Author: Times of bayaluseeme
ಚಿತ್ರದುರ್ಗ: ನವಜಾತ ಶಿಶುಗಳ ಜನನದ ನಂತರದ ಕಠಿಣ ಸಂದರ್ಭಗಳಿಂದ ಹಿಡಿದು, ಆರಂಭದ ಸಾವಿರ ದಿನಗಳು ಮಗುವಿನ ಭೌತಿಕ ಹಾಗೂ ಬೌದ್ಧಿಕ ಬೆಳವಣಿಗೆಯನ್ನು ವೃದ್ಧಿಸಲು ಉತ್ತಮ ಸಮಯವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ‘ಸ್ಪರ್ಶ್-ದಿ ಫಸ್ಟ್-1000 ಡೇಸ್ ಆಫ್ ಲೈಫ್’ ಎನ್ನುವ ಸಂಶೋಧನಾ ಯೋಜನೆಗೆ ಐದು ತಿಂಗಳ ಹಿಂದೆಯೇ ಚಾಲನೆ ನೀಡಲಾಗಿದ್ದು, ಜಿಲ್ಲೆಯ ಮಾದರಿ ಅಧ್ಯಯನ ನಡೆಸಲಾಗುತ್ತಿದೆ ಎಂದು ನವದೆಹಲಿಯ ಐಸಿಎಂಆರ್ ಹೆರಿಗೆ ವಿಭಾಗದ ಮುಖ್ಯಸ್ಥೆ ಡಾ.ಅಶೂ ಗ್ರೋವರ್ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ.ಸಿ.ಎಂ.ಆರ್), ಕರ್ನಾಟಕ ಆರೋಗ್ಯ ಸಂವರ್ಧನ ಟ್ರಸ್ಟ್ (ಕೆ.ಹೆಚ್.ಪಿ.ಟಿ), ಹಾಗೂ ಸೆಂಟ್ ಜಾನ್ಸ್ ಸಂಶೋಧನಾ ಸಂಸ್ಥೆ (ಎಸ್.ಜೆ.ಆರ್.ಐ) ವತಿಯಿಂದ ಆಯೋಜಿಸಲಾದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಐಸಿಎಂಆರ್ ಸಂಶೋಧನಾ ಕೇಂದ್ರದಿಂದ ‘ಸ್ಪರ್ಶ್-ದಿ ಫಸ್ಟ್-1000 ಡೇಸ್ ಆಫ್ ಲೈಫ್’ ಯೋಜನೆ ಅನುಷ್ಠಾನದ ಬಗ್ಗೆ ಕೂಲಂಕೂಷವಾಗಿ ಅಧ್ಯಯನ ನಡೆಸಲಾಗುತ್ತಿದೆ. ಮಗುವಿನ ಜನನದಿಂದ ಸಾವಿರ ದಿನಗಳವರೆಗೆ ಉತ್ತಮ ಆರೋಗ್ಯ ವೃದ್ಧಿಪಡಿಸಲು ಹಲವು ರೀತಿಯ…
ಚಿತ್ರದುರ್ಗ: ನಗರದ ಹೊರ ವಲಯದ ಭೋವಿ ಗುರುಪೀಠದಲ್ಲಿ ನಾಳೆ ನಡೆಯಲಿರುವ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿಯವರ 16ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 27ನೇ ಲಾಂಛನ ದೀಕ್ಷಾ ಮಹೋತ್ಸವ, 40ನೇ ವಸಂತೋತ್ಸವದ ನಿಮಿತ್ತ ಪ್ರತಿಭಾ ಪುರಸ್ಕಾರ, ವಧೂ-ವರರ ಸಮಾವೇಶ, ರಕ್ತದಾನ ಶಿಬಿರಕ್ಕೆ ಸಕಲ ಸಿದ್ದತೆಯನ್ನು ಮಾಡಲಾಗಿದೆ.ಕರ್ನಾಟಕ ರಾಜ್ಯವಲ್ಲದೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದಲೂ ಸಹಾ ಭಕ್ತಾಧಿಗಳುಆಗಮಿಸಲಿದ್ದಾರೆ, ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸಹಾ ಭೋವಿ ಸಮಾಜದ ಭಾಂಧವರು ಇಂದು ರಾತ್ರಿಯಿಂದಲೇ ಮಠಕ್ಕೆಆಗಮಿಸಲಿದ್ದಾರೆ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಭಕ್ತಾಧಿಗಳು ಆಸನವಾಗಲು ಸುಮಾರು 5 ಸಾವಿರ ಕುರ್ಚಿಗಳನ್ನುಹಾಕಲಾಗಿದೆ. ಮುಖ್ಯ ಅತಿಥಿಗಳು ಹಾಸನವಾಗಲು ಆಗಲವಾದ ವೇದಿಕೆಯನ್ನು ಸಹಾ ಸಿದ್ದ ಪಡಿಸಲಾಗಿದೆ. ಈಗಮಳೆಗಾಲವಾಗಿರುವುದರಿಂದ ಮಳೆ ಬಂದು ಕಾರ್ಯಕ್ರಮ ಹಾಳಾಗಬಾಗರೆಂದು ಮಳೆಯಲ್ಲಿ ಸೋರದ ಜರ್ಮನ್ ಚಪ್ಪರವನ್ನುಹಾಕಿಸಲಾಗಿದೆ ಎಂದರು.ಈ ಸಂಧರ್ಭದಲ್ಲಿ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಶಿಕ್ಷಣದ ಕಡೆಗೆಹೆಚ್ಚಿನ ಒಲವನ್ನು ಸೆಳೆಯುವ ಸಲುವಾಗಿ ಈ ಕಾರ್ಯಕ್ರಮದಲ್ಲಿ ಎಸ್.ಎಸ್. ಎಲ್.ಸಿಯಿಂದ ಹಿಡಿದು ಪದವಿ…
ಚಳ್ಳಕೆರೆ: ಚಳ್ಳಕೆರೆ ಪಟ್ಟಣದ ಪಾವಗಡ ರಸ್ತೆಯಲ್ಲಿರುವ ಶ್ರೀಗುರು ತಿಪ್ಪೇರುದ್ರಸ್ವಾಮಿ ಫರ್ಟಿಲೈಜರ್ಸ್ ನಲ್ಲಿ ಕಳಪೆ ಗೊಬ್ಬರ ಮಾರಾಟ ಮಾಡಿ ರೈತರಿಗೆ ವಂಚಿಸಿದ ಆರೋಪ ಕೇಳಿ ಬಂದಿದೆ. ಹೌದು..ಚಳ್ಳಕೆರೆ ತಾಲೂಕಿನ ವಡೇರಹಳ್ಳಿ ಗ್ರಾಮದ ನರಸಿಂಹಪ್ಪ ಎಂಬ ರೈತ ಈರುಳ್ಳಿ ಬೆಳೆಗೆ ಎಂದು ಗೊಬ್ಬರ ಕೇಳಿದಾಗ ಗೊಬ್ಬರದ ಅಂಗಡಿ ಮಾಲೀಕ ತಿಪ್ಪೇಸ್ವಾಮಿ ಐಪಿಎಲ್ ಎಂಬ ಕಂಪನಿಯ ಗೊಬ್ಬರ ನೀಡಿದ್ದಾನೆ. ರೈತ ನರಸಿಂಹಪ್ಪ ಆಗ ತೆಗೆದುಕೊಂಡು ಹೋಗಿ ಹೊಲದಲ್ಲಿ ಈರುಳ್ಳಿ ಬೆಳೆಗೆ ಗೊಬ್ಬರ ಹಾಕಿದ್ದಾನೆ. ಆಗ ಗೊಬ್ಬರದಲ್ಲಿ ಬೋರ್ವೆಲ್ ಕೊರೆವ ವೇಳೆ ಬರುವ ಮಣ್ಣು ಹಾಗೂ ಕಲ್ಲಿನ ವಸ್ತು ಸಿಕ್ಕಿದ್ದು, ಅಂಗಡಿಗೆ ವಾಪಸ್ ಬಂದು ಗೊಬ್ಬರ ಸರಿಯಿಲ್ಲ ಎಂದಿದ್ದಕ್ಕೆ ತಿಪ್ಪೇಸ್ವಾಮಿ ಅವಾಜ್ ಹಾಕಿದ್ದಾನೆ. ಬಳಿಕ ಸಾರ್ವಜನಿಕರು ಸೇರಿ ಗೊಬ್ಬರವನ್ನು ನೀರಿನಲ್ಲಿ ಹಾಕಿದಾಗ ಕಲ್ಲು ಮಣ್ಣು ಕಂಡು ಬಂದಿದ್ದು, ಕೂಡಲೇ ಗುರು ತಿಪ್ಪೇರುದ್ರಸ್ವಾಮಿ ಫರ್ಟಿಲೈಜರ್ಸ್ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದು, ಅಂಗಡಿಯನ್ನು ಮುಚ್ಚುವಂತೆ ಆಗ್ರಹಿಸಿದರು. ರೈತರ ಪ್ರತಿಭಟನೆ ಬಳಿಕ ಅಂಗಡಿಗೆ ಚಳ್ಳಕೆರೆ ಕೃಷಿ ಅಧಿಕಾರಿ ಗುರುನಂದನ್ ಭೇಟಿ ನೀಡಿ…
ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶಾಸಕ ರಿಗೆಅನುದಾನನೀಡುತ್ತಾರೆಯೇ ಎಂಬುದನ್ನು ನೋಡಬೇಕು ಎಂದು ವಿಧಾನಪರಿಷತ್ ಸದಸ್ಯ ರಾಜೇಂದ್ರ ವ್ಯಂಗ್ಯವಾಗಿ ಹೇಳಿದ್ದಾರೆ. ರಾಜಣ್ಣಶಾಸಕರು, ಸಚಿವರೊಂದಿಗೆ ಸುರ್ಜೇವಾಲಾ ಸಭೆ ಕುರಿತಂತೆ ಸಚಿವ ಕೆ. ಎನ್.ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ಕೂಡ ಸುರ್ಜೇವಾಲಾ ಸಭೆ ಕುರಿತಂತೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ರಾಜೇಂದ್ರ,ಸಹಜವಾಗಿ ಶಾಸಕರು ಸಮಸ್ಯೆಗಳಿದ್ದರೆ ಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜತೆ ಚರ್ಚೆ ಮಾಡುತ್ತಾರೆ. ಅಲ್ಲದೆ, ಅವರಲ್ಲಿ ಅನುದಾನ ಕೇಳುವುದೂ ಸಹಜ. ಅದು ಹಿಂದಿನಿಂದಲೂ ನಡೆದು ಬಂದಿದೆ.ಈ ಬಾರಿ ಸುರ್ಜೇವಾಲಾ ಅವರು ಅಹವಾಲು ಸ್ವೀಕಾರ ಮಾಡುತ್ತಿದ್ದಾರೆ. ಇನ್ನು, ಸುರ್ಜೇವಾಲಾ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡ ಹಲವು ಹಿರಿಯ ಶಾಸಕರು ಅನುದಾಲಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಸುರ್ಜೇವಾಲಾ ಅವರು ಅನುದಾನ ಕೊಡುತ್ತಾರೆಯೇ? ಆದರೂ, ಸಭೆ ನಡೆದಿದೆ. ಮುಂದೆ ಇದು ಯಾವ ರೀತಿ ತಿರುಗುತ್ತೆ ನೋಡಬೇಕು…
ದ್ರಾಕ್ಷಿ ಮತ್ತು ವೈನ್ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು 42ನೇ ಹುಟ್ಟುಹಬ್ಬದ ಪ್ರಯುಕ್ತ ಡಾ.ಬಿ.ಯೋಗೇಶ್ ಬಾಬು ಗೆಳೆಯರ ಬಳಗದ ವತಿಯಿಂದಕೋನಸಾಗರ ಗ್ರಾಮದ ಶ್ರೀ ಗುರು ತಿಪ್ಪೇಸ್ವಾಮಿ ಹೊರ ಮಠದಲ್ಲಿ ಸಪ್ತಗಿರಿ ಆಸ್ಪತ್ರೆ ಸಿಬ್ಬಂದಿ ವರ್ಗದವರಿಂದ ನಾಗರಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಲಾಯಿತು. ಶಿಬಿರದಲ್ಲಿ ಕೆಲವು ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವುದರಿಂದ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಿ ಮೊಳಕಾಲ್ಮೂರು ಕ್ಷೇತ್ರದ ಹಲವು ಗ್ರಾಮೀಣ ಭಾಗದ ಬಡ ಕುಟುಂಬದ ರೋಗಿಗಳನ್ನು ನಿನ್ನೆ ರಾತ್ರಿ ಕೋನಸಾಗರ ಗ್ರಾಮದಿಂದ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪುತ್ತೂರು: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗಿಂತ ಒಂದು ದಿನವಾದರೂ ಹೆಚ್ಚು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಬೇಕು ಎಂಬ ಜಿದ್ದಿಗೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ನವೆಂಬರ್ ಒಳಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.ಸಿದ್ದರಾಮಯ್ಯ ರಾಜೀನಾಮೆ ನೀಡದಿದ್ದಲ್ಲಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಕುರ್ಚಿಯನ್ನು ಬಲವಂತವಾಗಿ ಎಳೆದುಕೊಳ್ಳುತ್ತಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.ನಳಿನ್ ಕುಮಾರ್ ಕಟೀಲ್ ಅವರ ಪಾಲ್ತಾಡಿಯ ಕುಂಜಾಡಿಯಲ್ಲಿನ ಮನೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು ಅಧಿಕಾರ 50-50 ಅಧಿಕಾರ ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ನಾನು ಸಂಡೂರಿನಲ್ಲಿ ನಡೆದ ಸಂದರ್ಭದಲ್ಲಿಯೇ ಹೇಳಿದ್ದೆ. ಅದೀಗ ನಿಜವಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಆರೋಪದಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಸೇರಿ 3 ಆರೋಪಿಗಳು ಕನಿಷ್ಠ ಒಂದು ವರ್ಷ ಜೈಲಿನಲ್ಲೇ ಇರುವುದು ಖಚಿತವಾಗಿದೆ.ಕಂದಾಯ ಗುಪ್ತಚರ ನಿರ್ದೇ ಶನಾಲಯದ (ಡಿಆರ್‌ಐ) ಅಧಿಕಾರಿಗಳು ಈ ಪ್ರಕರಣದಲ್ಲಿ ರನ್ಯಾ, ತರುಣ್ ಮತ್ತು ಸಾಹಿಲ್ ಸಕಾರಿಯಾ ಜೈನ್‌ನನ್ನು ಕಾಫಿಪೋಸಾ ಕಾಯ್ದೆ ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಅಡಿ ಬಂಧಿಸಿದ್ದರು. ಈ ಬಂಧನವನ್ನು ಕಾಫಿ ಪೋಸಾ ಸಲಹಾ ಮಂಡಳಿ ಅನುಮೋದಿಸಿದೆ. ಹೀಗಾಗಿ ಮೂವರು ಆರೋಪಿಗಳಿಗೆ ಕನಿಷ್ಠ ಒಂದು ವರ್ಷ ಜಾಮೀನು ಸಿಗುವುದಿಲ್ಲ.ಆರೋಪಿಗಳು ಭವಿಷ್ಯದಲ್ಲಿ ಮತ್ತೆ ಕಳ್ಳ ಸಾಗಣೆಯಲ್ಲಿ ತೊಡಗಬಾರದೆಂಬ ಕಾರಣ ದಿಂದ ಡಿಆರ್‌ಐ ಕಾಫಿಪೋಸಾ ಕಾಯ್ದೆ ಜಾರಿಗೊಳಿಸಿತ್ತು.ಈ ಕಾಯ್ದೆ ಏಕೆ ಜಾರಿಗೊಳಿಸಲಾಗಿದೆ ಎಂಬುದಕ್ಕೆ ಪೂರಕವಾಗಿ ದಾಖಲೆಗಳನ್ನು ಸಲಹಾ ಮಂಡ ಳಿಗೆ ಸಲ್ಲಿಸಿದ್ದರು. ಪರಿಶೀಲನೆ ಮಾಡಿರುವಸಲಹಾ ಮಂಡಳಿಯು ಅನುಮೋದಿಸಿದೆ. ಈ ಮೂವರು ಆರೋಪಿಗಳನ್ನು ಡಿಆರ್‌ಐ ಅಧಿಕಾರಿಗಳು ಕಾಫಿಪೋಸಾ ಕಾಯ್ದೆಯಡಿ ಬಂಧಿಸಿರುವುದನ್ನು ಹೀಗಾಗಿ 3 ಆರೋಪಿಗಳು ಕನಿಷ್ಠ ಒಂದು ವರ್ಷ ಜೈಲಿನಲ್ಲೇ ಇರುವುದು…
