Author: Times of bayaluseeme

ಚಿತ್ರದುರ್ಗ: ಸಿಗಂದೂರು ಬ್ರಿಡ್ಜ್ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಲೇಟಾಗಿ ಮಾಹಿತಿ ಹೇಳಿದ್ದಾರೆ. ಈಮೊದಲೇ ಇಂಡಿ ಕ್ಷೇತ್ರದಲ್ಲಿ ಕಾರ್ಯಕ್ರಮ ನಿಗದಿಯಾಗಿದೆ. ಅವರ ಪರವಾಗಿ ನಾನು ಕಾರ್ಯಕ್ರಮಕ್ಕೆ ಹಾಜರ್ ಆಗುವೆ.ಸಿ.ಎಂರನ್ನು ಕರೆದಿದ್ದಾರೋ, ಬಿಟ್ಟಿದ್ದಾರೋ ಅದು ಬೇರೆ ಪ್ರಶ್ನೆ. ನಮ್ಮ ರಾಜ್ಯದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಕೇಂದ್ರ ಸಚಿವರುಬರುತ್ತಿದ್ದಾರೆ. ಅವರಿಗೆ ಗೌರವ ನೀಡಲು ಭಾಗಿಯಾಗುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಾಳಿನ ಕಾರ್ಯಕ್ರಮಕ್ಕೆಹೋಗಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗದ ಕಾರ್ಯಕ್ರಮನಿಗದಿ ಆಗುವ ನಾಲ್ಕೈದು ದಿನಗಳ ಮುಂಚೆ ಪಿಕ್ಸ್ ಆಗಿದೆ. ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು ಹೋಗಲು ಅನುಕೂಲ ಆಗುತ್ತದೆ ಎಂದು ತಿಳಿಸಿದ್ದೇವೆಎಂದ ಸಚಿವರು. ಬಿಎಸ್ ವೈ ಪುತ್ರರಿಂದ ಏಕಚಕ್ರಾಧಿಪತ್ಯ ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನುಅಲ್ಲಿಗೆ ಹೋದಮೇಲೆ ಗೊತ್ತಾಗುತ್ತದೆ. ಈಗ ಹೇಗೆ ಗೊತ್ತಾಗುತ್ತದೆ. ಅದು ಖಾಸಗಿ ಕಾರ್ಯಕ್ರಮ ಅಲ್ಲ. ಕೇಂದ್ರ ಸರ್ಕಾರದ ಕಾರ್ಯಕ್ರಮ. ರಾಜ್ಯ ಸರ್ಕಾರದ ಪರ ನಾವು ಸಹಕರಿಸಬೇಕಾಗುತ್ತದೆ ಎಂದರು. 55 ಕಾಂಗ್ರೆಸ್ ಶಾಸಕರ ಟಾರ್ಗೆಟ್ ಎಂದು…

