Author: Times of bayaluseeme
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದೊಂದಿಗೆ ಉಚಿತ ಶ್ರವಣ ತಪಾಸಣಾ ಹಾಗೂ ಶೇ. 40 ರಷ್ಟು ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣಾ ಕಾರ್ಯಕ್ರಮ ಇದೇ ತಿಂಗಳು 27 ಹಾಗೂ28 ರಂದು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಸಂಚಾಲಕರಾದ ಲವ ಬಂಗೇರ ತಿಳಿಸಿದರು.ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ ರಾಜ್ಯದ ವಿವಿಧೆಡೆಗಳಲ್ಲಿಶಿಬಿರಗಳನ್ನು ನಡೆಸಲಾಗಿದೆ ಚಿತ್ರದುರ್ಗದಲ್ಲಿ 37ನೇ ಶಿಬಿರವನ್ನು ಆಯೋಜಿಸಲಾಗಿದೆ. ನಮ್ಮ ಜನರು ಕಣ್ಣುಗಳಿಗೆ ಹೆಚ್ಚಿನಪ್ರಾಮುಖ್ಯತೆಯನ್ನು ನೀಡುತ್ತಾರೆ ಹೊರೆತು ಕಿವಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿಲ್ಲ, ಈ ಹಿನ್ನಲೆಯಲ್ಲಿ ಟೀಮ್ ಈಶ್ವರ್ಮಲ್ಪೆ ಇವರ ಸಹಯೋಗದಲ್ಲಿ ಕವಿಯ ಬಗ್ಗೆ ಜನ ಜಾಗೃತಿಯನ್ನು ಮೂಡಿಸಿ ತಪಾಸಣೆಯನ್ನು ಮಾಡುವುದರ ಮೂಲಕ ತೊಂದರೆ. ಇರುವವರೆಗೆ ತಪಾಸಣೆಯನ್ನು ಮಾಡಿಸಿ ಸಹಾಯಧನದಲ್ಲಿ ಯಂತ್ರಗಳನ್ನು ನೀಡಲಾಗುತ್ತದೆ ಎಂದರು. ಇಂದಿನ ದಿನಮಾನದಲ್ಲಿ ವಯೋಸಹಜದಿಂದ ಹಾಗೂ ಚಿಕ್ಕ ಮಕ್ಕಳಿಗೂ ಸಹಾ ಕಿವಿಯ ತೊಂದರೆ ಉಂಟಾಗುತ್ತದೆ ಆದರೆ ಇದನ್ನುನಮ್ಮ ಜನತೆ…
ಚಿತ್ರದುರ್ಗ: ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಿ, ಕ್ರೀಡೆಯನ್ನು ಬೆಳಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮಾದಾರಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.ಚಿತ್ರದುರ್ಗ ಸ್ಪೋರ್ಟ್ಸ್ ಕ್ಲಬ್, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಬೆಂಗಳೂರು ಹಾಗೂ ಚಿತ್ರದುರ್ಗ ಜಿಲ್ಲಾಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 25 ವರ್ಷದೊಳಗಿನ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ-2025ರ ಪ್ರೀಮಿಯರ್ ಲೀಗ್ ಸೀಜನ್-4 ರ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಚಿತ್ರದುರ್ಗ ನಗರ ಕ್ರೀಡೆಗೆ ಯಾವತ್ತು ಸಹ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ ಇದರ ಫಲವಾಗಿ ಇಲ್ಲಿ ಹಲವಾರು ರೀತಿಯ ಕ್ರೀಡೆಗಳು ನಡೆಯುತ್ತಿರುತ್ತವೆ, ಈಗಾಗಲೇ ಇದೇಮೈದಾನದಲ್ಲಿ ವಾಲಿಬಾಲ್, ಕ್ರೀಕೆಟ್, ಹಾಕಿ, ಕಬಡ್ಡಿಯಂತಹ ಕ್ರೀಡೆಗಳು ನಡೆಯುತ್ತಿವೆ, ಇದನ್ನು ಯುವ ಜನಾಂಗ ನೋಡಿ ಕಲಿಯವಕಾರ್ಯವನ್ನು ಮಾಡುತ್ತಿದೆ ಎಂದರು. ಚಿತ್ರದುರ್ಗದಲ್ಲಿ ವಿವಿಧ ಕ್ರೀಡೆಗಳ ಹಲವರು ಕ್ರೀಡಾಪಟುಗಳು ಇದ್ದಾರೆ ಅವರನ್ನು ಗುರುತಿಸಿ ಪ್ರೋತ್ಸಾಹ ಮಾಡುವ ಕಾರ್ಯ ಚಿತ್ರದುರ್ಗದ ನಾಗರೀಕರಾದ ನಮ್ಮೆಲ್ಲರ ಮೇಲಿದೆ ಕ್ರೀಡಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆತುರದಲ್ಲೂ ಇಲ್ಲ, ಆತಂಕದಲ್ಲೂ ಇಲ್ಲ ಎಂದು ಬಮೂಲ್ ಅಧ್ಯಕ್ಷರಾದ ಡಿ.ಕೆ ಸುರೇಶ್ ಸ್ಪಷ್ಟಪಡಿಸಿದರು.ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಗಳವಿಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು, ಅಧ್ಯಕ್ಷರು ಹಾಗೂ ಡಿಸಿಎಂ ಆಗಿರುವ ಡಿ.ಕೆ. ಶಿವಕುಮಾರ್ ಕೂಡ ಈಗಾಗಲೇ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು, ಸಿದ್ದರಾಮಯ್ಯ ಅವರು ನಾಯಕತ್ವದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ. ಆದರೂ ಮಾಧ್ಯಮಗಳಿಗೆ ಯಾಕೆ ಗೊಂದಲವಿದೆ ಎಂದು ಗೊತ್ತಿಲ್ಲ. ಶಿವಕುಮಾರ್ ಅವರು ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಪಕ್ಷದ ಕಾರ್ಯಕರ್ತನಾಗಿ ಮುನ್ನಡೆಸುತ್ತಿದ್ದಾರೆ. ಪಕ್ಷದ ಸೂಚನೆಯಂತೆ ಅವರು ಕೆಲಸ ಮಾಡುತ್ತಿದ್ದಾರೆ. ಇದರ ಹೊರತಾಗಿ ಹೆಚ್ಚಿನ ವಿಚಾರ ಏನೂ ಇಲ್ಲ. ಸಧ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಪದೇ ಪದೆ ಈ ವಿಚಾರ ಯಾಕೆ ಚರ್ಚೆಯಾಗುತ್ತಿದೆ ಗೊತ್ತಿಲ್ಲ ಎಂದರು. ಇದೇ ನನ್ನ ಕೊನೆ ಚುನಾವಣೆ ಎಂದಿದ್ದ ಸಿದ್ದರಾಮಯ್ಯ ಅವರು ಈಗ 2028ಕ್ಕೂ ನನ್ನದೇ ನೇತೃತ್ವದಲ್ಲಿ ಚುನಾವಣೆ ಎಂದು ಹೇಳಿರುವ…
