Author: Times of bayaluseeme
ಚಿತ್ರದುರ್ಗ: ಅಕ್ಕಾ ಕೆಫೆ ನಿರ್ವಹಣೆಗೆ ಸ್ವ ಸಹಾಯ ಗುಂಪು ಆಯ್ಕೆ ಮಾಡಲು ಚಿತ್ರದುರ್ಗ ನಗರದ ರುಡ್‍ಸೆಟ್ ಸಂಸ್ಥೆಯಲ್ಲಿ ಗುರುವಾರ ಆಹಾರ ಸಿದ್ದಪಡಿಸುವ ಸ್ಪರ್ಧೆ ನಡೆಯಿತು.ಚಿತ್ರದುರ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಕಟ್ಟಡದ ನಿರ್ಮಾಣ ಪೂರ್ಣಗೊಳಿಸಲಾಗಿದ್ದು, ಈ ಅಕ್ಕಾ ಕೆಫೆ ನಿರ್ವಹಣೆಗೆ ಸ್ವ ಸಹಾಯ ಗುಂಪನ್ನು ಆಯ್ಕೆ ಮಾಡಲು ಆಹಾರ ಸಿದ್ದಪಡಿಸುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಅನುಭವವಿರುವ ಮೂರು ಸ್ವ-ಸಹಾಯ ಗುಂಪುಗಳು ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ಪರಿಶೀಲಿಸಿ ಆಹಾರ ಸಿದ್ದಪಡಿಸಿರುವ ವಿಧಾನ, ಗುಣಮಟ್ಟ, ರುಚಿ-ಶುಚಿ-ನೈರ್ಮಲ್ಯ, ಆಹಾರ ತಯಾರಿಸಲು ಉಪಯೋಗಿಸಿದ ಪದಾರ್ಥಗಳನ್ನು ಪರಿಶೀಲಿಸಿ, ಸ್ವ-ಸಹಾಯ ಸಂಘದ ಮಹಿಳೆಯರು ಸಿದ್ಧಪಡಿಸಿದ ಆಹಾರದ ರುಚಿ, ಗುಣಮಟ್ಟ ಪರಿಶೀಲನೆ ನಡೆಸಿದರು. ಅಕ್ಕ ಕೆಫೆ ನಿರ್ವಹಣೆಗೆ ಸ್ವ ಸಹಾಯ ಗುಂಪಿನ ಆಯ್ಕೆಯಲ್ಲಿ ಶುಚಿ-ರುಚಿ ಆಹಾರಕ್ಕೆ ಒತ್ತು ನೀಡಬೇಕು ಎಂದು ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಕರೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಮಹಿಳಾ…
ಬಹು ನಿರೀಕ್ಷಿತ ರಾಮಾಯಣ ಚಿತ್ರಕ್ಕಾಗಿ ಚಿತ್ರ ರಸಿಕರು ಕಾಯುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ರಾಮಾಯಣದಲ್ಲಿ ರಾವಣನಾಗಿ ಯಶ್ ರನ್ನ ನೋಡಲು ಕಾತುರರಾಗಿದ್ದಾರೆ. ಆದರೆ ನಿಮಗೆ ಗೊತ್ತಾ ಯಶ್‌ಗೂ ಮುನ್ನ ಹಿಂದಿಯಲ್ಲಿ ರಾವಣನಾಗಿ ಮತ್ತೋರ್ವ ಕನ್ನಡದ ನಟ ಅಬ್ಬರಿಸಿ ಮಿಂಚಿದ್ದರು. ಬಾಲಿವುಡ್‌ನ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಆಗಿದ್ದು, ಇದರ ಮೇಕಿಂಗ್, ಗ್ರಾಫಿಕ್ಸ್, ಮ್ಯೂಸಿಕ್ ಎಲ್ಲವೂ ಭಾರತೀಯ ಚಿತ್ರರಂಗವೇ ದಂಗು