Author: Times of bayaluseeme
ವಿಜಯಪುರ: ಇಪ್ಪತ್ತು ಸಾವಿರ ರುಪಾಯಿ ಸಾಲದ ಹಣಕ್ಕಾಗಿ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಚಾಲಕನಾದ ಚಾಂದಸಾಬ್ ಅಲ್ಲಾವುದ್ದೀನ್ ಮುಲ್ಲಾ ಎಂಬಾತ ಚಾಲಕ ಕೆಲಸಕ್ಕೆ ಬರುವುದಾಗಿ ಹೇಳಿ ಆರೋಪಿ ಕುಮಾರಗೌಡ ಬಿರಾದಾರ್‌ಬಳಿ ₹20 ಸಾವಿರ ಹಣ ಪಡೆದಿದ್ದ. ಬಳಿಕ ಕೆಲಸಕ್ಕೂ ಹೋಗದೇ ಹಣವನ್ನೂ ವಾಪಸ್ ಕೊಡದೇ ಸತಾಯಿಸುತ್ತಿದ್ದ. ಇದರಿಂದ ಕುಪಿತರಾದ ಆರೋಪಿಗಳಾದ ಕುಮಾರಗೌಡ ಬಿರಾದಾರ ಹಾಗೂ ಶ್ರೀಶೈಲ ಬಿರಾದಾರ ಸೇರಿ ಚಡಚಣದಲ್ಲಿ ಸಿಕ್ಕ ಚಾಂದಸಾಬ್‌ನನ್ನು ತಮ್ಮ ಪಲ್ಸರ್ ಬೈಕ್ ಮೇಲೆ ಹತ್ತಿಸಿಕೊಂಡು ಹತ್ತಳ್ಳಿ ಗ್ರಾಮಕ್ಕೆ ಕರೆತಂದಿದ್ದಾರೆ. ಬಳಿಕ ಮಲ್ಲಿಕಾರ್ಜುನ ಬಿರಾದಾರ್ ಅಂಗಡಿಯ ಮುಂದೆ ಕಾಲಿಗೆ ಸರಪಳಿ ಕಟ್ಟಿ ಬೀಗ ಜಡಿದು ಹಣಕ್ಕಾಗಿ ಒತ್ತಾಯಿಸಿದ್ದಾರೆ. ಸಂಜೆ ವೇಳೆಗೆ ಸರಪಳಿ ಬಿಚ್ಚಿ ಕಳುಹಿಸಿ ಕೊಟ್ಟಿದ್ದಾರೆ. ಘಟನೆ ನಡೆದು ನಾಲೈದು ದಿನ ದಿನಗಳಾಗಿದ್ದು, ಚಾಂದಸಾಬ್ ಮುಲ್ಲಾ ಶನಿವಾರ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು…
ಮೈಸೂರು: ನಮ್ಮ ಗ್ಯಾರಂಟಿ ಟೀಕಿಸಿದ್ದ ಬಿಜೆಪಿ ಬೇರೆ ರಾಜ್ಯಗಳಲ್ಲಿ ಅದನ್ನೇ ನಕಲು ಮಾಡುತ್ತಿದೆ. ವಿರೋಧ ಪಕ್ಷ ಗಳ ಟೀಕೆ ಸಾಯುತ್ತವೆ, ನಮ್ಮ ಕೆಲಸ ಉಳಿಯುತ್ತವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ ಬಳಿಕ ಮಾತನಾಡಿದರು.ನಮ್ಮ ಗ್ಯಾರಂಟಿ ದೇಶಕ್ಕೇ ಮಾದರಿ. ಪ್ರಧಾನಿಯಿಂದ ಹಿಡಿದು ರಾಜ್ಯ ಬಿಜೆಪಿ ನಾಯಕರವರೆಗೂ ಎಲ್ಲರೂ ಟೀಕಿಸಿದರು. ನಂತರ ನಡೆದ ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಹರಿಯಾಣ ಸೇರಿ ಬೇರೆ ರಾಜ್ಯಗಳ ಚು ನಾವಣೆಯಲ್ಲಿ ಕಾಂಗ್ರೆಸ್ ಗಿಂತ ಮೊದಲೇ ಗ್ಯಾರಂಟಿ ಘೋಷಿಸಿದರು. ಬಿಹಾರದ ಲ್ಲೂ ನಕಲು ಮಾಡಿ ದ್ದಾರೆ ಎಂದು ಟೀಕಿಸಿದರು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಾವು ಮಾಡಿದ ಕೆಲಸಗಳು ಜನರ ಕಣ್ಣಿಗೆ ಕಾಣುತ್ತಿವೆ. ನಾವು ಇಲ್ಲಿಗೆ ಜನರಿಂದ ಜೈಕಾರ ಹಾಕಿಸಿಕೊಳ್ಳಲು ಬಂದಿಲ್ಲ. ನಿಮ್ಮ ಋಣ ತೀರಿಸಲು ಬಂದಿದ್ದೇವೆ ಎಂದರು.
