Author: Times of bayaluseeme
ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶಗಳು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಮುಖ್ಯ. ಶಿಶುಗಳಿಗೆ ಸ್ತನ್ಯಪಾನವು ಮೊದಲ ಆರು ತಿಂಗಳವರೆಗೆ ಅತ್ಯುತ್ತಮ ಪೋಷಣೆಯ ಮೂಲವಾಗಿದೆ. ನಂತರ, ಘನ ಆಹಾರಗಳನ್ನು ಪರಿಚಯಿಸಬೇಕು. ಸಮತೋಲಿತ ಆಹಾರವು ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರಬೇಕು ಮತ್ತು ಪ್ರೋಟೀನ್, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಡೈರಿ ಉತ್ಪನ್ನಗಳನ್ನು ಒಳಗೊಂಡಿರಬೇಕು. ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶದ ಬಗ್ಗೆ ಹೆಚ್ಚಿನ ಮಾಹಿತಿ: ಶಿಶುಗಳಿಗೆ ಪೋಷಣೆ: ಸ್ತನ್ಯಪಾನವು ಶಿಶುಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ, ಆದರೆ ಕೆಲವು ಸಂದರ್ಭಗಳಲ್ಲಿ ಸೂತ್ರವನ್ನು ಬಳಸಬಹುದು. ಶಿಶುಗಳಿಗೆ 6 ತಿಂಗಳ ನಂತರ ಘನ ಆಹಾರವನ್ನು ಪರಿಚಯಿಸಬೇಕು. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್ ಮೂಲಗಳನ್ನು ಆಹಾರದಲ್ಲಿ ಸೇರಿಸಬೇಕು. ಸಮತೋಲಿತ ಆಹಾರ: ಸಮತೋಲಿತ ಆಹಾರವು ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬುಗಳು, ವಿಟಮಿನ್ ಗಳು ಮತ್ತು ಖನಿಜಗಳು ಮಕ್ಕಳಿಗೆ ಅಗತ್ಯ. ಪೋಷಕಾಂಶಗಳು: ಪ್ರೋಟೀನ್ ಸ್ನಾಯುಗಳ ಬೆಳವಣಿಗೆಗೆ ಮುಖ್ಯ. ವಿಟಮಿನ್ ಗಳು ಮತ್ತು ಖನಿಜಗಳು ದೇಹದ ಕಾರ್ಯಚಟುವಟಿಕೆಗೆ ಮುಖ್ಯ.…
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಜಾಗತಿಕ ಕ್ರಿಕೆಟ್ ನ ಬಾಸ್ ಎಂಬುದು ಮತ್ತೆ ಸಾಬೀತಾಗಿದ್ದು, 2023-24ರಲ್ಲಿ ಭಾರತದ ಕ್ರಿಕೆಟ್ ಸಂಸ್ಥೆ ಬರೊಬ್ಬರಿ 9 ಸಾವಿರಕ್ಕೂ ಅಧಿಕ ಕ್ರಿಕೆಟ್ ಆದಾಯ ಪಡೆದಿದೆ.ಹೌದು.. 2023–24ರ ಹಣಕಾಸು ವರ್ಷದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 9,741.7 ಕೋಟಿ ರೂ. ಆದಾಯ ಗಳಿಸಿದ್ದು, ಭಾರತೀಯ ಕ್ರಿಕೆಟ್ ಮಂಡಳಿಯ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದೇ ಕರೆಯಲಾಗುವ ಮಿಲಿಯನ್ ಡಾಲರ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದಲೇ ಸಿಂಹಪಾಲು ಬಂದಿದೆ. ಅಂದರೆ ಬಿಸಿಸಿಐನ ಒಟ್ಟಾರೆ ಆದಾಯದ ಪೈಕಿ ಐಪಿಎಲ್ ನಿಂದ ಮಾತ್ರವೇ ಶೇ.59ರಷ್ಟು ಅಂದರೆ 5,761 ಕೋಟಿ ರೂ. ಆದಾಯ ಬಂದಿದೆ ಎಂದು ಹೇಳಲಾಗಿದೆ.