Read More

ಚಿತ್ರದುರ್ಗ : ಹಕ್ಕುಪತ್ರಗಳನ್ನು ಸದ್ಯದಲ್ಲಿಯೇ ನೀಡಲಾಗುವುದು. ಅಲ್ಲಿಯವರೆಗೂ ಸಮಾಧಾನದಿಂದ ಇರುವಂತೆ ಎಂದು ಶಾಸಕಕೆ.ಸಿ.ವೀರೇಂದ್ರ ಪಪ್ಪಿ ಜನತೆಗೆ ಭರವಸೆ ನೀಡಿದರು.ಸಿಹಿನೀರು ಹೊಂಡದ ಏರಿ ಮೇಲಿರುವ ಅರಳಿ ಮರದ ನಾಗರಕಟ್ಟೆ ಆಂಜನೇಯಸ್ವಾಮಿ ದೇವಸ್ಥಾನದ ಕಾಂಪೌಂಡ್ ನಿರ್ಮಾಣಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಪಪ್ಪಿ ಈಗಾಗಲೆ ಒಂದು ಸಾವಿರ ಮನೆಗಳ ಮಂಜೂರಾಗಿದೆ. ಮನೆಗಳಬೇಡಿಕೆ ಹೆಚ್ಚಾಗಿರುವುದರಿಂದ ಇನ್ನು ಐದು ನೂರು ಮನೆಗಳನ್ನು ಮಂಜೂರು ಮಾಡಿಸಿ ನಿಜವಾದ ಬಡವರನ್ನು ಗುರುತಿಸಿಮನೆಗಳನ್ನು ನೀಡುತ್ತೇನೆ. ನೀವುಗಳು ಯಾರಿಗೂ ದುಡ್ಡು ಕೊಡುವುದು ಬೇಡ. ನಿಮ್ಮಗಳ ಸಮಸ್ಯೆಗಳು ಏನಿದ್ದರೂ ಹಂತಹಂತವಾಗಿ ಎಲ್ಲವನ್ನು ಬಗೆಹರಿಸುತ್ತೇನೆಂದು ಹೇಳಿದರು. ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಮಾಜಿ ಸದಸ್ಯ ಶ್ರೀರಾಂ, ಪರಮೇಶ್, ಗುತ್ತಿಗೆದಾರ ಬ್ಯಾಲಾಳ್ ಜಯಪ್ಪ, ಮರುಳಾರಾಧ್ಯ, ಯು.ಲಕ್ಷ್ಮಿಕಾಂತ್ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು

Read More

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಡವರ ಪರವಾಗಿದೀನ ದಲಿತರ ಪರವಾಗಿ ಇರುವಂತಹ ಯಾವುದೇಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದಿಲ್ಲ. ಬಗರ್ ಹುಕುಂ ಕೊಡುವದರಿಂದ ಆ ಕುಟುಂಬಗಳಿಗೆ ಶಾಶ್ವತ ಆಸ್ತಿಯಾಗಲಿದೆಆದ್ದರಿಂದ ಆದಷ್ಟು ಬೇಗ ಮಾಡಬೇಕೆಂದು ಸರ್ಕಾರಕ್ಕೆ ಸಂಸದರಾದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು40 ಸಾವಿರಕ್ಕೂ ಹೆಚ್ಚು ಜನ ಬಡವರು ಸುಮಾರು ವರ್ಷಗಳಿಂದ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಸಾಗುವಳಿ ಮಾಡುತ್ತಾಬಂದಿದ್ದಾರೆ. ಬಡವರು ಅದರ ಮೇಲೆ ಹೊಟ್ಟೆತುಂಬಿಸಿಕೊಳ್ಳುತ್ತಿದ್ದಾರೆ.. ಸರ್ಕಾರ ಬಗರ್ ಹುಕ್ಕುಂ ಜಮೀನನ್ನು ಆಯಾಯ ರೈತರಿಗೆಮಂಜೂರು ಮಾಡಿಕೊಡಲಿಕ್ಕೆ ತಾಲ್ಲೂಕು ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿ ಆದೇಶಮಾಡಿದೆ. ಇವತ್ತಿಗೂ ಕೂಡ ಚಿತ್ರದುರ್ಗ ಜಿಲ್ಲೆಯಲ್ಲಿ 2 ವರ್ಷದಿಂದ ಯಾವ ಶಾಸಕರು ಕೂಡ ಬಗರ್ ಹುಕ್ಕುಂ ಚೀಟಿ ವಿಚಾರವಾಗಿ ಸಭೆಯನ್ನು ಮಾಡಿಲ್ಲ.. ಅಂತ ಜನ ಬರುತ್ತಿದ್ದಾರೆ.ಕೂಡಲೇ ಬಗರ್ ಹುಕ್ಕುಂ ಕಮಿಟಿ ಮೀಟಿಂಗ್ ಮಾಡಿ.. ಬಡವರಿಗೆ ನ್ಯಾಯ ಒದಗಿಸಿಕೊಡಿ ಎಂದು ಮನವಿ ಮಾಡಿದರು.ಸಿಗಂದೂರು ಸೇತುವೆ ಉದ್ಘಾಟನೆ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಆಹ್ವಾನ ಕೊಡದೇ ಬಿಜೆಪಿ ರಾಜಕಾರಣ…

