Author: Times of bayaluseeme

ಬೆಂಗಳೂರು: ಮಿಸ್ ಯೂನಿವರ್ಸ್ ಕರ್ನಾಟಕ ಸ್ಪರ್ಧೆಯಲ್ಲಿ ವಿಜೇತರಾಗಿರುವ ಚಿಕ್ಕಮಗಳೂರಿನ ವಂಶಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬೆಂಗಳೂರಿನಲ್ಲಿ ಭೇಟಿಯಾದರು.‌ ಆಗಸ್ಟ್ 17ರಂದು ಜೈಪುರದಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ವಂಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಕೋರಿದರು.

Read More

ಜನೌಷಧಿ ಕೇಂದ್ರಗಳ ಸ್ಥಗಿತ ಕುರಿತು ಹೈಕೋರ್ಟ್‌ ನೀಡಿದ ಮಧ್ಯಂತರ ತಡೆ ಆದೇಶವನ್ನು ಸ್ವಾಗತಿಸುತ್ತೇನೆ. ಖಾಸಗಿ ಲಾಬಿಗೆ ಮಣಿದ ಸರ್ಕಾರಕ್ಕೆ ಈಗ ಹಿನ್ನಡೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನೌಷಧಿ ಕೇಂದ್ರಗಳ ಸ್ಥಗಿತದ ಬಗ್ಗೆ ಹೈಕೋರ್ಟ್‌ ಮಧ್ಯಂತರ ತಡೆ ಆದೇಶ ನೀಡಿದೆ. ಈ ಕುರಿತು ಬಿಜೆಪಿಯಿಂದ ಹೋರಾಟ ಮಾಡಲಾಗಿತ್ತು. ಖಾಸಗಿ ಮೆಡಿಕಲ್‌ ಫಾರ್ಮಾಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚಿತ್ತು. ಖಾಸಗಿ ಲಾಬಿಗೆ ಮಣಿದ ಸರ್ಕಾರಕ್ಕೆ ಈಗ ಹಿನ್ನಡೆಯಾಗಿದೆ. ಇನ್ನಾದರೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಜನರಿಗೆ ಏನು ಬೇಕೆಂದು ಅರಿತು ಕೆಲಸ ಮಾಡಬೇಕಿದೆ ಎಂದರು. ಸರ್ಕಾರಿ ಆಸ್ಪತ್ರೆಗಳಲ್ಲಿ 260-270 ಔಷಧಿಗಳನ್ನು ನೀಡಬೇಕಾಗುತ್ತದೆ. ಆದರೆ ಅಷ್ಟೊಂದು ಔಷಧಿ ಇಲ್ಲ. ಔಷಧಿಗಳು ಜನೌಷಧಿ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇತ್ತೀಚೆಗೆ ಹಾಸನ ಆಸ್ಪತ್ರೆಗೆ ಹೋದಾಗ ಒಬ್ಬರೇ ಹೃದ್ರೋಗ ತಜ್ಞ ವೈದ್ಯರು ಇರುವುದು ಕಂಡುಬಂತು. ಹೃದಯ ಸಂಬಂಧಿ ರೋಗದ ತುರ್ತು ಪರಿಸ್ಥಿತಿಯಲ್ಲಿ ಅವರು ಇಂಜೆಕ್ಷನ್‌ ಕೊಟ್ಟು ಬೆಂಗಳೂರಿಗೆ…

Read More

ದಾವಣಗೆರೆ: ಗುರು ಮಹಿಮೆ ಅಪಾರವಾದದ್ದು,ಕಲಿಯುಗದಲ್ಲಿ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಭಕ್ತಿ ಮಾರ್ಗವು ಸುಲಭವಾದ ದಾರಿ ಅರ್ಥಾತ್ ನಮಗೆ ಸದಾ ದಾರಿದೀಪವಾಗಿ ಸರಿದಾರಿಗೆ ಕೊಂಡೊಯ್ಯುವ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿದೆ. ಆದ್ದರಿಂದ ನಾವು ಸದಾಗುರು ಭಕ್ತಿಯನ್ನು ಹೊಂದಬೇಕು. ನಮಗೆ ಗುರುಕಾರುಣ್ಯವು ಒಂದಿದ್ದರೆ ಸಾಕು ನಮ್ಮ ಜೀವನಸಾರ್ಥಕವಾಗುವುದು ಎಂದು ಕುಶಾಲನಗರದ ಉದಯೋನ್ಮುಖ ಹಿನ್ನೆಲೆ ಗಾಯಕಿ, ರಂಗಕರ್ಮಿ, ಯೋಗಮತ್ತು ಭರತನಾಟ್ಯ ಕಲಾವಿದೆ ಸಂವೇದಿತಾ ಸುಭಾಷ್ ಅಭಿಪ್ರಾಯ ವ್ಯಕ್ತಪಡಿಸಿದರು.ಇಂದು ಬೆಳಿಗ್ಗೆ ನಗರದ ದೇವರಾಜ್ ಅರಸ್ಲೇಔಟ್ ‘ಸಿ’ ಬ್ಲಾಕ್‍ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ),ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂಯೋಗ ಚಿಕಿತ್ಸಾ ಕೇಂದ್ರ ದಾವಣಗೆರೆ ಇಲ್ಲಿ ಗುರುಪೂರ್ಣಿಮಾಪೂಜಾ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದಗುರುಭಜನೆ-ಭಕ್ತಿ ಸುಧೆ’ ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅನಿಸಿಕೆಯನ್ನುವ್ಯಕ್ತಪಡಿಸಿದರು. ಗುರು ಎಂದರೆ ನಮ್ಮೊಳಗಿರುವ ಕತ್ತಲೆಯನ್ನುದೂರಗೊಳಿಸಿ ಹೊಸ ಬೆಳಕಿನೊಂದಿಗೆ ಚೈತನ್ಯವನ್ನುಕರುಣಿಸುವ ಕರುಣಾಸಾಗರ. ನಾವು ಭಕ್ತಿ, ಶ್ರದ್ಧೆ,ನಂಬಿಕೆ, ಶಿಸ್ತು ಇವೆಲ್ಲವನ್ನು ನಿತ್ಯ ಜೀವನದಲ್ಲಿಅಳವಡಿಸಿಕೊಂಡು ಗುರುತೋರಿದ ಸನ್ಮಾರ್ಗದಲ್ಲಿ ನಡೆದರೆನಮಗೆ ಖಂಡಿತವಾಗಿಯೂ ಯಶಸ್ಸು ಸಿಗುವುದು. ಇದುಗುರುಮಹಿಮೆಯ ಶಕ್ತಿ ಎಂದು ಗುರುಪೂರ್ಣಿಮಾದವಿಶೇಷತೆಯ ಬಗ್ಗೆ…

