Author: Times of bayaluseeme
ನವದೆಹಲಿ: ಭಾರತದ ತಾರಾ ಕ್ರಿಕೆಟರ್, ಕರ್ನಾಟಕದ ವೇದಾ ಕೃಷ್ಣಮೂರ್ತಿ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವೇದ ಅವರು 2020ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಕೊನೆ ಬಾರಿ ಪ್ರತಿನಿಧಿಸಿದ್ದರು. ಆ ಬಳಿಕ ಅವಕಾಶಕ್ಕಾಗಿ ಕಾಯುತ್ತಿದ್ದರೂ ತಂಡಕ್ಕೆ ಆಯ್ಕೆಯಾಗಿರ ಲಿಲ್ಲ. ದೇಸಿ ಕ್ರಿಕೆಟ್‌ನಲ್ಲಿ ಕರ್ನಾಟಕ ಹಾಗೂ ರೈಲ್ವೇಸ್ ತಂಡಗಳಿಗೆ ನಾಯಕಿಯಾಗಿದ್ದ ವೇದಾ, ಕಳೆದ ವರ್ಷ ಡಬ್ಲ್ಯುಪಿಎಲ್ ನಲ್ಲಿ ಯುಪಿ ವಾರಿಯರ್ಸ್ ಪರ ಆಡಿದ್ದರು. ಚಿಕ್ಕಮಗಳೂರಿನ ಕಡೂರಿನವರಾದ ವೇದ ಕರ್ನಾಟಕದ ಮಾಜಿ ಕ್ರಿಕೆಟರ್ ಅರ್ಜುನ್ ಹೊಯ್ಸಳ ಅವರನ್ನು ವಿವಾಹವಾಗಿದ್ದಾರೆ. ಕೋವಿಡ್ ವೇಳೆ ತಮ್ಮ ತಾಯಿ, ಸಹೋದರಿ ಯನ್ನು ಕಳೆದುಕೊಂಡಿದ್ದರು
ಬೆಂಗಳೂರು: ಈ ಬಾರಿಯೂ ಅಭಿಮನ್ಯು ಆನೆ ದಸರಾ ಜಂಬೂ ಸವಾರಿಯಲ್ಲಿ ಅಂಬಾರಿ ಹೊರಲಿದ್ದು, ಆಗಸ್ಟ್ 4ರಂದು ಹುಣಸೂರು ಬಳಿಯ ವೀರನಹೊಸಳ್ಳಿಯಿಂದ ವಿಧ್ಯುಕ್ತವಾಗಿ ಗಜಪಯಣಕ್ಕೆ ಚಾಲನೆ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.ವಿಕಾಸಸೌಧದಲ್ಲಿ 2025ನೇ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಒಟ್ಟು 14 ಆನೆಗಳ ಪೈಕಿ 9 ಆನೆಗಳ ಪಟ್ಟಿ ಬಿಡುಗಡೆ ಮಾಡಿದ ಅವರು, 2020ರಿಂದ ವಿಜಯ ದಶಮಿಯ ದಿನದಂದು ಜಂಬೂಸವಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿ ವಿಗ್ರಹವಿರುವ ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯುವೇ ಕ್ಯಾಪ್ಟನ್ ಆಗಲಿದ್ದಾನೆ ಎಂದು ಮಾಹಿತಿ ನೀಡಿದರು.