Author: Times of bayaluseeme

ಶತಾಯ ಗತಾಯ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ವಿರಾಮ ಇಡಲು ಶೀಘ್ರಗತಿಯಲ್ಲಿ ಮುಂದಾಗಿರುವ ರಾಜ್ಯ ಸರ್ಕಾರ ಸಮಿಕ್ಷೆಯಲ್ಲಿ ಭಾಗವಹಿಸದ ಅಧಿಕಾರಿಗಳ ಮೇಲೆ ದಾಖಲಿಸುವ ಎಚ್ಚರಿಕೆ ನೀಡಿದೆ. ಈ ಕುರಿತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ಪೋರ್ಟಲ್‌ನಲ್ಲಿನ ಸರ್ಕಾರಿ ಸಿಬ್ಬಂದಿಗಳ ವಿವರವನ್ನು ರಾಜ್ಯ ಸರ್ಕಾರ ಬಳಸಿಕೊಂಡಿದ್ದು ಕಚೇರಿಯ ಸಿಬ್ಬಂದಿಗಳಿಗೆ ಪ್ರತ್ಯೇಕ ಸಂದೇಶ, ಇ-ಮೇಲ್ ರವಾನಿಸಿದೆ. ಸಮೀಕ್ಷೆಗೆ ನಿಯೋಜನೆಗೊಂಡಿರುವ ಮಾಹಿತಿ ಜೊತೆಗೆ, ಹಾಜರಾಗದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಅಕ್ಟೋಬರ್ 3 ರಂದು ತರಬೇತಿ, 4ರಂದು ಜನಗಣತಿ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಸಿಬ್ಬಂದಿಗಳಿಗೆ ಆದೇಶಿಸಿದೆ. ಸಮೀಕ್ಷೆಗೆ ಹಾಜರಾಗದಿದ್ದರೆ ಬಿಎನ್ಎಸ್ ಸೆಕ್ಷನ್ 223ರ ಅಡಿ ಎಫ್ಐಆರ್ ದಾಖಲಿಸುವ ಎಚ್ಚರಿಕೆ ನೀಡಿದೆ. ಬೆಂಗಳೂರು ಪ್ರಾಧಿಕಾರದ ಆಯುಕ್ತರು ಲಿಖಿತವಾಗಿ ಒಪ್ಪಿಗೆ ನೀಡದಿದ್ದರೆ, ಯಾವುದೇ ವಿನಾಯಿತಿಗಳನ್ನು ನೀಡಲಾಗುವುದಿಲ್ಲ ಎಂದು ಸಹ ತಿಳಿಸಿದೆ. ಸರ್ಕಾರದ ಈ ಸೂಚನೆ ಸರ್ಕಾರಿ ಅಧಿಕಾರಿಗಳಲ್ಲಿ ಬೇಸರ ಹಾಗೂ ಕಳವಳವನ್ನುಂಟು ಮಾಡಿದೆ. ಜನಗಣತಿಗಾಗಿ ಎಲ್ಲಾ ಖಾಯಂ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿರುವುದರಿಂದ, ಸರ್ಕಾರಿ ಕೆಲಸವನ್ನು ಗುತ್ತಿಗೆ ನೌಕರರೇ ಮಾಡುವಂತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು…

Read More

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿಯಿಂದ ಬರುವ ಪ್ರತಿ ತಿಂಗಳ 2 ಸಾವಿರ ರೂಪಾಯಿ ಹಣವನ್ನು ಅಜ್ಜಿಯೊಬ್ಬಳು ತಂದೆ-ತಾಯಿ ಇಲ್ಲದ ತನ್ನ ಮೊಮ್ಮಗಳಿಗೆ ಕೂಡಿಟ್ಟಿದ್ದಾಳೆ. ಹೌದು! ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ನಿವಾಸಿ ಶಂಕ್ರಮ್ಮ ತನ್ನ ಮೊಮ್ಮಗಳು ರೇಖಾ ಭವಿಷ್ಯಕ್ಕಾಗಿ ಕಳೆದ 23 ತಿಂಗಳಿಂದ ಬಂದಿರುವ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟುಕೊಂಡು ಬಂದಿದ್ದಾರೆ. ತಂದೆ ತಾಯಿ ಇಲ್ಲದ ರೇಖಾ ವ್ಯಾಸಂಗ ಹಾಗೂ ಭವಿಷ್ಯದ ದೃಷ್ಟಿಕೋನಕ್ಕಾಗಿ ಅಜ್ಜಿ 23 ಕಂತುಗಳ ಹಣವನ್ನು ರೇಖಾಳ ಖಾತೆಗೆ ವರ್ಗಾಯಿಸಿದ್ದಾಳೆ. ಮೊಮ್ಮಗಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಇರಲಿ ಎಂದು ಸರಕಾರ ಹಾಕಿರುವ ಹಣ ಕೂಡಿಟ್ಟಿದ್ದೇನೆ ಎನ್ನುತ್ತಾರೆ ಅಜ್ಜಿ ಶಂಕ್ರಮ್ಮ.

