Author: Times of bayaluseeme

ಬೆಂಗಳೂರು: ಮಲ್ಟಿಪ್ಲೆಕ್ಸ್‌ಗಳು ಸೇರಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನಕ್ಕೆ ಏಕರೂಪ ಟಿಕೆಟ್ ದರ ಜಾರಿಗೊಳಿಸುವ ಸಂಬಂಧ ರಾಜ್ಯ ಕರಡು ಅಧಿಸೂಚನೆ ಹೊರಡಿಸಿದೆ.ಮನರಂಜನಾ ತೆರಿಗೆ ಒಳಗೊಂಡಂತೆ ಟಿಕೆಟ್ ದರ ₹200 ಮೀರದಂತೆ ಕರ್ನಾಟಕ ಸಿನಿಮಾಗಳು ನಿಯಮಗಳು 2014ಕ್ಕೆ ತಿದ್ದುಪಡಿ ತಂದಿ ದೆ. ತಿದ್ದುಪಡಿ ಕರಡು ಸಂಬಂಧ ಆಕ್ಷೇ ಪಣೆ ಮತ್ತು ಸಲಹೆಗಳು ಇದ್ದಲ್ಲಿ 15 ದಿನಗೊಳಗೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಬೇಕು.ಒದು ವೇಳೆ ಯಾವುದೇ ಆಕ್ಷೇಪಣೆಗಳು ಕರಡು ಬಾರದಿದ್ದಲ್ಲಿ ತಿದ್ದುಪಡಿ ಅಧಿಸೂಚನೆ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಸರ್ಕಾರ ತಿಳಿಸಿದೆ. ಮಲ್ಟಿಪ್ಲೆಕ್ಸ್ ಸೇರಿ ಕೆಲ ಚಿತ್ರಮಂದಿ ರಗಳಲ್ಲಿ ಟಿಕೆಟ್ ದರ ಅತ್ಯಂತ ದುಬಾರಿ ಯಾಗಿದೆ ಎಂದು ಸಾರ್ವಜನಿಕ ವಲಯ ದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅಧಿವೇ ಶನದಲ್ಲಿ ಸಹ ಈ ಬಗ್ಗೆ ಅನೇಕ ಸದಸ್ಯರು ಚರ್ಚಿಸಿ ಏಕರೂಪದ ದರ ನಿಗದಿಪ ಡಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆ ಕಳೆದ ಬಜೆಟ್‌ನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಚಿತ್ರಮಂ ದಿರಗಳ ಟಿಕೆಟ್…

Read More

ರಾಯಚೂರು: ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ರಾಜ್ಯದಿಂದಲೇ ಅಧಿಕ ಭಕ್ತರು ಆಗಮಿಸುತ್ತಾರೆ. ಅವರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರಡ್ಡಿ ತಿಳಿಸಿದರು. ಮಂತ್ರಾಲಯಕ್ಕೆ ಆಗಮಿಸಿದ ಸಚಿವರು ಗ್ರಾಮದೇವಿ ಮಂಚಾಲಮ್ಮಗೆ ಪೂಜೆ ಸಲ್ಲಿಸಿ, ನಂತರ ಗುರುರಾಯರ ಮೂಲಬೃಂದಾವನದ ದರ್ಶದ ಪಡೆದರು. ಈ ವೇಳೆ, ಮಠದ ಪೀಠಾಧಿಪತಿ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರೊಂದಿಗೆ ಹಲವು ವಿಚಾರಗಳನ್ನು ಚರ್ಚಿಸಿದರು. ಬಳಿಕ, ಶ್ರೀಗಳು ಸಚಿವರಿಗೆ ನೆನಪಿನ ಕಾಣಿಕೆ, ಫಲ-ಮಂತ್ರಾಕ್ಷತೆ ವಿತರಿಸಿ, ಸನ್ಮಾನಿಸಿ, ಆಶೀರ್ವದಿಸಿದರು.