ಕಾಂಗ್ರೆಸ್ ತನ್ನ ಮೂಲ ಐಡಿಯಾಲಜಿ ಬಿಡುವುದಿಲ್ಲ. ಜನ ಬದುಕಿದ್ದರೆ ಇಂಥ ಗ್ಯಾರಂಟಿಯಿಂದಲೇ ಹೊರತು, ಸುಳ್ಳು ಪ್ರಚಾರದಿಂದ ಅಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿ, ಮೋದಿ ಉದ್ಯೋಗ ಕೊಡುವುದಾಗಿ ಹೇಳಿದರು, ಕೊಟ್ರಾ..? 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದರು ಕೊಟ್ರಾ? ರೈತರಿಗೆ ಆದಾಯ ದ್ವಿಗುಣ ಗೊಳಿಸುವುದಾಗಿ ಹೇಳಿದರು, ಮಾಡಿದರೆ..?ಮೋದಿ ಸುಳ್ಳಿನ ಸರದಾರ ಎಂದು ಕಟುವಾಗಿ ಟೀಕಿಸಿದರು.ಮೋದಿಯವರೇ, ರಾಜ್ಯದಲ್ಲಿ ನಿಮ್ಮ ಮತ್ತು ನಿಮ್ಮ ಶಿಷ್ಯರ ಕೊಡುಗೆ ಏನು ಎಂಬುದನ್ನು ತಿಳಿಸಿ.ಟಿವಿಯಲಿ ಕಾಣಿಸಿ ಕೊಳ್ಳಬೇಕು. ಮಣಿಪುರದಲ್ಲಿ ಕೋಮು ಗಲಭೆಯಾದರೂ ಹೋಗದೆ 42 ದೇಶಕ ಹೋಗಿದ್ದೀರಿ. ಜನರಿಗೆ ಸಿದ್ದರಾಮಯ್ಯ ಮೊದಲ ಪ್ರಾಧಾನ್ಯತೆ. ಆದರೆ ಬಿಜೆಪಿಯವರಿಗೆ ಟೀಕೆಯಷ್ಟೇ ಗೊತ್ತು. ಮಾಡುವುದು ಬರೀ ಭ್ರಷ್ಟಾ ಚಾರ. ಜನರಿಗೆ ನೀವು ಏನು ಮಾಡಿದ್ದೀರ ಎಂದು ಅವರು ಪ್ರಶ್ನಿಸಿದರು.