Read More

ಅರಸೊತ್ತಿಗೆ ಕಾಲದಿಂದಲೂ ಆಯುರ್ವೇದ ಪಂಡಿತರಿಂದ ಹಿಡಿದು ಸಾಮಾನ್ಯ ಮನುಷ್ಯರವರೆಗೂ ನುಗ್ಗೆ ಸೊಪ್ಪು ತನ್ನ ಮಹತ್ವದ ಕಾರಣಕ್ಕೆ ಪ್ರಮುಖ ಔಷಧಿಯಾಗಿಯು ಬಳಕೆಯಾಗಿದೆ. ವೈಜ್ಞಾನಿಕ ದೃಷ್ಟಿಯಿಂದ ನಾವು ಎಷ್ಟೇ ಎತ್ತರದಲ್ಲಿದ್ದರೂ ಕೆಲವೊಂದು ಕಾಯಿಲೆಯ ವಿಷಯ ಬಂದಾಗ ಇಂತಹ ವಿಶೇಷ ಸತ್ವ ಉಳ್ಳಂತಹ ನಿಸರ್ಗದ ಕೊಡುಗೆಗಳನ್ನು ಗಮನಿಸಲೇಬೇಕಿದೆ. ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾದ ಆಂಟಿ – ಆಕ್ಸಿಡೆಂಟ್ ಗಳು, ವಿಟಮಿನ್ ‘ ಸಿ ‘, ಜಿಂಕ್ ಮತ್ತು ಇತರ ಸಕ್ರಿಯವಾಗಿ ಕೆಲಸ ಮಾಡುವ ಸತ್ವಗಳಿವೆ. ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ಗಳ ವಿರುದ್ಧ ಹೋರಾಡಿ ದೇಹದ ಕೋಶಗಳ ಒಳಗೆ ಡಿ ಎನ್ ಎ ಗಳ ನಾಶಕ್ಕೆ ಕಾರಣವಾಗುವುದನ್ನು ಇದು ತಪ್ಪಿಸುತ್ತದೆ. ಮಾನವನ ದೇಹದಲ್ಲಿ ಲಿವರ್ ನ ಅತಿ ಮುಖ್ಯ ಕೆಲಸ ಜೀರ್ಣಾಂಗದಿಂದ ದೇಹದ ಇತರ ಅಂಗಗಳಿಗೆ ರಕ್ತವನ್ನು ಹರಿಸುವ ಮೊದಲು ಅದನ್ನು ಶೋಧಿಸುವುದು. ಶೋಧಿಸಿ ಅದರಲ್ಲಿನ ರಾಸಾಯನಿಕಗಳನ್ನು ನಿರ್ವಿಷಗೊಳಿಸಿ ಔಷಧಿಗಳನ್ನು ಚಯಾಪಚಯಗೊಳಿಸುವಂತೆ ಮಾಡುವಲ್ಲಿ ನುಗ್ಗೆ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ ಪಿತ್ತಜನಕಾಂಗಕ್ಕೆ ಸಮಸ್ಯೆ…

Read More

ಮಡಿಕೇರಿ ಮೂಲದ ನಟಿ ರಶ್ಮಿಕಾ ಮಂದಣ್ಣ ಮತ್ತು ತೆಲುಗು ನಟ ವಿಜಯ್‌ ದೇವರಕೊಂಡ ಡೇಟ್ ಮಾಡುತ್ತಿರುವ ಬಗ್ಗೆ ಸಾಕಷ್ಟು ರೂಮರ್ ಗಳಿದ್ದವು. ಇದೀಗ ಈ ಜೋಡಿ ಅದಕ್ಕೆ ಫುಲ್ ಸ್ಟಾಪ್ ಹಾಕಿದ್ದು, ಎಂಗೇಜ್ಡ್ ಆಗಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಮೂಲಕ ಹೆಸರು ಮಾಡಿದ್ದ ರಶ್ಮಿಕಾ ಬಾಲಿವುಡ್ ನಲ್ಲೂ ಮಿಂಚಿ ನ್ಯಾಷನಲ್ ಕ್ರಶ್ ಎನಿಸಿದ್ದರು. ಇನ್ನು ತೆಲುಗಿನ ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಅಪಾರ ಅಭಿಮಾನಿ ಬಳಗ ಸಂಪಾದಿಸಿರುವ ದೇವರಕೊಂಡ ಸ್ಟಾರ್ ನಟರಲ್ಲೊಬ್ಬರು ಎನಿಸಿದ್ದಾರೆ. ವಿಜಯ್ ಮನೆಯಲ್ಲಿ ನಿಶ್ಚಿತಾರ್ಥ ನಡೆದಿದ್ದು ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಟಾಲಿವುಡ್‌ನ ವಿಶ್ವಾಸಾರ್ಹ ಮೂಲಗಳಿಂದ ಬಂದಿರುವ ವರದಿಗಳ ಪ್ರಕಾರ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ರಹಸ್ಯವಾಗಿ ಹೈದರಾಬಾದ್‌ನ ದೇವರಕೊಂಡ ಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.‌ ನಿಶ್ಚಿತಾರ್ಥವು ಇಬ್ಬರೂ ತಾರೆಯರ ಆಪ್ತ ಸ್ನೇಹಿತರು ಮತ್ತು ಎರಡು ಕುಟುಂಬಗಳ ಸಮ್ಮುಖದಲ್ಲಿ ಬಹಳ ಖಾಸಗಿಯಾಗಿ ನಡೆದಿದೆ. ವಿಜಯ್‌ ಮತ್ತು ರಶ್ಮಿಕಾ ಶೀಘ್ರವೇ ಈ ಸುದ್ದಿಯನ್ನು ಅಧಿಕೃತಗೊಳಿಸಲಿದ್ದಾರೆ ಎಂದು ವರದಿಯಾಗಿದೆ.

Read More

ಇತ್ತೀಚೆಗೆ ಕ್ರಿಸ್ಟಿನ್ ಮ್ಯಾಥ್ಯೂ ಫಿಲಿಪ್ ಎಂಬುವರ X ಅಕೌಂಟ್‌ನಲ್ಲಿ ಬೆಂಗಳೂರು ನಗರದ ಬಗ್ಗೆ ‘ನಗರದಲ್ಲಿ ರಸ್ತೆ ಅವ್ಯವಸ್ಥೆ, ಗುಂಡಿಗಳ ಕಾರಣದಿಂದ ನಗರದ ಹೊರ ವಲಯದ ರಸ್ತೆಯಿಂದ ಸ್ಟಾರ್ಟ್ಅಪ್‌ಗಳು ಹಾಗೂ ಉದ್ಯಮ ಕಂಪನಿಗಳು ಬೆಂಗಳೂರಿನ ಉತ್ತರದ ಕಡೆಗೆ ಹಾಗೂ ವೈಟ್‌ಫೀಲ್ಡ್ ಕಡೆ ಮುಖಮಾಡುತ್ತಿವೆ ಎಂದು ಬರೆಯಲಾಗಿತ್ತು. ಕಂಪನಿಗಳಿಗೆ ಆಂಧ್ರಪ್ರದೇಶ ಸರ್ಕಾರ ಮತ್ತೆ ಆಹ್ವಾನ ನೀಡಿದ್ದು, ಇದಕ್ಕೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಮಗ, ಹಾಲಿ ಸಚಿವ ನಾರಾ ಲೋಕೇಶ್ ಬೆಂಗಳೂರು ಉತ್ತರದ ಕಡೆಗೆ ಸ್ವಲ್ಪ ಚೆನ್ನಾಗಿದೆ. ಇನ್ನೂ ಸ್ವಲ್ಪ ಉತ್ತರಕ್ಕೆ ಬನ್ನಿ. ಅನಂತಪುರದಲ್ಲಿ ಚೆನ್ನಾಗಿದೆ ಎಂದಿದ್ದರು. ನಮ್ಮಲ್ಲಿ ವಿಶ್ವದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಎಕೋಸಿಸ್ಟಂ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ ಎಂದು ಪ್ರತಿಕ್ರಿಯಿಸುವ ಮೂಲಕ ಆಂಧ್ರಪ್ರದೇಶದಲ್ಲಿ ನಡೆದಿರುವ ಕೆಲಸಗಳನ್ನು ಉಲ್ಲೇಖಿಸಿ ಬೆಂಗಳೂರನ್ನು ಕೇಂದ್ರಿಕರಿಸಿರುವ ಐಟಿ ಉದ್ಯಮಿಗಳಿಗೆ ಆಹ್ವಾನ ನೀಡಿದ್ದರು.ನಾರಾ ಲೋಕೇಶ್ ಅವರ ಈ ಪ್ರತಿಕ್ರಿಯೆಗೆ ತಿರುಗೇಟು ನೀಡಿರುವ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ, ದುರ್ಬಲ ವ್ಯವಸ್ಥೆಯಲ್ಲು ಇರುವವರು…