ವೈವಿಧ್ಯಮಯ ಭೌಗೋಳಿಕ ಪ್ರದೇಶಗಳಿಂದ ಪ್ರೇಕ್ಷಕರು ಹೆಚ್ಚಾಗುತ್ತಿರುವುದರಿಂದ, ಲೀಗ್‌ನ ಮಾಧ್ಯಮ ಹಕ್ಕುಗಳು ನಿರಂತರವಾಗಿ ಹೆಚ್ಚುತ್ತಿರುವುದರಿಂದ, ಐಪಿಎಲ್ ಭಾರತೀಯ ಕ್ರಿಕೆಟ್‌ನ ಮೇಲೆ ಮಾಂತ್ರಿಕ ಗುಣಕ ಪರಿಣಾಮವನ್ನು ಬೀರುತ್ತಿದೆ ಎಂಬುದು ಇದರಿಂದ ಮತ್ತೆ ಸ್ಪಷ್ಟವಾಗಿದೆ. ಬಿಸಿಸಿಐಗೆ ಒಟ್ಟು ಮೊತ್ತದ ಆದಾಯವನ್ನು ನೀಡುವುದರ ಜೊತೆಗೆ,…
ಬೆಂಗಳೂರು: ಹಿಂದಿನ ವರ್ಷಗಳಲ್ಲಿ ಆಗಿರುವ ವಹಿವಾಟಿನ ಮಾಡಿಕೊಳ್ಳುತ್ತೇವೆ ಎಂದು ಸರಕು ಮತ್ತು ಸೇವಾ ತೆರಿಗೆ ದಾಖಲೆಗಳನ್ನು ವ್ಯಾಪಾರಿಗಳು ಇಟ್ಟುಕೊಂಡಿಲ್ಲವಾದ ಕಾರಣ ಹಳೇ ಲೆಕ್ಕ ಕೇಳಬೇಡಿ. ಹೊಸದಾಗಿ ಜಿಎಸ್‌ಟಿ ನೋಂದಣಿ ಸಂಬಂಧಿಸಿದಂತೆ ನೋಟಿಸ್ ಸ್ವೀಕರಿಸಿರುವ ವ್ಯಾಪಾರಿಗಳು ತೆರಿಗೆ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಿಗಳು ಹಣ್ಣು, ತರಕಾರಿ, ಚಹ, ಬೇಕರಿ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಅವರಿಗೆ, ಜಿಎಸ್ಟಿ ತೆರಿಗೆ ಮುಂತಾದವುಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಈಗ ಏಕಾಏಕಿ ಲಕ್ಷಾಂತರ ರು. ವ್ಯಾಪಾರ ಮಾಡಿರುವ ಕುರಿತು ಲೆಕ್ಕ ಕೊಡಿ ಎಂದು ನೋಟಿಸ್ ನೀಡಿದ್ದಾರೆ. ಅದರ ಲೆಕ್ಕವನ್ನು ಬಡ ಪ್ಯಾಚಾರಿಗಳು ಎಲ್ಲಿಂದ ತರುತ್ತಾರೆ? ಈಗ ಅದಕ್ಕಾಗಿ ಸಾವಿರಾರು ರು. ಖರ್ಚು ಮಾಡಿ ‘ಕಾರ್ಟಡ್‌್ರಡ್ ಅಕೌಂಟೆಂಟ್‌ಗಳನ್ನು (ಸಿಎ) ನೇಮಿಸಿಕೊಳ್ಳಬೇಕಾಗುತ್ತದೆ. ಬಿಲ್ ಗಳನ್ನು ಒದಗಿಸಬೇಕಾಗುತ್ತದೆ. 15 ದಿನಗಳಲ್ಲಿ ಅದೆಲ್ಲಾ ಸಾಧ್ಯವೇ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಷತ್ತಿನ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಪ್ರಶ್ನಿಸಿದ್ದಾರೆ.ಹಣ್ಣು, ತರಕಾರಿ, ಚಹಾ, ಬ್ರೆಡ್, ತಂಬಾಕು ಉತ್ಪನ್ನಗಳು ಸೇರಿದಂತೆ ಅನೇಕ ವಸ್ತು ಗಳನ್ನು…
ರಾಜ್ಯದಲ್ಲಿರುವ ದೇವಸ್ಥಾನ ಸೇರಿ ಮತ್ತಿತರ ಪುರಾತನ ನಿರ್ಮಾಣಗಳನ್ನು ಸಂರಕ್ಷಿಸುವ ಉದ್ದೇಶದೊಂದಿಗೆ ರಾಜ್ಯ ಪುರಾತತ್ವ, ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆಯು ಹೊಸದಾಗಿ 317 ವಾಸ್ತುಶಿಲ್ಪ, ಪ್ರದೇಶಗಳನ್ನು ರಾಜ್ಯ ಸಂರಕ್ಷಿತ ತಾಣ ಎಂದು ನವ ಶಿಲಾಯುಗದ ಅವಧಿಯಲ್ಲಿ ನಿರ್ಮಾಣವಾದ ವಾಸ್ತುಶಿಲ್ಪಗಳು