Author: Times of bayaluseeme

ಚಿತ್ರದುರ್ಗ: ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಇತಿಹಾಸವುಳ್ಳ ಮದಕರಿ ವ್ಯಾಯಾಮ ಶಾಲೆಯ ಸ್ಥಳದಲ್ಲಿ ಅಂಗನವಾಡಿ ಕಟ್ಟುತ್ತಿದ್ದು ಅದನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಮದಕರಿ ವ್ಯಾಯಾಮ ಶಾಲೆ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.ಮದಕರಿ ವ್ಯಾಯಾಮ ಶಾಲೆ ಕರ್ನಾಟಕದಲ್ಲಿ ಒಂದು ಅಪರೂಪದ ವ್ಯಾಯಾಮ ಶಾಲೆ ಕರ್ನಾಟಕದ ಅತ್ಯಂತ 50 ರಿಂದ 100 ವರ್ಷ ಹಳೆಯದಾದ ವ್ಯಾಯಾಮ ಶಾಲೆಯಾಗಿದೆ.ಇದು ಒಂದು ಧಾರವಾಡದ ಪ್ರತಿಷ್ಠಿತ ಮಲ್ಲಸಜ್ಜನ ವ್ಯಾಯಾಮ ಶಾಲೆ. ದಾವಣಗೆರೆಯ ಬೀರೇಶ್ವರ ವ್ಯಾಯಮ ಶಾಲೆ. ಮಂಗಳೂರಿನ ಬಾಲಾಂಜನೇಯ ಶಾಲೆ. ಶಿವಮೊಗ್ಗದ ಪುಲಕೇಶಿ ವ್ಯಾಯಾಮ ಶಾಲೆ ಹಾಗೂ ಬೆಂಗಳೂರಿನಕೆ ಜಿ ಎಸ್ ಕ್ಲಬ್ ಸೇರಿದಂತೆ ಚಿತ್ರದುರ್ಗದಲ್ಲಿ ಇದಾಗಿದೆ. 1942ರಿಂದ ಸರ್ಕಾರಿ ಶಿಕ್ಷಣ ಇಲಾಖೆಯ ಸ್ಥಳದಲ್ಲಿ ವ್ಯಾಯಾಮಕಟ್ಟಡವಿದ್ದು, ಕಟ್ಟಡಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಖಾತೆ ಮತ್ತು ವಿದ್ಯುತ್ ಸಂಪರ್ಕ ಇದ್ದು, ಅದನ್ನು ಪಟ್ಟಾಭದ್ರಾ ಹಿತಾಸಕ್ತಿಗಳುವೈಯಕ್ತಿಕವಾಗಿ ಟ್ರಸ್ಟ್ ಮೂಲಕ ಕಟ್ಟಲು ಹೋದಾಗ ನಾವೆಲ್ಲ ತಡೆಯಾಜ್ಞೆಯನ್ನು ತಂದಿದ್ದೇವು. ಮತ್ತೆ ವ್ಯಾಯಾಮ ಶಾಲೆಪ್ರಾರಂಭದ ಬಗ್ಗೆ ನೆನೆಗುದಿಗೆ ಬಿದ್ದಾಗ ಈಗೀನ ಶಾಸಕರು…