ಮೈಸೂರು: ಜನರ ದಿಕ್ಕು ತಪ್ಪಿಸುವುದನ್ನು ನಿಲ್ಲಿಸಬೇಕಾದರೆ ನೀವು ಒಂದೇ ವೇದಿಕೆಗೆ ಚರ್ಚೆಗೆ ಬನ್ನಿ. ಅವರೇನೂ ಅಭಿವೃದ್ಧಿ ಮಾಡಿದ್ದಾರೆ. ನಾವೇನೂ ಅಭಿವೃದ್ಧಿ ಮಾಡಿದ್ದೇವೆ ಎಂದು ಚರ್ಚೆ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಬಿಜೆಪಿ-ಜೆಡಿಎಸ್ ಬಹಿರಂಗ ಸವಾಲು ಹಾಕಿದರು.ಇಂದು ಮೈಸೂರಿನಲ್ಲಿ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಮತ್ತು 2,578 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ, ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕಾಗಿ ಸಾಧನಾ ಸಮಾವೇಶ ಆಯೋಜನೆ ಮಾಡಿದ್ದಾರೆ ಎಂದು ಬಿಜೆಪಿ, ಜೆಡಿಎಸ್ ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು. ಬಿಜೆಪಿ ಜೆಡಿಎಸ್ ನವರು ನಮ್ಮ ಸಾಧನೆಯನ್ನು ಸಹಿಸಿಕೊಳ್ಳಲಾಗದೇ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಎಂದೂ ಸಹ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕವೇ ಬಿಜೆಪಿ ಅಧಿಕಾರಕ್ಕೆ ಬಂತು ಎಂದು ವಾಗ್ದಾಳಿ ನಡೆಸಿದರು.ಇನ್ನೂ ಜೆಡಿಎಸ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಸಿಎಂ, ಜೆಡಿಎಸ್ ಸ್ಥಾನಗಳು ಚುನಾವಣೆಯಿಂದ ಚುನಾವಣೆಗೆ ಕಡಿಮೆಯಾಗ್ತಿವೆ. ನಾನು ಜೆಡಿಎಸ್ ನಲ್ಲಿದ್ದಾಗ…
ಬೆಂಗಳೂರು: ಮೈಸೂರಿನಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶ ಕಾರ್ಯಕ್ರಮದಿಂದ ಅರ್ಧಕ್ಕೇ ನಿರ್ಗಮಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಪ್ರಯಾಣ ಎಂಬ ಮಾಹಿತಿ ಲಭ್ಯವಾಗಿದ್ದರೂ, ಮೈಸೂರಿನಲ್ಲಿ ನಡೆದ ಸರ್ಕಾರದ ಕಾರ್ಯಕ್ರಮದಿಂದ ಅರ್ಧಕ್ಕೆ ನಿರ್ಗಮಿಸಿ ತರಾತುರಿಯಲ್ಲಿ ದೆಹಲಿಗೆ ಹೊರಟಿದ್ದು ಕುತೂಹಲ ಮೂಡಿಸಿದೆ.ಕಳೆದ ಕೆಲವು ದಿನಗಳ ಹಿಂದಷ್ಟೇ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದರು. ಈಗ ಮತ್ತೆ ತರಾತುರಿಯಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಜುಲೈ 11 ಹಾಗೂ 12ರಂದು ಶಿರಡಿಗೆ ತೆರಳಿದ್ದ ಡಿಕೆಶಿ ದಿಢೀರ್ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. ಇದಾದ 8 ದಿನಗಳ ಅಂತರದಲ್ಲೇ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ
ನಟ ದರ್ಶನ್ ‘ಡೆವಿಲ್’ ಸಿನಿಮಾದ ಹಾಡಿನ ಶೂಟ್ಗಾಗಿ ಥೈಲ್ಯಾಂಡ್ ನಲ್ಲಿದ್ದಾರೆ. ಶೂಟಿಂಗ್ ಮಧ್ಯೆ ಅವರು ಸ್ನೇಹಿತರು, ಸಿನಿಮಾ ತಂಡದವರ ಜೊತೆ ಮೋಜು-ಮಸ್ತಿ ಮಾಡುತ್ತಿರುವ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.ಸ್ನೇಹಿತರ ಜೊತೆ ಪಾರ್ಟಿ ಮಾಡಿರುವ, ಬೈಕ್, ಕಾರು ಓಡಿಸುತ್ತಿರುವ ವಿಡಿಯೊ ವೈರಲ್ ಆದ ಬೆನ್ನಲ್ಲೇ ದರ್ಶನ್ ಯಾಚ್ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ದರ್ಶನ್ ಅವರಿಗೆ ಬೈಕ್ ಹಾಗೂ ಕಾರುಗಳ ಬಗ್ಗೆ ಸಖತ್ ಕ್ರೇಜ್ ಇದೆ. ಈಗ ಯಾಚ್ ಕೂಡ ರನ್ ಮಾಡಿದ್ದಾರೆ.
