Author: Times of bayaluseeme

ಬೆಂಗಳೂರು: ಪಕ್ಷ ನನಗೆ ಸಂಘಟನೆ ಹಾಗೂ ಡಿಸಿಎಂ ಹುದ್ದೆ ನೀಡಿದ್ದು, ನನ್ನ ಗಮನ ಪಕ್ಷ ಹಾಗೂ ಸರ್ಕಾರದ ಹಿತಾಸಕ್ತಿ ಕಾಪಾಡುವುದರತ್ತ ಮಾತ್ರ ಇದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ನಾಯಕತ್ವ ಬದಲಾವಣೆ ವಿಚಾರವಾಗಿ ಹೈಕಮಾಂಡ್ ಹೇಳುವ ಮುನ್ನ ಸಿದ್ದರಾಮಯ್ಯ ಅವರು ಹೇಳಿಕೆ ಕೊಟ್ಟಿರುವುದು ಎಷ್ಟು ಸರಿ ಎಂದು ಕೇಳಿದಾಗ, “ನೀವು ನನಗೆ ಹೇಗೆ ತಿರುಗಿಸಿ ಕೇಳಿದರೂ ನಾನಂತೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಿಮಗೆ ಬಲಿಯಾಗುವುದಿಲ್ಲ. ನಿಮ್ಮ ಪ್ರಶ್ನೆಗಳಲ್ಲೇ ಉತ್ತರವಿದೆ. ಪಕ್ಷ ಕೊಟ್ಟಿರುವ ಜವಾಬ್ದಾರಿ ಮುಂದುವರಿಸಿಕೊಂಡು ಹೋಗುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಧೀಕ್ಷೆ ನೀಡಿದ್ದು, ನಾವೆಲ್ಲರೂ ಅದನ್ನು ಸಂತೋಷವಾಗಿ ಸ್ವೀಕರಿಸಿದ್ದೇವೆ. ಇದರ ಹೊರತಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ತಿಳಿಸಿದರು. ಹೈಕಮಾಂಡ್ ಭೇಟಿಯಾಗಿ ಯಾವೆಲ್ಲಾ ರಾಜಕೀಯ ಚರ್ಚೆ ನಡೆಯಿತು ಎಂದು ಕೇಳಿದಾಗ, “ನಾವು ಸುರ್ಜೆವಾಲ ಅವರ…

Read More

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಇಡುವರೆಗೂ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣದ ಭಾಗ್ಯ ನೀಡಿತ್ತು. ಈಗ ಸರ್ಕಾರಿ ಶಾಲೆಯ ಮಕ್ಕಳಿಗೂ ಫ್ರೀ ಬಸ್ ಭಾಗ್ಯ ಸಿಕ್ಕಿದೆ. ಕೆಪಿಎಸ್ ಸರ್ಕಾರಿ ಶಾಲೆಯಲ್ಲಿ ಎಲ್ಕೆಜಿ (LKG) ಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಸಾರಿಗೆ ಸೌಲಭ್ಯವನ್ನು ಘೋಷಿಸಿದೆ. ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್‌ ಸೋಶಿಯಲ್ ಮೀಡಿಯಾದ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಉಚಿತ ಬಸ್ ವ್ಯವಸ್ಥೆ ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್‌’ಕೆಜಿಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸುವ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ. ಈ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇನ್ನು ಸರ್ಕಾರದ ಈ ನಿರ್ಧಾರದಿಂದ ಸರ್ಕಾರಿ ಶಾಲೆಗಳಿಗೆ ಶಕ್ತಿ ಬಂದಂತಾಗುತ್ತದೆ. ಜೊತೆಗೆ ಈ ಹಿಂದೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು…