ಬಡಿಯುವಂತಿದೆ. ಅದರಲ್ಲಿಯೂ ರಾಮಾಯಣದಲ್ಲಿ ರಾಮನಾಗಿ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಆದರೆ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಲು ಕಾರಣ ರಾವಣನಾಗಿ ನಟಿಸುತ್ತಿರುವ ಯಶ್ ಅವರಿಂದ ಎಂದೇ ಹೇಳಲಾಗುತ್ತಿದೆ. ಗ್ಲಿಂಪ್ಸ್ ಬಿಡುಗಡೆ ಆದಾಗಿನಿಂದ ರಾಮಾಯಣ ಎನ್ನುವುದಕ್ಕಿಂತ ಸಿನಿಪ್ರೇಮಿಗಳು ರಾವಣನಾಗಿ ಯಶ್ ಅವರನ್ನು ನೋಡಲು ಕಾತುರರಾಗಿದ್ದಾರೆ. ಕನ್ನಡದ ಒಬ್ಬ ನಟ ದೇಶಮಟ್ಟದಲ್ಲಿ ಇಷ್ಟೊಂದು ಹೈಪ್ ಕ್ರಿಯೇಟ್ ಮಾಡಿರುವುದು ಕನ್ನಡಿಗರ ಹೆಮ್ಮೆಯಾಗಿದೆ. ಆದರೆ ನಿಮಗೆ ಗೊತ್ತಾ? ಯಶ್‌ಗೂ ಮುನ್ನ ಹಿಂದಿಯಲ್ಲಿ ರಾವಣನಾಗಿ ಮತ್ತೋರ್ವ ಕನ್ನಡದ ನಟ ಅಬ್ಬರಿಸಿ ಮಿಂಚಿದ್ದರು. ಹಿಂದಿಯಲ್ಲಿ ರಾವಣನಾಗಿ ಜೆಕೆ: ಹೌದು, ಕನ್ನಡ…
ನವದೆಹಲಿ: ಮಾಧ್ಯಮಗಳು ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆಯ ಸುದ್ದಿ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಠಿ ಮಾಡಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜಧಾನಿ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಾನೇ ಸಂಪೂರ್ಣವಧಿ ಸಿಎಂ ಎಂದು ಹೇಳುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರೆ. ಮತ್ತೊಂದು ಸಿದ್ದರಾಮಯ್ಯ ಹೇಳಿಕೆ ಡಿಕೆಶಿ ಬಣಕ್ಕೆ ಗರ ಬಡಿದಂತಾಗಿದೆ. ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ರಾಜ್ಯದಲ್ಲಿ ಶಾಸಕರನ್ನು ಭೇಟಿ ಮಾಡುತ್ತಿರುವ ಉದ್ದೇಶ ಮುಖ್ಯಮಂತ್ರಿಗಳ ಬದಲಾವಣೆಯ ವಿಷಯವಲ್ಲ ಗ್ಯಾರಂಟಿಗಳು ಹೇಗೆ ನಡೆಯುತ್ತಿವೆ ಹಾಗೂ ಶಾಸಕರ ಕುಂದು ಕೊರತೆಗಳನ್ನು ಕೇಳಿದ್ದಾರೆ ಅಷ್ಟೇ ಎಂದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದವರೇ ಮುಖ್ಯಮಂತ್ರಿಗಳ ಬದಲಾವಣೆಯ ಪ್ರಶ್ನೆಯನ್ನು ಅಲ್ಲಗೆಳೆದ ಮೇಲೆ , ಈ ವಿಷಯದ ಬಗ್ಗೆ ಊಹಾಪೋಹಗಳಿಗೆ ಆಸ್ಪದವಿಲ್ಲ. ಈ ಊಹಾಪೋಹಗಳನ್ನು ಮಾಧ್ಯಮಗಳ ಸೃಷ್ಟಿಯಾಗಿರುವುದೇ ಹೊರತು, ಕಾಂಗ್ರೆಸ್ ವಲಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯ ವಿಷಯ ಚರ್ಚೆಯೇ ಆಗಿಲ್ಲ ಎಂದರು.…
