ಚಿತ್ರದುರ್ಗ : ಅಲೆಮಾರಿ, ಅರೆ ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿಯನ್ನು ಅಧ್ಯಕ್ಷ ಸ್ಥಾನದಿಂದ
ವಜಾಗೊಳಿಸುವಂತೆ ಜಿಲ್ಲೆಯ 49 ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳ ವತಿಯಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಪಲ್ಲವಿ ಹಾಗೂ ಅವರ ಆಪ್ತಕಾರ್ಯದರ್ಶಿ ಆನಂದ ಏಕಲವ್ಯ ವಿರುದ್ದ ಧಿಕ್ಕಾರಗಳನ್ನು ಕೂಗಿದರು.ಬೆಂಗಳೂರಿನ ಗಾಂಧಿಭವನದಲ್ಲಿ ಕಳೆದ ಐದರಂದು ಮಾಜಿ ಸಚಿವ ಹೆಚ್.ಆಂಜನೇಯ ನೇತೃತ್ವದಲ್ಲಿ ನಡೆದ 49 ಅಲೆಮಾರಿ ಮತ್ತುಅರೆ ಅಲೆಮಾರಿ ಜಾತಿಗಳ ಸಭೆಯಲ್ಲಿ ಏಕಾಏಕಿ ನುಗ್ಗಿದ ಪಲ್ಲವಿ ಹಾಗೂ ಆನಂದ ಏಕಲವ್ಯ ಇವರುಗಳು ಗದ್ದಲ ಉಂಟು ಮಾಡಿಅಲೆಮಾರಿ ಸಮುದಾಯಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಿದ್ದಾರೆ. ನೂರಾರು ವರ್ಷಗಳಿಂದಲೂ ಬೀದಿ ಬದಿಯ ಟೆಂಟ್‍ಗಳಲ್ಲಿವಾಸಿಸುತ್ತಿರುವ ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗಕ್ಕೆ ಇದುವರೆವಿಗೂ ಸರ್ಕಾರದಿಂದ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ.
ಇಂತಹ ನಿರ್ಲಕ್ಷಿತ ಸಮುದಾಯಗಳ ಅಭಿವೃದ್ದಿಗೆ ಶ್ರಮಿಸಬೇಕೆ ವಿನಃ ಗೊಂದಲ ಸೃಷ್ಠಿಸಬಾರದು. ಹಾಗಾಗಿ ನಿಗಮದ ಅಧ್ಯಕ್ಷೆ ಪಲ್ಲವಿಮತ್ತು ಆಪ್ತ ಕಾರ್ಯದರ್ಶಿ ಆನಂದ ಏಕಲವ್ಯ ಇವರುಗಳ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾನಿರತರುಒತ್ತಾಯಿಸಿದರು.ಯುವ ವಕೀಲ ಓ.ಪ್ರತಾಪ್‍ಜೋಗಿ, ನಾಗರಾಜ ಕೆ.ಎಂ. ಸುಡುಗಾಡು ಸಿದ್ದ ಜನಾಂಗದ ಮುಖಂಡರುಗಳಾದ ಜಿ.ಕೃಷ್ಣಪ್ಪ, ಜಗಳೂರುಜಯಣ್ಣ, ಬಿ.ಎಸ್.ಮಂಜಣ್ಣ, ದಕ್ಕಲ್ ಸಮಾಜದ ಜಾನ್ಕಲ್ ರಾಜಣ್ಣ, ಸಿಳ್ಳೆಕ್ಯಾತ ಸಮುದಾಯದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಚನ್ನದಾಸಸಮುದಾಯದ ಜಿಲ್ಲಾಧ್ಯಕ್ಷ ರಂಗಪ್ಪ, ನಾಗರಾಜ್, ಪಾಂಡ್ಯಪ್ಪ, ಸತ್ಯಪ್ಪ, ಗುರುಮೂರ್ತಿ, ಸುಧಾಕರ್, ಗಂಗಪ್ಪ, ಬುಡ್ಗ ಜಂಗಮಮುಖಂಡರುಗಳಾದ ವಸಂತ, ವಿಭೂತಿ ಮಾರಪ್ಪ, ವೈ.ರಾಘವೇಂದ್ರ, ತಿಪ್ಪೇಸ್ವಾಮಿ, ಸುಡುಗಾಡು ಸಿದ್ದ ಜನಾಂಗದ ಶಿವಣ್ಣ, ಬಾಬು,ಚನ್ನದಾಸ ಸಮುದಾಯದ ಕರಿಯಪ್ಪ, ಬಡ್ಗ ಜಂಗಮ ಸಮಾಜದ ಸಣ್ಣಹುಸೇನ್ ಇನ್ನು ಅನೇಕರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