Read More

ಉಪನ್ಯಾಸಕರು‌ ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪರಿಭಾವಿಸಿ ಬೋಧನೆ ಮಾಡಿದಾಗ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ತಿಮ್ಮಯ್ಯ ತಿಳಿಸಿದರು.ಹೊಳಲ್ಕೆರೆ ನಗರದ ವಾಗ್ದೇವಿ ಕಾಲೇಜಿನಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣಾ ಚಿಂತನ ಮಂಥನ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತಾನಾಡಿ,ಉಪನ್ಯಾಸಕರು ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರ್ತಿಸಿ ಅವರಿಗೆ ವಿಶೇಷ ಪರಿಹಾರ ಬೋಧನೆ ಮಾಡುವ ಮೂಲಕ ಕಲಿಕಾಸಕ್ತಿ ಮೂಡಿಸಬೇಕು. ತರಗತಿಯಲ್ಲಿರುವ ಒಟ್ಟು ವಿದ್ಯಾರ್ಥಿಗಳನ್ನು ಆರು ಗುಂಪುಗಳನ್ನಾಗಿ ವಿಂಗಡಿಸಿ ಪ್ರತಿ ಗುಂಪಿನ ಮೇಲುಸ್ತುವಾರಿಯನ್ನು ಒಬ್ಬ ಉಪನ್ಯಾಸಕನಿಗೆ ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಗಮನ ಹರಿಸುವಂತೆ ಸೂಚನೆ ನೀಡಿದರು. ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್ ಮಾತನಾಡಿಫಲಿತಾಂಶ ಸುಧಾರಣೆಗಾಗಿ ಇಲಾಖಾ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಲ್ಲಿ ಈ ರೀತಿಯ ತಾಲ್ಲೂಕುವಾರು ಸಭೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಾರ್ಯಭಾರ ಕಡಿಮೆ ಇರುವ ಉಪನ್ಯಾಸಕರನ್ನು ಖಾಲಿ ಹುದ್ದೆ ಇರುವ ಕಾಲೇಜಿಗಳಿಗೆ…

Read More

ದಾವಣಗೆರೆ: ನಗರದ ಬಾಡ ಕ್ರಾಸ್ ನಲ್ಲಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ 293ನೇ ಬಣದ ಹುಣ್ಣಿಮೆಶಿವಾನುಭವಗೋಷ್ಠಿ ಮತ್ತು ಸಂಗೀತಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿಆವರಗೊಳ್ಳ ಪುರವರ್ಗ ಹಿರೇಮಠ ಹಾಗೂ ಕುಂಟಪಾಲನಹಳ್ಳಿ ಶ್ರೀ ರೇಣುಕ ಪುಣ್ಯಾಶ್ರಮದ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳುದಿವ್ಯಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಾವಣಗೆರೆವಿಶ್ವವಿದ್ಯಾಲಯದ ಅಸಿಸ್ಟೆಂಟ್ ರಿಜಿಸ್ಟ್ರಾರ್ ಹೆಚ್.ಬಿ. ದೇವರಾಜ್, ದೀಪಕ್ಎಸ್. ಹಿರೇಮಠ, ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿಎ.ಹೆಚ್. ಸಿದ್ದಲಿಂಗಸ್ವಾಮಿ ಆಗಮಿಸಿದ್ದರು.ತಾಳಿ ಕೋಟಿಯ ಹಿಂದೂಸ್ಥಾನಿ ಸಂಗೀತಗಾರರಾದ ಮಹೇಶಬಂಟನೂರು-ಸಂಗೀತ ಸೇವೆ, ಆಶ್ರಮದ ವಿದ್ಯಾರ್ಥಿಗಳಾದ ಮಹಾಂತೇಶ್ ಗದಗ-ಹಾರ್ಮೋನಿಯಂ, ಸುರೇಶ್ ಕಲ್ಲಾಪುರ-ಗಾಯನ, ಸುರೇಶ್ ಕೊಪ್ಪಳ್-ತಬಲಾ ಸಾಥ್, ಆದಿತ್ಯ ಕುಮಾರ್-ತಬಲಾ ಸೋಲೋ ಸಾಥ್ ನೀಡಿದರು. ಲೊಟಗೇರಿಯಅಮರಯ್ಯಶಾಸ್ತ್ರಿ ಹಿರೇಮಠ್ ಸಭಾ ನಿರೂಪಣೆಯನ್ನು ಮಾಡಿದರು. ಇದೇ ವೇಳೆಶ್ರೀ ರಾಜಗುಪ್ತ, ಪಿ.ಆರ್. ಶಾರದ ಮತ್ತುಸಹೋದರರು, ಶ್ರೀಮತಿ ವನಜಾಕ್ಷಿ ಪ್ರಸಾದ್, ವೈಷ್ಣವಿ ಪಿ. ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಮಂಜುನಾಥ ಕೋಟಹಾಳಮತ್ತು ಮಕ್ಕಳು, ಎಸ್.ಕೆ. ನಾಗರತ್ನಮ್ಮ ಗೋಪಾಲಪುರಮತ್ತು ಮಕ್ಕಳು ಪ್ರಸಾದ ಸೇವೆ ಮಾಡಿದರು.

Read More

ಚಿತ್ರದುರ್ಗ: ಅಕ್ಕಾ ಕೆಫೆ ನಿರ್ವಹಣೆಗೆ ಸ್ವ ಸಹಾಯ ಗುಂಪು ಆಯ್ಕೆ ಮಾಡಲು ಚಿತ್ರದುರ್ಗ ನಗರದ ರುಡ್‍ಸೆಟ್ ಸಂಸ್ಥೆಯಲ್ಲಿ ಗುರುವಾರ ಆಹಾರ ಸಿದ್ದಪಡಿಸುವ ಸ್ಪರ್ಧೆ ನಡೆಯಿತು.ಚಿತ್ರದುರ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಕಟ್ಟಡದ ನಿರ್ಮಾಣ ಪೂರ್ಣಗೊಳಿಸಲಾಗಿದ್ದು, ಈ ಅಕ್ಕಾ ಕೆಫೆ ನಿರ್ವಹಣೆಗೆ ಸ್ವ ಸಹಾಯ ಗುಂಪನ್ನು ಆಯ್ಕೆ ಮಾಡಲು ಆಹಾರ ಸಿದ್ದಪಡಿಸುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಅನುಭವವಿರುವ ಮೂರು ಸ್ವ-ಸಹಾಯ ಗುಂಪುಗಳು ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ಪರಿಶೀಲಿಸಿ ಆಹಾರ ಸಿದ್ದಪಡಿಸಿರುವ ವಿಧಾನ, ಗುಣಮಟ್ಟ, ರುಚಿ-ಶುಚಿ-ನೈರ್ಮಲ್ಯ, ಆಹಾರ ತಯಾರಿಸಲು ಉಪಯೋಗಿಸಿದ ಪದಾರ್ಥಗಳನ್ನು ಪರಿಶೀಲಿಸಿ, ಸ್ವ-ಸಹಾಯ ಸಂಘದ ಮಹಿಳೆಯರು ಸಿದ್ಧಪಡಿಸಿದ ಆಹಾರದ ರುಚಿ, ಗುಣಮಟ್ಟ ಪರಿಶೀಲನೆ ನಡೆಸಿದರು. ಅಕ್ಕ ಕೆಫೆ ನಿರ್ವಹಣೆಗೆ ಸ್ವ ಸಹಾಯ ಗುಂಪಿನ ಆಯ್ಕೆಯಲ್ಲಿ ಶುಚಿ-ರುಚಿ ಆಹಾರಕ್ಕೆ ಒತ್ತು ನೀಡಬೇಕು ಎಂದು ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಕರೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಮಹಿಳಾ…