Read More

ಚಳ್ಳಕೆರೆ: ಜಾಮಿಯಾ ಮಸೀದಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಸ್ಪರ್ಧೆಯಲ್ಲಿ ಆಟೋ ಪ್ಯಾನೆಲ್ ಭರ್ಜರಿ ಜಯ ಗಳಿಸಿದೆ. ಮಾಜಿ ಅಧ್ಯಕ್ಷ ಅತಿಕ್ ಉರ್ ರೆಹಮಾನ್ ನೇತೃತ್ವದ ಟ್ರಕ್ ಲಾರಿ ಗುಂಪನ್ನು ಸೋಲಿಸುವ ಮೂಲಕ ಆಟೋ ಪ್ಯಾನೆಲ್ ಅಧಿಕಾರ ಗದ್ದುಗೆ ಏರಿದೆ.ಚುನಾವಣೆಯಲ್ಲಿ ಎರಡು ಪ್ರಮುಖ ಪ್ಯಾನೆಲ್ಗಳು ಸ್ಪರ್ಧಿಸಿದ್ದವು ಆಟೋ ಪ್ಯಾನೆಲ್ ಮತ್ತು ಟ್ರಕ್ ಲಾರಿ ಪ್ಯಾನೆಲ್. ಒಟ್ಟು ಸುಮಾರು 25ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಂತಿಮವಾಗಿ, ಅತಿಕ್ ಉರ್ ರೆಹಮಾನ್ ಅವರ ನೇತೃತ್ವದ ಟ್ರಕ್ ಗುಂಪು ಹೀನಾಯ ಸೋಲು ಅನುಭವಿಸಿದೆ. ಸ್ವತಃ ಅತಿಕ್ ಉರ್ ರೆಹಮಾನ್ ಅವರೇ ಠೇವಣಿ ಕಳೆದುಕೊಂಡು ಗಮನಾರ್ಹ. ಪರಾಭವಗೊಂಡಿರುವುದುಈ ಪ್ರಚಂಡ ಗೆಲುವಿನೊಂದಿಗೆ ಆಟೋ ಪ್ಯಾನೆಲ್ ಜಾಮಿಯಾ ಮಸೀದಿಯ ಆಡಳಿತವನ್ನು ವಹಿಸಿಕೊಂಡಿದೆ. ಈ ಫಲಿತಾಂಶ ಚಳ್ಳಕೆರೆ ಸಮುದಾಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Read More

ಚಿತ್ರದುರ್ಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾಗಿರುವ “ಶಕ್ತಿ” ಯೋಜನೆಯಡಿ 500 ಕೋಟಿಗೂ ಹೆಚ್ಚು ಮಹಿಳೆಯರು ರಾಜ್ಯದ ಸರ್ಕಾರಿ ಸ್ವಾಮ್ಯದ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿರುವ ಹಿನ್ನಲೆಯಲ್ಲಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಯಿತು. ಚಿತ್ರದುರ್ಗ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಅಲಂಕೃತವಾಗಿರುವ ಬಸ್‍ಗೆ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಅವರು ಪೂಜೆ ನೆರವೇರಿಸಿ, ಮಹಿಳಾ ಪ್ರಯಾಣಿಕರಿಗೆ ಮತ್ತು ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಹೂ ಹಾಗೂ ಸಿಹಿ ವಿತರಣೆ ಮಾಡಿದರು. ಐದು ಗ್ಯಾರಂಟಿ ಯೋಜನೆಗಳ ಪೈಕಿ “ಶಕ್ತಿ” ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಕಳೆದ 2023 ರ ಜೂನ್ 11 ರಿಂದ ಜಾರಿಗೊಳಿಸಿದ್ದು, ರಾಜ್ಯದ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆಗಳ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದ ಫಲಾನುಭವಿಗಳ ಸಂಖ್ಯೆ 500 ಕೊಟಿ…

