Author: Times of bayaluseeme

ಬಳ್ಳಾರಿ: ಬಿಎಸ್ಸಿ ದ್ವಿತೀಯ ಸೆಮಿಸ್ಟರ್ ಕನ್ನಡ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ವಾಣಿಜ್ಯ ವಿಷಯದ ಪ್ರಶ್ನೆಗಳು ಮುದ್ರಣಗೊಂಡು ಗೊಂದಲಕ್ಕೀಡಾದ ಘಟನೆ ಬಳ್ಳಾರಿ ನಗರದಲ್ಲಿ ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದೆ. ಈ ಬಗ್ಗೆ ಪರೀಕ್ಷಾರ್ಥಿಗಳು ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯಸ್ಥರ ಗಮನಕ್ಕೆ ತರುತ್ತಿದ್ದಂತೆಯೇ ಬಳ್ಳಾರಿ ವಿವಿಯಿಂದ ಮತ್ತೊಂದು ನಿಗದಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ತರಿಸಿಕೊಂಡು ಪರೀಕ್ಷೆ ನಡೆಸಿದ್ದಾರೆ. ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ವ್ಯಾಪ್ತಿಯಲ್ಲಿ ಪದವಿ ಪರೀಕ್ಷೆಗಳು ಶುರುವಾಗಿದ್ದು, ಮಂಗಳವಾರ ಬೇಸಿಕ್ ಕನ್ನಡ ಪರೀಕ್ಷೆ ನಡೆಯಿತು. ಬೆಳಗ್ಗೆ 9 ಗಂಟೆಗೆ ಪರೀಕ್ಷೆ ಸಮಯ ಶುರುವಾಗುತ್ತಿದ್ದಂತೆಯೇ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಪರೀಕ್ಷರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡಿದ್ದಾರೆ. ಪ್ರಶ್ನೆಗಳನ್ನು ಓದುತ್ತಿದ್ದಂತೆಯೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಪ್ರಶ್ನೆ ಪತ್ರಿಕೆ ಬದಲಾಗಿದ್ದು, ಕನ್ನಡ ಬದಲಿಗೆ ವಾಣಿಜ್ಯ ಶಾಸ್ತ್ರದ ಪರೀಕ್ಷೆ ಪತ್ರಿಕೆ ನೀಡಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸುತ್ತಿದ್ದಂತೆಯೇ ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದಾರೆ. ಕೂಡಲೇ ಎಚ್ಚೆತ್ತ ವಿಶ್ವವಿದ್ಯಾಲಯ, ಇ-ಮೇಲ್ ಮೂಲಕ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಪ್ರಶ್ನೆಪತ್ರಿಕೆ ಕಳಿಸಿಕೊಟ್ಟಿದ್ದು, ಪ್ರಶ್ನೆಪತ್ರಿಕೆ ಜೆರಾಕ್ಸ್ ಪ್ರತಿ…