ಮೂಗು ಕಟ್ಟುವಿಕೆಗೆ ಮನೆ ಮದ್ದುಗಳ ಪರಿಹಾರ ಹುಡುಕುತ್ತಿದ್ದೀರಾ…? ನೀವು ಉಗಿಯನ್ನು ಉಸಿರಾಡಬಹುದು, ಬಿಸಿ ಶವರ್ ತೆಗೆದುಕೊಳ್ಳಬಹುದು ಅಥವಾ ಉಪ್ಪು ನೀರಿನಿಂದ ನಿಮ್ಮ ಮೂಗನ್ನು ತೊಳೆಯಬಹುದು. ಶುಂಠಿ, ಬೆಳ್ಳುಳ್ಳಿ ಮತ್ತು ತುಳಸಿ ಎಲೆಗಳನ್ನು ಬಳಸಿ ಚಹಾ ಕುಡಿಯುವುದರಿಂದಲೂ ಪರಿಹಾರ ಸಿಗುತ್ತದೆ.ಮೂಗು ಕಟ್ಟುವಿಕೆಗೆ ಮನೆಮದ್ದುಗಳು ಇಲ್ಲಿವೆ ಉಗಿ ಉಸಿರಾಟ: ಬಿಸಿ ನೀರಿನ ಬಟ್ಟಲಿನಿಂದ ಉಗಿ ತೆಗೆದುಕೊಳ್ಳುವುದು ಅಥವಾ ಬಿಸಿ ಶವರ್ ತೆಗೆದುಕೊಳ್ಳುವುದು ಮೂಗಿನ ಹಾದಿಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ತೇವಾಂಶವು ಲೋಳೆಯನ್ನು ತೆಳುಗೊಳಿಸುತ್ತದೆ ಮತ್ತು ಉಸಿರಾಟವನ್ನು ಸುಲಭಗೊಳಿಸುತ್ತದೆ. ಉಪ್ಪು ನೀರಿನ ಜಾಲಾಡುವಿಕೆ: ಉಗುರು ಬೆಚ್ಚಗಿನ ಉಪ್ಪು ನೀರಿನಿಂದ ನಿಮ್ಮ ಮೂಗನ್ನು ತೊಳೆಯುವುದು, ಮೂಗಿನ ಹಾದಿಗಳಿಂದ ಲೋಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನೀವು ನೆಟಿ ಪಾಟ್ ಅನ್ನು ಬಳಸಬಹುದು ಅಥವಾ ಹಗುರವಾದ ಉಪ್ಪು ನೀರಿನ ದ್ರಾವಣವನ್ನು ಮೂಗಿನ ಹೊಳ್ಳೆಗಳಲ್ಲಿ ಸಿಂಪಡಿಸಬಹುದು. ಶುಂಠಿ: ಶುಂಠಿಯಲ್ಲಿ ಉರಿಯೂತದ ಗುಣಲಕ್ಷಣಗಳಿವೆ. ಶುಂಠಿಯನ್ನು ಕುದಿಸಿ ಚಹಾ ಮಾಡಿ ಕುಡಿಯಬಹುದು ಅಥವಾ ಶುಂಠಿ ತುಂಡುಗಳನ್ನು ನೀರಿನಲ್ಲಿ ಕುದಿಸಿ ಉಗಿಯನ್ನು ಉಸಿರಾಡಬಹುದು. ತುಳಸಿ…
ಬೆಂಗಳೂರು : ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜನರಿಗೆ ಅಭಯ ನೀಡಿದರು. ಹೃದಯಾಘಾತ ಬಗ್ಗೆ ಜನರು ಆತಂಕ ಪಡಬೇಡಿ. ಮಾಧ್ಯಮದಲ್ಲಿ ಇದರ ಬಗ್ಗೆ ಹೆಚ್ಚು ವೈಭವೀಕರಿಸಲಾಗುತ್ತಿದೆ. ಜನರಿಗೆ ಭೀತಿ ಉಂಟಾಗುವುದು ಸಹಜ. ಆದರೆ ವೈದ್ಯರು ಹಾಗೂ ಇಲಾಖೆಯ ಅಧಿಕಾರಿಗಳು ನೀಡುವ ಸಲಹೆಗಳನ್ನು ಪಾಲಿಸಿ ಎಂದು ಸಚಿವರು ತಿಳಿಸಿದರು.