Read More

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಇಂದು (ಜುಲೈ 14) ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್​ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರ. ಸರೋಜಾ ಅವರು 1967ರಲ್ಲಿ ಹರ್ಷ ಅವರನ್ನು ವಿವಾಹ ಆದರು. 1986ರಲ್ಲಿ ಪತಿ ನಿಧನ ಹೊಂದಿದರು. ಈಗ ಪತಿ ಹರ್ಷ ಸಮಾಧಿ ಪಕ್ಕದಲ್ಲೇ ಸರೋಜಾ ಅವರ ಅಂತ್ಯಕ್ರಿಯೆ ನಡೆಯಲಿದೆ. ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಸರೋಜಾ ದೇವಿ ಜನಿಸಿದ್ದು 1938ರ ಜನವರಿ 7ರಂದು. ಅವರು ಬೆಂಗಳೂರಿನಲ್ಲಿ ಹುಟ್ಟಿದರು. ಅವರ ತಂದೆ ಬೈರಪ್ಪ ಅವರು ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮಾ ಅವರು ಹೌಸ್​ವೈಫ್ ಆಗಿದ್ದರು. ಸರೋಜಾ ಬಳಿ ಭೈರಪ್ಪ ಅವರು ಡ್ಯಾನ್ಸ್ ಕಲಿಯುವಂತೆ ಪ್ರೋತ್ಸಾಹಿಸಿದರು.…

Read More

ಮೊಳಕಾಲ್ಮುರು: ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ರಾಜಕೀಯ ತಾರಾಕ್ಕೆರಿದ್ದು ಪಕ್ಷದ ಒಳಮುನಿಸು ತಿಕ್ಕಾಟ ಬೀದಿಗೆ ಬಂದು ನಿಂತಿದೆ. ನಿನ್ನೆಯಷ್ಟೇ ದ್ರಾಕ್ಷಿ ರಸ ಮಂಡಳಿಯ ನಿಗಮ ಅಧ್ಯಕ್ಷ ಡಾ. ಯೋಗೇಶ್ ಬಾಬು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.ಅವರ ಹುಟ್ಟುಹಬ್ಬದ ಹಿನ್ನೆಯಲ್ಲಿ ಅವರ ಬೆಂಬಲಿಗರು ಪಟ್ಟಣದ ಮುಖ್ಯರಸ್ತೆಯಲ್ಲಿ ಸ್ಥಳೀಯ ಪಪಂನಿಂದ ಪರವಾನಿಗೆ ಪಡೆದು ಹುಟ್ಟುಹಬ್ಬದ ಶುಭ ಕೋರುವ ಫ್ಲೆಕ್ಸ್ ಹಾಕಿಸಿದ್ದರು.ಆದ್ರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಫ್ಲೆಕ್ಸ್ ಗಳನ್ನು ಇಂದು ರಾತ್ರಿಯೇ ತೆರವುಗೊಳಿಸಿದ್ದಾರೆ, ಇದರಿಂದ ಆಕ್ರೋಶಗೊಂಡ ಡಾ.ಯೋಗೇಶ್ ಬಾಬು ತಮ್ಮ ಬೆಂಬಲಿಗರ ಸಮೇತವಾಗಿ ಆಗಮಿಸಿ ಪಟ್ಟಣ ಪಂಚಾಯಿತಿ ಮುಂದೆ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಪಪಂ ಅಧಿಕಾರಿಗಳು ಪುನ್ಹ ತೆರವುಗೊಳಿಸಿದ್ದ ಫ್ಲೆಕ್ಸ್ ಗಳನ್ನ ಕಟ್ಟಿಸಿ ಕ್ಷಮೆ ಕೇಳಿದ ನಂತರವೇ ಡಾ. ಯೋಗೇಶ್ ಬಾಬು ಪ್ರತಿಭಟನೆಯಿಂದ ಹಿಂದೆ ಸರಿದರು.ಒಟ್ಟಿನಲ್ಲಿ ಫ್ಲೆಕ್ಸ್ ನಲ್ಲಿ ಶಾಸಕರನ್ನು ಕಡೆಗಣಿಸಲಾಗಿದೆ ಎಂದು ದೂರುವ ಕೈ ಕಾರ್ಯಕರ್ತರು ಒಂದೆಡೆಯಾದರೆ ನಿಗಮ ಮಂಡಳಿ ಅಧ್ಯಕ್ಷರನ್ನು ಕಡೆಗಣಿಸಲಾಗಿದೆ ಎಂದು ದೂರುವ ಗುಂಪು ಇನ್ನೊಂದೆಡೆ, ಇದರ ಮಧ್ಯೆ ಯಾವ ಸಹವಾಸವೆ ಬೇಡವೆಂದು ತಟಸ್ತವಾಗಿರುವ…