Read More

ಚಿತ್ರದುರ್ಗ: ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ನಿಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಿ, ಉನ್ನತ ಸ್ಥಾನದಲ್ಲಿದ್ಧಾಗಸಮಾಜ ಹಾಗೂ ಮಠ ಮಾಡಿದ ಸೇವೆಯನ್ನು ಮರೆಯದೇ ಬೇರೆಯವರಿಗೆ ನಿಮ್ಮ ಕೈಲಾದ ಸೇವೆಯನ್ನು ಮಾಡಿ ಎಂದುವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ತಂಗಡಗಿ ಕರೆ ನೀಡಿದರು.ನಗರದ ಹೊರ ವಲಯದ ಭೋವಿ ಗುರುಪೀಠದಲ್ಲಿ ನಡೆದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರಸ್ವಾಮೀಜಿಯವರ 16ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 27ನೇ ಲಾಂಛನ ದೀಕ್ಷಾ ಮಹೋತ್ಸವ, 40ನೇ ವಸಂತೋತ್ಸವದನಿಮಿತ್ತ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ವಧೂ-ವರರ ಸಮಾವೇಶ, ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದಸಚಿವರು, ಇಂದಿನ ದಿನಮಾನದಲ್ಲಿ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡಿ ಸಿಹಿಯನ್ನು ಹಂಚಿದರೆ ನಮ್ಮ ಇಮ್ಮಡಿ ಶ್ರೀಗಳು ತಮ್ಮಹುಟ್ಟು ಹಬ್ಬದ ದಿನದಂದು ಪ್ರತಿಭಾವಂತ ಮಕ್ಕಳನ್ನು ಕರೆಯಿಸಿ ಅವರಿಗೆ ಸ್ಕಾಲರ್ ಶಿಪ್ ಹಾಗೂ ಸನ್ಮಾನವನ್ನು ಮಾಡಿ ಶಿಕ್ಷಣಕ್ಕೆಸಹಾಯವಾಗುವ ರೀತಿಯಲ್ಲಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಸಂತೋಷವನ್ನು ಉಂಟು ಮಾಡಿದೆ ಎಂದರು. ನಮ್ಮ ಸಮಾಜದ…

Read More

ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ, ನ್ಯಾಯಮೂರ್ತಿ ವಿಭು ಬಖ್ರು ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದರು.ರಾಜಭವನದ ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಿಗೆ ಅಧಿಕಾರ ಪ್ರಮಾಣ ವಚನ ಬೋಧಿಸಿದರು.ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ಉಚ್ಚ ನ್ಯಾಯಾಲಯದ ಹಂಗಾಮಿ ನ್ಯಾಯಾಧೀಶರಾದ ವಿ. ಕಾಮೇಶ್ವರ ರಾವ್, ಕಾನೂನು, ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಹೆಚ್.ಕೆ.ಪಾಟೀಲ್, ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರಾದ ಬಿ.ಎಸ್.ಸುರೇಶ್ (ಬೈರತಿ), ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ವಿಧಾನಪರಿಷತ್ ಸದಸ್ಯರಾದ ನಾಗರಾಜ ಯಾದವ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನಿಶ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ಬಿ.ಬಿ.ಕಾವೇರಿ, ಸೇರಿದಂತೆ ಕರ್ನಾಟಕ…

Read More

ಚಿತ್ರದುರ್ಗ: ಕರ್ನಾಟಕ ಬಿಜೆಪಿಯ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಚಿತ್ರದುರ್ಗ ವತಿಯಿಂದ ಕೇಂದ್ರ ಸರ್ಕಾರ ಘೋಷಿಸಿರುವ ಜಾತಿಜನಗಣತಿ ಕಾರ್ಯದ ಬಗ್ಗೆ ಹಿಂದುಳಿದ ವರ್ಗಗಳ ಜನಜಾಗೃತಿ ಮೂಡಿಸುವ ಕುರಿತು ಹಿಂದುಳಿದ ವರ್ಗಗಳ ವಿಭಾಗ ಮಟ್ಟದಸಮಾವೇಶವನ್ನು ಇಂದು ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿ ಬಳಿ ಇರುವ ತಿರುಮಲ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಸಮಾವೇಶಕ್ಕೆ ವಿಧಾನ ಪರಿಷತ್ ಸದಸ್ಯರುಗಳಾದ ಎನ್ ರವಿಕುಮಾರ್, ಕೇಶವ ಪ್ರಸಾದ್ ,ಕೆ ಎಸ್. ನವೀನ್ ಶಾಸಕರಾದ ಎಂಚಂದ್ರಪ್ಪ, ಮಾಜಿ ಶಾಸಕರಾದ ಜಿ ಹೆಚ್ ತಿಪ್ಪಾರೆಡ್ಡಿ ,ನೇರಲಗುಂಟೆ ತಿಪ್ಪೇಸ್ವಾಮಿ. ಎಸ್ ಕೆ ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷರಾದಕೆ ಟಿ ಕುಮಾರಸ್ವಾಮಿ,ಸಾಮಾಜಿಕ ಕಾರ್ಯಕರ್ತರಾದ ವಾದಿರಾಜ್ ಹಾಗೂ ಓಬಿಸಿ ಸಮುದಾಯದ ಎಲ್ಲಾ ಮುಖಂಡರುಗಳು ಭಾಗವಹಿಸಲಿದ್ದಾರೆ.