ನಾಗರಹೊಳೆಯ ಮತ್ತಿಗೋಡು ಶಿಬಿರದಲ್ಲಿರುವ 59 ವರ್ಷ ವಯಸ್ಸಿನ ಅಭಿಮನ್ಯು 300ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆ ಹಾಗೂ 80ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಪ್ರಮುಖ ಕುಮ್ಕಿ ಆನೆ ಎಂದೇ ಖ್ಯಾತನಾಗಿದ್ದಾನೆ ಎಂದು ಹೇಳಿದರು. ಈ ಬಾರಿಯ ಜಂಬೂಸವಾರಿಯಲ್ಲಿ ಮತ್ತೀಗೋಡು ಶಿಬಿರದ ಭೀಮ (25 ವರ್ಷ), ದುಬಾರೆ ಶಿಬಿರದ ಕಂಜನ್ (24), ಧನಂಜಯ (44) ಮತ್ತು ಪ್ರಶಾಂತ್ (53), ಬಳ್ಳೆ…
ಫಹಾದ್ ಫಾಸಿಲ್ ಹೆಸರು ಕೇಳದ ಸಿನಿಮಾ ಪ್ರೇಮಿಗಳಿಲ್ಲ. ಮಲಯಾಳಂ ನಟ ಫಹಾದ್ ಈಗ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಅವರ ನಟನೆಗೆ ಫಿದಾ ಆಗದವರಿಲ್ಲ. ಫಹಾದ್ ಫಾಸಿಲ್ ಈಗ ಮಲಯಾಳಂ ಮಾತ್ರವೇ ಅಲ್ಲದೆ ಹಲವಾರು ಭಾಷೆಗಳ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಯಾವ ಪಾತ್ರಗಳೂ ಸವಾಲೆ ಅಲ್ಲವೇನೋ ಎಂಬಂತೆ ನಟಿಸುತ್ತಾರೆ ಫಹಾದ್. ಸಖತ್ ಬೇಡಿಕೆಯ ನಟರಾಗಿರುವ ಫಹಾದ್, ಬೇಡಿಕೆಗೆ ತಕ್ಕಂತೆ ಕೋಟ್ಯಂತರ ರೂಪಾಯಿ ಸಂಭಾವನೆಯನ್ನೂ ಪಡೆಯುತ್ತಾರೆ. ಆದರೆ ಫಹಾದ್ಗೆ ಟ್ಯಾಕ್ಸಿ ಡ್ರೈವರ್ ಆಗುವ ಆಸೆಯಂತೆ.ನಟರುಗಳು ನಿವೃತ್ತಿ ಹತ್ತಿರ ಬರುತ್ತಿದ್ದಂತೆ ಯಾವುದಾದರೂ ರಾಜಕೀಯ ಪಕ್ಷ ಸೇರಿಕೊಂಡು ಚುನಾವಣೆಗೆ ನಿಂತು ರಾಜಕಾರಣಿಯಾಗಿ ಆರಾಮವಾಗಿ ಜೀವನ ಕಳೆಯುತ್ತಾರೆ. ಇನ್ನು ಕೆಲವರು ಸಿನಿಮಾ ನಿರ್ಮಾಣ ಸಂಸ್ಥೆಗಳನ್ನು ತೆರೆದು ಸಿನಿಮಾ ಮಾಡುತ್ತಾ ಜೀವನ ಕಳೆಯುತತಾರೆ. ಆದರೆ ಫಹಾದ್ ಫಾಸಿಲ್ಗೆ ನಟನೆಯಿಂದ ನಿವೃತ್ತರಾದ ಬಳಿಕ ಟ್ಯಾಕ್ಸಿ ಡ್ರೈವರ್ ಆಗಬೇಕು ಎಂಬ ಆಸೆಯಂತೆ. ಹೀಗೆಂದು ಅವರೇ ಹೇಳಿಕೊಂಡಿದ್ದಾರೆ. 2020 ರಲ್ಲಿ ಫಹಾದ್ ಫಾಸಿಲ್ ಈಗಿನಷ್ಟು ಜನಪ್ರಿಯ ನಟ ಆಗಿರಲಿಲ್ಲ. ಆಗ ಸಂದರ್ಶನವೊಂದರಲ್ಲಿ…
ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮತ್ತೆ ವಜಾಗೊಳಿಸಿದೆ. ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಬಾರಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳ ತನಿಖೆಗಾಗಿ ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬೆಳ್ತಂಗಡಿಯಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಧರ್ಮಸ್ಥಳ ಪಟ್ಟಣದ ನಿವಾಸಿಯೊಬ್ಬರು ರಾಜ್ಯ ಡಿಜಿಪಿಗೆ ಸಲ್ಲಿಸಿದ ದೂರಿನ ಮೇರೆಗೆ ಎಸ್‌ಐಟಿ ರಚಿಸಲಾಗಿದ್ದು, ಕೆಲವು ಪೊಲೀಸ್ ಸಿಬ್ಬಂದಿ ಮತ್ತು ಇತರರು ಭಾಗಿಯಾಗಿರುವ ಅಕ್ರಮ ಬಂಧನ, ಕಸ್ಟಡಿ ಚಿತ್ರಹಿಂಸೆ, ಸುಲಿಗೆ ಮತ್ತು ಆಸ್ತಿಗೆ ಸಂಬಂಧಿಸಿದ ಅಕ್ರಮಗಳು ಸೇರಿದಂತೆ ಗಂಭೀರ ಅಪರಾಧಗಳನ್ನು ಆರೋಪಿಸಿದ್ದಾರೆ. ದೂರುದಾರರ ಸುರಕ್ಷತೆ ಮತ್ತು ಸುಗಮ ತನಿಖೆಯನ್ನು ಖಚಿತಪಡಿಸಿಕೊಳ್ಳಲು, ತಂಡವನ್ನು ಧರ್ಮಸ್ಥಳದ ಬದಲಿಗೆ ಬೆಳ್ತಂಗಡಿಯಲ್ಲಿ ಇರಿಸಲಾಗಿದೆ. ಎಸ್‌ಐಟಿ ಈಗಾಗಲೇ ಔಪಚಾರಿಕ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದು, ಆರೋಪಗಳಿಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸುತ್ತಿದೆ ಮತ್ತು ಶೀಘ್ರದಲ್ಲೇ ಹೇಳಿಕೆಗಳನ್ನು ದಾಖಲಿಸಲು ಯೋಜಿಸಿದೆ.
ಬೆಂಗಳೂರು: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಹೊತ್ತಿದ್ದ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. ಶಾಲಿನಿ ರಜನೀಶ್ ದೂರು ನೀಡಿಲ್ಲ, 3ನೇ ವ್ಯಕ್ತಿ ದೂರು ಆಧರಿಸಿ ಕೇಸ್ ದಾಖಲಿಸಲಾಗಿದೆ. ಹೇಳಿಕೆಯಲ್ಲಿ ಅಪರಾಧದ ಅಂಶಗಳಿಲ್ಲವೆಂದು ಎಂಎಲ್ಸಿ ರವಿಕುಮಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ವಾದ-ಪ್ರತಿವಾದ ಬಳಿಕ ಮಧ್ಯಂತರ ತಡೆ ನೀಡಿ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ವಿಚಾರಣೆ ವೇಳೆ ರಾಜಕಾರಣಿಗಳು ಹೊಸ ಬಗೆಯ ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂದು ಮೌಖಿಕವಾಗಿ ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು.
