Author: Times of bayaluseeme

ಮೈಸೂರು, ಜೂನ್ 30: ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಒಟ್ಟಾಗಿದ್ದೇವೆ, ಯಾರೂ ಏನೂ ಹೇಳಿದರು ನಮ್ಮ ಮಧ್ಯೆ ಭಿನ್ನಾಭಿಪ್ರಾಯವಿಲ್ಲ. ಕೇಳುವುದಿಲ್ಲ. ಸರ್ಕಾರ ಐದು ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ ಎಂದು ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ಅವರು ಇಂದು ಮೈಸೂರು ವಿಮಾನನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರ. ಸುರ್ಜೆವಾಲಾ ಅಭಿಪ್ರಾಯ ಪಡೆಯಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ಸುರ್ಜೆವಾಲಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿ ಅವರು ಅಭಿಪ್ರಾಯ ಕೇಳಿ, ಅವರ ಕೆಲಸವನ್ನು ಮಾಡುತ್ತಾರೆ ಎಂದರು ಬಿಜೆಪಿ ಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಸಿದ್ದರಾಮಯ್ಯ ಅವರು ಈ ಬಾರಿಯ ದಸರಾ ಉದ್ಘಾಟಿಸುವುದಿಲ್ಲ ಎಂದು ಬಿಜೆಪಿಯವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಶ್ರೀರಾಮುಲು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಅವರು ಹೇಗೆ ಭವಿಷ್ಯ ನುಡಿಯುತ್ತಾರೆ ಎಂದು ಪ್ರಶ್ನಿಸಿದರು.

Read More

ಚಾಮರಾಜನಗರ : ಜಿಲ್ಲೆಯ ಹನೂರು ತಾಲ್ಲೂಕಿನ ಮೀಣ್ಯಂ ಅರಣ್ಯದಲ್ಲಿ ಐದು ಹುಲಿಗಳ ಸಾವಿಗೆ ಕಾರಣರಾದ ಮೂವರು ಆರೋಪಿಗಳನ್ನು ಹನೂರಿನಲ್ಲಿರುವ ನ್ಯಾಯಾಲಯಕ್ಕೆ ಅರಣ್ಯಾಧಿಕಾರಿಗಳು ಹಾಜರು ಪಡಿಸಿದರು.ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿರುವ ಅಪರ ಸಿವಿಲ್ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಸೋಮವಾರ ಬೆಳಗ್ಗೆ 11 ಗಂಟೆಯ ಸಮಯಲ್ಲಿ ಹನೂರಿನ ಸಹಾಯಕ ಅರಣ್ಯಾಧಿಕಾರಿ ಗಜಾನನ ಹೆಗಡೆ ಹಾಗೂ ಪ್ರೋಬೇಷನರಿ ಎಸಿಎಫ್ ಉಮಾಪತಿ ಮತ್ತು ಆರ್ ಎಫ್ ಓ ಮಾದೇಶ್ ರವರು ಅರಣ್ಯ ಸಿಬ್ಬಂದಿಗಳ ಬೆಂಗಾವಲಲ್ಲಿ ಹುಲಿ ಸಾವಿನ ಪ್ರಕರಣದ ಆರೋಪಿಗಳಾದ ಮಾದುರಾಜು, ನಾಗರಾಜು ಮತ್ತು ಕೋನಪ್ಪ ರವರನ್ನು ಕರೆದುಕೊಂಡು ಬಂದರು. ನ್ಯಾಯಾಧೀಶೆ ಕಾವ್ರಶ್ರೀ ರವರು ಆರೋಪಿಗಳಿಗೆ ವಿಚಾರಣೆ ನಡೆಸಿದಾಗ ಅರಣ್ಯಾಧಿಕಾರಿಗಳು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಬಳಿಕ ನ್ಯಾಯದೀಶೆ ಕಾವ್ಯಶ್ರೀ ರವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಲು ಸಮ್ಮತ್ತಿಸಿ, ಆರೋಪಿಗಳಿಗೆ ವಿಚಾರಣೆ ವೇಳೆ ಹೊಡೆಯಬಾರದು, ಬೆದರಿಕೆ ಹಾಕಬಾರದು, ಆಹಾರವನ್ನು ಸಕಾಲಕ್ಕೆ ನೀಡಬೇಕು, ವೈದ್ಯಕೀಯ ಪರೀಕ್ಷೆಗೆ…

