Author: Times of bayaluseeme
ಧೂಮಪಾನ ತ್ಯಜಿಸಿ: ಧೂಮಪಾನವು ಶ್ವಾಸಕೋಶಗಳಿಗೆ ಹಾನಿಕಾರಕವಾಗಿದೆ ಮತ್ತು ಶ್ವಾಸಕೋಶದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ, ಆದ್ದರಿಂದ ಧೂಮಪಾನವನ್ನು ತ್ಯಜಿಸುವುದು ಮುಖ್ಯ ಮನೆಯಲ್ಲಿ ಸ್ವಚ್ಛತೆ ಕಾಪಾಡಿ: ಧೂಳು, ಅಚ್ಚು, ಮತ್ತು ಇತರ ಮಾಲಿನ್ಯಕಾರಕಗಳನ್ನು ಮನೆಯಿಂದ ದೂರವಿಡಿ. ಸಾಧ್ಯವಾದರೆ, ಮನೆಯಲ್ಲಿ ಗಾಳಿಯಾಡುವಂತೆ ನೋಡಿಕೊಳ್ಳಿ. ವ್ಯಾಯಾಮ ಮಾಡಿ: ನಿಯಮಿತ ವ್ಯಾಯಾಮವು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಅವುಗಳನ್ನು ಬಲಪಡಿಸುತ್ತದೆ, ಆರೋಗ್ಯಕರ ಆಹಾರ ಸೇವಿಸಿ: ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸಿ. ಇದು ನಿಮ್ಮ ಶ್ವಾಸಕೋಶಗಳ ಆರೋಗ್ಯಕ್ಕೆ ಅವಶ್ಯಕ. ವೈದ್ಯರನ್ನು ಸಂಪರ್ಕಿಸಿ: ನಿಮಗೆ ಶ್ವಾಸಕೋಶದ ಯಾವುದೇ ಸಮಸ್ಯೆಗಳಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಸಲಹೆ ಪಡೆಯಿರಿ ಆರೋಗ್ಯಕರ ವಾತಾವರಣ: ಸಾಧ್ಯವಾದರೆ, ವಾಯುಮಾಲಿನ್ಯ ಕಡಿಮೆ ಇರುವ ಸ್ಥಳಗಳಲ್ಲಿ ಇರಿ, ಮತ್ತು ಮನೆಯಲ್ಲಿ ಧೂಳು ಮತ್ತು ಮಾಲಿನ್ಯವನ್ನು ನಿಯಂತ್ರಿಸಿ ಔಷಧಿಗಳನ್ನು ತೆಗೆದುಕೊಳ್ಳಿ: ನಿಮಗೆ ಅಸ್ತಮಾ ಅಥವಾ ಇತರ ಶ್ವಾಸಕೋಶದ ಸಮಸ್ಯೆಗಳಿದ್ದರೆ, ನಿಮ್ಮ ವೈದ್ಯರು ಶಿಫಾರಸು ಮಾಡಿದ ಔಷಧಿಗಳನ್ನು ತಪ್ಪದೇ ತೆಗೆದುಕೊಳ್ಳಿ. ಆಳವಾದ ಉಸಿರಾಟದ ವ್ಯಾಯಾಮಗಳು: ಆಳವಾದ…
ಚಿತ್ರದುರ್ಗ: ಮೇದೆಹಳ್ಳಿ ಗ್ರಾಮಕ್ಕೆ ಕಳ್ಳರ ಗ್ಯಾಂಗ್ ಎಂಟ್ರಿ ಕೊಟ್ಟಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.ಮಂಗಳವಾರ ಬೆಳಗಿನ ಜಾವ 5.17 ರ ಸಮಯದಲ್ಲಿ ಗ್ರಾಮಕ್ಕೆ ಕಳ್ಳರ ಗ್ಯಾಂಗ್ ಎಂಟ್ರಿ ಕೊಟ್ಟಿದ್ದಾರೆ. ಐದು ಮಂದಿ ಕಳ್ಳರು ಗ್ರಾಮಸ್ಥರನ್ನು ಕಂಡು ಸ್ಥಳದಿಂದ ಕಾಲು ಕಿತ್ತು ಓಡಿದ್ದಾರೆ. ಕೈನಲ್ಲಿ ಮಚ್ಚು ಹಿಡಿದ ಕಳ್ಳರು ಕಳ್ಳತನಕ್ಕೆ ಹೊಂಚು ಹಾಕಿ ಓಡಾಟ ನಡೆಸಿದ್ದು ಈ ವೇಳೆ ಕೆಲ ಗ್ರಾಮಸ್ಥರು ಕಳ್ಳರ ಚಲ ಚಲನವಲನವನ್ನ ಗಮನಿಸಿದರು, ಮನೆಯ ಲೈಟ್ಗಳನ್ನ ಆನ್ ಮಾಡಿದ್ ತಕ್ಷಣವೇ ಕಳ್ಳರು ಓಡಿ ಹೋಗಿದ್ದು ಈ ಒಂದು ದೃಶ್ಯಗಳು ಅಲ್ಲೆ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಕಳ್ಳರ ಎಂಟ್ರಿಯಿಂದಾಗಿ ಗ್ರಾಮಸ್ಥರು ಭಯದಲ್ಲಿ ವಾಸಿಸುವಂಥಾಗಿದೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಗ್ರಾಮಕ್ಕೆ ಬಂದ ಚಿತ್ರದುರ್ಗದ ಗ್ರಾಮಾಂತರ ಠಾಣಾ ಪೊಲೀಸರು ಸಿಸಿ ಟಿವಿ ಪರಿಶೀಲನೆ ನಡೆಸಿದ್ದು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಚಿತ್ರದುರ್ಗ : ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಕೆ.ಪ್ರಾಣೇಶ್, ಗೌರವಾಧ್ಯಕ್ಷರಾಗಿ ಸದಾಶಿವಪ್ಪ, ಉಪಾಧ್ಯಕ್ಷರಾಗಿ ಇರ್ಫಾನ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಶ್ರೀನಿವಾಸ್, ಖಜಾಂಚಿಯಾಗಿ ಉಮೇಶ್ ಎಲ್. ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಆಯ್ಕಯಾದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ಚಿತ್ರದುರ್ಗ : ಚಳ್ಳಕೆರೆ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ನಾಲ್ಕನೆ ವಾರ್ಡ್ ಸದಸ್ಯೆ ಕಾಂಗ್ರೆಸ್‍ನ ಶಿಲ್ಪ ಮುರಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ವೀರಶೈವ ಲಿಂಗಾಯಿತ ಯುವ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಎಂ.ಮಂಜುನಾಥ್, ಚೋಳಗಟ್ಟ ಗ್ರಾಮ ಪಂಚಾಯಿತಿ ಸದಸ್ಯತಿಪ್ಪೇಸ್ವಾಮಿ, ಪಂಚಮಸಾಲಿ ಜಿಲ್ಲಾಧ್ಯಕ್ಷ ಗಂಗಾಧರಪ್ಪ ಮತ್ತು ಜಿಮ್ಮಿ ಅಣ್ಣ ಬದ್ರಿಬಾಬು ಇವರುಗಳು ನೂತನ ಅಧ್ಯಕ್ಷೆ ಶಿಲ್ಪಮುರಳಿರವರಿಗೆ ಹನ್ನೆರಡನೆ ಶತಮಾನದ ಸಮಾನತೆಯ ಹರಿಕಾರ ಕಾಯಕಯೋಗಿ ಬಸವಣ್ಣನವರ ಫೋಟೋ ನೀಡಿ ಶುಭಹಾರೈಸಿದರು.
ಹೊಳಲ್ಕೆರೆ : ಚುನಾವಣೆಗೆ ಇನ್ನು ಮೂರು ವರ್ಷಗಳ ಸಮಯವಿದೆ. ನಾನು ಮತ ಕೇಳಲು ಬಂದಿಲ್ಲ. ನಿಮ್ಮೆಲ್ಲರ ಋಣ ತೀರಿಸಿ ನೀವುಗಳು ನನಗೆ ಮತ ನೀಡಿ ಗೆಲ್ಲಿಸಿದ್ದಕ್ಕೆ ಬೆಲೆ ಕೊಡಲು ಬಂದಿದ್ದೇನೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು. ತಾಲ್ಲೂಕಿನ ಕಲ್ಲವ್ವನಾಗತಿಹಳ್ಳಿ ಗ್ರಾಮದಲ್ಲಿ 3.50 ಕೋಟಿ ರೂ.ವೆಚ್ಚೆದಲ್ಲಿ ಎರಡು ನೂತನ ಚೆಕ್‍ಡ್ಯಾಂ ಹಾಗೂ ಸಿ.ಸಿ.ರಸ್ತೆ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು ಹದಿನೈದು ವರ್ಷದ ಕೆಳೆಗೆ ಡಾಂಬರ್ ರಸ್ತೆ ಮಾಡಿಸಿದ್ದೆ. ಇದುವರೆವಿಗೂ ಒಂದು ಕಲ್ಲು ಕೂಡ ಕಿತ್ತಿಲ್ಲ. ಅಷ್ಟು ಗಟ್ಟಿಮುಟ್ಟಾಗಿದೆ.ಚೆಕ್‍ಡ್ಯಾಂನಲ್ಲಿ ನೀರು ತುಂಬಿದರೆ ಸುತ್ತಮುತ್ತಲಿನ ಬೋರ್‍ವೆಲ್‍ಗಳಲ್ಲಿ ನೀರು ಚಿಮ್ಮುವುದರಿಂದ ರೈತರಿಗೆ ಅನುಕೂಲವಾಗುತ್ತದೆ.ಜಗಳೂರು ತಾಲ್ಲೂಕಿನಿಂದ ಹಿಡಿದು ತರಿಕೆರೆವರೆಗೂ ನನ್ನ ಕ್ಷೇತ್ರ ವ್ಯಾಪಿಸಿದೆ. 493 ಹಳ್ಳಿಗಳಲ್ಲಿ ಯಾರು ಏನೆ ಕೇಳಲಿ ಬಿಡಲಿ ಎಲ್ಲಿಯಾವ ಕೆಲಸ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆಂಬ ಆಲೋಚನೆಯಿಟ್ಟುಕೊಂಡು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಹೇಳಿದರು. ತಾಲ್ಲೂಕಿನಾದ್ಯಂತ ಎಲ್ಲೆಡೆ ಗುಣಮಟ್ಟದ ಸಿ.ಸಿ.ರಸ್ತೆ, ಕೆರೆ ಕಟ್ಟೆಗಳಿಗೆ ನೀರು ತುಂಬಿಸುವುದು, ಚೆಕ್‍ಡ್ಯಾಂ ನಿರ್ಮಾಣ, ಬ್ರಿಟೀಷರಕಾಲದ…
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ʻಉದ್ಯೋಗ ಆಧರಿತ ಪ್ರೋತ್ಸಾಹಧನʼ (ಇಎಲ್ಐ) ಯೋಜನೆಗೆ ಅನುಮೋದನೆ ನೀಡಿದೆ. ಉದ್ಯೋಗ ಸೃಷ್ಟಿ, ಎಲ್ಲ ವಲಯಗಳಲ್ಲಿ ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. 99,446 ಕೋಟಿ ರೂ.ಗಳ ಅನುದಾನದೊಂದಿಗೆ, ʻಇಎಲ್ಐʼ ಯೋಜನೆಯು 2 ವರ್ಷಗಳ ಅವಧಿಯಲ್ಲಿ ದೇಶದಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಪೈಕಿ 1.92 ಕೋಟಿ ಫಲಾನುಭವಿಗಳು ಮೊದಲ ಬಾರಿಗೆ ಉದ್ಯೋಗ ಪಡೆಯಲಿದ್ದಾರೆ.