Author: Times of bayaluseeme
ಚಿತ್ರದುರ್ಗ: ಭಾರತ್ ಸಂಚಾರ ನಿಗಮದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವನೌಕರರಿಗೆ ಕೇಂದ್ರ ಸರ್ಕಾರ ತುಂಬಾ ಅನ್ಯಾಯ ಮಾಡುತ್ತಿದೆ.ನೌಕರರ ಪಿಂಚಣಿ ವಿಷಯದಲ್ಲಿ ಆಗಿರುವ ದೊಡ್ಡ ಪ್ರಮಾಣದ ಈಲೋಕಪವನ್ನು ಕೂಡಲೇ ಸರಿ ಪಡಿಸಿ ನ್ಯಾಯಯುತವಾದನಿರ್ಧಾರ ಕೈಗೊಳ್ಳಬೇಕು ಎಂದು ಬಿಎಸ್‍ಎನ್‍ಎಲ್ ಪಿಂಚಣಿದಾರರುಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆಚಿತ್ರದುರ್ಗದಲ್ಲಿ ಅಖಿಲ ಭಾರತೀಯ ಬಿಎಸ್‍ಎನ್‍ಎಲ್ ಪಿಂಚಣಿದಾರರಕ್ಷೇಮಾಭಿವೃದ್ದಿ ಸಂಘದ ಜಿಲ್ಲಾ ಸಮಿತಿಯ ಅಧ್ಯಕ್ಷಬೋರಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದಅಧಿವೇಶನದಲ್ಲಿ ಕೇಂದ್ರ ಸರ್ಕಾರದ ನೌಕರರ ವಿರೋಧಿ ನೀತಿಯ ವಿರುದ್ದ ತೀವ್ರ ಅಸಮಧಾನ ವ್ಯಕ್ತವಾಯಿತುಸಭೆಯಲ್ಲಿ ಭಾಗವಹಿಸಿದ್ದ ಬಹಳಷ್ಟು ಮಂದಿ ನೌಕರರರು,ಸಂಘದ ವಿವಿಧ ಹಂತದ ಪದಾಧಿಕಾರಿಗಳು ಬಿಎಸ್‍ಎನ್‍ಎಲ್ ನೌಕರರಿಗೆಪ್ರತಿ ಹಂತದಲ್ಲಿಯೂ ಆಗುತ್ತಿರುವ ಅನ್ಯಾಯದ ವಿರುದ್ದ ದ್ವನಿಎತ್ತಿದರು. ಕೇಂದ್ರ ಸರ್ಕಾರ ತನ್ನ ತಾರತಮ್ಯ ನೀತಿಯನ್ನುಬದಲಾಯಿಸಿಕೊಂಡು ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಬೇಕುಎಂದು ಸಭೆ ಒಕ್ಕೋರಲಿನಿಂದ ಆಗ್ರಹಿಸಿತುಈ ಸಭೆಯಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಖಿಲ ಭಾರತೀಯಬಿಎಸ್‍ಎನ್‍ಎಲ್ ಪಿಂಚಣಿದಾರರ ಕ್ಷೇಮಾಭಿವೃದ್ದಿ ಸಂಘದ ವಲಯಮಟ್ಟದ ಕಾರ್ಯದಶಿ ಜಯಶಂಕರ್ ಅವರು ಈ ಸಂದರ್ಭದಲ್ಲಿಮಾತನಾಡಿ, ಕೇಂದ್ರ ಸರ್ಕಾರವು ನಮ್ಮ ನೌಕರರಿಗೆ ನಿಜಕ್ಕೂಅನ್ಯಾಯ ಮಾಡುತ್ತಿದೆ ಎನ್ನುವ ಭಾವ ವ್ಯಕ್ತವಾಗಿದೆ ಸರ್ಕಾರತನ್ನ ನಿಲುವನ್ನು ಬದಲಾಯಿಸಿಕೊಂಡು…
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ಭೂ ಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೆಐಎಡಿಬಿಯಿಂದ 13 ಗ್ರಾಮಗಳಲ್ಲಿ 1,777 ಎಕರೆ ಭೂ ಸ್ವಾಧೀನ ವಿರೋಧಿಸಿ ರೈತರು ಸುಮಾರು 1,200ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದರು. ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ನಿರ್ಧರಿಸಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರ ಜೊತೆಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಚನ್ನರಾಯಪಟ್ಟಣ ಸುತ್ತಮುತ್ತಲಿನ 13 ಗ್ರಾಮಗಳ ಭೂ ಸ್ವಾಧೀನಕ್ಕೆ ಕೆಐಎಡಿಬಿಗೆ ಭೂಮಿ ನೀಡಲು ರೈತರು, ಸಂಘಟನೆಗಳು ಒಪ್ಪುತ್ತಿಲ್ಲ. ರಾಜ್ಯ ಸರ್ಕಾರ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು. 1,777 ಎಕರೆ ಡಿನೋಟಿಫಿಕೇಷನ್ ಕೈಬಿಟ್ಟಿದ್ದೇವೆ. ಆದರೆ, ಭೂಮಾಲೀಕರು ಸ್ವಯಂ ಪ್ರೇರಿತರಾಗಿ ಭೂಮಿ ನೀಡಲು ಮುಂದಾದರೆ ಖರೀದಿಸುತ್ತೇವೆ. ಆದರೆ, ಬಲವಂತವಾಗಿ ಖರೀದಿಸುವುದಿಲ್ಲ ಸ್ವಯಂ ಪ್ರೇರಿತರಾಗಿ ಭೂಮಿ ನೀಡುವವರಿಗೆ ಸೂಕ್ತ ಪರಿಹಾರ ನೀಡುತ್ತೇವೆ. ರಾಜ್ಯಕ್ಕೆ ಕೈಗಾರಿಕೆಗಳು ಬರಬೇಕು ಎಂಬುದು ನಮ್ಮ…
ಬೆಂಗಳೂರು: ರಾಜ್ಯದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸರಣಿ ಸಭೆಗಳನ್ನು ನಡೆಸುತ್ತಿದ್ದು, ಶಾಸಕರ ದೂರುಗಳನ್ನು ಆಲಿಸಿದ ಬಳಿಕ ಇದೀಗ ಸಚಿವರೊಂದಿಗೆ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಸಭೆಗಳು ನವೆಂಬರ್ ನಂತರ ನಡೆಯಲಿರುವ ಸಂಭಾವ್ಯ ಸಚಿವ ಸಂಪುಟ ಪುನರಾಚನೆಗೆ ಮುಂಚಿತವಾಗಿ ನಡೆಸಲಾಗುತ್ತಿರುವ ಸಚಿವರ ಕಾರ್ಯಕ್ಷಮತೆಗಳ ಮೌಲ್ಯಮಾಪನ ಎಂದು ಹೇಳಲಾಗುತ್ತಿದೆ. ಸುರ್ಜೇವಾಲಾ ಅವರು ಸಿದ್ದರಾಮಯ್ಯ ಅವರ ಆಪ್ತರು ಎಂದು ಪರಿಗಣಿಸಲಾದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಮ್ ಖಾನ್ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು. ಸುರ್ಜೇವಾಲಾ ಅವರು ಮೊದಲು ಶಾಸಕರೊಂದಿಗೆ ಸಭೆ ನಡೆಸಿದ್ದು, ಸಿದ್ದು ಆಪ್ತರಲ್ಲಿ ಅಸಮಾಧಾನ ತರಿಸಿತ್ತು. ಏಕೆಂದರೆ, ಡಿ.ಕೆ.ಶಿವಕುಮಾರ್ ಪರವಿದ್ದ ಶಾಸಕರು ಮುಖ್ಯಮಂತ್ರಿ ಬದಲಾವಣೆಯನ್ನು ಬಯಸಿದ್ದರು. ಹೀಗಾಗಿಯೇ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ 5 ವರ್ಷವೂ ನಾನೇ ಸಿಎಂ ಎಂದು ಪ್ರತಿಪಾದಿಸಿದ್ದರು ಎಂದು…
