಸ್ತೆ ತಡೆದು ಕರುನಾಡ ವಿಜಯಸೇನೆ ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಒತ್ತಾಯಿಸಿದರು. ಇನ್ನು ಎಬಿವಿಪಿ ಕಾರ್ಯಕರ್ತರು ನಗರದ ಡಿಸಿ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ ವರ್ಷಿತಾ ಸಾವಿಗೆ ಪೊಲೀಸರು ನ್ಯಾಯ ಕೊಡಿಸಬೇಕು. ಕೂಡಲೇ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಬರಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಇದೆ ವೇಳೆ ಜಿಲ್ಲಾಧಿಕಾರಿ ವೆಂಕಟೇಶ್ ಹೋರಾಟಗಾರರನ್ನು ಭೇಟಿ ಮಾಡಿ ಘಟನೆ ಸಂಬಂಧ ಈಗಾಗಲೇ ತ್ವರಿತ ಗತಿಯಲ್ಲಿ ತನಿಖೆ ನಡೆಯುತ್ತಿದೆ. ಅದಷ್ಟು ಬೇಗ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಿ, ವರ್ಷಿತ ಸಾವಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಆದರೂ ಪ್ರತಿಭಟನಾಕಾರರು ಸಚಿವರು ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಪ್ರತಿಭಟನೆ ಮುಂದುವರೆಸಿದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