ಈ ಯೋಜನೆಯು ಎರಡು ಭಾಗಗಳನ್ನು ಒಳಗೊಂಡಿದ್ದು, ʻಭಾಗ-ಎʼ ಮೊದಲ ಬಾರಿಗೆ ಕೆಲಸ ಮಾಡುವವರ ಮೇಲೆ ಗಮನ ಕೇಂದ್ರೀಕರಿಸಿದರೆ ʻಭಾಗ-ಬಿʼ ಉದ್ಯೋಗದಾತರ ಮೇಲೆ ಗಮನ ಕೇಂದ್ರೀಕರಿಸಿದೆ: ಭಾಗ ಎ: ಮೊದಲ ಬಾರಿಯ ಉದ್ಯೋಗಿಗಳಿಗೆ ಪ್ರೋತ್ಸಾಹ: ಈ ಭಾಗವು ʻಇಪಿಎಫ್ಒʼ ನಲ್ಲಿ ನೋಂದಾಯಿತರಾದ ಮೊದಲ ಬಾರಿಯ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದೆ. ಇದರ ಅಡಿಯಲ್ಲಿ ಗರಿಷ್ಠ 15,000 ರೂ.ಗಳವರೆಗೆ ಒಂದು ತಿಂಗಳ ಇಪಿಎಫ್ ವೇತನವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ.ಮೊದಲ…
ಮೊಳಕಾಲ್ಮುರು: ನನಗೆ ಒಂದು ಊರಲ್ಲ ಎಷ್ಟು ಊರುಗಳನ್ನು ನೋಡಿದ್ದೇನೆ. ನಾನು ರಿಮೋಟ್ ಇದ್ದಂಗೆ ಕುಂತಲ್ಲೇ ಅಧಿಕಾರಿಗಳನ್ನು ಆಫ್ ,ಅನ್ ಮಾಡ್ತೀನಿ ಎಂದು ಮೊಳಕಾಲ್ಮುರು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ರು. ತಳಕು ಹೋಬಳಿಯಲ್ಲಿ ಸುಮಾರು 8 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರೆವೇರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕುಂತುಕೊಂಡು ಕೆಲಸ ಮಾಡೋ ರಿಮೋಟ್ ಇದ್ದಂಗೆ ನಾನು. ಟಿವಿ ಅಲ್ಲ. ನಾನು ಪ್ರಪಂಚ ಸುತ್ತಿದ ವೀರ ನಾನು. ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅಧಿಕಾರಿಗಳು ಕ್ಷೇತ್ರದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಬೇಡರೆಡ್ಡಿಹಳ್ಳಿ ಗ್ರಾಮದ ರಸ್ತೆಯು ಗೌರಸಮುದ್ರ ಮತ್ತು ಕೊಂಡ್ಲಹಳ್ಳಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕಳೆದ ವರ್ಷ ಸುರಿದ ಭಾರಿ ಮಳೆಗೆ ಹಲವು ರಸ್ತೆಗಳು ಹಾಳಾಗಿವೆ. ಆದ್ದರಿಂದ ಸುಮಾರು8 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದಾಸರೆಡ್ಡಿ, ಸೂರನಾಯಕ, ಪ್ರಭುಸ್ವಾಮಿ, ಬಂಡೆ ಕಪಿಲೆ ಓಬಣ್ಣ, ತಳಕು ಮತ್ತು ನಾಯಕನಹಟ್ಟಿ…