ಬೆಂಗಳೂರು: ತಮ್ಮ 59ನೇ ವರ್ಷದ ಹುಟ್ಟುಹಬ್ಬದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ನಾನು ಧೂಮಪಾನ ತ್ಯಜಿಸಿದ್ದೇನೆ ಎಂದು ಘೋಷಿಸಿಕೊಂಡ ವಿಷಯ ಎಲ್ಲರಿಗೂ ಗೊತ್ತಿದೆ. ಅವರಿಗೆ ದೀರ್ಘಕಾಲದಿಂದ ಧೂಮಪಾನ ಚಟವಿತ್ತು. ದಿನಕ್ಕೆ ಸುಮಾರು 100 ಸಿಗರೇಟು ಸೇದುತ್ತಿದ್ದರು. ವಯಸ್ಸು 60 ಆಗುತ್ತಾ ಬಂತು ಎಂದಾಗ ಆರೋಗ್ಯ ದೃಷ್ಟಿಯಿಂದ ಕೆಲವು ಚಟಗಳನ್ನು ಬಿಡಬೇಕು ಎಂದು ಗಟ್ಟಿ ಮನಸ್ಸು ಮಾಡಿ ಶಾರೂಕ್ ಈ ನಿರ್ಧಾರಕ್ಕೆ ಬಂದಿದ್ದರು.ನಾವು ಸಾಮಾನ್ಯ ಮನುಷ್ಯರು ಒಂದು ಕ್ಷಣ ಯೋಚಿಸಬೇಕು. ಆರೋಗ್ಯಕರ ಜೀವನವನ್ನು ನಡೆಸಲು ನಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಮಾಡಲು ಯಾವಾಗ ಬೇಕಾದರೂ ತೀರ್ಮಾನ ಮಾಡಬಹುದು, ವಯಸ್ಸಾಯಿತು, ಇನ್ನು ಚಟಗಳನ್ನು ಬಿಟ್ಟು ಏನು ಉಪಯೋಗ ಎಂದು ಕೂರಬೇಕಾಗಿಲ್ಲ ಎಂಬುದನ್ನು ಶಾರೂಕ್ ಖಾನ್ ನಿರ್ಧಾರ ತೋರಿಸಿಕೊಡುತ್ತದೆ.ಒಬ್ಬ ವ್ಯಕ್ತಿಯು ಯಾವಾಗ ಕೆಟ್ಟ ಚಟಗಳನ್ನು ನಿಲ್ಲಿಸಲು ನಿರ್ಧರಿಸಿದರೂ, ಧೂಮಪಾನವನ್ನು ತ್ಯಜಿಸುವುದು ಒಟ್ಟಾರೆ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ನಿರ್ಧಾರ ಮಾಡಿದ ಮೇಲೆ ಅದನ್ನು ಪಾಲಿಸಿಕೊಂಡು ಹೋಗುವುದು ಮುಖ್ಯವಾಗುತ್ತದೆ. ದುರಭ್ಯಾಸಗಳನ್ನು ತ್ಯಜಿಸಿದ ನಂತರ ತಕ್ಷಣದ ಮತ್ತು…
ಚಿತ್ರದುರ್ಗ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೇತೃತ್ವದಲ್ಲಿ ಹಾಗೂ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಉಚಿತ ಕಿವಿಯ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆಯನ್ನು ಜುಲೈ 27, 28 ರಂದು ಬೆಳಗ್ಗೆ 10 ರಿಂದ 5 ರವರೆಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ. ಟೀಮ್ ಈಶ್ವರ್ ಮಲ್ಪೆಯವರು ಅನೇಕ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಈಗ ನಾವು ಶ್ರವಣದ ಸಮಸ್ಯೆಯಿಂದ (ಕೇಳಿಸಿಕೊಳ್ಳುವ ಸಮಸ್ಯೆ) ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಮಾಡುತ್ತಿದ್ದು, ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ನಮ್ಮ ಸಂಸ್ಥೆಯಾದ ಟೀಮ್ ಈಶ್ವರ್ ಮಲ್ಲೆಯವರು ಶ್ರವಣದ ಯಂತ್ರಕ್ಕೆ ಆಗುವ ವೆಚ್ಚದ ಶೇ.40% ಮೊತ್ತವನ್ನು ಭರಿಸಲಾಗುತ್ತಿದ್ದು, ರೋಗಿಗಳು ಇವರ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. ಟೀಮ್ ಈಶ್ವರ್ ಮಲ್ಪೆ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಚಿತ್ರದುರ್ಗ ಜಿಲ್ಲಾ ಘಟಕ ಇವರು ಆಯೋಜಿಸಿರುವ ಈ ಶಿಬಿರದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಕೇಳಿಸಿಕೊಳ್ಳುವ ತೊಂದರೆಯವರಿಗೆ ಸಂತೋಷವನ್ನು ನೀಡಿ. ಸೂಚನೆಗಳು ನೋಂದಣಿ ಕಡ್ಡಾಯವಾಗಿದೆ…