Read More

ಬ್ಲಾಕ್ ಬ್ಲಸ್ಟರ್ ಸಿನಿಮಾಗಳಾದ ತೆಲುಗಿನ ‘ಅರ್ಜುನ್ ರೆಡ್ಡಿ’ ಹಿಂದಿಯ ‘ಅನಿಮಲ್’ ಚಲನಚಿತ್ರಗಳ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ-1’ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಇದೊಂದು ನೈಜವಾದ ಮಾಸ್ಟರ್ ಪೀಸ್ ಎಂದಿರುವ ಸಂದೀಪ್ ರೆಡ್ಡಿ, ಇದು ಅಲುಗಾಡಿಸಲು ಆಗದಂತಹ ಚಿತ್ರ ಎಂದಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತವನ್ನು ಮೆಚ್ಚಿ ಬರೆದುಕೊಂಡಿದ್ದಾರೆ. ನಿನ್ನೆ ಪ್ರಪಂಚದಾದ್ಯಂತ ಬಿಡುಗಡೆಯಾಗಿರುವ ‘ಕಾಂತಾರ-1’ ಸಿನಿಮಾಗೆ ಎಲ್ಲೆಡೆ ಭರಪೂರ ಆರಂಭ ಸಿಕ್ಕಿದ್ದು, ಚಿತ್ರದ ಗಳಿಕೆ ಬಗ್ಗೆಯು ಚರ್ಚೆ ನಡೆದಿವೆ‌. ಇದಕ್ಕೆ ಪ್ರತಿಕ್ರಿಯಿಸಿರುವ ನಟ ರಿಷಭ್ ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ.

Read More

ದೆಹಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಸ್ತುತ ದಿನಮಾನಗಳ ರಾವಣನ ಸಂಕೇತದಂತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.ಮೋದಿ ತಮ್ಮ ಚಿನ್ನದ ಅರಮನೆ ನಿರ್ಮಿಸುತ್ತಿದ್ದಾರೆ. ಅದರೊಳಗೆ ಒಮ್ಮೆ ಪ್ರವೇಶಿಸಿದ ನಂತರ ಅವರೇ ಸುಟ್ಟು ಹೋಗುತ್ತಾರೆ ಎಂದು ಕಟುಟೀಕೆ ಮಾಡಿದ್ದಾರೆ. ಮತ್ತೊಬ್ಬ ಕಾಂಗ್ರೆಸ್ ನಾಯಕ ಸಂಜಯ್ ರಾವತ್ ಸಹ ದೆಹಲಿಯ ರಾವಣನನ್ನು ದಹಿಸಬೇಕು. ದೆಹಲಿಯ ರಾವಣನನ್ನು ದಹಿಸುವ ದಿನ ಸಮೀಪದಲ್ಲಿದೆ. ಮೋದಿ ಹೆಚ್ಚು ಕಾಲ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಇಷ್ಟರಲ್ಲೇ ಅವರು ನಿರ್ಮಿಸ ಹೊರಟಿರುವ ಲಂಕೆಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿ ಕಿಡಿಕಾರಿರುರುವ ಬಿಜೆಪಿ ವಕ್ತಾರ ಶಹಜಾದ್ ಪೂನಾವಾಲಾ ವ್ಯಕ್ತಿಯ ಮೇಲಿನ ದ್ವೇಷದಿಂದ ಕುರುಡಾಗಿ ಕಾಂಗ್ರೆಸ್ ಪಕ್ಷ ಸಾಂವಿಧಾನಿಕ ಹುದ್ದೆಗಳ ದೊಡ್ಡತನವನ್ನು ಮರೆತುಬಿಡುತ್ತದೆ. ವಿರೋಧ ಪಕ್ಷದ ನಾಯಕರು ಪ್ರಧಾನಿ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಮೋದಿ ವಿರೋಧಿ ಹಾಗೂ ಭಾರತ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Read More