Read More

ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ, ಬಿಜೆಪಿ ಭಿನ್ನರ ದೆಹಲಿ ಭೇಟಿ, ದಾವಣಗೆರೆಯಲ್ಲಿನ ಬಿಜೆಪಿ ಸ್ಥಳೀಯ ನಾಯಕರ ನಡುವಿನ ಬಣ ರಾಜಕೀಯದ ನಡುವೆಯೇ ದಾವಣಗೆರೆಯ ಬಿಜೆಪಿ ಟೀಂ ದೆಹಲಿಗೆ ಭೇಟಿ ನೀಡಿದೆ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದ ಈ ತಂಡದಲ್ಲಿ ದಾವಣಗೆರೆ ಜಿಲ್ಲಾಧ್ಯಕ್ಷ ರಾಜ ಶೇಖರ್ ಸೇರಿ 8 ಮಂದಿಯಿದ್ದಾರೆ. ತಮ್ಮ ದೆಹಲಿ ಭೇಟಿಯ ವೇಳೆ ತಂಡದ ಸದಸ್ಯರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ ದಂತೆ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ. ಭೇಟಿ ವೇಳೆ, ತಂಡದ ಸದಸ್ಯರು ದಾವಣಗೆರೆ ಜಿಲ್ಲೆಯ ಬಿಜೆಪಿ ಗಲಾಟೆ ಸೇರಿ ಹಲವು ವಿಚಾರ ಗಳನ್ನು ಹೈಕಮಾಂಡ್‌ಗೆ ತಿಳಿಸಲಿದ್ದಾರೆ. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನೇ ಮುಂದುವರಿಸಲು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.

Read More

ಚಿತ್ರದುರ್ಗ: ಸರ್ಕಾರಿ ಶಾಲೆಗಳಲ್ಲಿ ಯಾವುದೇ ಕೊರತೆ ಇಲ್ಲದೇ ಸಮವಸ್ತ್ರ, ಶೂ ,ಟೈ ಬೆಲ್ಟ್ ಇವುಗಳನ್ನು ನೀಡುವುದರ ಜೊತೆಗೆ ಸರ್ಕಾರಿಶಾಲೆಗಳನ್ನು ಹೈಟೆಕ್ ಶಾಲೆಗಳನ್ನಾಗಿ ಪರಿವರ್ತಿಸಲು ಹೆಚ್ಚು ಅನುದಾನ ಮಂಜೂರು ಮಾಡಬೇಕು ಮತ್ತು ಸರ್ಕಾರಿ ನೌಕರರಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ ಮಾಡಿಸುವಂತೆ ವಿಧಾನ ಸಭೆಯಲ್ಲಿ ಚರ್ಚಿಸಿ ಕಟ್ಟುನಿಟ್ಟಿನ ಕ್ರಮಕೈಗೊಂಡು ಆದೇಶಿಸಲು ಹಾಗೂ ಕೂಡಲೇ ಒಂದು ವಾರದ ಒಳಗಾಗಿ ಮಕ್ಕಳಿಗೆ ಶೂ ವಿತರಿಸದಿದ್ದರೆ ಸರ್ಕಾರಿ ಶಾಲೆಗಳ ಮುಂದೆಪ್ರತಿಭಟನೆ ಮಾಡಲಾಗುವುದೆಂದು ಕರುನಾಡ ವಿಜಯಸೇನೆ ಜಿಲ್ಲಾ ಘಟಕ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ. ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಬರಿಗಾಲಿನಲ್ಲಿ ಪಾದಯಾತ್ರೆ ಮೂಲಕ ಆಗಮಿಸಿದ ಕರುನಾಡ ವಿಜಯಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು 1 ರಿಂದ 10ನೇ ತರಗತಿಯ ಮಕ್ಕಳಿಗೆ/ವಿದ್ಯಾರ್ಥಿಗಳಿಗೆ ಶಾಲೆ ಪ್ರಾರಂಭವಾಗಿ 2-3 ತಿಂಗಳು ಕಳೆದರೂ ಸರ್ಕಾರದಿಂದ ಶಾಲೆಗಳಿಂದ ಶೂಗಳನ್ನು ವಿತರಿಸಿಲ್ಲ. ಈ ರೀತಿಯ ಅವ್ಯವಸ್ಥೆಗೆ ಶಿಕ್ಷಣ ಸಚಿವರೇ ನೇರ ಹೊಣೆ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತೆ ಇರುವುದಿಲ್ಲ. ನೌಕರರು ಇರುವುದಿಲ್ಲ, ಸರಿಯಾದ ಪ್ರಮಾಣದಲ್ಲಿ ಶಿಕ್ಷಕರು ಇರುವುದಿಲ್ಲ.…

Read More

ಚಿತ್ರದುರ್ಗ : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಕಾಸವರಹಟ್ಟಿ ಕಾರ್ಯ ಕ್ಷೇತ್ರದ ದ್ಯಾಮವ್ವನಹಳ್ಳಿ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಿರ್ಮಲ ಗಿಡ ನೆಟ್ಟು ಮಾತನಾಡಿ ಪರಿಸರ ಸಂರಕ್ಷಣೆ ಬಗ್ಗೆ ಚಿಕ್ಕಂದಿನಲ್ಲಿಯೇ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ.ಗಿಡ,ಮರಗಳ ನಾಶದಿಂದ ಪರಿಸರದಲ್ಲಿ ಅಸಮತೋಲನವುಂಟಾಗಿ ಸಕಾಲಕ್ಕೆ ಮಳೆ ಬೆಳೆಯಾಗುವುದಿಲ್ಲ. ಇದರಿಂದ ಸಕಲಜೀವರಾಶಿಗಳು ಪರಿತಪಿಸಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪರಿಸರಕ್ಕೆ ಹಸಿರು ಕೊಡುಗೆಯನ್ನುನೀಡಬೇಕಿದೆ ಎಂದು ಹೇಳಿದರು.ಒಕ್ಕೂಟದ ಅಧ್ಯಕ್ಷೆ ಅಶ್ವಿನಿ, ಮುಖ್ಯೋಪಾಧ್ಯಾಯ ಮಹಾಂತೇಶ್, ಹರೀಶ್, ಕೃಷಿ ಮೇಲ್ವಿಚಾರಕ ಸುರೇಶ್ ಹಾಗೂ ಶಿಕ್ಷಕರು ಈಸಂದರ್ಭದಲ್ಲಿಹಾಜರಿದ್ದರು.

Read More

ಚಿತ್ರದುರ್ಗ: ಸಚಿವ ಪ್ರಿಯಾಂಕ ಖರ್ಗೆ ಮತ್ತು ಶಾಸಕ ಅಲ್ಲಪ್ರಭು ಪಾಟೀಲ್ ಆಪ್ತ, ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿಡ್ರಗ್ಸ್ ಸಾಗಾಣಿಕೆ ಕೇಸ್‍ನಲ್ಲಿ ಮಾದಕ ವಸ್ತುಗಳು ಮತ್ತು ನಿಷೇಧಿತ ಎನ್‍ರೆಕ್ಸ್ ಬಾಟಲ್‍ಗಳನ್ನು ಸಾಗಿಸುತ್ತಿದ್ದಾಗ ಮುಂಬೈಪೊಲೀಸರಿಂದ ಬಂಧನವಾಗಿದ್ದು, ಇದರ ಹಿಂದೆ ರಾಜ್ಯದ ಸಚಿವರಾದ ಪ್ರಿಯಾಂಕ್ ಖರ್ಗೆ ಇರುವ ಅನುಮಾನ ನಿರ್ಮಾಣವಾಗುತ್ತಿದೆಈ ಹಿನ್ನಲೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕೆಂದು ಚಿತ್ರದುರ್ಗ ಜಿಲ್ಲಾ ಭಾರತೀಯಜನತಾ ಪಾರ್ಟಿಯ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಕರ್ನಾಟಕದಲ್ಲಿ ಇಂದು ವ್ಯಾಪಕವಾಗಿ ಡ್ರಗ್ಸ್ ಮಾಫಿಯಾ ಶಾಲಾ- ಕಾಲೇಜುಗಳಲ್ಲಿ, ಬೀಡಾ ಅಂಗಡಿಗಳಲ್ಲಿ, ಪಬ್‍ಗಳಲ್ಲಿ ನಡೆಯುತ್ತಿದೆ, ಮಲ್ಲಿನಾಥ್ ಸೊಂತ್ ಎಂಬವರ ಮಗನೂ ಡ್ರಗ್ಸ್ ಸಾಗಾಟದಲ್ಲಿಭಾಗಿಯಾಗಿದ್ದು, ಅವನೂ ಸಹ ಕಾಂಗ್ರೆಸ್ ಕಾರ್ಯಕರ್ತ ನಾಗಿರುತ್ತಾನೆ. ಅವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಆಪ್ತನಾಗಿದ್ದು,ಆದರೆ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಿಪಬ್ಲಿಕ್ ಆಫ್ ಕಲಬುರ್ಗಿಯಲ್ಲಿ ಪೊಲೀಸ್ ರಕ್ಷಣೆಯ ಕಣ್ಣಾವಲಿನಲ್ಲಿ ಡ್ರಗ್ಸ್ಅವ್ಯವಹಾರ ನಡೆಯುತ್ತಿದೆ. ಕಲಬುರ್ಗಿಯಲ್ಲಿ ಎರಡೂರು ತಿಂಗಳ ಹಿಂದೆ ಡ್ರಗ್ಸ್…