Read More

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12ರ ಬಗ್ಗೆ ಹಲವಾರು ಕುತೂಹಲಗಳಿವೆ. ಈ ಕುತೂಹಲಗಳಿಗೆ ಇಂದು ಅಂತಿಮವಾಗಿ ಉತ್ತರ ಸಿಗಲಿದೆ. ಯಾಕಂದ್ರೆ ಇಂದು ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 12ರ ಬಗ್ಗೆ ಬಿಗ್ ಬಾಸ್ ತಂಡ ಸುದ್ದಿಗೋಷ್ಠಿ ಕರೆದಿದೆ. ಇಂದು ಸಂಜೆ 4 ಗಂಟೆಗೆ ಬಿಗ್‌ ಬಾಸ್‌ ಪ್ರೆಸ್‌ ಮೀಟ್‌ ನಡೆಯಲಿದೆ ಎಂಬ ಮಾಹಿತಿ ಅಧಿಕೃತ ಮೂಲಗಳಿಂದ ಲಭಿಸಿದೆ.ಹೌದು…ಬಿಗ್ ಬಾಸ್ ಕನ್ನಡ ಸೀಸನ್ 11ರ ಫೀವರ್ ಮುಗಿಯುವ ಹೊತ್ತಿಗೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ ಕುರಿತು ಬಿಗ್ ಅಪ್ಡೇಟ್ ಸಿಕ್ಕಿದೆ. ಸದ್ಯದಲ್ಲೇ ಬಿಗ್ಬಾಸ್ 12 ಸೀಸನ್ ಶುರುವಾಗಲಿದೆಯಂತೆ. ಈಗಾಗಲೇ ಈ ಬಾರಿ ದೊಡ್ಮನೆಯೊಳಗೆ ಯಾರು ಹೋಗುತ್ತಾರೆ ಎಂಬ ಚರ್ಚೆ ಕಾವೇರಿದೆ. ಇದಕ್ಕಿಂತ ಮುಖ್ಯವಾಗಿ ಈ ಬಾರಿ ಬಿಗ್ ಬಾಸ್ ನ ಯಾರು ನಿರೂಪಣೆ ಮಾಡುತ್ತಾರೆ ಎಂಬ ಬಗ್ಗೆ ಭಾರಿ ಕುತೂಹಲ ಸೃಷ್ಟಿಸಿದೆ. ಯಾಕೆಂದರೆ ಕಳೆದ ಸೀಸನ್ನ ಅಂತ್ಯದ ವೇಳೆಗ ಕಿಚ್ಚ ಸುದೀಪ್ ಅವರು ಇದು ನನ್ನ ಕೊನೆ…

Read More

ಚಿತ್ರದುರ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕರು ಅಸಮಾಧಾನದ ನುಡಿಗಳನ್ನು ಹೊರಹಾಕಿದ ಬೆನ್ನಲ್ಲೇ ಕೈ ಹೈಕಮಾಂಡ್ ಮೂರು ದಿನಗಳ ಕಾಲ ಶಾಸಕರ ಸಮಸ್ಯೆಗಳನ್ನು ಕೇಳುವ ಜೊತೆಗೆ ಮುನಿಸು ಶಮನ ಮಾಡಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೀವಾಲ ಅವರನ್ನು ಕಲಿಸಿಕೊಟ್ಟಿದೆ. ಮೂರು ದಿನಗಳ ಕಾಲ ಸುರ್ಜೀವಾಲ ವಲಯವಾರು ಶಾಸಕರ ಸಭೆ ನಡೆಸಲಿದ್ದು ಇದರ ಜೊತೆಗೆ ಶಾಸಕ ಮೌಲ್ಯಮಾಪನ ಮಾಡಲಿದ್ದಾರೆ. ಇದಕ್ಕಾಗಿ ಈಗಾಗಲೇ ಸುರ್ಜೀವಾಲ 6 ಪ್ರಶ್ನಾವಳಿ ಸಿದ್ಧಪಡಿಸಿಕೊಂಡು ಶಾಸಕರ ಮೌಲ್ಯ ಮಾಪನಕ್ಕೆ ರೆಡಿ ಆಗಿದ್ದಾರೆ. ಹಾಗಾದ್ರೆ ಆ 6 ಪ್ರಶ್ನಾವಳಿ ಹೀಗಿವೆ… ನಿಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳು ಅನುಷ್ಠಾನ ಆಗಿವೆಯಾ..? ನಿಮ್ಮ ಕ್ಷೇತ್ರ ಹಾಗೂ ಜಿಲ್ಲೆಯ ರಾಜಕೀಯ ಸಾಮಾಜಿಕ ಸಮಸ್ಯೆಗಳೇನು..? ನಿಮ್ಮ ಕ್ಷೇತ್ರದಲ್ಲಿ ಬಾಕಿ ಇರುವ ಅಭಿವೃದ್ಧಿ ಕಾರ್ಯಗಳು ಮತ್ತು ಸಮಸ್ಯೆಗಳ ಲಿಸ್ಟ್ ಕೊಡಿ ನಿಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ವಿಂಗ್ ಗಳು ಯಾವ ರೀತಿ ಕೆಲಸ ಮಾಡುತ್ತಿವೆ ನಿಮ್ಮ ಕ್ಷೇತ್ರದಲ್ಲಿ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳ ಪಟ್ಟಿ ತರಲು…