ಬೆಂಗಳೂರು: ಧರ್ಮಸ್ಥಳ ಕೇಸ್ ಸಂಬಂಧ ಸಾರ್ವಜನಿಕವಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸುವ ಮೂಲಕ ಚರ್ಚೆ ಹಾಗೂ ವ್ಯಕ್ತಿಯೋರ್ವ ಸಾಕ್ಷಿಯಾಗಿ ಮಾರ್ಪಟ್ಟು ಹೇಳಿಕೆ ನೀಡಿದ ಬಳಿಕ ಕೆಲ ಕಾನೂನು ಕ್ರಮಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಧರ್ಮಸ್ಥಳದಲ್ಲಿ ಕೊಲೆ, ಅಸ್ವಾಭಾವಿಕ ನಾಪತ್ತೆ ಪ್ರಕರಣ ಹಾಗೂ ಅತ್ಯಾಚಾರ ನಡೆದ ಬಗ್ಗೆ ಗಂಭೀರ ಆರೋಪ ಕೇಳಿ ಬಂದ ಹಿನ್ನಲೆ ಈಗ ಧರ್ಮಸ್ಥಳ ಕೇಸ್ ನಲ್ಲಿ ರಾಜ್ಯ ಮಹಿಳಾ ಆಯೋಗ ಎಂಟ್ರಿಯಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸಿಎಂ ಸಿದ್ದರಾಮಯ್ಯ, ಸರ್ಕಾರದ ಚೀಫ್ ಸೆಕ್ರೆಟರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿಗೆ ಪತ್ರ ಬರೆದಿದ್ದಾರೆ. ಹಾಗಾದ್ರೆ ಪತ್ರದಲ್ಲಿ ಏನಿದೆ ಅನ್ನೋದನ್ನು ಇಲ್ಲಿ ನೋಡೋಣ… ಧರ್ಮಸ್ಥಳ ವ್ಯಾಪ್ತಿಯಲ್ಲಿನ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್.ಐ.ಟಿ)ವನ್ನು ರಚಿಸುವಂತೆ ಕೋರಿ ಮೇಲಿನ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ. ದಿನಾಂಕ: 12-07-2025ರಂದು ಟೈಮ್ಸ್…
ಕಾಲಿವುಡ್ ಸ್ಟಾರ್ ಆರ್ಯ ನಟನೆಯ ಹೊಸ ಸಿನಿಮಾದ ಶೂಟಿಂಗ್ ಮಾಡುವ ವೇಳೆ ಸ್ಟಂಟ್ಮ್ಯಾನ್ ಒಬ್ಬರು ನಿಧನರಾಗಿದ್ದಾರೆ. ಶೂಟಿಂಗ್ನಲ್ಲಿ ಕಾರು ಸ್ಟಂಟ್ ಮಾಡುವಾಗ ಈ ಅವಘಡ ನಡೆದಿದೆ ಎಂದು ಹೇಳಲಾಗಿದೆ. ತಮಿಳು ಸಿನಿ ರಂಗದ ಸಾಹಸ ಕಲಾವಿದ ರಾಜು ಎನ್ನುವರು ಕೊನೆಯುಸಿರೆಳೆದಿದ್ದಾರೆ. ತಮಿಳು ಸಿನಿಮಾದ ಸ್ಟಾರ್ ನಟ ಆರ್ಯ ಅವರ ಹೊಸ ಸಿನಿಮಾದ ಶೂಟಿಂಗ್ನಲ್ಲಿ ಕಾರು ಸ್ಟಂಟ್ ಮಾಡುವ ಸನ್ನಿವೇಶ ಇತ್ತು. ಇದಕ್ಕಾಗಿ ಸಾಹಸ ಕಲಾವಿದ ರಾಜು ಅವರಿಂದ ಕಾರು ಸ್ಟಂಟ್ ಮಾಡಿಸಲಾಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿ ಘಟನೆಯಲ್ಲಿ ಸ್ಟಂಟ್ ಮ್ಯಾನ್ ರಾಜು ಅವರು ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ತಮಿಳು ನಟ ವಿಶಾಲ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ನಾನು, ರಾಜು ಸಾಕಷ್ಟು ಸಿನಿಮಾಗಳಲ್ಲಿ ಸ್ಟಂಟ್ಗಳನ್ನು ಮಾಡಿದ್ದೇವೆ. ಅವರನ್ನು ಕಳೆದುಕೊಂಡಿರುವುದು ನಮಗೆ ತುಂಬಾ ದುಃಖ ತರಿಸಿದೆ. ಕಾರು ಉರುಳಿಸುವ ಸನ್ನಿವೇಶದ ಸ್ಟಂಟ್ ಮಾಡುವಾಗ ಈ ಘಟನೆ ನಡೆದಿದೆ. ತಮಿಳು ಸಿನಿ…
ನಿಂಬೆ ಹಣ್ಣು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ನಿಂಬೆ ಹಣ್ಣನ್ನು ಆಹಾರದಲ್ಲಿ, ಪಾನೀಯಗಳಲ್ಲಿ ಮತ್ತು ಮನೆಮದ್ದುಗಳಲ್ಲಿಯೂ ಬಳಸಲಾಗುತ್ತದೆ.ನಿಂಬೆ ಹಣ್ಣಿನ ಕೆಲವು ಮುಖ್ಯ ಉಪಯೋಗಗಳು: ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ನಿಂಬೆಹಣ್ಣು ಜೀರ್ಣಕಾರಿ ರಸಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ: ನಿಂಬೆಹಣ್ಣು ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ: ನಿಂಬೆಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತದೆ: ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲ ಮೂತ್ರಪಿಂಡದ…
ಚಿತ್ರದುರ್ಗ: ಗಾಣಿಗ ಸಮುದಾಯಕ್ಕೆ ಸರ್ಕಾರದಿಂದ ಹಾಗೂ ನನ್ನ ವೈಯಕ್ತಿಕವಾಗಿ ಸಹಾಯ ಮತ್ತು ಸಹಕಾರವನ್ನು ಮಾಡುವುದಾಗಿಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಭರವಸೆ ನೀಡಿದರು.ಚಿತ್ರದುರ್ಗ ತಾಲೂಕು ಅಖಿಲ ಭಾರತ ಗಾಣಿಗರ ಸಂಘದ ವತಿಯಿಂದ ನಗರದ ಜಿ.ಜಿ. ಸಮುದಾಯ ಭವನದಲ್ಲಿಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಗಾಣಿಗ ಸಮಾಜ ಪುರಾತನವಾದ ಸಮಾಜವಾಗಿದೆ. ನನಗೆರಾಜಕಾರಣದಲ್ಲಿ ಚಳ್ಳಕರೆ ಹಾಗೂ ಹಿರಿಯೂರಿನಲ್ಲಿ ಸಹಾಯವನ್ನು ಮಾಡಿದೆ ನನ್ನ ಕೈಹಿಡಿದಿದೆ. ನನ್ನ ಗೆಲುವುವಿಗೆಸಹಕಾರಿಯಾಗಿದೆ. ನಿಮ್ಮ ಸಮಾಜದ ಋಣ ನನ್ನ ಮೇಲಿದೆ ನಿಮ್ಮ ಸಮುದಾಯದ ಪ್ರಗತಿಗೆ ಸರ್ಕಾರ ಹಾಗೂ ನನ್ನವೈಯಕ್ತಿಕವಾಗಿ ಸಹಾಯವನ್ನು ಮಾಡುವುದಾಗಿ ತಿಳಿಸಿದರು. ಗಾಣಿಗ ಸಮಾಜಕ್ಕೆ ನಿವೇಶನವನ್ನು ನೀಡುವಂತೆ ಮನವಿಯನ್ನು ಸಲ್ಲಿಸಲಾಗಿದೆ. ಇದರ ಬಗ್ಗೆ ಚಿತ್ರದುರ್ಗ ನಗರಸಭೆ ಹಾಗೂ ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷರ ಜೊತೆಯಲ್ಲಿ ಮಾತನಾಡಿ, ಕಡಿಮೆ ದರದನ್ನು ನಿವೇಶನವನ್ನು ಕೂಡಿಸುವ ಕೆಲಸವನ್ನುಮಾಡುತ್ತೇನೆ, ಸರ್ಕಾರವೂ ಸಹಾ ಇಂತಹ ಸಮಾಜಗಳಿಗೆ ಶೇ.10ರ ರಿಯಾಯಿತಿ ದರದಲ್ಲಿ ನಿವೇಶನವನ್ನು…
ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರ ನೀಡಿದ್ದ ಫ್ರೀ ಭಾಗ್ಯಗಳಲ್ಲಿ ಒಂದಾದ ಶಕ್ತಿ ಯೋಜನೆಯಲ್ಲಿ ಇದುವರೆಗೂ 500 ಕೋಟಿ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ ಹಿನ್ನಲೆ ಇಂದು ಸರ್ಕಾರ ಎಲ್ಲಾ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಆಯಾ ಉಸ್ತುವಾರಿ ಸಚಿವರು ಸಿಹಿ ಹಂಚಿ ಸಂಭ್ರಮಿಸಲೂ ಸರ್ಕಾರ ಸೂಚನೆ ನೀಡಿದೆ. ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಹ ಸಿಹಿ ಹಂಚಿ ಸಂಭ್ರಮಪಟ್ಟಿದ್ದಾರೆ. ಇದೇ ವೇಳೆ ವಿಪಕ್ಷದ ಮುಖಂಡರು ಮೊಳಕಾಲ್ಮೂರು ಶಾಸಕ ಎನ್ ವೈ ಗೋಪಾಲಕೃಷ್ಣ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿ ಪ್ರಶ್ನೆ ಮಾಡಿದ್ದಾರೆ. ಶಕ್ತಿ ಯೋಜನೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ನಿಶಕ್ತಿ ಎಂಬ ಹಣೆಬರಹ ಬರೆದಿದ್ದಾರೆ. ಇನ್ನು ಮೊಳಕಾಲ್ಮೂರು ಪಟ್ಟಣದಲ್ಲಿ ಸರ್ಕಾರಿ ಬಸ್ ನಿಲ್ದಾಣ ಹಾಗೂ ಬಸ್ ಡಿಪೋ ಉದ್ಘಾಟನೆ ಯಾವಾಗ…? ನಾಯಕನಹಟ್ಟಿಯಲ್ಲಿ ನಿಲ್ದಾಣಕ್ಕೆ ಜಾಗವೇ ಇಲ್ಲ.. ಜಾಗ ಹುಡುಕಿ ಬಸ್ ನಿಲ್ದಾಣ ಯಾವಾಗ ಮಾಡ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇನ್ನು ಶಕ್ತಿ ಯೋಜನೆ ಯಶಸ್ವಿ ಎಂದು ಮೊಳಕಾಲ್ಮೂರು ಬಸ್ ನಿಲ್ದಾಣದಲ್ಲಿ ಸಿಹಿ ಹಂಚಲು ಬಡವ ಕಾಂಗ್ರೆಸ್ ನಾಯಕರಿಗೆ ಧೈರ್ಯದಿಂದ…