Read More

ಬೆಳಗಾವಿ: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವಲ್ಲೇ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹೊಸ ಬಾಂಬ್ ಸ್ಫೋಟಿಸಿದ್ದಾರೆ.ಪರೇಷನ್ ಕಮಲಕ್ಕೆ ಬಿಜೆಪಿ ಹೈಕಮಾಂಡ್ ಯತ್ನ ನಡೆಸುತ್ತಿದ್ದು, 55 ಕಾಂಗ್ರೆಸ್ ಶಾಸಕರ ಪಟ್ಟಿ ಇಟ್ಟುಕೊಂಡು, ದಾಳಿ ನಡೆಸುವ ಬೆದರಿಗೆ ಹಾಕುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯ ಈ ಪಟ್ಟಿಯಲ್ಲಿ ನಾನೂ ಕೂಡ ಇರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ಡಿಕೆಶಿ ಮತ್ತು ಸಿದ್ದು ಬಣದಿಂದ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ಕಾಶಪ್ಪನವರ್ ಅವರು ತಿರುಗೇಟು ನೀಡಿದರು. ಬಿಜೆಪಿ ಹೈಕಮಾಂಡ್‌ ಹತ್ತಿರ ಕಾಂಗ್ರೆಸ್‌ನ 55 ಶಾಸಕರ ಟಾರ್ಗೆಟ್ ಲಿಸ್ಟ್ ಇದೆ. ಅದರಲ್ಲಿ ನಾನು ಇದ್ದರೂ ಇರಬಹುದು. ಕಾಂಗ್ರೆಸ್‌ನ 55 ಮಂದಿ ಶಾಸಕರ ಪಟ್ಟಿಯನ್ನು ಬಿಜೆಪಿಗರು ಮಾಡಿದ್ದಾರೆ. ಆ 55 ಶಾಸಕರಿಗೆ ಸಿಬಿಐ, ಇ.ಡಿ.(ಜಾರಿ ನಿರ್ದೇಶನಾಲಯ) ದಾಳಿ ನಡೆಸುವ ಬೆದರಿಕೆ ಹಾಕುತ್ತಿದ್ದಾರೆ. ಈಗಾಗಲೇ ಬಿಜೆಪಿಯವರು ಆ ಶಾಸಕರ ಮನೆಗಳಿಗೆ…

