Author: Times of bayaluseeme

ಚಿತ್ರದುರ್ಗ : ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರುಗಳಲ್ಲಿ ಪೂರ್ವಸಿದ್ದತೆ ಹಾಗೂ ಸಮಯ ಪಾಲನೆಯಿರಬೇಕೆಂದು ಸಾರ್ವಜನಿಕಶಿಕ್ಷಣ ಇಲಾಖೆ ನಿವೃತ್ತಉಪ ನಿರ್ದೇಶಕ ಎನ್.ಎಂ.ರಮೇಶ್ ತಿಳಿಸಿದರು. ದಾವಣಗೆರೆ ವಿಶ್ವವಿದ್ಯಾನಿಲಯ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಎನ್.ಎಸ್.ಎಸ್. ಮತ್ತು ಐ.ಕ್ಯೂ.ಎ.ಸಿ. ಘಟಕದ ವತಿಯಿಂದ ಪಿಳ್ಳೆಕೆರನಹಳ್ಳಿಯಲ್ಲಿರುವಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಹತ್ತು ಬೆಳದಿಂಗಳ ಕಾರ್ಯಕ್ರಮ, ಗುರುಪೂರ್ಣಿಮೆ ಹಾಗೂನಿಕಟಪೂರ್ವ ಸೇವಾ ತರಬೇತಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು. ಗುರುಗಳ ಸ್ಥಾನ ದೊಡ್ಡದು. ಗುರುಗಳ ಸ್ಥಾನ ದೊಡ್ಡದು. ಅತ್ಯಂತ ಪವಿತ್ರವಾದ ಶಿಕ್ಷಕ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಬಿ.ಇ.ಡಿ ಶಿಕ್ಷಣ ಪಡೆದಾಕ್ಷಣ ಶಿಕ್ಷಕರಾಗಬೇಕೆಂದನೂ ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಉತ್ತೀರ್ಣರಾಗಿ ದೊಡ್ಡ ದೊಡ್ಡ ಅಧಿಕಾರಿಗಳಾಗಬಹುದು. ಅದಕ್ಕಾಗಿ ದೂರದೃಷ್ಟಿ ಮತ್ತು ಗುರಿಯಿರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಿಕ್ಷಕರುಗಳಿಗೆ ಜ್ಞಾನ ಮತ್ತು ಕೌಶಲ್ಯ ನೀಡಲು ಟಿ.ಇ.ಟಿ.ಪರೀಕ್ಷೆಗಳನ್ನು ನಡೆಸುತ್ತಿದೆ. ಮಹತ್ವಪೂರ್ಣ ಸ್ಥಾನ ಗುರುವಿಗಿದೆ. ಮಕ್ಕಳಲ್ಲಿನೆನಪಿನ ಸಾಮಥ್ರ್ಯವಿರಬೇಕು. ಶಿಕ್ಷಕ ಎಂದು ಹೇಳಿಕೊಳ್ಳಲು ಹಿಂಜರಿಯುವಂತ ವಾತಾವರಣ ಸೃಷ್ಟಿಯಾಗಿದೆ. ಹೀಗಿದ್ದರೆವೃತ್ತಿಯನ್ನು ಗೌರವಿಸಲು ಆಗುವುದಿಲ್ಲ. ವೃತ್ತಿ ಮತ್ತು ವಿಷಯವನ್ನು ಶಿಕ್ಷಕ ಗೌರವಿಸಿದಾಗ ಮಾತ್ರ ಉತ್ತಮ…

Read More

ದಾವಣಗೆರೆ: 22ರಿಂದ 30ರವರೆಗೆನಡೆದ ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳೆಯರ ಪವರ್ ಲಿಫ್ಟಿಂಗ್ ಸ್ಪರ್ಧೆ-2025 ರಲ್ಲಿ ಸ್ಕಾಟ್ ,ಬೆಂಚ್ ನಲ್ಲಿತೃತೀಯ ಸ್ಥಾನ ಪಡೆದ ಸಹನಾಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂಸಂಸದೆ ಪ್ರಭಾ ಮಲ್ಲಿಕಾರ್ಜುನ್ಗೌರವಿಸಿ ಸನ್ಮಾನಿಸಿದರು. ಇನ್ನು ದಾವಣಗೆರೆ ನಗರಕ್ಕೆಕೀರ್ತಿ ತಂದ ಸಹನಾ ಇವರನ್ನು ದಾವಣಗೆರೆ, ಹರಿಹರನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕ, ಕೇರಂಗಣೇಶ್, ಚೈತನ್ಯಕುಮಾರ್ ಕೆ.ಹೆಚ್., ಗೋಣೆಪ್ಪ ಹೆಚ್.,ನಾಗರಾಜ್ ಹೆಚ್., ಎಸ್. ಮಾನು, ಟಿ.ಎಸ್. ವಿಜಯಕುಮಾರ್, ತಿಪ್ಪೇಸ್ವಾಮಿಟಿ., ರಾಕೇಶ್, ಫಕ್ಕಿರೇಶ್ ಸಹ ಸನ್ಮಾನ ಮಾಡಿದ್ದಾರೆ.