ಬೆಂಗಳೂರು, ಜು.02: ಪಕ್ಷದಲ್ಲಿ ಎಲ್ಲಿಯೂ ಅಸಮಾಧಾನವಿಲ್ಲ. ಪಕ್ಷ ಸಂಘಟನೆ ಸೇರಿದಂತೆ ಪಕ್ಷದ ಹಾಗುಹೋಗುಗಳನ್ನು ಗಮನಿಸಲು ರಣದೀಪ್ ಸುರ್ಜೇವಾಲ ಅವರು ಭೇಟಿ ನೀಡಿದ್ದಾರೆ”ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರ ಎದುರು ಶಾಸಕರು ಅಸಮಾಧಾನ ಹೇಳಿಕೊಂಡಿದ್ದಾರೆ ಎಂದು ಕೇಳಿದಾಗ, “ಈಗಿನಿಂದಲೇ ಚುನಾವಣೆಗೆ ಹೇಗೆ ತಯಾರಿ ನಡೆಸಬೇಕು ಎಂಬುದು ಸೇರಿದಂತೆ, ಜವಾಬ್ದಾರಿಗಳ ನಿರ್ವಹಣೆ ಹೇಗೆ ಮಾಡಬೇಕು ಎಂದು ಚರ್ಚೆ ನಡೆಸಲು, ಜವಾಬ್ದಾರಿ ವಹಿಸಲು ಸುರ್ಜೆವಾಲ ಅವರು ಬಂದಿದ್ದಾರೆ” ಎಂದರು. ಶಾಸಕ ಇಕ್ಬಾಲ್ ಹುಸೇನ್ ಗೆ ನೋಟಿಸ್ ನೀಡಿರುವ ಬಗ್ಗೆ ಕೇಳಿದಾಗ, “ಪಕ್ಷದಲ್ಲಿ ಶಿಸ್ತು ಮುಖ್ಯ. ಅವರಿಗೂ ನೋಟಿಸ್ ನೀಡುವೆ, ಬೇರೆಯವರಿಗೂ ನೋಟಿಸ್ ನೀಡಬೇಕಾಗುತ್ತದೆ. ನನ್ನ ಹೆಸರು ಹೇಳಿ, ನನ್ನನ್ನು ಸಿಎಂ ಮಾಡಿ ಎಂದು ಹೇಳುವ ಅವಶ್ಯಕತೆಯಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಇರುವಾಗ ಬೇರೆ ಹೆಸರು ಏಕೆ?” ಎಂದರು. ನೀವು ಪಕ್ಷ ಕಟ್ಟಲು ಕಷ್ಟಪಟ್ಟಿದ್ದೀರಿ…
ಸಣ್ಣ ವಯಸ್ಸಿನ ಯುವಕರು ಹೃದ್ರೋಗದ ಅಪಾಯಗಳಿಗೆ ತುತ್ತಾಗುತ್ತಿರುವುದು ಆಘಾತಕಾರಿ ಸಂಗತಿಯೇ ಸರಿ. ದೇಹದ ಪ್ರಮುಖ ಭಾಗಗಳಲ್ಲಿ ನಮ್ಮ ಹೃದಯವು ಒಂದಾಗಿದೆ. ಹೃದಯದ ಆರೋಗ್ಯದ ಬಗ್ಗೆ ವಿಶೇಷವಾಗಿ ನಾವು ಕಾಳಜಿ ವಹಿಸಬೇಕು. ಇತ್ತೀಚಿನ ಅನಾರೋಗ್ಯಕರ ಜೀವನಶೈಲಿಯು ಕೂಡ ಹೃದಯದ ಸಮಸ್ಯೆಗಳಿಗೆ ಕಾರಣವಾಗಿದೆ. ಧೂಮಪಾನ, ಮದ್ಯಪಾನ, ಅಪೌಷ್ಟಿಕ ಆಹಾರ, ಕೊಬ್ಬಿನಿಂದ ಕೂಡಿದ ತಿನಿಸುಗಳು, ದೈಹಿಕ ದಂಡನೆಯ ಕೊರತೆ, ಒತ್ತಡ ಇವೆಲ್ಲವೂ ಹೃದಯಕ್ಕೆ ಅಪಾಯವನ್ನು ಹೆಚ್ಚಿಸುತ್ತದೆ. ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಲು ಕೆಲವು ಸೂಪರ್ ಫುಡ್‌ಗಳನ್ನು ನೀವು ಸೇವಿಸಬೇಕು. ಇಲ್ಲಿವೆ ಆ ಪೌಷ್ಟಿಕ ಆಹಾರಗಳ. ಹೃದಯದ ಆರೋಗ್ಯ ಏಕೆ ಕಾಪಾಡಬೇಕು ಗೊತ್ತಾ..? ಹೃದಯವು ದೇಹದಾದ್ಯಂತ ಆಮ್ಲಜನಕಯುಕ್ತ ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡುತ್ತದೆ. ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಗಟ್ಟಲು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದು ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡುವ ಸಾಮರ್ಥ್ಯವಿರುವ ಬಲವಾದ ಹೃದಯ ಸ್ನಾಯುಗಳನ್ನು ಹೊಂದಿದೆ. ಸೂಕ್ತವಾದ ರಕ್ತದ ಹರಿವನ್ನು ಉತ್ತೇಜಿಸುವುದಲ್ಲದೆ, ಸಾಮಾನ್ಯ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಸಾಮಾನ್ಯ ವ್ಯಾಪ್ತಿಯಲ್ಲಿ ನಿರ್ವಹಿಸುತ್ತದೆ. ಇಂತಹ…
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನೂರು ಶಾಸಕರು ಸಿಎಂ ಬದಲಾವಣೆ ಬಯಸಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನು ಕೆಳಗಿಳಿಸಿ ಡಿ.ಕೆ ಶಿವಕುಮಾರ್ ಸಿಎಂ ಮಾಡಬೇಕು ಎಂದು ರಾಮನಗರ ಶಾಸಕರ ಹೆಚ್. ಎ ಇಕ್ಬಾಲ್ ಹುಸೇನ್ ನೀಡಿದ್ದ ಹೇಳಿಕೆಗೆ ಸಮಜಾಯಿಸಿ ನೀಡುವಂತೆ ಈಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೋಟಿಸ್ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಸಿಎಂ ಬದಲಾಗಬೇಕು. ಸಿದ್ದರಾಮಯ್ಯ ಇಳಿಸಿ ಡಿಕೆಶಿಯನ್ನ ಸಿಎಂ ಮಾಡಬೇಕು ಎನ್ನುವುದು 100 ಶಾಸಕರ ಆಸೆ. ಈಗ ಸಿಎಂ ಬದಲಾವಣೆ ಮಾಡದಿದ್ದರೆ 2028ಕ್ಕೆ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಪದೇ ಪದೇ ಸಿಎಂ ಬದಲಾವಣೆ ಹೇಳಿಕೆ ನೀಡಿ ಪಕ್ಷದಲ್ಲಿ ಗೊಂದಲ ಉಂಟು ಮಾಡಿದ್ರೂ. ಹೇಳಿಕೆ ನೀಡಿದ ಬಳಿಕ ಡಿಕೆಶಿ ಇಕ್ಬಾಲ್ ಹುಸೇನ್ ಗೆ ನೋಟಿಸ್ ನೀಡುವುದಾಗಿ ಇಂದು ಹೇಳಿದ್ದರು. ಹೇಳಿದಂತೆಯೇ ಇಂದು ಶಾಸಕ ಇಕ್ಬಾಲ್ ಹುಸೇನ್ ಗೆ ನೋಟಿಸ್ ನೀಡಿದ್ದು, ತಮ್ಮ ಬಹಿರಂಗ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೇ, ಪಕ್ಷದ ಶಿಸ್ತು ಉಲ್ಲಂಘನೆ ಆಗಿರುವುದಕ್ಕೆ ಕಾರಣ ಕೇಳಿ…
Subscribe to Updates
Get the latest creative news from FooBar about art, design and business.