Read More

ಚಿತ್ರದುರ್ಗ: ಭಾರತೀಯ ಜನತಾ ಪಾರ್ಟಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಹಾಲಿ ವಿಧಾನ ಪರಿಷತ್ ಸದಸ್ಯರಾದಸಿ.ಟಿ.ರವಿಯವರ 58 ನೇ ಹುಟ್ಟು ಹಬ್ಬದ ಅಂಗವಾಗಿ ಸಿ.ಟಿ.ರವಿ ಅಭಿಮಾನಿಗಳ ಬಳಗದ ವತಿಯಿಂದ ಚಿತ್ರದುರ್ಗ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಹಣ್ಣುಗಳನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಸಿ.ಟಿ. ರವಿ ಅಭಿಮಾನಿ ಬಳಗದ ಅಧ್ಯಕ್ಷರಾದ ರಘು, ಪರಶುರಾಮ್, ದೇವರಾಜ್, ನಾಗರಾಜ್ ಬೆದ್ರೇ, ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು. ಇದಕ್ಕೂ ಮುನ್ನಾ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಮಠದಲ್ಲಿ ಸಿ.ಟಿ.ರವಿಯವರಿಗೆ ಶುಭವನ್ನು ಕೋರಿ ಸ್ವಾಮಿಗೆ ಅಭೀಷೇಕವನ್ನುಮಾಡಿಸಲಾಯಿತು.

Read More

ಚನ್ನಪಟ್ಟಣ: ಸರ್ಕಾರ ರಾಜ್ಯದಲ್ಲಿ ಸಿಎಸ್‌ಆರ್‌ನಿಧಿಯಿಂದ 2000 ಪಬ್ಲಿಕ್ ಶಾಲೆ ನಿರ್ಮಿಸುವ ಸಂಕಲ್ಪ ಮಾಡಿದ್ದು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ರಚನೆ ಮಾಡಲು ಆದೇಶ ಹೊರಡಿಸಿ ಎಂದು ಡಿಸಿಎಂ ಡಿ.ಕೆ.ಶಿವಕುಮಾ‌ರ್ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಸಲಹೆ ನೀಡಿದರು. ತಾಲೂಕಿನ ಹೊಂಗ ನೂರು ಗ್ರಾಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಚ್.ಎಂ.ವೆಂಕಟಪ್ಪ ₹14 ಕೋಟಿ ವೆಚ್ಚದಲ್ಲಿ ಕಣ್ಣ ಫೌಂಡೇಷನ್‌ನಿಂದ ನಿರ್ಮಿಸಿರುವ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಓದಿ ಬೆಳೆದವರು ನೆರವು ನೀಡುತ್ತಾರೆ. ಹಳೇ ವಿದ್ಯಾರ್ಥಿಗಳ ಸಂಘಗ ಳಿಂದ ಶಕ್ತಿ ತುಂಬುವ ಕೆಲಸ ಆಗಲಿದ್ದು, ಅಗತ್ಯ ಮಾರ್ಗದರ್ಶನ ನೀಡುತ್ತೇನೆ ಎಂದರು.