Read More

ಹೊಳಲ್ಕೆರೆ : ರೈತರು ಕಷ್ಟ ಅನುಭವಿಸಬಾರದೆಂದು ಎಲ್ಲಾ ಕಡೆ ಕೆರೆ ಕಟ್ಟೆ, ಚೆಕ್‍ಡ್ಯಾಂಗಳನ್ನು ಕಟ್ಟಿ ಅಂತರ್ಜಲ ಅಭಿವೃದ್ದಿಪಡಿಸಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ಕುನುಗಲಿ ಗ್ರಾಮದಲ್ಲಿ 1.10 ಕೋಟಿ ರೂ.ವೆಚ್ಚದಲ್ಲಿ ಹುಲೇಮಳಲಿಯಿಂದ ಮಲ್ಕಾಪುರದವರೆಗೂ ನೂತನ ಡಾಂಬರ್ ರಸ್ತೆಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಮನುಷ್ಯತ್ವವಿರುವ ಶಾಸಕ ನಾನು. ಇನ್ನೊಬ್ಬರ ಕಷ್ಟ, ನೋವು ಅರ್ಥಮಾಡಿಕೊಂಡಿದ್ದೇನೆ. ಯಾರಿಂದಲೂ ಅರ್ಜಿ ಪಡೆದು ಏನನ್ನುಹೇಳಿಸಿಕೊಂಡಿಲ್ಲ. ರೈತರು, ಸಾರ್ವಜನಿಕರ ಜೀವನವನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡು ಕ್ಷೇತ್ರದ ಅಭಿವೃದ್ದಿಗೆಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ಶಿವಪುರ, ಹೊಳಲ್ಕೆರೆಯಲ್ಲಿ ಹೈಟೆಕ್ ಆಸ್ಪತ್ರೆಗಳನ್ನು ಕಟ್ಟಿಸಿದ್ದೇನೆ. ಸಮುದಾಯ ಭವನ,ಪುರಸಭೆ, ಸ್ಟೇಡಿಯಂ, ಒಳಾಂಗಣ ಕ್ರೀಡಾಂಗಣ, ಈಜುಕೊಳ, ಬಸ್‍ನಿಲ್ದಾಣ, ಶಾಲಾ-ಕಾಲೇಜು, ದೇವಸ್ಥಾನ, ಆಸ್ಪತ್ರೆಗಳನ್ನುಕಟ್ಟಿಸಿ ತಾಲ್ಲೂಕಿನಾದ್ಯಂತ ಹದಿನೇಳು ಕಡೆ ವಿದ್ಯುತ್ ಪವರ್ ಸ್ಟೇಷನ್ ನಿರ್ಮಿಸಿದ್ದೇನೆ. ಗದ್ದಲ, ಗಲಾಟೆಗೆ ಎಲ್ಲಿಯೂ ಆಸ್ಪದಕೊಟ್ಟಿಲ್ಲ. ಅಟ್ರಾಸಿಟಿ ಕೇಸು ಯಾರ ಮೇಲೂ ದಾಖಲಾಗಿಲ್ಲ. ಎಲ್ಲಾ ಜಾತಿ ಜನಾಂಗದವರನ್ನು ನನ್ನವರೆಂದು ಪ್ರೀತಿಯಿಂದನಡೆಸಿಕೊಳ್ಳುತ್ತಿದ್ದೇನೆ. ಚುನಾವಣೆಯಲ್ಲಿ ಮತ ಹಾಕುವುದು ಒಂದು ನಿಮಿಷದ ಕೆಲಸ. ಐದು ವರ್ಷಗಳ ಕಾಲ ಯಾರು ನಿಮ್ಮ ಕಷ್ಟ-ಸುಖಗಳಿಗೆ ಸ್ಪಂದಿಸಿ ಅಭಿವೃದ್ದಿ ಕೆಲಸಗಳನ್ನು ಮಾಡಿಸುತ್ತಾರೆಂದು…

Read More

ಚಿತ್ರದುರ್ಗ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳುಮತ್ತು ಸಂಯುಕ್ತ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.ಯೂನಿಯನ್ ಪಾರ್ಕ್‍ನಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಕಾರ್ಮಿಕ ವಿರೋಧಿ ಕಾಯಿದೆಗಳನ್ನು ಹಿಂದಕ್ಕೆಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದರು. ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ದಿನಕ್ಕೆ ಹನ್ನೆರಡುಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಶ್ರಮಕ್ಕೆ ತಕ್ಕಂತೆ ವೇತನವಿಲ್ಲ. ಆತ್ಮಗೌರವದಿಂದ ಬದುಕಲು ಕನಿಷ್ಟ ವೇತನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಕಾಯಂಗೊಳಿಸುವಂತೆ ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ. ಅದರ ಪ್ರಕಾರಎಲ್ಲಾ ರಾಜ್ಯಗಳಲ್ಲಿಯೂ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಖಾಯಂಗೊಳಿಸಿ ಜೀವನ ಭದ್ರತೆ ಒದಗಿಸಬೇಕೆಂದುಒತ್ತಾಯಿಸಿದರು.ದೇವನಹಳ್ಳಿಯಲ್ಲಿ ರೈತರು ತಮ್ಮ ಜಮೀನುಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವಾಗ ಎಂ.ಬಿ.ಪಾಟೀಲ್ಅಪಸ್ವರವೆತ್ತುತ್ತಿರುವುದು ಸರಿಯಲ್ಲ. ಚನ್ನರಾಯಪಟ್ಟಣದ ಸುತ್ತಮುತ್ತ ಹದಿಮೂರು ಹಳ್ಳಿಗಳ ರೈತರ ಫಲವತ್ತಾದ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ತನ್ನ ಕ್ರಮದಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಮುಂದಿನದಿನಗಳಲ್ಲಿ ಕೆಟ್ಟ ಪರಿಣಾಮ…