ನವದೆಹಲಿ: ಜೂ.12ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನದ ಭೀಕರ ದುರಂತಕ್ಕೆ ಇಂಧನ ಸ್ವಿಚ್ ಆಫ್ ಆಗಿದ್ದೇ ಕಾರಣ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಇಂಧನ ಸ್ವಿಚ್‌ಗಳು ಆಫ್ ಆದವು. ಕೂಡಲೇ ಒಬ್ಬ ಪೈಲಟ್ ‘ಏಕೆ ಆಫ್ ಮಾಡಿದೆ’ ಎಂದು ಕೇಳುತ್ತಾರೆ. ‘ನಾನು ಮಾಡಿಲ್ಲ’ ಎಂದು ಮತ್ತೊಬ್ಬರು ಹೇಳು ವುದು ವಿಮಾನದಲ್ಲಿ ರೆಕಾರ್ಡ್ ಆಗಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಎರಡೂ ಎಂಜಿನ್‌ಗಳು ವಿಫಲವಾಗಿ, 32 ಸೆಕೆಂಡ್ ಗಳಲ್ಲಿ ವಿಮಾನ ಪತನವಾಗುತ್ತದೆ. ಸದ್ಯಕ್ಕೆ ವಿಧ್ವಂಸಕ ಕೃತ್ಯದ ಕುರಿತು ಮಾಹಿತಿ ಸಿಕ್ಕಿಲ್ಲ ಎಂದು ವಿಮಾನ ಅಪಘಾತ ತನಿಖಾ ದಳ (ಎಎಐಬಿ) ಶುಕ್ರವಾರ ತಡರಾತ್ರಿ ತನಿಖಾ ವರದಿ ಬಿಡುಗಡೆ ಮಾಡಿದೆ
ಚಿತ್ರದುರ್ಗ : ಚಿಕ್ಕಂದಿನಿಂದಲೇ ಅಸಾಮಾನ್ಯ ಬಾಲ ಪ್ರತಿಭೆಗಳನ್ನು ಗುರುತಿಸಬೇಕು. ಕೆಲವು ಮಕ್ಕಳ ಬುದ್ದಿಮತ್ತೆ ವಿಶೇಷವಾಗಿರುತ್ತದೆ.ವಯಸ್ಸಿಗೂ ಮೀರಿದ ಜ್ಞಾನ, ಬುದ್ದಿವಂತಿಕೆಯಿಂದ ಅವರು ಜಗತ್ತಿನ ಗಮನ ಸೆಳೆಯುತ್ತಾರೆ. ವಿಶೇಷವಾದ್ದನ್ನು ಸಾಧಿಸುತ್ತಾರೆ ಎಂದುಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.ಎಸ್.ಜೆ.ಎಸ್ ಸಮೂಹ ವಿದ್ಯಾಸಂಸ್ಥೆ ಹಮ್ಮಿಕೊಂಡಿದ್ದ ಗುರುಪೂರ್ಣಿಮಾ ನಿಮಿತ್ತ ಅಕ್ಷರಾಭ್ಯಾಸ ಪ್ರಾರಂಭದ ದಿವ್ಯಸಾನ್ನಿಧ್ಯವಹಿಸಿಕೊಂಡು ಮಾತನಾಡಿದ ಶ್ರೀಗಳು, ಅಕ್ಷರ ಎಂಬ ಶಬ್ಧಕ್ಕೆ ನಾಶವಿಲ್ಲದಿರುವುದು ಎಂದರ್ಥ. ಮೌಲಿಕವಾಗಿ ಇದುನಾಶವಿಲ್ಲದ ಪರತತ್ವವನ್ನೇ ಹೇಳುತ್ತದೆ. ಅಭ್ಯಾಸವೆಂದರೆ ಆ ತತ್ವಕ್ಕೆ ತನ್ನನ್ನು ಅಭಿಮುಖವಾಗಿ ಇರಿಸಿಕೊಳ್ಳುವುದು. ಮಕ್ಕಳಲ್ಲಿಶಿಕ್ಷಣದ ಬಗೆಗೆ ಪ್ರೀತಿ ಹುಟ್ಟಿಸುವ ಕಲಿಕೆಯು ಬದುಕಿನ ಮೊದಲ ಆದ್ಯತೆಯಾಗಬೇಕಾದ ಬಗ್ಗೆ ಅರಿವು ಮೂಡಿಸುವ ಬಾಲಜಾಗೃತಿಹೆಚ್ಚಾಗಬೇಕು. ಪ್ರತಿ ಮಗುವಿಗೆ ಅನ್ನ ಅಕ್ಷರ ಆರೋಗ್ಯ ಅತ್ಯ ಅವಶ್ಯಕತೆ. ಬದುಕಿನ ಜಂಜಾಟದಲ್ಲಿ ಏನೇ ಸಮಸ್ಯೆಗಳುಎದುರಾದರೂ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದಿಂದ ವಂಚಿತರನ್ನಾಗಿಸಬಾರದು. ಉತ್ತಮ ಶಿಕ್ಷಣದ ಮೂಲಕ ತಮ್ಮ ಮಕ್ಕಳನ್ನುಸಮಾಜದ ಉನ್ನತ ಶ್ರೇಣಿಯಲ್ಲಿ ಅಲಂಕರಿಸುವಂತೆ ಜೀವನೋತ್ಸಾಹ ತುಂಬಬೇಕು. ಮಕ್ಕಳು ಅನುಕರಣೆಯನ್ನು ಹೆಚ್ಚುಮಾಡುವುದರಿಂದ ಪೋಷಕರು ಮಕ್ಕಳು ಮನೆಯಲ್ಲಿದ್ದಾಗ ಟಿವಿ ಮತ್ತು ಮೊಬೈಲ್…
ಚಿತ್ರದುರ್ಗ : ಕನ್ನಡ ಭಾಷೆಗೆ 125 ಅಂಕಗಳನ್ನು ನಿಗಧಿಪಡಿಸಿರುವುದನ್ನು ನೂರು ಅಂಕಕ್ಕೆ ಇಳಿಸುವ ನಿರ್ಧಾರವನ್ನು ಸರ್ಕಾರಕೈಬಿಟ್ಟು ಯಥಾಸ್ಥಿತಿ ಮುಂದುವರೆಸುವಂತೆ ಕರುನಾಡ ವಿಜಯಸೇನೆಯಿಂದ ಜಿಲ್ಲಾಧಿಕಾರಿ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಗೋಕಾಕ್ ಚಳುವಳಿಯ ಫಲವಾಗಿ ಕನ್ನಡ ಭಾಷೆಗೆ ನೂರ ಇಪ್ಪತ್ತೈದು ಅಂಕಗಳನ್ನು ಅಂದಿನ ಮುಖ್ಯಮಂತ್ರಿ ಗುಂಡೂರಾವ್ನೇತೃತ್ವ ಸರ್ಕಾರ ತೀರ್ಮಾನಿಸಿದ್ದು, ಡಾ.ರಾಜ್‍ಕುಮಾರ್ ಮುಂದಾಳತ್ವದಲ್ಲಿ ನಡೆದ ಚಳುವಳಿಗೆ ಸಿಕ್ಕ ಗೌರವ. ಕನ್ನಡ ಸೇರಿದಂತೆಪ್ರಥಮ ಭಾಷೆಗಳಿಗೆ 125 ಅಂಕಗಳನ್ನು ನಿಗಧಿಪಡಿಸಿದ್ದನ್ನು ಯಾವುದೇ ಕಾರಣಕ್ಕು 100ಕ್ಕೆ ಕಡಿತಗೊಳಿಸಬಾರದು. ಇದೊಂದುಮಾತೃ ಭಾಷೆಯ ಸ್ಥಾನಮಾನ ಕುಗ್ಗಿಸುವ ಕೆಲಸ. ಶಿಕ್ಷಣ ಸಚಿವರು ಕೂಡಲೆ ತಮ್ಮ ನಿರ್ಧಾರ ಹಿಂದಕ್ಕೆ ಪಡೆಯುವಂತೆ ಕರುನಾಡವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಆಗ್ರಹಿಸಿದರು.ಕರುನಾಡ ವಿಜಯಸೇನೆ ರಾಜ್ಯ ಸಮಿತಿಯ ನಿಸಾರ್ ಅಹಮದ್, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಕಾರ್ಮಿಕ ಘಟಕದಹರೀಶ್‍ಕುಮಾರ್, ನಗರಾಧ್ಯಕ್ಷ ಅವಿನಾಶ್ ಈ ಸಂದರ್ಭದಲ್ಲಿದ್ದರು.
ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನಾದ್ಯಂತಬಂಜಾರ ಸಮುದಾಯದವರು ಬಗರ್ ಹುಕುಂ ಹಾಗೂಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು ಬಂದಿದ್ದು, ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಕರ್ನಾಟಕ ಬಂಜಾರ ಜನಜಾಗೃತಿಅಭಿಯಾನ ಸಮಿತಿಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಕಛೇರಿ ಮುಂದೆ ಪ್ರತಿಭಟನೆ ನಡೆಸಿ ಸಾಗುವಳಿ ಪತ್ರಕ್ಕಾಗಿಆಗ್ರಹಿಸಿದರು. ಚಳ್ಳಕೆರೆ ತಾಲ್ಲೂಕಿನ ಕೆಲ ಲಂಬಾಣಿ ತಾಂಡದ ಜನರು,ಬಗರ್‍ಹುಕುಂ ಹಾಗೂ ಅರಣ್ಯಭೂಮಿಯನ್ನುಸಾಗುವಳಿ ಮಾಡಿಕೊಂಡು ಬಂದಿದ್ದು, ತಾಲ್ಲೂಕು ಆಡಳಿತಸಾಗುವಳಿ ಚೀಟಿಗಳನ್ನು ನೀಡುವ ಬದಲಾಗಿ, ಅನಗತ್ಯವಾಗಿ ಲಂಬಾಣಿ ಸಮುದಾಯದವರನ್ನು ಕಿರುಕುಳ ನೀಡಿ,ಒಕ್ಕಲೆಬ್ಬಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಆರೋಪಿಸಿದೆ.ಪ್ರತಿಭಟನಾ ನಿರತ ಬಂಜಾರ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಶಾಂತಿ ಮತ್ತು ಸೌಹಾರ್ದವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಅವರು ಚಳ್ಳಕೆರೆ ತಾಲ್ಲೂಕಿನಾದ್ಯಂತ ನೂರಾರುವರ್ಷಗಳಿಂದ ಬಗರ್‍ಹುಕುಂ ಮತ್ತುಅರಣ್ಯಭೂಮಿಗಳನ್ನು ಸಾಗುವಳಿಮಾಡಿಕೊಂಡುಬರಲಾಗಿದ್ದು, ಬಹಳಷ್ಟು ತಾಂಡಾದ ಜನರಿಗೆ ಇದೂವರೆಗೆಸಾಗುವಳಿ ಪತ್ರಗಳನ್ನು ನೀಡದೇ ಅನಗತ್ಯವಾಗಿ ವಿಳಂಭನೀತಿ ಅನುಸರಿಸಲಾಗುತ್ತಿದೆ ಎಂದರು. ಚಳ್ಳಕೆರೆ ತಾಲ್ಲೂಕಿನ ವೀರದಿಮ್ಮನಹಳ್ಳಿ ಗ್ರಾಮದ ಬಳಿ,ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿದ ಜಮೀನು ಇದ್ದು, ಆ ಜಮೀನನ್ನು ಖಾಸಗಿಯವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದು,ತಾಲ್ಲೂಕು ಆಡಳಿತ ಮೌನವಾಗಿರುವುದು…
ಬೆಂಗಳೂರು: ರಾಜ್ಯದಲ್ಲಿ ಕ್ಷೀಣಿಸಿರುವ ಮುಂಗಾರು ಮಳೆ, ಜು.15ರ ಬಳಿಕ ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಎರಡೂರು ದಿನದಿಂದ ಮುಂಗಾರು ಮಳೆ ದುರ್ಬಲವಾಗಿದ್ದು, ಜು.15ರ ಬಳಿಕ ಚುರುಕುಗೊಳ್ಳಲಿದೆ. ಜು.3 ರಿಂದ ಜು.9ರ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.23ರಷ್ಟು ಹೆಚ್ಚಿನ ಮಳೆಯಾಗಿದೆ. ಒಟ್ಟಾರೆ ಮುಂಗಾರು ಅವಧಿಯಲ್ಲಿ ಶೇ.9 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಹವಾಮಾನ ವರದಿ A ಪ್ರಕಾರ ಕಳೆದ 24 ಗಂಟೆಯಲ್ಲಿ ಕದ್ರಾ, ಕ್ಯಾಸಲ್ ರಾಕ್, ಶೃಂಗೇರಿ ಹಾಗೂ ಆಗುಂಬೆಯಲ್ಲಿ ತಲಾ 7 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಮೂಡುಬಿದಿರೆ, ಕಾರ್ಕಳ, ಉಡುಪಿಯಲ್ಲಿ ತಲಾ 6, ಮಾಣಿ, ಧರ್ಮಸ್ಥಳ, ಕಮ್ಮರಡಿಯಲ್ಲಿ ತಲಾ 5, ಭಾಗಮಂಡಲ, ಕುಂದಾಪುರ, ಶಕ್ತಿನಗರ, ಬೆಳ್ತಂಗಡಿ, ಕೋಟ, ಸುಳ್ಯದಲ್ಲಿ ತಲಾ 4, ಸೆಂ.ಮೀ. ಮಳೆಯಾಗಿದೆ
ಬೆಂಗಳೂರು: ರಾಜ್ಯ ಆಡಳಿತದಲ್ಲಿ ಯಾವುದೇ ತೊಂದರೆ ಇಲ್ಲ, ಮುಖ್ಯಮಂತ್ರಿಯವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಸುಮ್ಮನೆ ಡ್ರಾಮಾ ಕಂಪನಿ ಓಪನ್ ಮಾಡೋಕೆ ನಂಗೆ ಇಷ್ಟವಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಗುರುವಾರ ನಾಯಕತ್ವ ಬದಲಾವಣೆ ಚರ್ಚೆ ಕುರಿತುಬದಲಾವಣೆಯಂತಹ ಸಂದರ್ಭ ಬಂದಾಗ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ಮಾಧ್ಯಮಗಳು ವಿಶ್ಲೇಷಣೆ ಮಾಡಿದಂತೆ ಇದೊಂದು ಡ್ರಾಮಾ. ಪದೇ ಪದೆ ಇದರ ಬಗ್ಗೆ ಚರ್ಚೆ ಆಗುವುದು, ಅವರೊಂದು ಹೇಳಿಕೆ ಕೊಡುವುದು ನಾನೊಂದು ಹೇಳೋದು, ಮತ್ತೊಬ್ಬರು ಇನ್ನೊಂದು ಹೇಳುವುದು ಆಗಬಾರದು. ನಮ್ಮ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿರುತ್ತದೆ ಎಂದರು
ಬೆಂಗಳೂರು: ಮುಡಾದಿಂದ ಅಕ್ರಮವಾಗಿ 14 ಬದಲಿ ಸೈಟ್ ಪಡೆದ ಆರೋಪಸಂಬಂಧ ಸಲ್ಲಿಕೆಯಾಗಿರುವ ಮೇಲ್ಮನವಿಗಳ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ, ಅವರ ಸಹೋದರ ಬಿ.ಎಂ.ಮಲ್ಲಿಕಾರ್ಜುನಸ್ವಾಮಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮೈಸೂರಿನ ವಿಜಯನಗರ ಠಾಣೆ ಇನ್ ಪೆಕ್ಟರ್‌ಗೆ ಹೈಕೋರ್ಟ್ ಗುರುವಾರ ನೋಟಿಸ್ ಜಾರಿಗೊಳಿಸಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಕೋರಿ ಮೂಲ ದೂರುದಾರ ಸ್ನೇಹಮಯಿ ಕೃಷ್ಣ ಹಾಗೂ ಪ್ರಕರಣವನ್ನು ಪೊಲೀಸ್ ತನಿಖೆಗೆ ಅನುಮತಿಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿದ್ದರಾಮಯ್ಯ ಮತ್ತು ವಿವಾದಿತ ಜಮೀನಿನ ಮೂಲ ಮಾಲೀಕ ಜೆ.ದೇವರಾಜು ವಿಭಾಗೀಯ ಪೀಠಕ್ಕೆ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಗಳು ಗುರುವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು
Subscribe to Updates
Get the latest creative news from FooBar about art, design and business.