Read More

ಹೊಳಲ್ಕೆರೆ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆಯೆಂದು ಕೈಕಟ್ಟಿ ಸುಮ್ಮನೆ ಕೂತಿಲ್ಲ. ಹೋರಾಟ ಮಾಡಿ ಹಣ ತಂದು ಕ್ಷೇತ್ರದಅಭಿವೃದ್ದಿಗೆ ಹಗಲು-ರಾತ್ರಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು. ಗೂಳಿಹೊಸಹಳ್ಳಿ ಗ್ರಾಮದಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ನೂತನ ಚೆಕ್‍ಡ್ಯಾಂ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. ತಾಲ್ಲೂಕಿನಾದ್ಯಂತ ಹದಿನೇಳು ಕಡೆ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸಿದ್ದೇನೆ. ಇಷ್ಟು ಸಾಲದೆಂಬಂತೆ ಚಿಕ್ಕಜಾಜೂರಿನ ಕೋಟೆಹಾಳ್ಬಳಿ ಐದುನೂರು ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ. ಜೋಗ್‍ಫಾಲ್ಸ್‍ನಿಂದ ನೇರವಾಗಿ ಇಲ್ಲಿಗೆವಿದ್ಯುತ್ ಪೂರೈಕೆಯಾಗಲಿದೆ. ಇದರಿಂದ ಇನ್ನು ಐವತ್ತು ವರ್ಷಗಳ ಕಾಲ ರೈತರಿಗೆ ವಿದ್ಯುತ್ ಸಮಸ್ಯೆಯಿರುವುದಿಲ್ಲ ಎಂದರು. ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆ. ನೀರಿನ ಮಧ್ಯೆ 40 ಅಡಿ ಆಳದಲ್ಲಿ ಪಿಲ್ಲರ್ ಎತ್ತಿ ಸ್ಟೇಜ್ ಕಟ್ಟಿ ಮೋಟಾರ್ ಕೂರಿಸಿ ಫಿಲ್ಟರ್ಅಳವಡಿಸಲಾಗಿದೆ. ಪೈಪ್‍ಲೈನ್ ಅಳವಡಿಕೆ ಕಾರ್ಯ ಮುಗಿದಿದೆ. ನಾಲ್ಕು ನೂರರಿಂದ ಐದುನೂರು ಚೆಕ್‍ಡ್ಯಾಂಗಳನ್ನು ಕಟ್ಟಿಸಿದ್ದೇನೆ.ಹೊಸದಾಗಿ ಬಂದು…