Read More

ಬಹು ನಿರೀಕ್ಷಿತ ರಾಮಾಯಣ ಚಿತ್ರಕ್ಕಾಗಿ ಚಿತ್ರ ರಸಿಕರು ಕಾಯುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ರಾಮಾಯಣದಲ್ಲಿ ರಾವಣನಾಗಿ ಯಶ್‌ ರನ್ನ ನೋಡಲು ಕಾತುರರಾಗಿದ್ದಾರೆ. ಆದರೆ ನಿಮಗೆ ಗೊತ್ತಾ ಯಶ್‌ಗೂ ಮುನ್ನ ಹಿಂದಿಯಲ್ಲಿ ರಾವಣನಾಗಿ ಮತ್ತೋರ್ವ ಕನ್ನಡದ ನಟ ಅಬ್ಬರಿಸಿ ಮಿಂಚಿದ್ದರು. ಬಾಲಿವುಡ್‌ನ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಗ್ಲಿಂಪ್ಸ್‌ ಬಿಡುಗಡೆ ಆಗಿದ್ದು, ಇದರ ಮೇಕಿಂಗ್‌, ಗ್ರಾಫಿಕ್ಸ್‌, ಮ್ಯೂಸಿಕ್‌ ಎಲ್ಲವೂ ಭಾರತೀಯ ಚಿತ್ರರಂಗವೇ ದಂಗು ಬಡಿಯುವಂತಿದೆ. ಅದರಲ್ಲಿಯೂ ರಾಮಾಯಣದಲ್ಲಿ ರಾಮನಾಗಿ ರಣಬೀರ್‌ ಕಪೂರ್ ನಟಿಸುತ್ತಿದ್ದಾರೆ. ಆದರೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಲು ಕಾರಣ ರಾವಣನಾಗಿ ನಟಿಸುತ್ತಿರುವ ಯಶ್‌ ಅವರಿಂದ ಎಂದೇ ಹೇಳಲಾಗುತ್ತಿದೆ. ಗ್ಲಿಂಪ್ಸ್‌ ಬಿಡುಗಡೆ ಆದಾಗಿನಿಂದ ರಾಮಾಯಣ ಎನ್ನುವುದಕ್ಕಿಂತ ಸಿನಿಪ್ರೇಮಿಗಳು ರಾವಣನಾಗಿ ಯಶ್‌ ಅವರನ್ನು ನೋಡಲು ಕಾತುರರಾಗಿದ್ದಾರೆ. ಕನ್ನಡದ ಒಬ್ಬ ನಟ ದೇಶಮಟ್ಟದಲ್ಲಿ ಇಷ್ಟೊಂದು ಹೈಪ್‌ ಕ್ರಿಯೇಟ್‌ ಮಾಡಿರುವುದು ಕನ್ನಡಿಗರ ಹೆಮ್ಮೆಯಾಗಿದೆ. ಆದರೆ ನಿಮಗೆ ಗೊತ್ತಾ? ಯಶ್‌ಗೂ ಮುನ್ನ ಹಿಂದಿಯಲ್ಲಿ ರಾವಣನಾಗಿ ಮತ್ತೋರ್ವ ಕನ್ನಡದ ನಟ ಅಬ್ಬರಿಸಿ ಮಿಂಚಿದ್ದರು. ಹಿಂದಿಯಲ್ಲಿ ರಾವಣನಾಗಿ ಜೆಕೆ: ಹೌದು, ಕನ್ನಡ…

Read More

ನವದೆಹಲಿ: ಮಾಧ್ಯಮಗಳು ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆಯ ಸುದ್ದಿ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಠಿ ಮಾಡಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜಧಾನಿ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಾನೇ ಸಂಪೂರ್ಣವಧಿ ಸಿಎಂ ಎಂದು ಹೇಳುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರೆ. ಮತ್ತೊಂದು ಸಿದ್ದರಾಮಯ್ಯ ಹೇಳಿಕೆ ಡಿಕೆಶಿ ಬಣಕ್ಕೆ ಗರ ಬಡಿದಂತಾಗಿದೆ. ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ರಾಜ್ಯದಲ್ಲಿ ಶಾಸಕರನ್ನು ಭೇಟಿ ಮಾಡುತ್ತಿರುವ ಉದ್ದೇಶ ಮುಖ್ಯಮಂತ್ರಿಗಳ ಬದಲಾವಣೆಯ ವಿಷಯವಲ್ಲ ಗ್ಯಾರಂಟಿಗಳು ಹೇಗೆ ನಡೆಯುತ್ತಿವೆ ಹಾಗೂ ಶಾಸಕರ ಕುಂದು ಕೊರತೆಗಳನ್ನು ಕೇಳಿದ್ದಾರೆ ಅಷ್ಟೇ ಎಂದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದವರೇ ಮುಖ್ಯಮಂತ್ರಿಗಳ ಬದಲಾವಣೆಯ ಪ್ರಶ್ನೆಯನ್ನು ಅಲ್ಲಗೆಳೆದ ಮೇಲೆ , ಈ ವಿಷಯದ ಬಗ್ಗೆ ಊಹಾಪೋಹಗಳಿಗೆ ಆಸ್ಪದವಿಲ್ಲ. ಈ ಊಹಾಪೋಹಗಳನ್ನು ಮಾಧ್ಯಮಗಳ ಸೃಷ್ಟಿಯಾಗಿರುವುದೇ ಹೊರತು, ಕಾಂಗ್ರೆಸ್ ವಲಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯ ವಿಷಯ ಚರ್ಚೆಯೇ ಆಗಿಲ್ಲ ಎಂದರು.…