ಡಾ.ಎಸ್.ಎಲ್.ಭೈರಪ್ಪ ಅವರು ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಬಹಳ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಅವರ ಕಾದಂಬರಿಗಳು ಓದುಗರನ್ನು ವಿಸ್ತರಿಸುವುದರ ಜೊತೆಗೆ ಜನಸಾಮಾನ್ಯರಲ್ಲೂ ಜನಪ್ರಿಯತೆಯನ್ನು ಪಡೆದಿದ್ದವು. ಕನ್ನಡದಿಂದ ಕೃತಿಗಳು ಅತಿಹೆಚ್ಚು ಅನುವಾದ ಆಗಿರುವ ಲೇಖಕರು ಯಾರಾದರೂ ಇದ್ದಾರೆಂದರೆ ಅವರು ಡಾ. ಎಸ್.ಎಲ್ ಭೈರಪ್ಪನವರು ಮಾತ್ರ. ಸಾಹಿತ್ಯ ಕೃಷಿಯೊಂದಿಗೆ ಹೇಮಾವತಿ ನದಿಗೆ ನೀರು ತುಂಬುವಂತೆ ಮಾಡಿ ಸುತ್ತಮುತ್ತಲಿನ ರೈತರ ಮುಖದಲ್ಲಿ ಮಂದಹಾಸವನ್ನೂ ಮೂಡಿಸಿದ್ದರು ಎಂದು ಶ್ರದ್ಧಾಂಜಲಿ ಸಭೆಯಲ್ಲಿ ಮಾನ್ಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ತಿಳಿಸುತ್ತಾ, ಪುರಾಣಗಳನ್ನು ವಿಭಿನ್ನ ದೃಷ್ಟಿಕೋನದಲ್ಲಿ ನೋಡುವ ಹೊಸ ಜಾಯಮಾನವನ್ನು ಕಾದಂಬರಿ ಕ್ಷೇತ್ರದಲ್ಲಿ ಹುಟ್ಟುಹಾಕಿದ್ದರು. ಅವರ ವಂಶವೃಕ್ಷ, ದಾಟು, ಪರ್ವ, ದೂರ ಸರಿದವರು ಮೊದಲಾದ ಕಾದಂಬರಿಗಳು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿವೆ. ಯಾರ, ಯಾವ ಟೀಕೆ, ಟಿಪ್ಪಣಿಗಳಿಗೂ ಎದೆಗುಂದದೆ ಶಾಂತ ಮನಸ್ಸಿನಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿರುತ್ತಿದ್ದರು. ಅವರ ಕಾದಂಬರಿಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಜೊತೆಗೆ ಕುಟುಂಬದ ಒಳಗಿನ ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ಬಹಳ ಅಚ್ಚುಕಟ್ಟಾಗಿ ಚಿತ್ರಿಸುತ್ತಿದ್ದರು. ಇಡೀ ದೇಶಕ್ಕೆ ಮಾದರಿಯಾದ ಭೈರಪ್ಪನವರು ನಮ್ಮೆಲ್ಲರಿಂದ…