Read More

ಚಿತ್ರದುರ್ಗ : ಬೃಹತ್ ಶಿಲಾಯುಗ ಕಾಲದಲ್ಲಿ ಮಾನವ ಮೊಟ್ಟ ಮೊದಲು ಕಬ್ಬಿಣ ಬಳಕೆ ಮಾಡಿದ್ದು, ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಕಮಲಾಪುರದ ಡಾ.ಆರ್.ತೇಜೇಶ್ವರ ತಿಳಿಸಿದರು. ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ,ಸಂಸ್ಕೃತಿ, ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‍ನಲ್ಲಿ ಭಾನುವಾರ ನಡೆದ 51 ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಚೀನಸ್ಮಾರಕಗಳ ಸಂರಕ್ಷಣೆ ಈಚಿನ ಅನ್ವೇಷಣೆಗಳ ಹಿನ್ನೆಲೆಯಲ್ಲಿ ಎಂಬ ವಿಷಯ ಕುರಿತು ಮಾತನಾಡಿದರು. ಶಿಲಾಯುಗ, ಮಡಿಕೆ, ಶಿಲಾಶಾಸನ, ತಾಮ್ರಶಾಸನ, ಮೂರ್ತಿಶಿಲ್ಪಿ, ಮಾಸ್ತಿಗಲ್ಲು, ವೀರಗಲ್ಲು ಶಿಲ್ಪಿ, ಹಳೆ ಶಿಲಾಯುಗ, ನೂತನಶಿಲಾಯುಗ, ಅರಿಯುವ ಕಲ್ಲು, ಶಿಲಾಯುಧ, ನಿಲಿಸುಗಲ್ಲು, ಕದಂಬರು ಆಳಿದ ಕೋಟೆಗಳು ಶಾಸನಗಳು ಸಿಗುತ್ತವೆ. ಕೆಳದಿ ಅರಸರಫಲವಂತಿಕೆ ಶಿಲ್ಪಗಳು, ದ್ವಿಬಾಹು ಗಣೇಶ ಇವುಗಳು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಮಾದಾಪುರದಲ್ಲಿ ಸಿಕ್ಕಿದ್ದು,ಎನ್ನುವುದನ್ನು ಸ್ಲೈಡ್‍ಗಳ ಮೂಲಕ ಪ್ರದರ್ಶಿಸಿದರು. ಬಾದಾಮಿ ಚಾಲುಕ್ಯರ ಶಾಸನ, ಸಿಡಿತಲೆ ವೀರಗಲ್ಲುಗಳು, ರಾಷ್ಟ್ರಕೂಟರ ಕಾಲದ ವೀರಗಲ್ಲುಗಳನ್ನು ವ್ಯಕ್ತಿ ಪೂಜೆಯಲ್ಲಿ ಕಾಣಬಹುದು. ಕರ್ನಾಟಕದಲ್ಲಿ ಬರಗಾಲ ಉಲ್ಲೇಖಿಸುವ ಮೊದಲ ಶಾಸನ,…

Read More

ಚಿತ್ರದುರ್ಗ ಜೂ. 29  ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಯಲ್ಲಿ ಪ್ರಾಂಶುಪಾಲರ ಮೇಲ್ವಿಚಾರಣೆ, ಉಪನ್ಯಾಸಕರ ಪರಿಣಾಮಕಾರಿ ಬೋಧನೆ,ವಿದ್ಯಾರ್ಥಿಗಳ ಕಲಿಕಾ ಆಸಕ್ತಿ, ಹಾಗೂ ಪೋಷಕರ ಪ್ರೋತ್ಸಾಹ ಪ್ರಮುಖ ಪಾತ್ರವಹಿಸುತ್ತದೆ ಎಂದು ಪದವಿ ಪೂರ್ವ ಶಿಕ್ಷಣಇಲಾಖೆಯ ಉಪ ನಿರ್ದೇಶಕರಾದ ಕೆ.ತಿಮ್ಮಯ್ಯ ತಿಳಿಸಿದರು. ಚಳ್ಳಕೆರೆ ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗಾಗಿಶನಿವಾರ ಮಧ್ಯಾಹ್ನ ರೋಟರಿ ಭವನದಲ್ಲಿ ಆಯೋಜಿಸಿದ್ದ "ಫಲಿತಾಂಶ ಸುಧಾರಣಾ ಸಮಾಲೋಚನಾ ಸಭೆ" ಯನ್ನು ಉದ್ಘಾಟಿಸಿ ಮಾತಾನಾಡಿದರು.ಕಾರ್ಯಭಾರ ಕಡಿಮೆ ಇರುವ ಉಪನ್ಯಾಸಕರನ್ನು ಖಾಲಿ ಹುದ್ದೆ ಇರುವ ಕಾಲೇಜಿಗಳಿಗೆ ನಿಯೋಜಿಸಿ ವಿದ್ಯಾರ್ಥಿಗಳ ಪಾಠಪ್ರವಚನಕ್ಕೆ ಯಾವುದೇ ತೊಂದರೆಯಾಗದಂತೆ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಕ್ರಮವಹಿಸಲಾಗಿದೆ. ನಮ್ಮ ಜಿಲ್ಲೆಯ ಪಿಯುಸಿ ಫಲಿತಾಂಶಹೆಚ್ಚಳಕ್ಕೆ ಇಲಾಖಾ ನಿಯಮಗಳನ್ವಯ ಹೊಸ ಕಾರ್ಯಸೂಚಿಗಳ ಪಟ್ಟಿ ತಯಾರಿಸಲಾಗಿದ್ದು ಅವುಗಳನ್ನು ಎಲ್ಲಾ ಉಪನ್ಯಾಸಕರುಪಾಲನೆ ಮಾಡುವ ಮೂಲಕ ಫಲಿತಾಂಶ ವೃದ್ದಿಗೆ ಶ್ರಮಿಸುವಂತೆ ಕರೆ ನೀಡಿದರು. ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಬಿ.ಆರ್.ಮಲ್ಲೇಶ್ ಮಾತನಾಡಿ ಪ್ರತಿ ಉಪನ್ಯಾಸಕರು ಇಲಾಖಾ ಆದೇಶಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ ತಮ್ಮ…