Read More

ಶ್ರೀರಾಮುಲು ಜತೆಗೆ ನನ್ನದು 40 ವರ್ಷದ ಸ್ನೇಹ. ನಮ್ಮಿಬ್ಬರ ಸ್ನೇಹದ ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.ಕುಟುಂಬ ಸದಸ್ಯರ ಜತೆ ತಮ್ಮ ಪುತ್ರ ಕಿರೀಟಿ ಅಭಿಯನದ ಜೂನಿಯರ್ ಸಿನಿಮಾ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾವುದೋ ಒಂದು ಘಟನೆಯಿಂದ ಪ್ರೀತಿ ಅಭಿಮಾನ ಬದಲಾಗುವುದಿಲ್ಲ. ಶ್ರೀರಾಮುಲು ಜತೆ 4 ದಶಕಗಳ ಸ್ನೇಹವಿದೆ. ನಮ್ಮ ಸ್ನೇಹ ಯಾವುದೇ ಹಂತದಲ್ಲೂ ಮುಕ್ಕಾಗಿಲ್ಲ. ನಮ್ಮಿಬ್ಬರ ಜತೆಗೂಡಿ ಸಲು ಯಾರ ಮಧ್ಯಸ್ಥಿಕೆಯೂ ಬೇಕಾಗಿಲ್ಲ. ಶ್ರೀರಾಮುಲು, ನಾನು ಒಟ್ಟಾಗಿ ಜೂನಿಯರ್ ಸಿನಿಮಾ ನೋಡುತ್ತೇವೆ ಎಂದರು. ಪುತ್ರನ ಜೂನಿಯರ್ ಸಿನಿಮಾ ಸೂಪರ್ ಹಿಟ್ ಪುತ್ರನ ಅಭಿನಯದ ಜೂನಿಯರ್‌ಸಿನಿಮಾ ಅತ್ಯುತ್ತಮವಾಗಿದೆ. ಕಿರೀಟಿಗೆ ಬಾಲ್ಯ ದಿಂದಲೇ ಸಿನಿಮಾಸಕ್ತಿ ಇತ್ತು. ಆರೇಳು ವರ್ಷದ ಮಗುವಿದ್ದಾಗಲೇ ಪುನೀತ್ ರಾಜ್‌ಕುಮಾರ್ ಕಿರೀಟಿಯನ್ನು ಎತ್ತಿ ಮುದ್ದಾಡಿದ್ದರು. ಹಿರಿಯ ನಟರು ಆಶೀ ರ್ವಾದ ಮಾಡಿದ್ದಾರೆ. ನಾನು ನಟನಾಗಿಯೇ ಬದುಕಬೇಕು ಎಂದು ಕಿರೀಟಿ ನಿರ್ಧರಿಸಿದ್ದಾನೆ ಎಂದರು.

Read More

ಮೈಸೂರು: ಧರ್ಮಸ್ಥಳದಲ್ಲಿ ನಡೆದಿರುವ ಸರಣಿ ಕೊಲೆ ಹಾಗೂ ಮೃತದೇಹಗಳ ಅಂತ್ಯಕ್ರಿಯೆ ಗೌಪ್ಯವಾಗಿ ನಡೆದಿರುವ ಪ್ರಕರಣದ ತನಿಖೆಗೆ SIT ತಂಡ ರಚಿಸಬೇಕೆಂಬ ವಕೀಲರ ನಿಯೋಗದ ಮನವಿ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.ಸದ್ಯಕ್ಕೆ ಎಸ್ಐಟಿ (SIT) ರಚನೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಯಾರೋ ಹೇಳಿದರೆಂದು SIT ರಚನೆ ಮಾಡಲು ಆಗುವುದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಅಗತ್ಯವಿದ್ದಲ್ಲಿ ಎಸ್. ಐ. ಟಿ ರಚನೆ ಮಾಡ್ತೀವಿ. ನಮಗೆ ಯಾರಿಂದಲೂ ಒತ್ತಡ ಬಂದಿಲ್ಲ. ಒತ್ತಡ ಬಂದರೂ ನಾವು ಕೇರ್ ಮಾಡೋದಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ತನಿಖೆಗೆ ಎಸ್‌ಐಟಿ ತಂಡ ರಚಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಸೇರಿದಂತೆ ಅನೇಕ ವಕೀಲರು ಸಿಎಂ ಗೆ ಮನವಿ ಸಲ್ಲಿಸಿದ್ದರು.ಧರ್ಮಸ್ಥಳ ಗ್ರಾಮದ ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ಹಲವು ಶವಗಳನ್ನು ಹೂತಿಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ವ್ಯಕ್ತಿಯೋರ್ವ ತಾನೇ ಶವ…