ಸಂರಕ್ಷಿಸದೆ ನಿರ್ಲಕ್ಷ್ಯಕ್ಕೊಳಗಾಗಿ ಕಣ್ಮರೆಯಾಗುತ್ತಿರುವು ದನ್ನು ಪತ್ತೆ ಮಾಡುವುದು ಮತ್ತು ಅದನ್ನು ಸಂರಕ್ಷಿಸುವ ಉದ್ದೇಶದೊಂದಿಗೆ ರಾಜ್ಯ ಪುರಾತತ್ವ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಒಟ್ಟು 317 ಸಂರಕ್ಷಿತವಲ್ಲದ ಪುರಾತನ ವಾಸ್ತುಶಿಲ್ಪಗಳನ್ನು ಪತ್ತೆ ಮಾಡಿ, ಅವುಗಳ ಸಂರಕ್ಷಣೆಗೆ ಕ್ರಮಗಳ ಕುರಿತು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಲಾಗಿದೆ. ಮೊದಲ ಹಂತದಲ್ಲಿ 200 ಮತ್ತು ಎರಡನೇ ಹಂತದಲ್ಲಿ 117 ವಾಸ್ತುಶಿಲ್ಪಗಳನ್ನು ಸಂರಕ್ಷಿಸಲು ನಿರ್ಧರಿಸಲಾಗಿದೆ. ಕಳೆದ ಮೇ ತಿಂಗಳ ಅಂತ್ಯದ ವೇಳೆಗೆ ಎರಡೂ ಹಂತಗಳಲ್ಲಿ 119 ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಇನ್ನೂ 198 ಪ್ರಸ್ತಾವನೆಗಳು ಸಲ್ಲಿಕೆಯಾಗಬೇಕಿದೆ ಎಂದು ರಾಜ್ಯ ಪುರಾತತ್ವ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಅಕ್ರಮ ನುಸುಳುಕೋರರ ಹಾವಳಿ ತಡೆಯಲು ಬಂದರೂ, ಈ ಕಾನೂನಿನಲ್ಲಿ ಬದಲಾವಣೆ ಆಗಿಲ್ಲ, ಇದರಿಂದ ಎಲ್ಲೆಡೆ ಅಕ್ರಮ ಬಾಂಗ್ಲಾ ನುಸುಳುಕೋರರು ಹೆಚ್ಚಿದ್ದು, ನಕಲಿ ದಾಖಲೆ ಇಟ್ಟುಕೊಂಡಿದ್ದಾರೆ. ಹೀಗಾಗಿ, ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಕೂಂಬಿಂಗ್ ಶುರುವಾಗಬೇಕು ಎಂದು ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಹಾಗೂ ಕುಮಾರ್ ಬಂಗಾರಪ್ಪ ಆಗ್ರಹಿಸಿದ್ದಾರೆ.ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧದ ಜಾಗೃತಿ ಅಭಿಯಾನದ ಅಂಗವಾಗಿ ಗುರುವಾರ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕುಂಬ್ರಳ್ಳಿ, ಕೆಂಚಮ್ಮನ ಹೊಸಕೋಟೆ ಹೋಬಳಿಯ ವಾಟೆಪುರ ಕಾಫಿ ಎಸ್ಟೇಟ್ ಗಳಿಗೆ ಭೇಟಿ ನೀಡಿ, ತೋಟದ ಕಾರ್ಮಿಕರೊಂದಿಗೆ ಅವರು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಮಿಕರು ಹಲವು ಸಮಸ್ಯೆಗಳನ್ನು ತಂಡದ ಮುಂದೆ ತೆರೆದಿಟ್ಟರು.ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಲಿಂಬಾವಳಿ, ಈ ಮೊದಲು ತಮಗೆ ವಾರಪೂರ್ತಿ ಕೆಲಸ ಸಿಗುತ್ತಿತ್ತು. ಬಾಂಗ್ಲಾ ವಲಸಿಗರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಕಾರ್ಮಿಕರು ನಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದರು.