Read More

ಚಿತ್ರದುರ್ಗ: ಡಿಸೆಂಬರ್ ಬಳಿಕ ಮಧ್ಯಂತರ ಚುನಾವಣೆ ಬಂದರೂ ಬರಬಹುದು ನಮ್ಮ ಪಕ್ಷದ ಕಾರ್ಯಕರ್ತರು ಎಲ್ಲದಕ್ಕೂ ಸಿದ್ಧವಾಗಿರಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ರಾಜಕೀಯ ಕ್ರಾಂತಿಯ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿದ್ದಾರೆ. ಚಳ್ಳಕೆರೆ ಪಟ್ಟಣದಲ್ಲಿ ನಡೆದ ನೂತನ ಜಿಲ್ಲಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ ಅಕ್ಟೋಬರ್ ನಲ್ಲಿ ಕ್ರಾಂತಿ ಆಗಬಹುದು. ಬಳಿಕ 150 ಶಾಸಕರ ಬೆಂಬಲದಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಶೂನ್ಯ ಸಾಧನೆ ಮಾಡಿದೆ. ಸರ್ಕಾರದ ಕಾಟಕ್ಕೆ ಜನರು ಬೇಸತ್ತು ಹೋಗಿದ್ದಾರೆ. ಹೊಸ ಸರ್ಕಾರಕ್ಕಾಗಿ ಕಾಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಬದಲಾವಣೆ ಬಿರುಗಾಳಿ ಬೀಸಲಿದ್ದು, ಅದು ನಮಗೆ ಒಳ್ಳೇದಗುವ ಭರವಸೆ ಇದೆ ಎಂದು ಹೇಳಿದ್ದಾರೆ. ಒಟ್ನಲ್ಲಿ ಇತ್ತೀಚಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ರಾಜಕೀಯ ಕ್ರಾಂತಿ ಮಾತುಗಳು ಹೆಚ್ಚಾಗಿದ್ದು, ಈಗ ಸಂಸದ ಕಾರಜೋಳ ಅಪರೇಷನ್ ಕಮಲದ ಬಗ್ಗೆ ಸುಳಿವು ನೀಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