Read More

ಚಿತ್ರದುರ್ಗ: ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿಯವರ 16ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 27ನೇ ಲಾಂಛನದೀಕ್ಷಾ ಮಹೋತ್ಸವ, 40ನೇ ವಸಂತೋತ್ಸವದ ನಿಮಿತ್ತ ಪ್ರತಿಭಾ ಪುರಸ್ಕಾರ, ವಧೂ-ವರರ ಸಮಾವೇಶ, ರಕ್ತದಾನ ಶಿಬಿರವನ್ನುಜು.18ರಂದು ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಭೋವಿ ಸಂಘದ ಅಧ್ಯಕ್ಷಚಿಕ್ಕಂದವಾಡಿ ತಿಪ್ಪೇಸ್ವಾಮಿ ಹೇಳಿದರು.ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರಅವಿರತ ಶ್ರಮದಿಂದ ಭೋವಿ ಗುರುಪೀಠ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, ದೀಕ್ಷಾ ಮಹೋತ್ಸವ ಹಾಗೂ ಪಟ್ಟಾಭಿಷೇಕಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್, ಮಾಜಿ ಸಚಿವರಾದಅರವಿಂದ ಲಿಂಬಾವಳಿ, ವಿಧಾನಪರಿಷತ್ತಿನ ವಿರೋಧ ಪಕ್ಷದ ಉಪನಾಯಕರಾದ ಸುನೀಲ್ ವಲ್ಯಾಪುರ, ಹೊಳಲ್ಕೆರೆ ಶಾಸಕರಾದಡಾ.ಎಂ.ಚಂದ್ರಪ್ಪ, ಬೆಂಗಳೂರಿನ ಸಿ.ವಿ.ರಾಮನ್ ನಗರದ ಶಾಸಕ ಎಸ್.ರಘು, ಲಿಂಗಸೂರು ಶಾಸಕರಾದ ಮಾನಪ್ಪ ವಜ್ಜಲ್,ಬೆಂಗಳೂರು ಪುಲಿಕೇಶಿ ನಗರ ಶಾಸಕ ಎ.ಸಿ.ಶ್ರೀನಿವಾಸ್, ಪಾವಗಡ ಶಾಸಕ ವೆಂಕಟೇಶ್ ವಿ.,…

