ಆ್ಯಂಬುಲೆನ್ಸಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಕಿ
17 ವರ್ಷದ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡು, ಚಾಮ ರಾಜನಗರ ಸಿಮ್ಸ್ ಆಸ್ಪತ್ರೆಗೆ ತೆರಳುವಾಗ ಆ್ಯಂಬುಲೆನ್ಸ್‌ನಲ್ಲಿಯೇ ಹೆರಿಗೆಯಾ ಗಿರುವ ಘಟನೆಯು ತಾಲೂಕಿನ ದೇಶಿಪುರ ಗ್ರಾಮದಲ್ಲಿ ನಡೆದಿದೆ. ಆಕೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇರೆಗೆ ಅಪ್ರಾಪ್ತಿಯ ಸಂಬಂಧಿಯೂ ಆಗಿ ರುವ ದೇಶಿಪುರ ಗ್ರಾಮದ ಸುರೇಶ್ (46) ಎಂಬಾತನ ವಿರುದ್ಧ ಪೋಕೋ ಕಾಯ್ದೆಯಡಿಪ್ರಕರಣದಾಖಲಿಸಿದ್ದಾರೆ. ಬಾಲಕಿಗೆ 3 ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಗುಂಡ್ಲುಪೇಟೆ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದ್ದಾರೆ. ಬಳಿಕ ಅಲ್ಲಿಂದ ಚಾಮರಾಜನಗರದ ಸಿಮ್ಸ್‌ಗೆ ತೆರಳಲು ವೈದ್ಯರು ಸೂಚಿಸಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್‌ನಲ್ಲಿ ತೆರಳುವಾಗ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಾಳೆ. ಇದೇ ವೇಳೆ ಗರ್ಭಿಣಿಯಾಗಲು ಸಂಬಂಧಿಕ ಸುರೇಶ್ ಕಾರಣ ಎಂದು ಅಪ್ರಾಪ್ತಯು ತನ್ನ ತಂದೆ ಬಳಿ ನಿವೇದಿಸಿಕೊಂಡಿದ್ದಾಳೆ. ಬಳಿಕ ಅಪ್ರಾಪ್ತಿಯ ತಂದೆ ದೂರು ನೀಡಿದ್ದು, ಸುರೇಶ್ ವಿರುದ್ಧ ಪೋಟೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