ಸಾರ್ವಜನಿಕರು ನಿಯಮಿತ ಆಹಾರ, ಪೌಷ್ಟಿಕಯುಕ್ತ ಆಹಾರ, ವ್ಯಾಯಾಮ ಹಾಗೂ ಯೋಗ ಹಾಗೂ ಇತರೆ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಜೀವನ ಶೈಲಿಯನ್ನು ಆದಷ್ಟು ಬಳಸಿಕೊಳ್ಳಿ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ ಎಂದು ಮಾಹಿತಿ ನೀಡಿದರು.ಆದಷ್ಟು ಜಂಕ್ ಫುಡ್, ದುರಭ್ಯಾಸಗಳನ್ನು…
ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್ ಸಮೀಪದ ನಾರಾಯಣಪ್ಪ ಲೇಔಟ್ ನ 6ನೇ ಕ್ರಾಸ್‍ನಲ್ಲಿನ ಸಿದ್ದೇಶ್ವರ ಜ್ಯುವೆಲರ್ಸ್ ಕವಿತಾ ವಿರೇಶ್ಸಮೃದ್ದಿ ಸದನದ ಮನೆಯಲ್ಲಿ ನಿನ್ನೆ ರಾತ್ರಿ ವಿಶೇಷವಾದ ಬ್ರಹ್ಮಕಮಲದ ಹೂವುಗಳು ಆರಳಿವೆ. ಸುಮಾರು 14 ಬ್ರಹ್ಮಕಮಲ ಹೂವು ಏಕಕಾಲಕ್ಕೆ ಅರಳಿ ನಿಂತಿವೆ. ಬ್ರಹ್ಮಕಮಲ ಹೆಸರೇ ಹೇಳುವಂತೆ ಹಿಂದೂ ಪುರಾಣಗಳಲ್ಲಿ ಕಂಡುಬರುವ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ ಬ್ರಹ್ಮನ ಹೆಸರಿನಲ್ಲಿರುವ ಅಪರೂಪದ ಪುಷ್ಪವಿದು. ಒಂದೂವರೆ ವರ್ಷದಲ್ಲಿ ಹೂ ಬಿಡುವುದು ಆರಂಭವಾಗುತ್ತದೆ.ಹೂವು ಬಿಡುವುದು ಸಾಮಾನ್ಯವಾಗಿ ಮಧ್ಯೆ ಮಾನ್ಸೂನ್ ಕಾಲದ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ. ಒಂದೇ ಒಂದು ಎಲೆಯಿಂದಗಿಡವಾಗಿ ಬೆಳೆಯುತ್ತಾ ತನ್ನ ಮೈತುಂಬೆಲ್ಲಾ ಹೂವುಗಳನ್ನು ಬಿಡುತ್ತದೆ. ಬ್ರಹ್ಮಕಮಲದ ಹೂವು ಅರಳುವ ಪ್ರಕ್ರಿಯೆಯೇ ಅತ್ಯಂತವಿಸ್ಮಯಕಾರಿಯಾದದ್ದು. ಈ ಹೂವನ್ನು ಬೆಳೆಸುವ ಎಲ್ಲರೂ ಅದು ಅರಳುವಾಗ ಕಾದುಕುಳಿತಿರುತ್ತಾರೆ. ಏಕೆಂದರೆ ಅರಳಿ ವಿಸ್ಮಯಮೂಡಿಸುವ ಈ ಹೂವಿನ ಆಯಸ್ಸು ತುಂಬಾ ಕಡಿಮೆ. ಸೂರ್ಯನ ಬೆಳಕಿನಲ್ಲಿ ಮೊಗ್ಗಾಗಿ ರಾತ್ರಿ ಚಂದಿರ ಬರುವುದನ್ನು ಕಾದುಸರಿಸುಮಾರು 10 ಗಂಟೆಗೆ ಅರಳಿ ಬೆಳಗಾಗುವ ಮುಂಚೆಯೇ ಮುದುಡಿ ಮುದ್ದೆಯಾಗಿರುತ್ತದೆ.