Read More

ಚಿತ್ರದುರ್ಗ : ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರುಗಳಲ್ಲಿ ಪೂರ್ವಸಿದ್ದತೆ ಹಾಗೂ ಸಮಯ ಪಾಲನೆಯಿರಬೇಕೆಂದು ಸಾರ್ವಜನಿಕಶಿಕ್ಷಣ ಇಲಾಖೆ ನಿವೃತ್ತಉಪ ನಿರ್ದೇಶಕ ಎನ್.ಎಂ.ರಮೇಶ್ ತಿಳಿಸಿದರು. ದಾವಣಗೆರೆ ವಿಶ್ವವಿದ್ಯಾನಿಲಯ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಎನ್.ಎಸ್.ಎಸ್. ಮತ್ತು ಐ.ಕ್ಯೂ.ಎ.ಸಿ. ಘಟಕದ ವತಿಯಿಂದ ಪಿಳ್ಳೆಕೆರನಹಳ್ಳಿಯಲ್ಲಿರುವಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಹತ್ತು ಬೆಳದಿಂಗಳ ಕಾರ್ಯಕ್ರಮ, ಗುರುಪೂರ್ಣಿಮೆ ಹಾಗೂನಿಕಟಪೂರ್ವ ಸೇವಾ ತರಬೇತಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು. ಗುರುಗಳ ಸ್ಥಾನ ದೊಡ್ಡದು. ಗುರುಗಳ ಸ್ಥಾನ ದೊಡ್ಡದು. ಅತ್ಯಂತ ಪವಿತ್ರವಾದ ಶಿಕ್ಷಕ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಬಿ.ಇ.ಡಿ ಶಿಕ್ಷಣ ಪಡೆದಾಕ್ಷಣ ಶಿಕ್ಷಕರಾಗಬೇಕೆಂದನೂ ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉತ್ತೀರ್ಣರಾಗಿ ದೊಡ್ಡ ದೊಡ್ಡ ಅಧಿಕಾರಿಗಳಾಗಬಹುದು. ಅದಕ್ಕಾಗಿ ದೂರದೃಷ್ಟಿ ಮತ್ತು ಗುರಿಯಿರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಿಕ್ಷಕರುಗಳಿಗೆ ಜ್ಞಾನ ಮತ್ತು ಕೌಶಲ್ಯ ನೀಡಲು ಟಿ.ಇ.ಟಿ.ಪರೀಕ್ಷೆಗಳನ್ನು ನಡೆಸುತ್ತಿದೆ. ಮಹತ್ವಪೂರ್ಣ ಸ್ಥಾನ ಗುರುವಿಗಿದೆ. ಮಕ್ಕಳಲ್ಲಿನೆನಪಿನ ಸಾಮಥ್ರ್ಯವಿರಬೇಕು. ಶಿಕ್ಷಕ ಎಂದು ಹೇಳಿಕೊಳ್ಳಲು ಹಿಂಜರಿಯುವಂತ ವಾತಾವರಣ ಸೃಷ್ಟಿಯಾಗಿದೆ. ಹೀಗಿದ್ದರೆವೃತ್ತಿಯನ್ನು ಗೌರವಿಸಲು ಆಗುವುದಿಲ್ಲ. ವೃತ್ತಿ ಮತ್ತು ವಿಷಯವನ್ನು ಶಿಕ್ಷಕ ಗೌರವಿಸಿದಾಗ ಮಾತ್ರ ಉತ್ತಮ…