Read More

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಅತ್ಯಾಚಾರ ಪ್ರಕರಣಗಳಲ್ಲಿ ಒಂದರ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಪೂರ್ಣಗೊಳಿಸಿದ್ದು, ತೀರ್ಪನ್ನು ಜುಲೈ 30ಕ್ಕೆ ಕಾಯ್ದಿರಿಸಿದೆ.ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮನೆಕೆಲಸದ ಮಹಿಳೆ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಅವರು ಇಂದು ಆದೇಶ ಕಾಯ್ದಿರಿಸಿದ್ದಾರೆ. ಪ್ರಾಸಿಕ್ಯೂಷನ್ ಪರ ಎಸ್ಎಸ್ ಪಿ ಬಿ.ಎನ್.ಜಗದೀಶ್ ಹಾಗೂ ಅಶೋಕ್ ನಾಯ್ಕ್ ವಾದ ಮಂಡಿಸಿದ್ದರೆ, ಪ್ರಜ್ವಲ್ ರೇವಣ್ಣ ಪರವಾಗಿ ಹಿರಿಯ ವಕೀಲ ನಳಿನಾ ಮಾಯಗೌಡ ಪ್ರತಿವಾದ ಮಂಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಸಂತೋಷ ಗಜಾನನ ಭಟ್ ಅವರು ಜುಲೈ 30ಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ.ಜುಲೈ 30 ರಂದು ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರವಾಗಲಿದ್ದು, ಒಂದು ವೇಳೆ ಕೋರ್ಟ್, ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ನೀಡಿದರೆ ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾರೆ. ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ…

Read More

ಬೆಂಗಳೂರು: ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ. 50 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಅನುದಾನದ ಕೊರತೆ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷದ ಶಾಸಕರಲ್ಲೂ ಅಸಮಾಧಾನವಿದೆ. ಈ ಸಂಬಂಧ ಜುಲೈ 15 ರಂದು ಶಾಸಕರಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಸಿಎಂ ಮೂಲಸೌಲಭ್ಯ ಅಭಿವೃದ್ಧಿ ಕಾರ್ಯಕ್ರಮದಡಿ, 2025-26ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಘೋಷಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ರೂ. 50 ಕೋಟಿ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಇದರಲ್ಲಿ ಲೋಕೋಪಯೋಗಿ ಇಲಾಖೆ, ರಸ್ತೆ ಮತ್ತು ಸೇತುವೆ ಕೆಲಸ, ಗ್ರಾಮಾಂತರ ರಸ್ತೆ, ಸೇತುವೆ ಮತ್ತು ನಗರ ಪ್ರದೇಶದ ಕಾಮಗಾರಿಗೆ ರೂ. 37.50 ಕೋಟಿ ಮತ್ತು ಶಾಸಕರು ತಮ್ಮ ವಿವೇಚನೆಯಿಂದ ಆಯ್ಕೆ ಮಾಡಬಹುದಾದ ಇತರೆ ಇಲಾಖಾ ಕಾಮಗಾರಿಗಳಿಗೆ ರೂ. 12.50 ಕೋಟಿ ನೀಡಲಾಗುತ್ತಿದೆ. ಶಾಸಕರು ತಮ್ಮ ಬೇಡಿಕೆ ಪತ್ರದೊಂದಿಗೆ ನಿಗದಿತ ನಮೂನೆಯಲ್ಲಿ ಕಾಮಗಾರಿಗಳ ವಿವರಗಳನ್ನು ಮುಖ್ಯಮಂತ್ರಿಗಳಿಗೆ…

Read More