Read More

ಚಿತ್ರದುರ್ಗ: ಇಸ್ರೇಲ್‌ ಹಾಗೂ ಇರಾನ್ ನಡುವೆ ಯುದ್ಧ ನಡೆಯುತ್ತಿದ್ದು, ಎರಡು ದೇಶಗಳಲ್ಲಿ ಸಿಲುಕಿರುವ ವಿವಿಧ ದೇಶಗಳ ಪ್ರಜೆಗಳು ಅಲ್ಲಿಂದ ಹೊರಗೆ ಬರಲು ಹರಸಾಹಸ ಪಡುತ್ತಿದ್ದಾರೆ. ಅದೇ ರೀತಿ ಭಾರತದ ಪ್ರಜೆಗಳು ಕೂಡಾ ಅಲ್ಲಿ ಸಿಲುಕಿಕೊಂಡಿದ್ದು, ಕೇಂದ್ರ ಸರ್ಕಾರ ನಿರಂತರವಾಗಿ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ವಾಪಾಸು ಕರೆತರುವಲ್ಲಿ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಚಿತ್ರದುರ್ಗದ ಯುವಕ ಜಬಿವುಲ್ಲಾ ಎಂಎಸ್ಸಿ ಪರಿಸರ ಸೂಕ್ಷ್ಮ ಅಧ್ಯಯನಕ್ಕಾಗಿ ಇಸ್ರೇಲ್‌ಗೆ ತೆರಳಿದ್ದು, ಸದ್ಯ ಅಲ್ಲಿನ ಯುದ್ಧದ ಅಪಾಯದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಚಿತ್ರದುರ್ಗದ ಜಬೀವುಲ್ಲಾ ಎಂ.ಎ ಇಸ್ರೇಲ್‌ನಲ್ಲಿ ಸಿಲುಕಿದ್ದರು. ಈ ವಿಚಾರವನ್ನು ಆತನ ಕುಟುಂಬದವರು ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಗಮನಕ್ಕೆ ತಂದಿದ್ದು, ಶಾಸಕರು ದೆಹಲಿಯಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ ಜಬೀವುಲ್ಲಾ ಸುರಕ್ಷಿತವಾಗಿ ಮರಳಲು ನೆರವಾಗಿದ್ದಾರೆ. ಇಸ್ರೇಲ್‌ನಲ್ಲಿ ಎಂಎಸ್ಸಿ ಅಧ್ಯಯನಕ್ಕೆ ತೆರಳಿದ್ದ ಜಬಿವುಲ್ಲಾ ಅವರ ಜೊತೆಗೆ ಶಾಸಕ ಕೆ.ಸಿ.ವೀರೇಂದ್ರ ಪೋನ್‌ ಮೂಲಕ ಮಾತನಾಡಿದ್ದು, ಕೇಂದ್ರ ಸರ್ಕಾರ ಅಲ್ಲಿದ್ದ ಭಾರತೀಯ ಪ್ರಜೆಗಳನ್ನು ಕರೆತಂದಿರುವ ವಿಚಾರ ತಿಳಿದಿದೆ. ಆದರೆ, ದೆಹಲಿಯ ಕರ್ನಾಟಕ ಭವನದಲ್ಲಿದ್ದ ಜಬೀವುಲ್ಲಾ ಅವರ ಬಳಿ…

Read More

ನಮ್ಮ ಸರ್ಕಾರವನ್ನು ಟೀಕೆ ಮಾಡಿಲ್ಲ – NYG ಉಲ್ಟಾ ಚಿತ್ರದುರ್ಗ: ನಾನು ರಾಜ್ಯ ಸರ್ಕಾರವನ್ನು ತೇಜೋವಧೆ ಮಾಡಿಲ್ಲ, ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚಿದ್ದಾರೆ ಅಂತಾ ಬಿಜೆಪಿ ವಿರುದ್ಧ ಶಾಸಕ ಎನ್ ವೈ ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಸಣ್ಣ ಬುದ್ಧಿ ಬಿಟ್ಟು ಊರು ಉದ್ದಾರಕ್ಕೆ ಕೈಜೋಡಿಸಲಿ. ರಾಜಕೀಯ ಪ್ರೇರಿತ ದುರುದ್ದೇಶದಿಂದ ನನ್ನನ್ನು ಬಲಿಪಶುಮಾಡುತ್ತಾ ಕಾಲಹರಣ ಮಾಡಿದಿರಿ. ರಾಜ್ಯ ನಾನು ಸರ್ಕಾರಕ್ಕೆ ಮುಜುಗರ ತರುವಂತಹ ಕೆಲಸ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಗ್ಗೆ ಅಪಾರ ಅಭಿಮಾನವಿದೆ. ಕಳೆದ ಎರಡು ವರ್ಷಗಳಿಂದ 450 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡುತ್ತಿದ್ದೆನೆ. ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದೆ .ನನ್ನ ಹೇಳಿಕೆಯನ್ನು ದುರುದ್ದೇಶಪೂರ್ವಕವಾಗಿ ಬಿಜೆಪಿಯವರು ತಿರುಚಿದ್ದಾರೆ. ಹಳ್ಳಿಗಳಲ್ಲಿ ರಸ್ತೆ ,ಚರಂಡಿ,ಶಾಲೆ ಮಾಡಲಾಗುವುದಿಲ್ಲ ಎಂದು ಹೇಳಿದ್ದೇನೆ ಇದರ ಒಳಾರ್ಥ ತಿಳಿಯದೆ ಸುಖ ಸುಮ್ಮನೆ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ,ಈಗಿನ ರಾಜಕಾರಣದಲ್ಲಿ ನಾವೆಷ್ಟೇ ಅಭಿವೃದ್ಧಿಗಾಗಿ ಹಣ ತಂದರು ಕೆಲವರು…