Read More

ಮೂಗು ಕಟ್ಟುವಿಕೆಗೆ ಮನೆ ಮದ್ದುಗಳ ಪರಿಹಾರ ಹುಡುಕುತ್ತಿದ್ದೀರಾ…? ನೀವು ಉಗಿಯನ್ನು ಉಸಿರಾಡಬಹುದು, ಬಿಸಿ ಶವರ್ ತೆಗೆದುಕೊಳ್ಳಬಹುದು ಅಥವಾ ಉಪ್ಪು ನೀರಿನಿಂದ ನಿಮ್ಮ ಮೂಗನ್ನು ತೊಳೆಯಬಹುದು. ಶುಂಠಿ, ಬೆಳ್ಳುಳ್ಳಿ ಮತ್ತು ತುಳಸಿ ಎಲೆಗಳನ್ನು ಬಳಸಿ ಚಹಾ ಕುಡಿಯುವುದರಿಂದಲೂ ಪರಿಹಾರ ಸಿಗುತ್ತದೆ.ಮೂಗು ಕಟ್ಟುವಿಕೆಗೆ ಮನೆಮದ್ದುಗಳು ಇಲ್ಲಿವೆ ಉಗಿ ಉಸಿರಾಟ: ಬಿಸಿ ನೀರಿನ ಬಟ್ಟಲಿನಿಂದ ಉಗಿ ತೆಗೆದುಕೊಳ್ಳುವುದು ಅಥವಾ ಬಿಸಿ ಶವರ್ ತೆಗೆದುಕೊಳ್ಳುವುದು ಮೂಗಿನ ಹಾದಿಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ತೇವಾಂಶವು ಲೋಳೆಯನ್ನು ತೆಳುಗೊಳಿಸುತ್ತದೆ ಮತ್ತು ಉಸಿರಾಟವನ್ನು ಸುಲಭಗೊಳಿಸುತ್ತದೆ. ಉಪ್ಪು ನೀರಿನ ಜಾಲಾಡುವಿಕೆ: ಉಗುರು ಬೆಚ್ಚಗಿನ ಉಪ್ಪು ನೀರಿನಿಂದ ನಿಮ್ಮ ಮೂಗನ್ನು ತೊಳೆಯುವುದು, ಮೂಗಿನ ಹಾದಿಗಳಿಂದ ಲೋಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನೀವು ನೆಟಿ ಪಾಟ್ ಅನ್ನು ಬಳಸಬಹುದು ಅಥವಾ ಹಗುರವಾದ ಉಪ್ಪು ನೀರಿನ ದ್ರಾವಣವನ್ನು ಮೂಗಿನ ಹೊಳ್ಳೆಗಳಲ್ಲಿ ಸಿಂಪಡಿಸಬಹುದು. ಶುಂಠಿ: ಶುಂಠಿಯಲ್ಲಿ ಉರಿಯೂತದ ಗುಣಲಕ್ಷಣಗಳಿವೆ. ಶುಂಠಿಯನ್ನು ಕುದಿಸಿ ಚಹಾ ಮಾಡಿ ಕುಡಿಯಬಹುದು ಅಥವಾ ಶುಂಠಿ ತುಂಡುಗಳನ್ನು ನೀರಿನಲ್ಲಿ ಕುದಿಸಿ ಉಗಿಯನ್ನು ಉಸಿರಾಡಬಹುದು. ತುಳಸಿ…