ಹೈದರಾಬಾದ್: ಖ್ಯಾತ ತೆಲುಗು ನಟ ವಿಜಯ್ ದೇವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ಸ್‌ಟಾಗ್ರಾಂನಲ್ಲಿ ‘ಎಂಟರ್ಟೈನ್ವೆಂಟ್ ಎಎಫ್’ ಖಾತೆಯು ಈ ಮಾಹಿತಿಯನ್ನು ಹಂಚಿಕೊಂಡಿದೆ. ಆದರೆ ನಟ ವಿಜಯ್ ಆಗಲಿ, ಅವರ ತಂಡವಾಗಲಿ ಈವರೆಗೆ ಸುದ್ದಿಯನ್ನು ಖಾತ್ರಿ ಪಡಿಸಿಲ್ಲ ಮತ್ತು ತಳ್ಳಿಹಾಕಿಲ್ಲ. ವಿಜಯ್ ನಟನೆಯ ಕಿಂಗ್ಲೆಂ ಚಿತ್ರ ಜು.31ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಸ್ಟೈ ಆ್ಯಕ್ಷನ್ ಗ್ರಿಲ್ಲರ್ ಚಿತ್ರವಾಗಿದೆ.
ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ದರ್ಶನ್ ಪರ ವಕೀಲರಿಗೆ ಜಾಮೀನು ಯಾಕೆ ರದ್ದು ಮಾಡಬಾರದು ಎಂದು ಪ್ರಶ್ನಿಸಿ ಮುಂದಿನ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿದೆ. ಹೈಕೋರ್ಟ್ ತೀರ್ಪಿನ ಬಗ್ಗೆ ಪರಿಶೀಲಿಸಿರುವ ಸುಪ್ರೀಂ ಕೋರ್ಟ್ ಬದಲಾವಣೆಯ ಬಗ್ಗೆ ಪರೋಕ್ಷವಾಗಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಜುಲೈ 22ರಂದೇ ಅಂತಿಮ ವಿಚಾರಣೆ ನಡೆಸಿ ಅಂದೇ ಆದೇಶ ನೀಡುವುದಾಗಿ ಹೇಳಿದೆ. ಹೀಗಾಗಿ ದರ್ಶನ, ಪವಿತ್ರಾಗೌಡ ಸೇರಿ ಏಳು ಮಂದಿಯ ಭವಿಷ್ಯ 22ರಂದು ನಿರ್ಧಾರವಾಗಲಿದೆ. ಜಾಮೀನು ನೀಡುವಾಗ ಕರ್ನಾಟಕ ಹೈಕೋರ್ಟ್ ತನ್ನ ವಿವೇಚನೆಯನ್ನ ಸೂಕ್ತವಾಗಿ ಬಳಸಿಲ್ಲ ಎಂದ ನ್ಯಾಯಮೂರ್ತಿ ಪರ್ದಿವಾಲಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ಬಗ್ಗೆ ಏನು ಹೇಳಬಯಸುತ್ತೀರಿ ಎಂದು ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್‌ಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಕಪಿಲ್ ಸಿಬಲ್ ವಾದ ಮಂಡಿಸಲು ಮುಂದಾದರು.…