Read More

ಚಿತ್ರದುರ್ಗ :ರೋಟರಿ ಸಂಸ್ಕಾರ ಭಾರತಿ, ಚಿತ್ರದುರ್ಗ ಜಿಲ್ಲಾ ಸಮಿತಿ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್ ವೀಲ್ ಕ್ಲಬ್ ಚಿತ್ರದುರ್ಗಫೋರ್ಟ್ ಹಿಮಂತ ಮಹಿಳಾ ವಿಕಾಸ ಸಂಸ್ಥೆ ಮತ್ತು ವಿಶ್ವ ಮಾನವ ಸಂಯುಕ್ತ ಪದವಿ ಪೂರ್ವ ಕಾಲೇಜು, ಸೀಬಾರ-ಗುತ್ತಿನಾಡುಇವರ ಸಹಯೋಗದೊಂದಿಗೆ ಗುರು ಪೂರ್ಣಿಮೆ ಅಂಗವಾಗಿ ಚಿತ್ರದುರ್ಗ ತಾಲ್ಲೂಕಿನ ಸೀಬಾರ-ಗುತ್ತಿನಾಡು ಗ್ರಾಮದಲ್ಲಿನ ವಿಶ್ವ ಮಾನವ ಸಂಯುಕ್ತ ಪದವಿ ಪೂರ್ವಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಯುವ ವಾಗ್ನಿ, ಲೇಖಕರಾದ ಕು. ಹಾರಿಕ ಮಂಜುನಾಥ ಉಪನ್ಯಾಸ ನೀಡಲಿದ್ದಾರೆ. ಇದರೊಂದಿಗೆ ಶಿಕ್ಷಕ ಹಾಗೂಕಲಾಗುರುಗಳಾದ ಕೆ ಪಿ ಭೂತಯ್ಯನವರು, (ಬಯಲಾಟ) ಜಿ ಎಸ್ ಉಜ್ಜನಪ್ಪ ನವರು (ಸಾಹಿತ್ಯ) ಕೆ.ಎನ್.ಕೀರ್ತಿ ನಂಜುಂಡಸ್ವಾಮಿ(ಶಿಲ್ಪ) ಜೆ ಶಿವಲಿಂಗಪ್ಪನವರು (ಜಾನಪದ) ಎಂ ನೀಲಕಂಠದೇವರು (ಶಿಕ್ಷಣ) ಸನ್ಮಾನ ನಡೆಯಲಿದೆ ಎಂದು ಸಂಘಟಕರುತಿಳಿಸಿದ್ದಾರೆ.

Read More

ಚಿತ್ರದುರ್ಗ: ಗಾಣಿಗ ಸಮಾಜಕ್ಕೆ ನಾಗರೀಕ ಸೌಲಭ್ಯ ನಿವೇಶನ ಮಂಜೂರು ಮಾಡಿಸಿ ಕೊಡುವಂತೆ ಗಾಣಿಗ ಸಮುದಾಯದ ತಾಲ್ಲೂಕುಅಧ್ಯಕ್ಷರಾದ ಎ.ಆರ್. ತಿಪೇಸ್ವಾಮಿ ಗಾಣಿಗ ಸಮುದಾಯದ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಜಿಲ್ಲಾಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಸಂಸದರಾದ ಗೋವಿಂದ ಕಾರಜೋಳ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ನವೀನ್‍ರವರಿಗೆ ಮನವಿ ಮಾಡಿದರು.ಗಾಣಿಗ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯಂತ ಹಿಂದುಳಿದ ಸಮಾಜವುಹಾಗೂ ಅಲ್ಪಸಂಖ್ಯಾತ ಸಮಾಜವಾಗಿದ್ದು, ಗಾಣಿಗ ಸಮಾಜದ ಸರ್ವಾಂಗೀಣ ಏಳಿಗೆಗೆ ಮತ್ತು ಸರ್ವತೋಮುಖ ಅಭಿವೃದ್ಧಿದೃಷ್ಟಿಯಿಂದ ಆದ್ಯತೆ ನೀಡಿ ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ಬರುವ ಶಂಕರ್‍ಲಾಲ್ ಲೇಔಟ್, ಕೆಳಗೋಟೆ ಗ್ರಾಮದ ರಿ.ಸ.ನಂ;64/1, 2, 3 & amp; 4 ರ ಚಿತ್ರದುರ್ಗ ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದಿತವಾಗಿ ವಸತಿ ವಿನ್ಯಾಸದಲ್ಲಿನ ನಾಗರೀಕಸೌಲಭ್ಯ ನಿವೇಶನವು ಚಿತ್ರದುರ್ಗ ನಗರಸಭೆ ವಶದಲ್ಲಿರುತ್ತದೆ. ಸದರಿ ನಾಗರೀಕ ಸೌಲಭ್ಯ ನಿವೇಶನವನ್ನಾಗಲಿ ಅಥವಾ ಚಿತ್ರದುರ್ಗನಗರದ ಆಯಕಟ್ಟಿನ ಪ್ರದೇಶದಲ್ಲಾಗಲಿ ಅಥವಾ ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಯಾವುದಾದರೂ ಖಾಲಿ ನಿವೇಶನವನ್ನುಗಾಣಿಗ ಸಮಾಜಕ್ಕೆ ಮಂಜೂರು ಮಾಡಿಸಿಕೊಟ್ಟು…