Read More

ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಸಿಂಗ್ವಾ ಗ್ರಾಮದಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಥಳೀಯ ಜಾನುವಾರು ಸಾಕಣೆದಾರ ಈಶ್ವರ್ ಸಿಂಗ್ವಾ ಅವರ ಒಡೆತನದ ಮುರ್ರಾ ಎಮ್ಮೆ (ಬಫಲೋ) ರಾಧಾ 35.669 ಕಿಲೋಗ್ರಾಂಗಳಷ್ಟು ಹಾಲು ಉತ್ಪಾದನೆ ಮಾಡಿದೆ. ಇದು ಕೈತಾಲ್‌ನ ಎಮ್ಮೆ ರೇಷ್ಮಾಳ ಈ ಹಿಂದಿನ ದಾಖಲೆಯನ್ನು ಪುಡಿಗಟ್ಟಿದೆ. ಕೈತಾಲ್ನ ರೇಷ್ಮಾ, 33,800 ಕಿಲೋಗ್ರಾಂಗಳಷ್ಟು ಹಾಲು ಉತ್ಪಾದಿಸಿದ್ದು, ದಾಖಲೆಯಾಗಿತ್ತು. ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸಿಂಗ್ವಾ ಖಾಸ್ ಗ್ರಾಮದ ಪಶುಗಳ ಆಸ್ಪತ್ರೆಯಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.ಹರಿಯಾಣದ ಪಶುಸಂಗೋಪನಾ ಇಲಾಖೆ ಆಯೋಜಿಸಿದ್ದ ಈ ಸ್ಪರ್ಧೆಗೆ ಇಲಾಖೆಯ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಿದ್ದೆ. ಅರ್ಜಿ ಪರಿಶೀಲನೆ ಬಳಿಕ ಇಲಾಖೆಯು ನಮ್ಮ ರಾಧಾ ಎಮ್ಮೆಯನ್ನು ಸ್ಪರ್ಧೆಗೆ ಆಹ್ವಾನಿಸಿತ್ತು. ಹಿರಿಯ ಅಧಿಕಾರಿಗಳ ತಂಡ ಸ್ಪರ್ಧೆಯಲ್ಲಿ ರಾಧಾ ಎಮ್ಮೆ ನೀಡಿದ ಹಾಲನ್ನು ಮೂರು ಬಾರಿ ಅಳತೆ ಮಾಡಿತು. ಈ ವೇಳೆ ಮುರ್ರಾ ತಳಿಯ ರಾಧಾ ಎಮ್ಮೆ 35.669 ಕಿಲೋಗ್ರಾಂಗಳಷ್ಟು ಹಾಲು ಉತ್ಪಾದಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಈ ಹಿಂದೆ ಕೈತಾಲ್‌ನ ಎಮ್ಮೆ…

Read More

ಸರಕಾರಿ ನೌಕರಿ ಉಳಿಸಿಕೊಳ್ಳಲು ತಮಗೆ ಜನಿಸಿದ್ದ ಮಗುವನ್ನೇ ಪೋಷಕರು ಕಾಡಲ್ಲಿ ಬಿಟ್ಟು ಹೋದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರಕಾರಿ ನೌಕರಿ ಕಳೆದುಕೊಳ್ಳುವ ನಿಯಮ ಚಾಲ್ತಿಯಲ್ಲಿದೆ. ಈ ಮೊದಲು ಮೂರು ಮಕ್ಕಳಿದ್ದರೂ ನಾಲ್ಕನೇ ಮಗುವನ್ನು ಸರಕಾರಿ ನೌಕರಿ ಭಯದಿಂದ ಮಧ್ಯಪ್ರದೇಶದ ಛಿಂದ್ವಾರಾ ಪ್ರದೇಶದ ಬಬ್ಲು ದಾಂಡೋಲಿಯಾ ಮತ್ತು ರಾಜಕುಮಾರಿ ದಾಂಡೋಲಿಯಾ ಸೆ.23ರಂದು ಜನಿಸಿದ ನಾಲ್ಕನೇ ಮಗುವನ್ನು ಕಾಡಿನಲ್ಲಿ ಬಿಟ್ಟು ಹೋಗಿದ್ದರು. ಕಾಡಂಚಿನ ಗ್ರಾಮದ ಜನರು ಮಗುವಿನ ಅಳು ಕೇಳಿ ರಕ್ಷಿಸಿದ್ದಾರೆ. ತಡಮಾಡದೆ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಮಗು ಸುರಕ್ಷಿತವಾಗಿದೆ. ಪೊಲೀಸರ ತನಿಖೆಯಲ್ಲಿ ದಂಪತಿಗಳು ತಮ್ಮ ತಪ್ಪೊಪ್ಪಿಕೊಂಡಿದ್ದು, ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಯಾವುದೇ ತೊಂದರೆಯಿಲ್ಲದೆ ಮಗು ಆರೋಗ್ಯದಿಂದಿದ್ದು, ಸುರಕ್ಷತಾ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More