Read More

ದಾವಣಗೆರೆ: 22ರಿಂದ 30ರವರೆಗೆನಡೆದ ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳೆಯರ ಪವರ್ ಲಿಫ್ಟಿಂಗ್ ಸ್ಪರ್ಧೆ-2025 ರಲ್ಲಿ ಸ್ಕಾಟ್ ,ಬೆಂಚ್ ನಲ್ಲಿತೃತೀಯ ಸ್ಥಾನ ಪಡೆದ ಸಹನಾಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂಸಂಸದೆ ಪ್ರಭಾ ಮಲ್ಲಿಕಾರ್ಜುನ್ಗೌರವಿಸಿ ಸನ್ಮಾನಿಸಿದರು. ಇನ್ನು ದಾವಣಗೆರೆ ನಗರಕ್ಕೆಕೀರ್ತಿ ತಂದ ಸಹನಾ ಇವರನ್ನು ದಾವಣಗೆರೆ, ಹರಿಹರನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕ, ಕೇರಂಗಣೇಶ್, ಚೈತನ್ಯಕುಮಾರ್ ಕೆ.ಹೆಚ್., ಗೋಣೆಪ್ಪ ಹೆಚ್.,ನಾಗರಾಜ್ ಹೆಚ್., ಎಸ್. ಮಾನು, ಟಿ.ಎಸ್. ವಿಜಯಕುಮಾರ್, ತಿಪ್ಪೇಸ್ವಾಮಿಟಿ., ರಾಕೇಶ್, ಫಕ್ಕಿರೇಶ್ ಸಹ ಸನ್ಮಾನ ಮಾಡಿದ್ದಾರೆ.

Read More

ಗಜ ಪ್ರಸವದ ಸಲುವಾಗಿ ಜಾರ್ಖಂಡ್‌ನ ಹಝಾರಿಬಾಗ್ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲನ್ನು ಎರಡು ತಾಸು ನಿಲ್ಲಿಸಿದ ಘಟನೆ ನಡೆದಿದೆ. ನಿಲ್ದಾಣದ ಬಳಿಯ ರೈಲು ಹಳಿಯ ಮೇಲೆ ಆನೆಯೊಂದು ಮರಿಗೆ ಜನ್ಮ ನೀಡುತ್ತಿತ್ತು. ಇದನ್ನು ಕಂಡು ಆನೆಯ ಪ್ರಸವಕ್ಕೆ ಏನೂ ತೊಂದರೆಯಾಗದಿರಲಿ ಎಂದು ರೈಲನ್ನು ಎರಡು ತಾಸು ನಿಲ್ಲಿಸಲಾಗಿದೆ. ಕಳೆದ ವಾರ ಈ ಘಟನೆ ನಡೆದಿದ್ದು ಅಲ್ಲಿನ ಅರಣ್ಯಾಧಿಕಾರಿಗಳ ಕ್ರಮದಿಂದ ‘ಗಜ ಪ್ರಸವ ಸುಗಮವಾಗಿದೆ. ಗರ್ಭಿಣಿ ಆನೆಯ ಬಗ್ಗೆ ಅರಿವಿದ್ದ ಅರಣ್ಯ ಇಲಾಖೆ ಸಿಬ್ಬಂದಿ ರೈಲು ಹಳಿಯ ಮೇಲೆ ಜನ್ಮ ನೀಡುವುದನ್ನು ಕಂಡು ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. “ಆನೆ ಪ್ರಸವದ ಬಗ್ಗೆ ತಿಳಿದು ನಾವು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು. ಈ ಮಾರ್ಗದ ಎಲ್ಲ ರೈಲುಗಳನ್ನು ತಕ್ಷಣ ನಿಲ್ಲಿಸಲು ಮನವಿ ಮಾಡಿದೆವು,”ಎನ್ನುತ್ತಾರೆ ಅರಣ್ಯಾಧಿಕಾರಿ ನಿತೀಶ್‌ ಕುಮಾರ್. ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು, “ಮಾನವ- ಪ್ರಾಣಿಗಳ ಸಂಘರ್ಷದ ನಡುವೆ…