Read More

ಬೆಂಗಳೂರು: ನವೆಂಬರ್ ತಿಂಗಳಲ್ಲಿ ಸಚಿವ ಸಂಪುಟ ಬದಲಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ ಅನ್ನೋದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಈಗಾಗಲೇ ರಾಜ್ಯ ಉಸ್ತುವಾರಿ ಸುರ್ಜೆವಾಲಾ ಶಾಸಕರ, ಸಚಿವರ ಮೌಲ್ಯಮಾಪನ ಮಾಡಿದ್ದು 12 ಸಚಿವರನ್ನು ಕೆಳಗಿಳಿಸಿ ಹೊಸಬರಿಗೆ ಅವಕಾಶ ನೀಡಬೇಕು ಅನ್ನೋದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ.ಹಾಗಾದ್ರೆ ಯಾರೆಲ್ಲ ಸಚಿವ ಸ್ಥಾನ ಕಳೆದುಕೊಳ್ತಾರೆ, ಯಾರೆಲ್ಲ ಸಚಿವ ಸ್ಥಾನ ಪಡೆದುಕೊಳ್ತಾರೆ ಅನ್ನೋದನ್ನು ನೋಡೋದಾದರೆ. ಸಚಿವ ಸ್ಥಾನದಿಂದ ಕೋಕ್ ಪಡೆಯುವವರು ಕೆ.ಎನ್ ರಾಜಣ್ಣ ಹೆಚ್.ಸಿ ಮಹದೇವಪ್ಪ ಡಿ.ಸುಧಾಕರ್ ಮಧು ಬಂಗಾರಪ್ಪ ಎಂ.ಸಿ ಸುಧಾಕರ್ ಶರಣಪ್ರಕಾಶ್ ಪಾಟೀಲ್ ದಿನೇಶ್ ಗುಂಡೂರಾವ್ ಎಸ್.ಎಸ್ ಮಲ್ಲಿಕಾರ್ಜುನ ಆರ್. ಬಿ ತಿಮ್ಮಾಪುರ ಮುನಿಯಪ್ಪ ರಹೀಮ್ ಖಾನ್ ಕೆ.ವೆಂಕಟೇಶ್ ಇನ್ನು ಸಚಿವ ಯಾರಿಗೆ ಕೊಡಬಹುದು ಅನ್ನೋದನ್ನ ನೋಡುವುದಾದರೆ ಟಿ.ರಘುಮೂರ್ತ ಪುಟ್ಟರಂಗಶೆಟ್ಟಿ ಶರತ್ ಬಚ್ಚೇಗೌಡ ಟಿ. ಬಿ ಜಯಚಂದ್ರ ಬೇಳೂರು ಗೋಪಾಲಕೃಷ್ಣ ಬಿ.ಕೆ ಹರಿಪ್ರಸಾದ್ ಲಕ್ಷ್ಮಣ ಸವದಿ ನರೇಂದ್ರಸ್ವಾಮಿ ಮಾಗಡಿ ಬಾಲಕೃಷ್ಣ ಆರ್ ವಿ ದೇಶಪಾಂಡೆ ತನ್ವೀರ್ ಸೇಠ್ ರೂಪವತಿ ಇಷ್ಟು ಮಂದಿಗೆ ಸಚಿವ ಸ್ಥಾನ…

Read More