Read More

ಬೆಂಗಳೂರು : ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್‌ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜನರಿಗೆ ಅಭಯ ನೀಡಿದರು. ಹೃದಯಾಘಾತ ಬಗ್ಗೆ ಜನರು ಆತಂಕ ಪಡಬೇಡಿ. ಮಾಧ್ಯಮದಲ್ಲಿ ಇದರ ಬಗ್ಗೆ ಹೆಚ್ಚು ವೈಭವೀಕರಿಸಲಾಗುತ್ತಿದೆ. ಜನರಿಗೆ ಭೀತಿ ಉಂಟಾಗುವುದು ಸಹಜ. ಆದರೆ ವೈದ್ಯರು ಹಾಗೂ ಇಲಾಖೆಯ ಅಧಿಕಾರಿಗಳು ನೀಡುವ ಸಲಹೆಗಳನ್ನು ಪಾಲಿಸಿ ಎಂದು ಸಚಿವರು ತಿಳಿಸಿದರು.ಸಾರ್ವಜನಿಕರು ನಿಯಮಿತ ಆಹಾರ, ಪೌಷ್ಟಿಕಯುಕ್ತ ಆಹಾರ, ವ್ಯಾಯಾಮ ಹಾಗೂ ಯೋಗ ಹಾಗೂ ಇತರೆ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಜೀವನ ಶೈಲಿಯನ್ನು ಆದಷ್ಟು ಬಳಸಿಕೊಳ್ಳಿ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ ಎಂದು ಮಾಹಿತಿ ನೀಡಿದರು.ಆದಷ್ಟು ಜಂಕ್‌ ಫುಡ್‌, ದುರಭ್ಯಾಸಗಳನ್ನು…

Read More

ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್ ಸಮೀಪದ ನಾರಾಯಣಪ್ಪ ಲೇಔಟ್‍ ನ 6ನೇ ಕ್ರಾಸ್‍ನಲ್ಲಿನ ಸಿದ್ದೇಶ್ವರ ಜ್ಯುವೆಲರ್ಸ್ ಕವಿತಾ ವಿರೇಶ್ಸಮೃದ್ದಿ ಸದನದ ಮನೆಯಲ್ಲಿ ನಿನ್ನೆ ರಾತ್ರಿ ವಿಶೇಷವಾದ ಬ್ರಹ್ಮಕಮಲದ ಹೂವುಗಳು ಆರಳಿವೆ. ಸುಮಾರು 14 ಬ್ರಹ್ಮಕಮಲ ಹೂವು ಏಕಕಾಲಕ್ಕೆ ಅರಳಿ ನಿಂತಿವೆ. ಬ್ರಹ್ಮಕಮಲ ಹೆಸರೇ ಹೇಳುವಂತೆ ಹಿಂದೂ ಪುರಾಣಗಳಲ್ಲಿ ಕಂಡುಬರುವ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ಬ್ರಹ್ಮನ ಹೆಸರಿನಲ್ಲಿರುವ ಅಪರೂಪದ ಪುಷ್ಪವಿದು. ಒಂದೂವರೆ ವರ್ಷದಲ್ಲಿ ಹೂ ಬಿಡುವುದು ಆರಂಭವಾಗುತ್ತದೆ.ಹೂವು ಬಿಡುವುದು ಸಾಮಾನ್ಯವಾಗಿ ಮಧ್ಯೆ ಮಾನ್ಸೂನ್ ಕಾಲದ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ. ಒಂದೇ ಒಂದು ಎಲೆಯಿಂದಗಿಡವಾಗಿ ಬೆಳೆಯುತ್ತಾ ತನ್ನ ಮೈತುಂಬೆಲ್ಲಾ ಹೂವುಗಳನ್ನು ಬಿಡುತ್ತದೆ. ಬ್ರಹ್ಮಕಮಲದ ಹೂವು ಅರಳುವ ಪ್ರಕ್ರಿಯೆಯೇ ಅತ್ಯಂತವಿಸ್ಮಯಕಾರಿಯಾದದ್ದು. ಈ ಹೂವನ್ನು ಬೆಳೆಸುವ ಎಲ್ಲರೂ ಅದು ಅರಳುವಾಗ ಕಾದುಕುಳಿತಿರುತ್ತಾರೆ. ಏಕೆಂದರೆ ಅರಳಿ ವಿಸ್ಮಯಮೂಡಿಸುವ ಈ ಹೂವಿನ ಆಯಸ್ಸು ತುಂಬಾ ಕಡಿಮೆ. ಸೂರ್ಯನ ಬೆಳಕಿನಲ್ಲಿ ಮೊಗ್ಗಾಗಿ ರಾತ್ರಿ ಚಂದಿರ ಬರುವುದನ್ನು ಕಾದುಸರಿಸುಮಾರು 10 ಗಂಟೆಗೆ ಅರಳಿ ಬೆಳಗಾಗುವ ಮುಂಚೆಯೇ ಮುದುಡಿ ಮುದ್ದೆಯಾಗಿರುತ್ತದೆ.

Read More