ಕೆಮ್ಮು ಶೀತದ ಸಮಸ್ಯೆಗೆ ಕೆಮ್ಮಿನ ಸಿರಪ್ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು, ಕೆಲವೊಂದು ಮನೆಮದ್ದುಗಳನ್ನು ಅನುಸರಿಸುವುದರಿಂದ, ಯಾವುದೇ ಅಡ್ದ ಪರಿಣಾಮಗಳು ಇಲ್ಲದೆ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ, ಸಾಧ್ಯವಾದಷ್ಟು ನೈಸರ್ಗಿಕವಾದರೀತಿಯಲ್ಲಿ ಬಗೆಹರಿಸಿ ಕೊಳ್ಳಲು ಪ್ರಯತ್ನ ಪಡಬೇಕು. ಇದಕ್ಕೆ ಬಹು ಮುಖ್ಯ ಕಾರಣಗಳು ಎಂದ್ರೆ ಇದರಿಂದ ಆರೋಗ್ಯ ಕ್ಕೆ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ, ಜೊತೆಗೆ ಖರ್ಚು ಕೂಡ ಕಡಿಮೆ. ಹೀಗಾಗಿ ಬಹಳ ಹಿಂದಿನಿಂದಲೂ ಪ್ರಸಿದ್ಧವಾಗಿರುವ ಆಯುರ್ವೇದ ಪದ್ಧತಿ ಈಗಲೂ ಕೂಡ ನಮ್ಮೆಲ್ಲರ ಮಧ್ಯೆ ಜೀವಂತವಾಗಿದೆ.ಅಡುಗೆ ಮನೆಯಲ್ಲಿ ಸಿಗುವಂತಹ ಕೆಲವೊಂದು ನೈಸರ್ಗಿಕ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಹೇಗೆ ಮನೆ ಮದ್ದುಗಳ ರೂಪದಲ್ಲಿ ಪರಿಹಾರಿಸಿಕೊಳ್ಳಬಹುದು ಎನ್ನುವುದನ್ನು ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ… ಕೆಮ್ಮಿನ ಹಾಗೂ ಕಫದ ಸಮಸ್ಯೆಗೆ ಶುಂಠಿ ಹಾಗೂ ಉಪ್ಪು! ಒಂದು ಸಣ್ಣ ತುಂಡು, ಹಸಿಶುಂಠಿಯನ್ನು ತೆಗೆದುಕೊಂಡು ಅದರ ಮೇಲ್ಭಾಗದ ಸಿಪ್ಪೆ ತೆಗೆದು, ಚೆನ್ನಾಗಿ ತೊಳೆದುಕೊಳ್ಳಆ ಬಳಿಕ ಶುಂಠಿಯನ್ನು ಒಂದು ಚಮಚ ಆಗುಷ್ಟು ತುರಿದು, ಇದಕ್ಕೆ ಚಿಟಿಕೆಯಷ್ಟು…
ಕೇಂದ್ರ ಸರ್ಕಾರ 2026ರಲ್ಲಿ ನಡೆಸಲಿರುವ ಜನ, ಜಾತಿಗಣತಿಯಲ್ಲಿ ಎಲ್ಲರು ಸಹಾ ಸಕ್ರಿಯವಾಗಿ ಭಾಗವಹಿ ಸುವುದರ ಮೂಲಕತಮ್ಮ ಮಾಹಿತಿಯನ್ನು ನೀಡಿ ಮುಂದಿನ ದಿನದಲ್ಲಿ ಸರ್ಕಾರದಿಂದ ಸಿಗುವಂತ ವಿವಿಧ ರೀತಿಯ ಸೌಲಭ್ಯಗಳನ್ನು ಮುಂದಾಗುವಂತೆಸಹಾ ಉಸ್ತುವಾರಿ ಸುಧಾಕರ್ ರೆಡ್ಡಿ ಕರೆ ನೀಡಿದರು.ಕರ್ನಾಟಕ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಚಿತ್ರದುರ್ಗದ ವತಿಯಿಂದ ಕೇಂದ್ರ ಸರ್ಕಾರ ಘೋಷಿಸಿರುವ ಜಾತಿ ಜನಗಣತಿಕಾರ್ಯದ ಬಗ್ಗೆ ಹಿಂದುಳಿದ ವರ್ಗಗಳ ಜನಜಾಗೃತಿ ಮೂಡಿಸುವ ಕುರಿತು ತಿರುಮಲ ಕಲ್ಯಾಣ ಮಂಟಪದಲ್ಲಿಹಮ್ಮಿಕೊಳ್ಳಲಾಗಿದ್ದ ಹಿಂದುಳಿದ ವರ್ಗಗಳ ವಿಭಾಗ ಮಟ್ಟದ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿಅಧಿಕಾರವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಠ ಸರ್ಕಾರವಾಗಿದೆ ಜನತೆಯಿಂದ ರಕ್ತವನ್ನು ಹೀರುವುದರ ಮೂಲಕ ತೆರಿಗೆಯ ರೂಪದಲ್ಲಿ ಹಣವನ್ನು ವಸೂಲಿ ಮಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳ ಸೇರಿ ಜನರೊಂದಿಗೆ ಜೂಜಾಟವನ್ನುಆಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಆಭೀವೃದ್ದಿಯಾಗುತ್ತಿಲ್ಲ ರಾಜ್ಯದಲ್ಲಿ ಯಾವುದೇ ಆಭೀವೃದ್ದಿಯಾಗುತ್ತಿಲ್ಲ, ಓಬಿಸಿ ಜನಾಂಗಕ್ಕೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ಏನು ಬೇಕಾದರೂ ಸಹಾ ಮಾಡುವಂತ ಕಾರ್ಯವನ್ನು ಮುಖ್ಯಮಂತ್ರಿಗಳುಮಾಡುತ್ತಿದ್ದಾರೆ. ಭ್ರಷ್ಠಾಚಾರದಿಂದ…
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಹಾಗೂ ಚಿತ್ರದುರ್ಗ ಯೋಜನಾ ಕಚೇರಿ ವ್ಯಾಪ್ತಿಯ ಕಸಬಾ ಬಿ ವಲಯದಕಲ್ಲಹಳ್ಳಿಯ ತೋಪರ ಮಾಳಿಗೆ ಕಾರ್ಯಕ್ಷೇತ್ರದ ಆರ್ ವಿ ಪಬ್ಲಿಕ್ ಸ್ಕೂಲ್ ಮತ್ತು ಕಾಲೇಜಿನಲ್ಲಿ ಪರಿಸರ ಮಾಹಿತಿ ಮತ್ತುಗಿಡ ನೆಡುವ ಕಾರ್ಯಕ್ರಮ ನಡೆಯಿತು.ದವಳಗಿರಿಯ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳಾದ ನವೀನ್ ಹಿರೇಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ ವಿ ಪಬ್ಲಿಕ್ ಸ್ಕೂಲ್ ಮತ್ತು ಕಾಲೇಜಿನ ಕಾರ್ಯದರ್ಶಿ ಶ್ರೀಮತಿ ವೀಣಾಮೇಡಂ ವಹಿಸಿದ್ದರು.ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಜಿ ಬಿ ಪಾಪಣ್ಣ, ಅರಣ್ಯ ಇಲಾಖೆಯ ಓಬಣ್ಣ, ಒಕ್ಕೂಟದ ಉಪಾಧ್ಯಕ್ಷರಾದಶ್ರೀಮತಿ ಸಿದ್ದಮ್ಮ ಹಾಗೂ ಆರ್ ವಿ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ಕಿಶೋರ್ ಕುಮಾರ್ ಒಕ್ಕೂಟದಪದಾಧಿಕಾರಿಗಳು ಪ್ರಗತಿ ಬಂದು ಸ್ವಸಹಾಯ ತಂಡಗಳ ಸದಸ್ಯರು ಕೃಷಿ ಮೇಲ್ವಿಚಾರಕರು ಶಾಲಾ ಶಿಕ್ಷಕ ವೃಂದದವರು ಶಾಲಾ ಮಕ್ಕಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.