Author: Times of bayaluseeme
ಹಿರಿಯೂರು: ದೇವರ ಕೃಪೆ, ಸರ್ಕಾರದ ಶ್ರಮ, ಜನರ ವಿಶ್ವಾಸ ಇವುಗಳೆಲ್ಲ ಸೇರಿ ವಿವಿ ಸಾಗರ ಮತ್ತೆ ತುಂಬಿ ಹರಿದಿದೆ. ಕೋಡಿ ಬಿದ್ದ ದೃಶ್ಯ ಕಂಡು ನನ್ನ ಮನದ ಸಂತೋಷದ ಕಟ್ಟೆಯು ತುಂಬಿ ಹರಿದಿದೆ. ಕೋಡಿ ಬೀಳುವ ಮೂಲಕ ಮೂಲಕ ನಮ್ಮ ಭಾಗದ ಕೃಷಿ, ಪಶು ಸಂಗೋಪನೆ, ಜನಜೀವನ ಸುಧಾರಣೆಗೆ ಮತ್ತೆ ಸಾಕಷ್ಟು ವರದಾನವಾಗಿದೆ. ಬಯಲು ಸೀಮೆ ಈಗ ಜಲ ಸೀಮೆಯಂತಾಗಿದೆ. ವಾಣಿವಿಲಾಸ ಸಾಗರ ತುಂಬಿದರೆ ಪ್ರವಾಸಿಗರ ದಂಡು ಹರಿದು ಬರುವುದರಿಂದ ಈ ಭಾಗದ ವ್ಯಾಪಾರ-ವಹಿವಾಟಿಗೂ ಚುರುಕು ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಾಣಿವಿಲಾಸ ಸಾಗರಕ್ಕೆ ಇಂದು ಭೇಡಿ ನೀಡಿದ ವೇಳೆ ಎಲ್ಲೆಡೆ ತುಂಬಿದ ಜಲರಾಶಿ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೋಡಿ ಬಿದ್ದ ವಿವಿಸಾಗರದ ನೀರು ವೇದಾವತಿ ನದಿಗೆ ಹರಿಯುವುದರಿಂದ ವೇದಾವತಿಯ ತಗ್ಗು ಪ್ರದೇಶ ಹಾಗೂ ನದಿಪಾತ್ರದ ಎರಡು ದಡದ ಸಾರ್ವಜನಿಕರು ತಮ್ಮ ಆಸ್ತಿ-ಪಾಸ್ತಿ, ಜಾನುವಾರುಗಳ ರಕ್ಷಣೆ ಬಗ್ಗೆ ಮುನ್ನೆಚ್ಚರಿಕೆವಹಿಸಿ ಜಾಗ್ರತೆಯಿಂದಿರಲು ಮನವಿ ಮಾಡಿದರು.
ಚಿತ್ರದುರ್ಗ: ನಾಯಕ ಸಮುದಾಯವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ರಮೇಶ್ ಕತ್ತಿಯವರನ್ನು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಅವರ ಮೇಲೆ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿ ಸೋಮವಾರ ನಗರದಲ್ಲಿ ಪ್ರತಿಭಟನೆಯನ್ನು ನಡೆಸಿ, ಡಿವೈಎಸ್‍ಪಿಯವರಿಗೆ ದೂರು ನೀಡಿದ ಚಿತ್ರದುರ್ಗ ನಾಯಕ ಸಮಾಜ ಸರ್ಕಾರವನ್ನು ಆಗ್ರಹಿಸಿದೆ.ಬೆಳಗಾವಿ ಬಿ.ಕೆ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಡಿಸಿಸಿ ಬ್ಯಾಂಕಿನ ಚುನಾವಣಾ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಮಾಜಿ ಸಂಸದ ಬೆಲ್ಲದ ಬಾಗೇವಾಡಿಯ ರಮೇಶ ಕತ್ತಿಯವರು ವಾಲ್ಮೀಕಿ ಸಮುದಾಯದ ಕುರಿತು ”ಬ್ಯಾಡರ ಸೂಳೆ ಮಕ್ಕಳು” ಎಂಬ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾರೆ.ಇದರಿಂದ ರಾಜ್ಯದಾದ್ಯಂತ 75 ಲಕ್ಷ ವಾಲ್ಮೀಕಿ ಸಮುದಾಯದ ಮನಸ್ಸಿಗೆ ತೀವ್ರಘಾಸಿ, ಭಾವನೆಗಳಿಗೆ ಧಕ್ಕೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದೆ. ಇದರಿಂದ ಜಿಲ್ಲೆಯ ಬೇರೆ ಬೇರೆ ಸಮುದಾಯಗಳ ಮಧ್ಯೆ ತೀವ್ರ ಘರ್ಷಣೆ ಉಂಟಾಗುವ ಸಂಭವವಿದೆ. ರಮೇಶ್ ಕತ್ತಿ ಸತತವಾಗಿ ವಾಲ್ಮೀಕಿ ಸಮುದಾಯಕ್ಕೆ ಅವಹೇಳನಕಾರಿಯಾಗಿ ಬಿಂಬಿಸುವ…
ಚಿತ್ರದುರ್ಗ: ನಾಯಕ ಸಮುದಾಯವನ್ನು ಅವಾಚ್ಯ ಶಬ್ದಗಳಿಂನಿಂದಿಸಿದ ರಮೇಶ್ ಕತ್ತಿಯವರನ್ನು ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಅವರ ಮೇಲೆ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿ ಸೋಮವಾರ ನಗರದಲ್ಲಿ ಪ್ರತಿಭಟನೆಯನ್ನು ನಡೆಸಿ, ಡಿವೈಎಸ್‍ಪಿಯವರಿಗೆ ದೂರು ನೀಡಿದ ಚಿತ್ರದುರ್ಗ ನಾಯಕ ಸಮಾಜ ಸರ್ಕಾರವನ್ನು ಆಗ್ರಹಿಸಿದೆ.ಬೆಳಗಾವಿ ಬಿ.ಕೆ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಡಿಸಿಸಿ ಬ್ಯಾಂಕಿನ ಚುನಾವಣಾ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಮಾಜಿ ಸಂಸದಬೆಲ್ಲದ ಬಾಗೇವಾಡಿಯ ರಮೇಶ ಕತ್ತಿಯವರು ವಾಲ್ಮೀಕಿ ಸಮುದಾಯದ ಕುರಿತು ”ಬ್ಯಾಡರ ಸೂಳೆ ಮಕ್ಕಳು” ಎಂಬ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾರೆ. ಇದರಿಂದ ರಾಜ್ಯದಾದ್ಯಂತ 75 ಲಕ್ಷ ವಾಲ್ಮೀಕಿ ಸಮುದಾಯದ ಮನಸ್ಸಿಗೆ ತೀವ್ರಘಾಸಿ, ಭಾವನೆಗಳಿಗೆ ಧಕ್ಕೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದೆ. ಇದರಿಂದ ಜಿಲ್ಲೆಯ ಬೇರೆ ಬೇರೆ ಸಮುದಾಯಗಳ ಮಧ್ಯೆ ತೀವ್ರ ಘರ್ಷಣೆ ಉಂಟಾಗುವ ಸಂಭವವಿದೆ. ರಮೇಶ್ ಕತ್ತಿ ಸತತವಾಗಿ ವಾಲ್ಮೀಕಿ ಸಮುದಾಯಕ್ಕೆ ಅವಹೇಳನಕಾರಿಯಾಗಿ ಬಿಂಬಿಸುವ ಕೆಲಸ…