Read More

ಎಸ್‌ಎಲ್‌ವಿ ಪ್ರೊಡಕ್ಷನ್ಸ್ ಹೆಸರಲ್ಲಿ ನೋಂದಣಿ ಸ್ಟಾರ್ ನಟರ ಚಿತ್ರಕ್ಕೆ ಬಂಡವಾಳ ಹಾಕಲು ಸಿದ್ಧತೆ ಬೆಂಗಳೂರುಮಾಜಿ ಸಂಸದ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೆಸರಿನಲ್ಲಿ ಉದ್ಯಮಿಗಳಿಗೆ ಕೋಟ್ಯಂತರ ರುಪಾಯಿ ವಂಚನೆ ಮಾಡಿರುವ ಪ್ರಕರಣದ ಆರೋಪಿ ಐಶ್ವರ್ಯಾ ಗೌಡ ಚಲನಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದಳು ಎಂಬ ಮಾತುಗಳು ಕೇಳಿ ಬಂದಿವೆ. ಚಲನಚಿತ್ರ ನಿರ್ಮಾಣ ಸಂಬಂಧ ಎಸ್‌ಎಲ್‌ವಿ ಪ್ರೊಡಕನ್ ಹೆಸರಿನಸಂಸ್ಥೆಯನ್ನು ಕನ್ನಡಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದಳು. ಈ ಸಂಸ್ಥೆ ಮೂಲಕ ಸ್ಟಾರ್‌ನಓಲ ಚಿತ್ರಗಳಿಗೆ ಬಂಡವಾಳ ಸುರಿಯಲು ತಯಾರಿ ನಡೆಸಿದ್ದಳು. ಈ ಕುರಿತು ಮಾಹಿತಿ ಕೋರಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯ್ಕ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸೋದರಿ ಎಂದು ಹೇಳಿಕೊಂಡು ಹಲವರಿಗೆ ಐಶ್ವರ್ಯ ಗೌಡ ವಂಚಿಸಿರುವ ಆರೋಪವಿದೆ. ಈ ವಂಚನೆ ಪ್ರಕರಣಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ಈ ತನಿಖೆಯಲ್ಲಿ ಸಿನಿಮ: ನಿರ್ಮಾಣದ ಮಾಹಿತಿ ಪತ್ತೆಯಾದ ಹಿನ್ನಲೆಯಲ್ಲಿ ವಾಣಿಜ್ಯ ಮಂಡಳಿಯಿಂದ ಮಾಹಿ…

Read More

ಬೆಂಗಳೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರೇ ನೀವು ನನ್ನ ತಂದೆ ಬಗ್ಗೆ ಟೀಕೆಮಾಡಿದ್ದೀರಿ. ಆದರೆ, ಅವರ ಹೆಸರು ಹೇಳಲು ನನಗೆ ಹೆಮ್ಮೆ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ವೇಳೆ ಪ್ರತಾಪ್ ಸಿಂಹ ತಮ್ಮ ವಿರುದ್ಧ ನೀಡಿರುವ ಹೇಳಿಕೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೆಲ ಪ್ರಾಡಕ್ ಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದಾಗ ಪ್ರಚಾರಕ್ಕೆ ಹೀರೋಗಳನ್ನು ಬ್ರಾಂಡ್ ಅಂಬಾಸಿಡ‌ರ್ ಮಾಡಿ ಜಾಹೀರಾತು ನೀಡುತ್ತಾರೆ. ಹಾಗೆ ಬಿಜೆಪಿಯ ಕೆಲ ಕಳಪೆ ಪ್ರಾಡಕ್ಟ್‌ಗಳಿಗೆ ಪ್ರಚಾರಕ್ಕಾಗಿ ನಾನು ಅಂಬಾಸಿಡರ್ ಆಗಿದ್ದೇನೆ. ಪ್ರತಾಪ್ ಸಿಂಹ, ಛಲವಾದಿ, ಅಶೋಕ್, ಮಾಜಿ ಶಾಸಕ ರಾಜೀವ್, ಇತರರ ಪ್ರಚಾರಕ್ಕಾಗಿ ನಾನು ಬೇಕಾಗಿದೆ ಎಂದು ವ್ಯಂಗ್ಯವಾಡಿದರು.

Read More