ಚಿತ್ರದುರ್ಗ : ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಯುವ ಕರ್ನಾಟಕ ವೇದಿಕೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ರೂಪೇಶ್ ರಾಜಣ್ಣ ಅನುಮತಿ ಮೇರೆಗೆ ರೈತ ಘಟಕದ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ಶಶಿಕಲಾ,ಉಪಾಧ್ಯಕ್ಷರಾಗಿ ಶಿವಮ್ಮ, ಹಿರಿಯೂರು ತಾಲ್ಲೂಕು ಅಧ್ಯಕ್ಷರಾಗಿ ಲಕ್ಷ್ಮಿಕಾಂತ ಬಿ. ಚಿತ್ರದುರ್ಗ ತಾಲ್ಲೂಕು ಉಪಾಧ್ಯಕ್ಷರಾಗಿ ಸತೀಶ್,ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ ಇವರುಗಳನ್ನು ನೇಮಕ ಮಾಡಲಾಯಿತೆಂದು ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷರವಿಕುಮಾರ್‍ನಾಯ್ಕ ತಿಳಿಸಿದ್ದಾರೆ. ವೇದಿಕೆ ಕಾರ್ಯಾಧ್ಯಕ್ಷ ಓಬಣ್ಣ ಎನ್. ಜಿಲ್ಲಾ ಉಪಾಧ್ಯಕ್ಷ ನಂಜಣ್ಣ, ಕಾರ್ಮಿಕ ಘಟಕದ ಅಧ್ಯಕ್ಷಸೈಯದ್ ಅಲಿ, ಖಜಾಂಚಿ ಯಶವಂತ್, ಜಗದೀಶ್, ಸಚಿನ್, ನಾಗರಾಜ್, ನಾಗೇಶ್ ಟಿ. ಮಹೇಶ್ವರಪ್ಪ, ವಿನಯ್, ಗಿರೀಶ್ ಟಿ.ನಾಗರಾಜ್, ರವಿಕುಮಾರ್, ಮಂಜುನಾಥ್ ಇವರುಗಳು ಸಭೆಯಲ್ಲಿ ಭಾಗವಹಿಸಿದ್ದರು.
ಚಿತ್ರದುರ್ಗ : ಐತಿಹಾಸಿಕ ಚಿತ್ರದುರ್ಗದ ಮಧ್ಯ ಭಾಗದಲ್ಲಿರುವ ಭರಮಣ್ಣನಾಯಕನ ಕಾಲದ ಸಂತೆಹೊಂಡದ ತಡೆಗೋಡೆ ಎತ್ತರಿಸಿಮೆಟ್ಟಿಲುಗಳ ಕ್ಲೀನಿಂಗ್‍ಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೂಮಿ ಪೂಜೆ ಸಲ್ಲಿಸಿದರು.ಪೂಜೆ ಸಲ್ಲಿಸಿ ನಂತರ ಮಾತನಾಡಿದ ಶಾಸಕರು ಸಂತೆ ಹೊಂಡಕ್ಕೆ ತನ್ನದೆ ಆದ ಇತಿಹಾಸವಿದೆ. ಇಲ್ಲಿ ಸ್ವಚ್ಚತೆಯನ್ನು ಕಾಪಾಡುವುದು ಮುಖ್ಯವಾಗಿರುವುದರಿಂದ ಮೆಟ್ಟಿಲುಗಳನ್ನು ಸ್ವಚ್ಚಗೊಳಿಸಿ ಮಿನಿ ಪಾರ್ಕ್ ನಿರ್ಮಿಸಿ ಅಂದ ಹೆಚ್ಚಿಸಲಾಗುವುದೆಂದರು. ತಮ್ಮ ಹುಟ್ಟು ಹಬ್ಬದ ನಿಮಿತ್ತ ಇದೆ ಸಂದರ್ಭದಲ್ಲಿ ಪೌರ ಕಾರ್ಮಿಕರೊಂದಿಗೆ ಕೇಕ್ ಕತ್ತರಿಸಿದರು. ನಗರಸಭೆ ಮಾಜಿ ಅಧ್ಯಕ್ಷರುಗಳಾದ ಹೆಚ್.ಮಂಜಪ್ಪ, ಮಹಮದ್ ಅಹಮದ್ ಪಾಷ, ಹೆಲ್ತ್ ಇನ್ಸ್‍ಪೆಕ್ಟರ್ ಭಾರತಿ, ದಫೆದಾರ್ನಿಂಗರಾಜ್ ಇನ್ನು ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.