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು ಎಂದು ಆರೋಪಿಸಿ ಯುವತಿಯೋರ್ವಳು ಬೀದರ್‌ನ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಯುವತಿಯೊಬ್ಬಳು ದೂರು ನೀಡಿದ್ದಾಳೆ. ಪ್ರತೀಕ್ ಚೌಹಾಣ್ ಮದುವೆಯಾಗೋದಾಗಿ ನಂಬಿಸಿ, ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಅಂತ ಆರೋಪಿಸಿದ್ದಾಳೆ. ಈ ಬಗ್ಗೆ ದೂರು ನೀಡಲು ಔರಾದ್‌ನ ಹೋಕ್ರಾಣಾ ಪೊಲೀಸ್ ಠಾಣೆ ತೆರಳಿದ್ದಾಗ ಪೊಲೀಸರು ದೂರು ಸ್ವೀಕರಿಸಿಲ್ಲ ಅಂತ ಆರೋಪಿಸಿದ್ದಾಳೆ. 2023ರಲ್ಲಿ ನನ್ನ ಹಾಗೂ ಪ್ರತೀಕ್ ಚೌಹಾಣ್‌ಗೆ ಮನೆಯವರೆಲ್ಲ ಸೇರಿ ನಿಶ್ಚಿತಾರ್ಥ ಆಗಿತ್ತು. ನಂತರ ಹಲವು ಬಾರಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. ಆದರೆ ಈಗ ಮದುವೆಯಾಗಲು ನಿರಾಕರಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಕನ್ನಡದ ಖ್ಯಾತ ನಿರೂಪಕಿ/ನಟಿ ಅನುಶ್ರೀ ಮದುವೆಯ ವದಂತಿ ಕಳೆದ ಕೆಲ ತಿಂಗಳಿಂದ ಜೋರಾಗಿತ್ತು. ಇದೀಗ ಮದುವೆಗೆ ದಿನಾಂಕ ಫಿಕ್ಸ್ ಆಗಿದೆ ಅನ್ನೋ ಮಾಹಿತಿ ಬಹುತೇಕ ಖಚಿತವಾಗಿದ್ದು ಆಗಸ್ಟ್ 28ಕ್ಕೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕುಟುಂಬಸ್ಥರು ನೋಡಿದ ಹುಡುಗನ ಜೊತೆಯೇ ಅನುಶ್ರೀ ಮದುವೆಯಾಗುತ್ತಿದ್ದು ಮಂಗಳೂರು ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಟೆಕ್ಕಿ ಜೊತೆ ಅನುಶ್ರೀ ಕಲ್ಯಾಣ ಎನ್ನಲಾಗುತ್ತಿದೆ. ಮದುವೆ ನಿಶ್ಚಯವಾಗಿರುವ ಹುಡುಗ ಹಾಗೂ ಇನ್ನಿತರ ಮಾಹಿತಿಯನ್ನು ಅನುಶ್ರೀ ಗೌಪ್ಯವಾಗಿರಿಸಿದ್ದಾರೆ. ಆಗಸ್ಟ್ 28 ರಂದು ಬೆಂಗಳೂರಿನಲ್ಲೇ ಅದ್ದೂರಿ ಆರತಕ್ಷತೆಗೆ ಸ್ಥಳ ನಿಗದಿಯಾಗಿರುವ ಸುದ್ದಿ ಬಂದಿದೆ. ಅನುಶ್ರೀ ಮದುವೆ ವಿಚಾರವಾಗಿ ಹಲವು ತಮಾಷೆಯ ಸಂಭಾಷಣೆಗಳು ನಡೆಯುತ್ತಲೇ ಇತ್ತು. ಮದುವೆ ಸುದ್ದಿ ಕೇಳ್ದಾಗೆಲ್ಲಾ ಈ ವರ್ಷವೇ ಮದುವೆ ಎಂದಿದ್ದರು ಅನುಶ್ರೀ. ಇದೀಗ ಮದುವೆಗೆ ಕಾಲ ಕೂಡಿಬಂದಿದ್ದು ಆಗಸ್ಟ್ 28ಕ್ಕೆ ಕಲ್ಯಾಣ ಎನ್ನಲಾಗುತ್ತಿದೆ. ಸರಳ ಶಾಸ್ತ್ರೋಕ್ತವಾಗಿ ಮದುವೆಯಾಗಿ ಬಳಿಕ ಆಗಸ್ಟ್ 28ಕ್ಕೆ ಸಿನಿಮಾ ಇಂಡಿಸ್ಟ್ರಿಯವರನ್ನ ಆಮಂತ್ರಿಸಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಳ್ಳವ ಸಾಧ್ಯತೆ ಇದೆ.