ಕರ್ನಾಟಕ ಸರ್ಕಾರದ ಭೋವಿ ಅಭಿವೃದ್ದಿ ನಿಗಮಕ್ಕೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮೈಸೂರಿನ ನೇರಲಗುಂಟೆ ಎಂ ರಾಮಪ್ಪರವರ ಪದಗ್ರಹಣ ಹಾಗೂ ಧಾರ್ಮಿಕ ಪೂಜಾ ಕೈಂಕರ್ಯವು ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿರವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿತು. ನಿಗಮದ ಅಧ್ಯಕ್ಷರಾಗಿ ಪದಗ್ರಹಣ ಮಾಡಿ ಮಾತನಾಡಿದ ಅವರು ನಾನು ಬಡತನದ ಹಿನ್ನೆಲೆಯಿಂದ ಬಂದಿದ್ದೇನೆ. ಬಡವರ ಕಷ್ಚಕಾರ್ಪಣ್ಯಗಳು ಹತ್ತಿರದಿಂದ ಅನುಭವಿಸಿದ್ದೇನೆ. ಕಟ್ಟಕಡೆಯ ಭೋವಿ ವ್ಯಕ್ತಿಯನ್ನು ಗುರುತಿಸಿ ಅಭಿವೃದ್ಧಿಯ ಕಡೆ ಕರೆದುಕೊಂಡು ಬರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರಾಜ್ಯ ಪ್ರವಾಸ ಮಾಡಿ ಸಮಾಜದ ಸ್ಥಿತಿಗಳನ್ನು ಸ್ವತಃ ಅರ್ಥೈಸಿಕೊಂಡು ಸ್ಪಂದಿಸುತ್ತೇನೆ. ಬಡವರು ಮುಗ್ದ ಜನರು ಯಾರ ಶಿಫಾರಸ್ಸು ಪಡೆಯದೆ ದಲ್ಲಾಳಿಗಳನ್ನು ಸಂಪರ್ಕಿಸಿದೆ ನೇರವಾಗಿ ನಿಗಮಕ್ಕೆ ಭೇಟಿ ನೀಡಿ, ಸಂವಿಧಾನದ ಅಡಿಯಲ್ಲಿ ಶಾಸಕರ ಸಚಿವರು ಗುರುತಿಸುವ ಅರ್ಹ ವ್ಯಕ್ತಿಗಳಿಗೂ ಹಾಗೂ ನಿರ್ಲಕ್ಷ್ಯಕ್ಕೆ ಒಳಪಟ್ಟ ಉತ್ಸಾಹಿ ಯುವಕರಿಗೆ ಸ್ಪಂದಿಸುವ ಕಾರ್ಯಕ್ಕೆ ಮೊದಲನೇ ಆದ್ಯತೆ ನೀಡುತ್ತೇನೆ ಎಂದರು. ನಿಗಮಕ್ಕೆ ನೇಮಕಗೊಳ್ಳಲು ಕಾರಣೀಭೂತರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ…
ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆ ನವೆಂಬರ್ ತಿಂಗಳೊಳಗೆ ಮುಗಿಯಲಿದೆ. ಅಲ್ಲಿಯ ಚುನಾವಣೆ ನಂತರ ರಾಜ್ಯ ರಾಜಕಾಣದಲ್ಲಿ ದೊಡ್ಡ ಸ್ಥಿತ್ಯಂತರ ಘಟಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಡಿಸಿಎಂ ತಮ್ಮ ತಮ್ಮ ನಡೆಗಳನ್ನು ಹೊಂದಿದ್ದಾರೆ. ಆದರೆ ಶಾಸಕರ ನಡೆಯೇ ಬೇರೆ ಕಡೆ ಇದೆ ಎಂದು ವ್ಯಂಗ್ಯವಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯಿಂದ ರೈತರು ತತ್ತರಿಸಿದ್ದಾರೆ. ರಾಜ್ಯ ಸರಕಾರಕ ಆ ಬಗ್ಗೆ ಗಮನಹರಿಸದೆ ನಿಷ್ಕಾಳಜಿ ವಹಿಸಿದೆ. ರಾಜಕೀಯ ಅಲ್ಲೋಲ ಕಲ್ಲೋಲವಾದಾಗ ರಾಜಕೀಯ ಅವಕಾಶಗಳ ಬಗ್ಗೆ ನೋಡೋಣ. ಆದರೆ ಬಿಜೆಪಿ ಪಕ್ಷ ಸಮರ್ಥ ವಿರೋಧ ಪಕ್ಷವಾಗಿ ಆಡಳಿತ ನಡೆಸುತ್ತಿದೆ ಎಂದರು.
ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಜಾತಿ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕಿ ಅವರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಈ ವೇಳೆ ಶಿಕ್ಷಕಿ ರಕ್ಷಣೆಗೆ ಧಾವಿಸಿದ ಸ್ಥಳೀಯರ ಮೇಲೂ ನಾಯಿಗಳು ದಾಳಿಗೆ ಮುಂದಾಗಿದ್ದವು. ಬೀದಿ ನಾಯಿಗಳ ದಾಳಿಗೆ ಚಿಕ್ಕಮ್ಮ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ. ಗಾಯಾಳು ಶಿಕ್ಷಕಿಯನ್ನು ಜಿಲ್ಲಾಧಿಕಾರಿ ಲತಾಕುಮಾರಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಹಿಮ್ಸ್ ನಿರ್ದೇಶಕ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಗಾಯಾಳು ಶಿಕ್ಷಕರಿಗೆ ಸೂಕ್ತ ಚಿಕಿತ್ಸೆ ಹಾಗೂ ಸರಿಯಾದ ಊಟದ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ. ಬೇಲೂರು ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕದ ಪುರಸಭೆ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಜನರಲ್ಲಿ ಗೊಂದಲ ಮೂಡಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜಾತಿ ಸಮೀಕ್ಷೆ ನಡೆಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 60 ಪ್ರಶ್ನೆಗಳನ್ನು ಜಾತಿ ಸಮೀಕ್ಷೆ ಮೂಲಕ ಜನರ ಮುಂದಿಟ್ಟಿದ್ದಾರೆ. ತಮ್ಮ ಮನೆಯ ಜಾತಿ ಸಮೀಕ್ಷೆ ವೇಳೆ ಡಿಸಿಎಂ ಡಿಕೆಶಿ ಅವರ ಪ್ರತಿಕ್ರಿಯೆ ನೋಡಿದರೇನೆ ಸರಕಾರದ ಅವ್ಯವಸ್ಥೆ ತಿಳಿಯಬಹುದು. ಇಷ್ಟೊಂದು ಆತುರಾತುರವಾಗಿ ಸಿಎಂ ಅವರಿಗೆ ಜಾತಿ ಸಮೀಕ್ಷೆ ಕುರಿತು ಅವಸರ ಏಕೆ? ಎಂದು ವಾಗ್ದಾಳಿ ನಡೆಸಿದ ಅವರು, ಇದು ಜನರಲ್ಲಿ ಗೊಂದಲ ಮೂಡಿಸುವ ಸ್ಪಷ್ಟ ವಿಚಾರಗಳನ್ನು ಹೊಂದಿದೆ ಎಂದು ಚಾಟಿ ಬೀಸಿದರು. ಭಾರತ ಎಂದು ಕಂಡಿರದಂತಹ ಪ್ರಧಾನಿ ನರೇಂದ್ರ ಮೋದಿಯವರು ಸಮರ್ಥ ಆಡಳಿತ ನೀಡುತ್ತಿದ್ದಾರೆ. ಅವರು ಎಲ್ಲ ರಾಜ್ಯಗಳಲ್ಲಿ ಜಾತಿ ಸಮೀಕ್ಷೆ ನಡೆಸುವ ಬಗ್ಗೆ ಹೇಳಿದ್ದರು. ಇಂಥದ್ದರಲ್ಲಿ ಸಿಎಂ ಸಿದ್ದರಾಮಯ್ಯ ಹೀಗೆ ಅವಸರವಾಗಿ ಅಂಗವಿಕರನ್ನು ಸಮೀಕ್ಷೆಗೆ ನಿಯೋಜಿಸಿ ಗಣತಿ ನಡೆಸುವ ಆತುರ ಏನಿತ್ತು? ಎಂದು ವಿಜಯೇಂದ್ರ ದಾಳಿ ನಡೆಸಿದರು.
ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆ ನವೆಂಬರ್ ತಿಂಗಳೊಳಗೆ ಮುಗಿಯಲಿದೆ. ಅಲ್ಲಿಯ ಚುನಾವಣೆ ನಂತರ ರಾಜ್ಯ ರಾಜಕಾಣದಲ್ಲಿ ದೊಡ್ಡ ಸ್ಥಿತ್ಯಂತರ ಘಟಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಡಿಸಿಎಂ ತಮ್ಮ ತಮ್ಮ ನಡೆಗಳನ್ನು ಹೊಂದಿದ್ದಾರೆ. ಆದರೆ ಶಾಸಕರ ನಡೆಯೇ ಬೇರೆ ಕಡೆ ಇದೆ ಎಂದು ವ್ಯಂಗ್ಯವಾಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯಿಂದ ರೈತರು ತತ್ತರಿಸಿದ್ದಾರೆ. ರಾಜ್ಯ ಸರಕಾರಕ ಆ ಬಗ್ಗೆ ಗಮನಹರಿಸದೆ ನಿಷ್ಕಾಳಜಿ ವಹಿಸಿದೆ. ರಾಜಕೀಯ ಅಲ್ಲೋಲ ಕಲ್ಲೋಲವಾದಾಗ ರಾಜಕೀಯ ಅವಕಾಶಗಳ ಬಗ್ಗೆ ನೋಡೋಣ. ಆದರೆ ಬಿಜೆಪಿ ಪಕ್ಷ ಸಮರ್ಥ ವಿರೋಧ ಪಕ್ಷವಾಗಿ ಆಡಳಿತ ನಡೆಸುತ್ತಿದೆ ಎಂದರು.