Read More

ಶಾಸಕರಾದ ಬಿ.ಆರ್. ಪಾಟೀಲ್ ಅವರು ಹಿರಿಯರು.‌ ಅವರ ಹೋರಾಟ ಮನೋಭಾವ ಹಾಗೂ ಸಿದ್ದಾಂತಗಳ ಬಗ್ಗೆ ಗೌರವವಿದೆ. ಏನಾದರೂ ಸಮಸ್ಯೆಗಳಿದ್ದರೆ‌ ಸಿಎಂ, ಡಿಸಿಎಂ ಹಾಗೂ ಖರ್ಗೆ ಸಾಹೇಬರ ಬಳಿ ಚರ್ಚಿಸಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಕಲಬುರಗಿ ಯ ಐವಾನ್ ಶಾಹಿ ಅತಿಥಿಗೃಹದಲ್ಲಿ ತಮ್ಮನ್ನು ಭೇಟಿ ಮಾಡಿದ ವರದಿಗಾರರೊಂದಿಗೆ / ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಬಿ.ಆರ್.‌ಪಾಟೀಲ್ ಅವರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರವಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ಅವರು ಹಿರಿಯರು ಏನಾದರೂ ಸಮಸ್ಯೆ ಇದ್ದರೆ ಸೂಕ್ತವಾದ ವೇದಿಕೆಯಲ್ಲಿ ಹಿರಿಯರೊಂದಿಗೆ ಚರ್ಚಿಸಬೇಕಿತ್ತು. ಹೀಗೆ ಬಹಿರಂಗವಾಗಿ ಹೇಳುವುದರಿಂದ ಸರ್ಕಾರಕ್ಕೆ ಮುಜುಗರವಾಗತ್ತದೆ ಎಂದರು. “ಫೋನ್ ನಲ್ಲಿ ನಡೆದ‌ ಸಂಭಾಷಣೆಯಲ್ಲಿ ಅಧಿಕಾರಿ ಸ್ಪಷ್ಟವಾಗಿ ಪಾಟೀಲ್ ಅವರ ಆರೋಪಗಳನ್ನು ಅಲ್ಲಗಳೆದು ಅಂತಹ ಯಾವುದಾದರೂ ಲೋಪ ಆಗಿದ್ದಕ್ಕೆ ಆಧಾರ ಕೊಟ್ಟರೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಅದನ್ನು ಹಿರಿಯರಾದ ಪಾಟೀಲರು ಸಿಎಂ ಅವರ ಬಳಿ ಚರ್ಚಿಸಬೇಕಿತ್ತು.…

Read More

ಚಿತ್ರದುರ್ಗ: ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಚಿತ್ರದುರ್ಗ ಜಿಲ್ಲೆಯ ಯುವಕ ಜಬಿಉಲ್ಲಾ ಎಂ.ಎ ಸಿಲುಕಿಕೊಂಡಿದ್ದರು, ಈ ವಿಚಾರವನ್ನ ಜಬಿಉಲ್ಲಾ ಸಂಭದೀಕರು ಶಾಸಕರ ಗಮನಕ್ಕೆ ತಂದಿದ್ದು ಶಾಸಕರು ದೆಹಲಿಯಲ್ಲಿ ಇರುವಂತಹ ಸಂಬಂಧ ಇಲಾಖೆ ಅಧಿಕಾರಿಗಳಿಗೆ ಸಂಪರ್ಕಿಸಿ ಯುವಕನನ್ನ ರಕ್ಷಣೆ ಮಾಡಿಸಿದ್ದಾರೆ. ಯುದ್ಧದ ನಡುವೆ ಸಿಕ್ಕಿಕೊಂಡ ಜಬಿಉಲ್ಲಾ ಎಂ.ಎ ಅವರಿಗೆ ಚಿತ್ರದುರ್ಗ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಫೋನ್ ಮೂಲಕ ಸಂಪರ್ಕಿಸಿ ಯೋಗ ಕ್ಷೇಮವನ್ನು ವಿಚಾರಿಸಿ ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆಸಿ, ಬೆಂಗಳೂರು ಮೂಲಕ ತನ್ನ ತಾಯ್ನಾಡು ಚಿತ್ರದುರ್ಗ ಜಿಲ್ಲೆಗೆ ಯುವಕನನ್ನ ಕರೆ ತಂದಿದ್ದಾರೆ. ಚಿತ್ರದುರ್ಗ ಜಿಲ್ಲೆ ವ್ಯಕ್ತಿ ಜಬಿಉಲ್ಲಾ ಎಂ.ಎ ಅವರು ಇಸ್ರೇಲ್ ನಲ್ಲಿ ಎಂಎಸ್ಸಿ ( ಪರಿಸರ ಸೂಕ್ಷ್ಮ ಜೀವವಿಜ್ಞಾನ) ವಿದ್ಯಾಭ್ಯಾಸಕ್ಕೆ ತೆರಳಿದ್ದರು, ಈ ನಡುವೆ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಭಾರತೀಯ ಪ್ರಜೆಗಳನ್ನು ಭಾರತ ಸರ್ಕಾರ ರಕ್ಷಣೆ ಮಾಡಿ ದೆಹಲಿಗೆ ಕರೆತರಲಾಗಿತ್ತು, ಇದರಲ್ಲಿ ನನ್ನನು ಕೂಡ ದೆಹಲಿಯ ಕರ್ನಾಟಕ ಭವನದಲ್ಲಿ ಇರಿಸಲಾಗಿತ್ತು, ದೆಹಲಿಯಿಂದ…

Read More

ಚಿತ್ರದುರ್ಗ ಜೂ. 24 ತಮ್ಮ ಜಿಲ್ಲೆಯ ಕುಡಿಯುವ ನೀರು ಯೋಜನೆಗಳಿಗೆ ಭದ್ರಾ ಕಾಲುವೆಯಿಂದ ನೀರು ಪೂರೈಕೆಗೆ ಸಮ್ಮತಿಸುವ ದಾವಣಗೆರೆ ರೈತರು. ಚಿತ್ರದುರ್ಗದ ಪ್ರಶ್ನೆ ಬಂದಾಗ ಮಾತ್ರ ವಿರೋಧಿಸುತ್ತಾರೆ. ಪ್ರತಿ ಹಂತದಲ್ಲೂ ಚಿತ್ರದುರ್ಗ ಜಿಲ್ಲೆಯ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನಗಳಿಗೆ ಅಡ್ಡಗಾಲು ಹಾಕುವ ದಾವಣಗೆರೆ ರೈತರು ಭದ್ರಾ ಜಲಾಶಯದಿಂದ ಸರ್ಕಾರ ಕಲ್ಪಿಸಿರುವ ನೀರಾವರಿ ಯೋಜನೆ ಪ್ರಮಾಣ ಏನೆಂಬುದ ಮೊದಲು ಅರಿಯಲಿ ಎಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ ದಾವಣಗೆರೆ ರೈತ ಸಮೂದಾಯಕ್ಕೆ ಕಿವಿ ಮಾತು ಹೇಳಿದ್ದಾರೆ. ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತೆಗೆಯುತ್ತಿರುವುದ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ ಚಿತ್ರದುರ್ಗ ಜಿಲ್ಲೆಯ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆ ಜಾರಿ ವಿಚಾರದಲ್ಲಿ ನೆರೆಯ ದಾವಣಗೆರೆ ಜಿಲ್ಲೆ ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಿರುವುದನ್ನು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಉಗ್ರವಾಗಿ ಖಂಡಿಸಿದ್ದು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ,ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ, ಅಜ್ಜಂಪುರ…