ಬೆಂಗಳೂರು: ಕರ್ನಾಟಕದ ಸೂಪರ್‌ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವರಣದೀಪ್ ಸುರ್ಜೇವಾಲಾ ಅವರಿಗೆ ಅಭಿನಂದನೆಗಳು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷನಿಖಿಲ್ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಖಾರವಾಗಿ ಪೋಸ್ಟ್ ಮಾಡಿ ಕಾಂಗ್ರೆಸ್‌ನ ಕಾಲೆಳೆದಿದ್ದಾರೆ. ನಮ್ಮ ಚುನಾಯಿತ ಸಿಎಂ ಸರ್ಕಾರ ನಡೆಸಲು ಸುರ್ಜೇವಾಲಾ ಅವರಿಗೆ ಜಿಪಿಎ ನೀಡಿದ್ದಾರೆ ಎಂದು ಟೀಕಿಸಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ಈಗ ಕ್ಷೇತ್ರದ ಅಭಿವೃದ್ಧಿಗೆ ಸುರ್ಜೇವಾಲಾರನ್ನು ಸುತ್ತುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹೊರ ಹೋಗುತ್ತಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್ ಅವರು ಕುರ್ಚಿಗಾಗಿ ಕಾಯುತ್ತಿದ್ದಾರೆ. ಆದರೆ ಸುರ್ಜೇವಾಲಾ ಅವರು ರಾಜ್ಯದಲ್ಲಿ ಆಡಳಿತನಡೆಸುತ್ತಿದ್ದಾರೆ ಎಂದು ಕುಹಕವಾಡಿದ್ದಾರೆ. ಕಾಂಗ್ರೆಸ್ ಪಕ್ಷಕರ್ನಾಟಕವನ್ನು ಕೈಗೊಂಬೆ ರಾಜ್ಯವನ್ನಾಗಿ ಮಾಡಿಕೊಂಡು ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವವನ್ನು ಅಣಕ ಮಾಡುತ್ತಿದೆ ಎಂದು ನಿಖಿಲ್ ವ್ಯಂಗ್ಯವಾಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಯೂಸುಫ್ ಶರೀಫ್ ಅಲಿಯಾಸ್ ‘ಕೆಜಿಎಫ್ ಬಾಬು’ ಅವರ ವಸಂತನಗರ ಮನೆಯಲ್ಲಿ ಭಾರೀ ಹೈಡ್ರಾಮ ನಡೆಯಿತು.ತನಗೆ ಮತ್ತು ಜನರಿಗೆ ತನ್ನ ಮಗನ ಮಾವ ಗುಲಾಂ ಮುಸ್ತಾಫರಿಂದ ಆಗಿರುವ ಮೋಸ, ವಂಚನೆ ಬಗ್ಗೆ ವಿವರಿಸಲು ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿ ಆರಂಭವಾಗುತ್ತಲೇ ಇದಕ್ಕೆ ಅಡ್ಡಿಪಡಿಸಿದ ಬಾಬು ಮಗ ಅಫನಾನ್ ಶರೀಫ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಅಪ್ಪನನ್ನು ಒತ್ತಾಯಿಸಿದರು. ಇದಕ್ಕೆ ಒಪ್ಪದಿದ್ದಾಗ ತಮ್ಮ ತಂದೆ ಹೇಳುತ್ತಿರುವುದೆಲ್ಲ ಸುಳ್ಳು ಎಂದು ಹೇಳಿ ಹೊರನಡೆದರು. ಆಗ ಕೆಜಿಎಫ್ ಬಾಬು ಅವರು ತಮಗೆ ತಮ್ಮ ಪುತ್ರ ಹಾಗೂ ಆತನ ಮಾವನಿಂದ ಜೀವ ಬೆದರಿಕೆ ಇದೆ. ಪೊಲೀಸರು ತಮಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು. ಇದರ ನಡುವೆ ಮನೆ ಹೊರಗೆ ಜಮಾಯಿಸಿದ ಚಿಕ್ಕಪೇಟೆಯ ಹಲವು ನಿವಾಸಿಗಳು ಕೆಜಿಎಫ್ ಬಾಬು ಕಳೆದ ಚುನಾವಣೆ ವೇಳೆ ನಮಗೆ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿ ದೋಸ ಮಾಡಿದ್ದಾರೆ. ಇರುವ ಮನೆಯನ್ನೂ ಕೆಡವಿ ನಮ್ಮನ್ನು ಬೀದಿಗೆ ಬಿಡಲಾಗಿದೆ.…
ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ತನ್ನ ವ್ಯಾಪ್ತಿಯ ಎಲ್ಲ ಸಾರ್ವಜನಿಕ, ಖಾಸಗಿ ವಿಶ್ವ ವಿದ್ಯಾಲಯಗಳು, ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಪದವಿ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದೆ.ಈಗಾಗಲೇ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ ಮಾಡಿದ್ದ ಇಲಾಖೆ ಇದನ್ನು ಇದೀಗ ಪದವಿ, ಪಾಲಿಟೆಕ್ನಿಕ್ ಕಾಲೇಜು ಗಳಿಗೂ ವಿಸ್ತರಿಸಿದೆ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ವ್ಯಸನ, ರ್ರಾಗಿಂಗ್ ಹಾಗೂ ಲೈಂಗಿಕ ದೌರ್ಜನ್ಯ ಸೇರಿ ಇನ್ನಿತರ ಅಕ್ರಮ, ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿ ರುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿಇದರ ನಿಯಂತ್ರಣಕ್ಕೆ ಸಿಸಿಟಿವಿ ಅಥವಕೆ ಕಡ್ಡಾಯಗೊಳಿಸಲಾಗಿದೆ. ವಿವಿಗಳು ಹಾ ಕಾಲೇಜುಗಳ ಪ್ರಾಂಶು ಪಾಲರು ಸಿಸಿಸಿಎ ಅಳವಡಿಕೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಿಸಿಟಿವಿ ಅಳವಡಿಕೆ ಆಗಿರುವ ಕಾಲೇಜುಗಳಲ್ಲಿ ಅವುಗಳ ಕಾರ್ಯನಿರ್ವ ಹಿಸುತ್ತಿರುವ ವಿವರಗಳನ್ನು ಜು.21ರೊಳಗೆ ಮಾಹಿತಿ ಒದಗಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.
Subscribe to Updates
Get the latest creative news from FooBar about art, design and business.