ಉಡುಪಿ: ಆರ್‌ಎಸ್‌ಎಸ್ ನಿಷೇಧಿಸುವುದಕ್ಕೆ ಮಾಜಿಪ್ರಧಾನಿಗಳಾದ ಜವಾಹರ್ ಲಾಲ್ ನೆಹರು, ಇಂದಿರಾ ಹಾಗೂ ರಾಜೀವ್ ಗಾಂಧಿ ಕೂಡ ಪ್ರಯತ್ನಿಸಿದ್ದರೂ ಆದರೂ ಅವರ ಕೈಲಿ ಆಗಿಲ್ಲ. ಮುಂದೆ ರಾಹುಲ್ ಗಾಂಧಿ ಅವರಿಂದಲೂ ಆಗುವುದಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಟಾಂಗ್ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂಬೇಡ್ಕರ್ ಅವರೇ ಆರ್‌ಎಸ್‌ಎಸ್ ಅಸ್ಪೃಶ್ಯತೆ – ಜಾತೀಯತೆ ಇಲ್ಲದ ಸಂಘಟನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪ್ರಿಯಾಂಕ್ ಖರ್ಗೆ, ಬಿ.ಕೆ.ಹರಿಪ್ರಸಾದ್ ಅವರು ಆರ್‌ಎಸ್‌ಎಸ್ ಬಗ್ಗೆ ಲಘುವಾಗಿ ಮಾತನಾಡಿ ಸಮಯ ವ್ಯರ್ಥ ಮಾಡಬಾರದು ಎಂದು ತಿರುಗೇಟು ನೀಡಿದರು.
ಚಿತ್ರದುರ್ಗ: ಗ್ರಾಮಾಂತರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಕೆ.ಪಾಂಡಿ ಎಂಬ ವ್ಯಕ್ತಿಯಿಂದ 35 ಲಕ್ಷ ಹಣ ಪಡೆದು ನಕಲಿ ಚಿನ್ನದ ನಾಣ್ಯ ಕೊಟ್ಟು ಎಸ್ಕೇಪ್ ಆಗಿದ್ದ ರಮೇಶ್ ಹಾಗೂ ರಾಮಕೃಷ್ಣನನ್ನು ಖಚಿತ ಮಾಹಿತಿ ಆಧರಿಸಿ ಗುಡ್ಡದ ರಂಗವನಹಳ್ಳಿ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜಮೀನು ಉಳುಮೆ ವೇಳೆ ಚಿನ್ನದ ನಾಣ್ಯ ಸಿಕ್ಕಿದೆ ಎಂದು ನಂಬಿಸಿ ವಂಚನೆ ಮಾಡಿದ್ರು, ಬಳಿಕ ಕೆ.ಪಾಂಡಿಗೆ ನಾಣ್ಯಗಳು ನಕಲಿ ಎಂದು ತಿಳಿದ ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 22 ಲಕ್ಷ ನಗದು ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಎಸ್ಪಿ ರಂಜಿತ್ ಕುಮಾರ್ ಭಂಡಾರೂ ಮಾರ್ಗದರ್ಶನದಲ್ಲಿ ವಿಚಾರಣೆ ಮುಂದುವರೆದಿದೆ.ಚಿತ್ರದುರ್ಗ: ಗ್ರಾಮಾಂತರ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸಿದ್ದ ಇಬ್ಬರು ಖತರ್ನಾಕ್…
ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾಗಿ ವರದಿ ಆಗುತ್ತಿರುವ ಹಿನ್ನೆಲೆಯಲ್ಲಿ ಅಧ್ಯಯನ ನಡೆಸಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ಗುರುವಾರ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಲಿದ್ದು, ಹೃದಯಾಘಾತಕ್ಕೆ ಕಾರಣಗಳ ಕುರಿತು ಕುತೂಹಲ ಮೂಡಿದೆ. ರಾಜ್ಯಾದ್ಯಂತ ಹಠಾತ್ ಹೃದಯಾಘಾತದಿಂದ ನಿಧನ ಹೊಂದುತ್ತಿದ್ದ ಕಾರಣದಿಂದ ಕೊರೋನಾ ಸೋಂಕು ಹಾಗೂ ಲಸಿಕೆ ಅಡ್ಡ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಫೆಬ್ರವರಿಯಲ್ಲಿ ರವೀಂದ್ರನಾಥ್ ಸಮಿತಿ ರಚಿಸಿತ್ತು. ಬಳಿಕ ಮೇ-ಜೂನ್ ತಿಂಗಳಲ್ಲಿಹಾಸನ ಜಿಲ್ಲೆಯಲ್ಲಿ ಹೃದಯಾಘಾತಗಳು ಹೆಚ್ಚಾಗಿದ್ದರಿಂದ ಜು.2 ರಂದು ಇದೇ ತಜ್ಞರ ಸಮಿತಿಗೆ ಹಾಸನ ಪ್ರಕರಣಗಳ ಕುರಿತು ವರದಿ ನೀಡಲು ಸೂಚಿಸಿ ಒಂದು ವಾರದ ಕಾಲಾವಕಾಶ ನೀಡಿತ್ತು.ಸಮಿತಿ ಮೃತಪಟ್ಟಿರುವವರ ಮರಣೋತ್ತರ ವರದಿ ಸೇರಿ ಚಿಕಿತ್ಸಾ ವಿವರ ಸಂಗ್ರಹಿಸಿ ಅಧ್ಯ ಯನ ನಡೆಸಿದೆ. ಆದರೆ 22 ಮಂದಿ ಸಾವಿಗೀಡಾದವರಲ್ಲಿ 8 ಮಂದಿ ಮಾತ್ರ ಮರಣೋತ್ತರ ಪರೀಕ್ಷೆ ನಡೆಸಿದ್ದು, ಉಳಿದ 14 ಮಂದಿ ಮಾಡಿಸಿಲ್ಲ. ಹೀಗಾಗಿ ವಿವಿಧ ಅಂಶಗಳನ್ನು ಆಧಾರವಾಗಿ ಟ್ಟುಕೊಂಡು ವರದಿ…
ಮಂಗಳೂರು: ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ ಕೈ ಗೊಳ್ಳಲಾಗುವುದುಎಂದು ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ, ಯೂತ್ ರೆಡ್ ಕ್ರಾಸ್ ಸೊಸೈಟಿ, ವೆನ್ ಲಾಕ್ ಆಸ್ಪತ್ರೆ, ನಗರ ಕೇಂದ್ರ ಗ್ರಂಥಾಲಯ, ಕೆ ಎಂ ಸಿ ಆಸ್ಪತ್ರೆ ಸಹಭಾಗಿತ್ವದಲ್ಲಿ ವೆನ್ ಲಾಕ್ ಆಸ್ಪತ್ರೆ ಆವರಣ ದಲ್ಲಿಸ್ಥಳಾಂತರಗೊಂಡ ಸಮುದಾಯ ವಾಚನಾಲಯ ಮತ್ತು ಗ್ರಂಥಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿ. ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕ ಸಹಭಾಗಿತ್ದಲ್ಲಿ ನಿರ್ಮಾಣಗೊಂಡ ಸಮುದಾಯ ವಾಚನಾಲಯ ರಾಜ್ಯಕ್ಕೆ ಮಾದರಿ.ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅವರ ಸಹಾಯಕರಿಗೆ ಸಂದರ್ಶಕರಿಗೆ ಮತ್ತು ಸಾರ್ವಜನಿಕರಲ್ಲಿ ಸಮಯದ ಸದುಪ ಯೋಗ ಮಾಡಲು ಮತ್ತು ಮಾಹಿತಿ ಪಡೆಯಲು ಒಂದು ಒಳ್ಳೆಯ ಅವಕಾಶ ಒದಗಿ ಸಿದಂತಾಗಿದೆ ಎಂದರು.ಸಮಾರಂಭದಲ್ಲಿ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಶಿವಪ್ರಕಾಶ್,…
Subscribe to Updates
Get the latest creative news from FooBar about art, design and business.