Read More

ಸಂಗೀತ ಸಾಧಕ ತೋಟಪ್ಪ ಉತ್ತಂಗಿ ಅವರಿಗೆ“ಚಿನ್ಮೂಲಾದ್ರಿ ಗಾನ ಸಿರಿ” ಗೌರವ ಪುರಸ್ಕಾರ ಚಿತ್ರದುರ್ಗ ಜೂನ್ 23, ಯೋಗ ಮತ್ತು ಸಂಗೀತ ಇವು ಮನುಷ್ಯರ ಅನೇಕ ಸಮಸ್ಯೆಗಳಿಗೆ ಉತ್ತರ, ಪರಿಹಾರ ನೀಡಬಲ್ಲ ಮಾಧ್ಯಮಗಳಾಗಿವೆ ಎಂದು ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷರು ಯೋಗಾಚಾರ್ಯರೂ ಆದ ಎಲ್.ಎಸ್. ಚಿನ್ಮಯಾನಂದ ತಿಳಿಸಿದರು. ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ಮತಿತ್ತರ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಗರದ ಸಹ್ಯಾದ್ರಿ ಬಡಾವಣೆಯ ಯೋಗ ಬಂಧು ನಿಲಯದ ಮೇಲ್ಚಾವಣಿಯಲ್ಲಿ ಶನಿವಾರ ತೋಟಪ್ಪ ಉತ್ತಂಗಿಯವರಿಗೆ ಹಮ್ಮಿಕೊಂಡಿದ್ದ ಚಿನ್ಮುಲಾದ್ರಿ ಗಾನಸಿರಿ” ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸಾಂಸ್ಕøತಿಕ ಕ್ಷೇತ್ರವನ್ನು ಆಧರಿಸಿ, ಅನುಸರಿಸಿ ಅನುಷ್ಠಾನಕ್ಕೆ ತರಬೇಕಿದೆ. ಈ ಹಿನ್ನೆಲೆಯಲ್ಲಿ ಎರಡರ ಮಹತ್ವ ಒಂದೇ ದಿನ ಬಂದಿರುವುದು ವಿಶೇಷವೇ ಆಗಿದೆ. ತೋಟಪ್ಪ ಉತ್ತಂಗಿ ಅವರು ಸಂಗೀತ ಕ್ಷೇತ್ರದಲ್ಲಿ ಅಗಾದ ಸಾಧನೆ ಮತ್ತು ಸೇವೆ ಸಲ್ಲಿಸಿದ ಕಾರಣ ಅವರನ್ನ ಅಭಿನಂದಿಸುವ ಹಾಗೂ ಗೌರವಿಸುವ…

Read More

ಚಿತ್ರದುರ್ಗ ಜೂ. 23 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 85%ಕ್ಕಿಂತ ಹೆಚ್ಚು ಅಂಕ ಪಡೆದ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಯನ್ನು ಕರೆಯಲಾಗಿದೆ. ಅರ್ಜಿಯನ್ನು ಸಲ್ಲಿಸಲು ಕಡೆಯ ದಿನಾಂಕ 30-06-2025 ಕೂನೆಯ ದಿನವಾಗಿದೆ. ಅರ್ಜಿಗಳನ್ನು ಶ್ರೀ ಕಂಠೇಶ್ವರಸ್ವಾಮಿ ದಲ್ಲಾಳಿ ಮಂಡಿ ಎ ಬ್ಲಾಕ್ ಎ.ಪಿ.ಎಂ.ಸಿ ಯಾರ್ಡ್, ಚಿತ್ರದುರ್ಗ ಇಲ್ಲಿಗೆ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗಾಗಿ 9449974004, 7795374334, 9886954676, 9886843597 ದೂರವಾಣಿಯನ್ನು ಸಂಪರ್ಕ ಮಾಡಬಹುದಾಗಿದೆ.ಜುಲೈ 13 ರಂದು ನಗರದ ಸ್ಟೇಡಿಯಂ ರಸ್ತೆಯ ಜಿ.ಜಿ.ಸಮುದಾಯ ಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು

Read More

ಮುಂದಿನ ದಿನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್.ಜೆ.ಪಿ.)ಪತ್ತಿನ ಸಹಕಾರ ಸಂಘ, ನಿಯಮಿತವನ್ನು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಥಾಪನೆ ಮಾಡುವುದರ ಮೂಲಕ ನಮ್ಮ ಸಮುದಾಯದವರಿಗೆ ಹಚ್ಚಿನ ಸೇವೆಯನ್ನು ನೀಡಲಾಗುವುದೆಂದು ಸಂಘದ ಅಧ್ಯಕ್ಷರಾದ ಷಡಾಕ್ಷರಯ್ಯ ಎಸ್. ತಿಳಿಸಿದರು. ಚಿತ್ರದುರ್ಗ ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್.ಜೆ.ಪಿ.)ಪತ್ತಿನ ಸಹಕಾರ ಸಂಘ, ನಿಯಮಿತದ ಸರ್ವ ಸದಸ್ಯರ ಪ್ರಥಮ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮುದಾಯದವತಿಯಿಂದ ಸಹಕಾರ ಸಂಸ್ಥೆಯನ್ನು ಮಾಡಬೇಕೆಂದು ಬಹು ದಿನದ ಕನಸಾಗಿತ್ತು ಅದರ ಬಗ್ಗೆ ನಿರಂತರವಾಗಿ ಶ್ರಮವನ್ನು ಹಾಕುವುದರ ಮೂಲಕ ಇಂದಿಗೆ ನನಸಾಗಿದೆ. ಕಳೆದ ವರ್ಷ ಇದೆ ವೇದಿಕೆಯಲ್ಲಿ ಮುಂದಿನ ವರ್ಷ ನಾವುಗಳು ಸಹಕಾರ ಸಂಸ್ಥೆಯನ್ನು ಆರಂಭಿಸುವುದಾಗಿ ಮಾತು ನೀಡಿತ್ತು ಅದರಂತೆ ಸಹಕಾರ ಸಂಸ್ಥೆಯನ್ನು ಎಲ್ಲರ ಸಹಕಾರದಿಂದ ಪ್ರಾರಂಭಿಸಲಾಗಿದೆ. ಸೊಸೈಟಿಗೆ ಆಡಳಿತ ಮಂಡಳಿಗ ಚುನಾವಣೆಯನ್ನು ನಡೆಸಿ ಹಣವನ್ನು ವ್ಯಯ ಮಾಡುವ ಬದಲು 11 ಜನರನ್ನು ಅವಿರೋಧವಾಗಿ ಆಯ್ಕೆಯನ್ನು ಮಾಡುವುದರ ಮೂಲಕ ಚುನಾವಣಾ ವೆಚ್ಚವನ್ನು…

Read More

ಹೊಸಪೇಟೆ : ಬಡವರ ಹಣ ತಿನ್ನುವಂತ ಕಾಲ ನನಗೆ ಇನ್ನು ಬಂದಿಲ್ಲ. ನಾನು ಮನೆ ಕೊಡುವ ವೇಳೆ ಹಣ ಪಡೆದಿದ್ದೇನೆ ಎಂದು ಸಾಬೀತಾದ್ರೆ ನೂರಕ್ಕೆ ನೂರರಷ್ಟು ರಾಜೀನಾಮೆ ನೀಡುತ್ತೇನೆ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ವಿಜಯನಗರ ಹಂಪಿ ವಿವಿಯಲ್ಲಿ ಶಾಸಕ ಬಿ ಆರ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ವಸತಿ ಸಚಿವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಜಮೀರ್ ಏನು ಹೇಳಿದ್ದಾರೆ ಎನ್ನುವುದನ್ನು ನೋಡಿಕೊಂಡು ಮಾತಾಡ್ತೀನಿ. ನಾಳೆ ಸಿಎಂ, ಡಿಸಿಎಂ ನನ್ನ ಕರೆದಿದ್ದಾರೆ. ಅವರನ್ನು ಭೇಟಿ ಮಾಡುತ್ತೇನೆ. ಈ ಬಗ್ಗೆ ಜಮೀರ್ ಅವರು ನನ್ನ ಜೊತೆ ಮಾತನಾಡಿಲ್ಲ‌. ಯಾವ ಪಂಚಾಯಿತಿಯಲ್ಲಿ ಅವ್ಯವಹಾರ ಆಗಿದೆ ಎಂದು ಡಿಟೇಲ್ ಆಗಿ ಹೇಳಿದ್ದೇನೆ. ನಾನು ಕೇಳಿದ್ದು ಎರಡು ಸಾವಿರ ಮನೆ ಅಲ್ಲ, ಆರು ಸಾವಿರ ಮನೆ ಕೇಳಿದ್ದೇನೆ‌ ಅಂತ ಹೇಳಿದ್ರು‌. ಇದೇ ವೇಳೆ ಮಾತಾಡಿ, ಮಾಗಡಿ ಶಾಸಕ ಬಾಲಕೃಷ್ಣ ಡಿಕೆ ಬ್ರದರ್ಸ್ ಆಶೀರ್ವಾದದಿಂದ ನನಗೆ ಅನುದಾನ ಸಿಗ್ತಾ ಇದೆ ಅಂತ ಹೇಳಿದ್ದಾರೆ‌. ನನಗೆ ಯಾರ ಆಶೀರ್ವಾದವೂ…

Read More