ಕೂಲಿ ಸಿನಿಮಾದ ಯಶಸ್ಸಿನ ನಂತರ ಅಧ್ಯಾತ್ಮಿಕ ಪ್ರವಾಸದ ನಿಮಿತ್ತ ಹಿಮಾಲಯಕ್ಕೆ ತೆರಳಿರುವ ಸೂಪರ್ ಸ್ಟಾರ್ ರಜನಿಕಾಂತ್ ಗಂಗಾ ನದಿ ಸ್ನಾನದೊಂದಿಗೆ ಬೀದಿ ಬದಿಯಲ್ಲೇ ಊಟ ಮಾಡುತ್ತಾ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಬೀದಿ ಬದಿಯಲ್ಲೇ ಸರಳವಾಗಿ ಊಟ ಮಾಡುತ್ತಿರುವ ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.ರಿಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿರುವ ರಜನಿಕಾಂತ್ ಗೌರವ ಸಲ್ಲಿಸಿ, ಗಂಗಾ ನದಿ ತಟದಲ್ಲಿ ಧ್ಯಾನಕ್ಕೆ ಕೂತು, ಗಂಗಾ ಆರತಿಯಲ್ಲಿ ಭಾಗವಹಿಸಿದ್ದರು. ನಂತರ ಪ್ರಯಾಣದ ನಡುವೆ ರಸ್ತೆ ಪಕ್ಕದ ತಡೆಗೋಡೆ ಮೇಲೆಯೆ ಅಡಿಕೆ ಎಲೆಯ ತಟ್ಟೆಯಲ್ಲಿ ರಜನಿಕಾಂತ್ ಊಟ ಮಾಡುತ್ತಿರುವ ಫೋಟೊ ವೈರಲ್ ಆಗಿದೆ.
ಕೂಲಿ ಸಿನಿಮಾದ ಯಶಸ್ಸಿನ ನಂತರ ಅಧ್ಯಾತ್ಮಿಕ ಪ್ರವಾಸದ ನಿಮಿತ್ತ ಹಿಮಾಲಯಕ್ಕೆ ತೆರಳಿರುವ ಸೂಪರ್ ಸ್ಟಾರ್ ರಜನಿಕಾಂತ್ ಗಂಗಾ ನದಿ ಸ್ನಾನದೊಂದಿಗೆ ಬೀದಿ ಬದಿಯಲ್ಲೇ ಊಟ ಮಾಡುತ್ತಾ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಬೀದಿ ಬದಿಯಲ್ಲೇ ಸರಳವಾಗಿ ಊಟ ಮಾಡುತ್ತಿರುವ ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ರಿಷಿಕೇಶದಲ್ಲಿರುವ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿರುವ ರಜನಿಕಾಂತ್ ಗೌರವ ಸಲ್ಲಿಸಿ, ಗಂಗಾ ನದಿ ತಟದಲ್ಲಿ ಧ್ಯಾನಕ್ಕೆ ಕೂತು, ಗಂಗಾ ಆರತಿಯಲ್ಲಿ ಭಾಗವಹಿಸಿದ್ದರು. ನಂತರ ಪ್ರಯಾಣದ ನಡುವೆ ರಸ್ತೆ ಪಕ್ಕದ ತಡೆಗೋಡೆ ಮೇಲೆಯೆ ಅಡಿಕೆ ಎಲೆಯ ತಟ್ಟೆಯಲ್ಲಿ ರಜನಿಕಾಂತ್ ಊಟ ಮಾಡುತ್ತಿರುವ ಫೋಟೊ ವೈರಲ್ ಆಗಿದೆ.
Subscribe to Updates
Get the latest creative news from FooBar about art, design and business.