ಚಿತ್ರದುರ್ಗ : ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚಿಗೆ ಆಯೋಜಿಸಿದ್ದ 42ನೇ ರಾಜ್ಯಮಟ್ಟದ ಟೈಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಸ್ಪರ್ಧಿಸಿದ್ದ ಚಿತ್ರದುರ್ಗದ ಗೋಲ್ಸ್ ಟೇಕ್ವಾಂಡೋ ಸೆಂಟರ್ ನ ವಿದ್ಯಾರ್ಥಿಗಳು ಗೆಲವು ಸಾಧಿಸುವ ಮೂಲಕ ಕೀರ್ತಿ ತಂದಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ವಿವರ ಕಾನಿಷ್ಕ, ದೀಪಾಲಿ – ಚಿನ್ನದ ಪದಕ ರೋಹಿತ್ – ಬೆಳ್ಳಿ ಪದಕ ಲಲಿತಾ – ಬೆಳ್ಳಿ ಪದಕ ಪ್ರಿಯ – ಬೆಳ್ಳಿ ಪದಕ ಪರಿಣಿತ – ಬೆಳ್ಳಿ ಪದಕ ನಿಷ್ಠ ಬ್ರಮ್ – ಬೆಳ್ಳಿ ಪದಕ ಕಂಚಿನ ಪದಕ ಪಡೆದ ವಿದ್ಯಾರ್ಥಿಗಳು ಸುಹಾಸಿನಿ- ಕಂಚಿನ ಪದಕ ಯಶಸ್ವಿನಿ – ಕಂಚಿನ ಪದಕ ಲಕ್ಷಿತ್ ಕೋಟಿ – ಕಂಚಿನ ಪದಕ ಹೇಮಂತ್ – ಕಂಚಿನ ಪದಕ ಮನೋಜ್ – ಕಂಚಿನ ಪದಕ ಅಶೋಕ್ – ಕಂಚಿನ ಪದಕ ವಿದ್ಯಾರ್ಥಿಗಳಿಗೆ ಎರಡ್ಮೂರು ತಿಂಗಳಿಂದ ತರಬೇತಿ ನೀಡಿದ ಗಿರೀಶ್, ಆರ್.ಸೌಮ್ಯ ಕ್ರೀಡಾಳುಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ: ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡ ಎನ್.ದೊಡ್ಡಯ್ಯರನ್ನ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಪ್ರಾಚಾರ್ಯ ಎನ್. ದೊಡ್ಡಯ್ಯ ಮಾತನಾಡಿ ನನ್ನ ಅಧಿಕಾರ ಅವಧಿಯಲ್ಲಿ ಎಲ್ಲಾ ಉಪನ್ಯಾಸಕರ ಸಹಕಾರಮತ್ತು ವಿಶ್ವಾಸ ಪಡೆದುಕೊಂಡು ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಕಾಲೇಜಿನ ಫಲಿತಾಂಶ ಹೆಚ್ಚಿಸಿ ಕಾಲೇಜಿಗೆಮತ್ತು ಜಿಲ್ಲೆಗೆ ಕೀರ್ತಿ ತರುವುದಕ್ಕೆ ಶ್ರಮಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್ ಲಕ್ಷ್ಮಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಡಾ. ಬಿ ಎಂ ಗುರುನಾಥ್ ಉಪನ್ಯಾಸಕರುಗಳಾದ ಕೆ.ತಿಪ್ಪೇಸ್ವಾಮಿ ಡಾ. ಮೋಹನ್ ಸಾಹಿತಿ ಕೆರೆಯಾಗಳಳ್ಳಿ ತಿಪ್ಪೇಸ್ವಾಮಿ ಶಖೀಲ್ ಎಚ್.ಆರ್ ಜಬಿವುಲ್ಲ ವಿ.ಚನ್ನಬಸಪ್ಪ ಶಶಿಧರ್ ರೇಣುಕಾ ಇಂದಿರಾ ವಿದ್ಯಾ ಲೋಕೇಶ್ರಘು,ಹೇಮಂತ್ ವೆಂಕಟೇಶ್ ರೆಡ್ಡಿ ಕಾಮರಾಜು ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.