Read More

ನಾನು ಯಾವ ರೀತಿಯ ಆಹಾರ ಮತ್ತು ಪಾನೀಯಗಳನ್ನು ಸೇವಿಸಬೇಕು..?ಆರೋಗ್ಯಕರ ಆಹಾರ ಯೋಜನೆಯನ್ನು ಹೊಂದಲು ಯಾವ ರೀತಿಯ ಆಹಾರ ಮತ್ತು ಪಾನೀಯಗಳನ್ನು ಸೇವಿಸಬೇಕು ಮತ್ತು ಯಾವ ಪ್ರಕಾರಗಳನ್ನು ಮಿತಿಗೊಳಿಸಬೇಕು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳೋಹೆಚ್ಚು ಪೌಷ್ಟಿಕ-ಭರಿತ ಆಹಾರಗಳನ್ನು ಸೇವಿಸಿ. ಜೀವಸತ್ವಗಳು ಮತ್ತು ಆಹಾರದ ನಾರಿನಂತಹ ಪೋಷಕಾಂಶಗಳು ನಮ್ಮ ದೇಹವನ್ನು ಆರೋಗ್ಯಕರವಾಗಿರಲು ಅಗತ್ಯವಿರುವದನ್ನು ನೀಡುವ ಮೂಲಕ ಪೋಷಿಸುತ್ತವೆ. ವಯಸ್ಕರು ಈ ಕೆಳಗಿನ ಕೆಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರ ಮತ್ತು ಪಾನೀಯಗಳನ್ನು ಸೇವಿಸಲು ಪ್ರೋತ್ಸಾಹಿಸಲಾಗುತ್ತದೆ. ಹಣ್ಣುಗಳು ಮತ್ತು ತರಕಾರಿಗಳು ಓಟ್ ಮೀಲ್, ಧಾನ್ಯದ ಬ್ರೆಡ್ ಮತ್ತು ಕಂದು ಅಕ್ಕಿಯಂತಹ ಧಾನ್ಯಗಳುಸಮುದ್ರಾಹಾರ, ಕಡಿಮೆ ಕೊಬ್ಬಿನ ಮಾಂಸ, ಕೋಳಿ ಮತ್ತು ಮೊಟ್ಟೆಗಳುಬೀನ್ಸ್, ಬಟಾಣಿ, ಉಪ್ಪುರಹಿತ ಬೀಜಗಳು ಮತ್ತು ಬೀಜಗಳುಹೋಳು ಮಾಡಿದ ತರಕಾರಿಗಳು ಅಥವಾ ಹಮ್ಮಸ್‌ನೊಂದಿಗೆ ಬೇಬಿಕ್ಯಾರೆಟ್‌ಗಳುಕೊಬ್ಬು ರಹಿತ ಅಥವಾ ಕಡಿಮೆ ಕೊಬ್ಬಿನ ಹಾಲು ಮತ್ತು ಹಾಲಿನ ಉತ್ಪನ್ನಗಳುನೀವು ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಸೂಕ್ಷ್ಮವಾಗಿದ್ದರೆ, ಅದನ್ನು ಬದಲಿಸಲು ಪ್ರಯತ್ನಿಸಿ ಡೈರಿ ಅಲ್ಲದ ಸೋಯಾ, ಬಾದಾಮಿ, ಅನ್ನ, ಅಥವಾ…

Read More

ಮನೆ ಮನೆಗೆ ಇ-ಖಾತಾ ಅಭಿಯಾನದ ಮೂಲಕ ಜನರ ಮನೆ ಬಾಗಿಲಿಗೆ ಅವರ ಆಸ್ತಿ ಖಾತಾ ದಾಖಲೆಗಳನ್ನು ತಲುಪಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಹೊಸ ಇತಿಹಾಸ ಬರೆದಿದೆ. ಆ ಮೂಲಕ ತಮ್ಮ ಆಸ್ತಿ ದಾಖಲೆ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದ ಬೆಂಗಳೂರು ನಗರದ ನಾಗರೀಕರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತೆ ಮಾಡಿದೆ. ಇ-ಖಾತಾ ಅಭಿಯಾನ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ) ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಸಚಿವರಾದ ಕೃಷ್ಣ ಭೈರೇಗೌಡ ಅವರ ಸ್ವಕ್ಷೇತ್ರ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕೆಲವು ಫಲಾನುಭವಿಗಳಿಗೆ ಅವರ ಆಸ್ತಿ ಇ-ಖಾತಾ ದಾಖಲೆಗಳನ್ನು ವಿತರಣೆ ಮಾಡಲಾಯಿತು. ದಿನಾಂಕ 03.10.2024 ರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಈಗಿನ ಗ್ರೇಟರ್ ಬೆಂಗಳೂರು) ಸಾರ್ವಜನಿಕರಿಗೆ ಇ-ಖಾತಾ ನೀಡುವ ಬೃಹತ್ ಕಾರ್ಯ ಪ್ರಾರಂಭವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ 20,95,333 ಸ್ವತ್ತುಗಳ ಪೈಕಿ ದಿನಾಂಕ 27.06.2025 ವರೆಗೆ ಒಟ್ಟು…

Read More