ಗಂಟಲು ನೋವಿಗೆ, ಮನೆಯಲ್ಲಿ ಕೆಲವು ಪರಿಹಾರಗಳಿವೆ. ಬೆಚ್ಚಗಿನ ದ್ರವಗಳನ್ನು ಕುಡಿಯುವುದು, ಗಾರ್ಗ್ಲ್ ಮಾಡುವುದು, ಮತ್ತು ಜೇನುತುಪ್ಪವನ್ನು ಬಳಸುವುದು ಗಂಟಲಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಹೆಚ್ಚಿನ ವಿವರಗಳು: ಬೆಚ್ಚಗಿನ ದ್ರವಗಳು: ಚಹಾ, ಸಾರು, ಅಥವಾ ಬೆಚ್ಚಗಿನ ನೀರು ಗಂಟಲನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ತಂಪು ಅಥವಾ ಆಮ್ಲೀಯ ಪಾನೀಯಗಳನ್ನು ತಪ್ಪಿಸಿ, ಏಕೆಂದರೆ ಅವು ಗಂಟಲಿಗೆ ಕಿರಿಕಿರಿ ಉಂಟುಮಾಡಬಹುದು. ಉಪ್ಪು ನೀರಿನ ಗಾರ್ಗ್ಲ್: ಉಗುರುಬೆಚ್ಚಗಿನ ನೀರಿನಲ್ಲಿ ಉಪ್ಪು ಬೆರೆಸಿ ಗಾರ್ಗ್ಲ್ ಮಾಡುವುದರಿಂದ ಗಂಟಲಿನ ನೋವು ಮತ್ತು ಊತವನ್ನು ಕಡಿಮೆ ಮಾಡಬಹುದು. ಜೇನುತುಪ್ಪ: ಜೇನುತುಪ್ಪವು ನೋಯುತ್ತಿರುವ ಗಂಟಲಿಗೆ ಹಿತವಾದ ಪರಿಣಾಮವನ್ನು ನೀಡುತ್ತದೆ. ಒಂದು ಚಮಚ ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಅಥವಾ ಚಹಾದಲ್ಲಿ ಬೆರೆಸಿ ಕುಡಿಯಬಹುದು. ಗಿಡಮೂಲಿಕೆ ಚಹಾಗಳು: ಕ್ಯಾಮೊಮೈಲ್, ಪುದೀನಾ, ಅಥವಾ ಶುಂಠಿ ಚಹಾಗಳು ಗಂಟಲಿನ ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ವಿಶ್ರಾಂತಿ: ಸಾಕಷ್ಟು ವಿಶ್ರಾಂತಿ ಪಡೆಯುವುದು ಮತ್ತು ಗಂಟಲನ್ನು ಹೆಚ್ಚು ಬಳಸುವುದು ತಪ್ಪಿಸುವುದು ಸಹ ಮುಖ್ಯವಾಗಿದೆ. ವೈದ್ಯರನ್ನು ಸಂಪರ್ಕಿಸಿ: ಗಂಟಲು ನೋವು…
Subscribe to Updates
Get the latest creative news from FooBar about art, design and business.