Read More

ಧನಶ್ರೀ ವರ್ಮಾ ಮಾರ್ಚ್ 20, 2025 ರಂದು ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರಿಂದ ವಿಚ್ಛೇದನ ಪಡೆಯುವುದಾಗಿ ಅಧಿಕೃತವಾಗಿ ಘೋಷಿಸಿದರು. ವಿಚ್ಛೇದನದ ನಂತರ ಧನಶ್ರೀ ವರ್ಮಾ ಸರಣಿ ಚಲನಚಿತ್ರಗಳು ಮತ್ತು ಸಂಗೀತ ಆಲ್ಬಮ್‌ಗಳಲ್ಲಿ ನಿರತರಾಗಿದ್ದಾರೆ. ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಸದ್ಯ ರಿಯಾಲಿಟಿ ಶೋ, ಸಿನಿಮಾ ಹಾಗೂ ಆಲ್ಬಂ ಸಾಂಗ್‌ ಮೂಲಕ ಮಿಂಚುತ್ತಿದ್ದಾರೆ. ಇದರ ನಡುವೆ ಬಿಗ್ ಬಾಸ್ ಹಿಂದಿ ಸೀಸನ್ 19ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದೆ. ತಮ್ಮ ವೀಡಿಯೊಗಳಿಂದ ಜನಪ್ರಿಯತೆ ಗಳಿಸಿದ ಧನಶ್ರೀ ವರ್ಮಾ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಅವರನ್ನು ಪ್ರೀತಿಸಿ 2020ರಲ್ಲಿ ವಿವಾಹವಾದರು. ಆದರೆ ಮದುವೆಯಾದ ಕೆಲ ವರ್ಷಗಳಲ್ಲಿಯೇ ಇಬ್ಬರೂ ವಿಚ್ಛೇದನ ಪಡೆದು ಬೇರ್ಪಟ್ಟಿದ್ದಾರೆ. ಧನಶ್ರೀ ವರ್ಮಾ-ಚಹಾಲ್‌ ಡಿವೋರ್ಸ್‌: ವಿಚ್ಛೇದನ ಪಡೆದ ಬಳಿಕ ಧನಶ್ರೀ ವರ್ಮಾ ಯುಜ್ವೇಂದ್ರ ಚಾಹಲ್ ಅವರಿಂದ 40 ಕೋಟಿ ರೂ. ಜೀವನಾಂಶ ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಆದರೆ, ಚಾಹಲ್ ಮತ್ತು ಧನಶ್ರೀ ವರ್ಮಾ ಈ…

Read More

ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಎಲ್ಲರಲ್ಲೂ ಸಾಮಾನ್ಯವಾಗಿದೆ. ಇಡೀ ದಿನ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದರಿಂದ ಅತಿಯಾಗಿ ಬೆನ್ನು ನೋವು ಕಾಣಿಸಿಕೊಂಡು ನೋವು ಅನುಭವಿಸುತ್ತಿರಬಹುದು. ಹಾಗಾದ್ರೆ ಬೆನ್ನು ನೋವು ಕಂಡು ಬಂದ್ರೆ ಕೂಡಲೇ ಈ ಮನೆ ಮದ್ದುಗಳನ್ನು ಅನುಸರಿಸಿ ಬೆನ್ನು ನೋವು ನಿವಾರಿಸಿಕೊಳ್ಳಿ.ನ್ನು ನೋವು ಪರಿಹಾರಕ್ಕೆ ಮನೆಮದ್ದುಗಳು: ಶಾಖ ಮತ್ತು ಶೀತ ಚಿಕಿತ್ಸೆ: ಬೆಚ್ಚಗಿನ ಶಾಖದ ಅನ್ವಯವು ಸ್ನಾಯುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ, ಆದರೆ ಶೀತ ಚಿಕಿತ್ಸೆಯು ಊತವನ್ನು ಕಡಿಮೆ ಮಾಡುತ್ತದೆ. ವ್ಯಾಯಾಮ ಮತ್ತು ಸ್ಟ್ರೆಚಿಂಗ್: ನಿಯಮಿತ ವ್ಯಾಯಾಮ, ವಿಶೇಷವಾಗಿ ಬೆನ್ನು ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮಗಳು, ನೋವನ್ನು ಕಡಿಮೆ ಮಾಡಲು ಮತ್ತು ಭವಿಷ್ಯದ ನೋವು ತಡೆಯಲು ಸಹಾಯ ಮಾಡುತ್ತದೆ. ನೋವು ನಿವಾರಕಗಳು: ನೋವು ನಿವಾರಕ ಮಾತ್ರೆಗಳು ಅಥವಾ ಕ್ರೀಮ್‌ಗಳನ್ನು ಬಳಸುವುದರಿಂದ ನೋವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಬಹುದು, ಆದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ. ಉತ್ತಮ ಭಂಗಿ ಕುಳಿತುಕೊಳ್ಳುವಾಗ ಮತ್ತು ನಿಂತಿರುವಾಗ ಉತ್ತಮ…

Read More