Read More

ಗಜ ಪ್ರಸವದ ಸಲುವಾಗಿ ಜಾರ್ಖಂಡ್‌ನ ಹಝಾರಿಬಾಗ್ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲನ್ನು ಎರಡು ತಾಸು ನಿಲ್ಲಿಸಿದ ಘಟನೆ ನಡೆದಿದೆ. ನಿಲ್ದಾಣದ ಬಳಿಯ ರೈಲು ಹಳಿಯ ಮೇಲೆ ಆನೆಯೊಂದು ಮರಿಗೆ ಜನ್ಮ ನೀಡುತ್ತಿತ್ತು. ಇದನ್ನು ಕಂಡು ಆನೆಯ ಪ್ರಸವಕ್ಕೆ ಏನೂ ತೊಂದರೆಯಾಗದಿರಲಿ ಎಂದು ರೈಲನ್ನು ಎರಡು ತಾಸು ನಿಲ್ಲಿಸಲಾಗಿದೆ. ಕಳೆದ ವಾರ ಈ ಘಟನೆ ನಡೆದಿದ್ದು ಅಲ್ಲಿನ ಅರಣ್ಯಾಧಿಕಾರಿಗಳ ಕ್ರಮದಿಂದ ‘ಗಜ ಪ್ರಸವ ಸುಗಮವಾಗಿದೆ. ಗರ್ಭಿಣಿ ಆನೆಯ ಬಗ್ಗೆ ಅರಿವಿದ್ದ ಅರಣ್ಯ ಇಲಾಖೆ ಸಿಬ್ಬಂದಿ ರೈಲು ಹಳಿಯ ಮೇಲೆ ಜನ್ಮ ನೀಡುವುದನ್ನು ಕಂಡು ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. “ಆನೆ ಪ್ರಸವದ ಬಗ್ಗೆ ತಿಳಿದು ನಾವು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು. ಈ ಮಾರ್ಗದ ಎಲ್ಲ ರೈಲುಗಳನ್ನು ತಕ್ಷಣ ನಿಲ್ಲಿಸಲು ಮನವಿ ಮಾಡಿದೆವು,”ಎನ್ನುತ್ತಾರೆ ಅರಣ್ಯಾಧಿಕಾರಿ ನಿತೀಶ್‌ ಕುಮಾರ್. ಈ ಬಗ್ಗೆ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು, “ಮಾನವ- ಪ್ರಾಣಿಗಳ ಸಂಘರ್ಷದ ನಡುವೆ…

Read More

ಎಸ್‌ಎಲ್‌ವಿ ಪ್ರೊಡಕ್ಷನ್ಸ್ ಹೆಸರಲ್ಲಿ ನೋಂದಣಿ ಸ್ಟಾರ್ ನಟರ ಚಿತ್ರಕ್ಕೆ ಬಂಡವಾಳ ಹಾಕಲು ಸಿದ್ಧತೆ ಬೆಂಗಳೂರುಮಾಜಿ ಸಂಸದ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೆಸರಿನಲ್ಲಿ ಉದ್ಯಮಿಗಳಿಗೆ ಕೋಟ್ಯಂತರ ರುಪಾಯಿ ವಂಚನೆ ಮಾಡಿರುವ ಪ್ರಕರಣದ ಆರೋಪಿ ಐಶ್ವರ್ಯಾ ಗೌಡ ಚಲನಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದಳು ಎಂಬ ಮಾತುಗಳು ಕೇಳಿ ಬಂದಿವೆ. ಚಲನಚಿತ್ರ ನಿರ್ಮಾಣ ಸಂಬಂಧ ಎಸ್‌ಎಲ್‌ವಿ ಪ್ರೊಡಕನ್ ಹೆಸರಿನಸಂಸ್ಥೆಯನ್ನು ಕನ್ನಡಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದಳು. ಈ ಸಂಸ್ಥೆ ಮೂಲಕ ಸ್ಟಾರ್‌ನಓಲ ಚಿತ್ರಗಳಿಗೆ ಬಂಡವಾಳ ಸುರಿಯಲು ತಯಾರಿ ನಡೆಸಿದ್ದಳು. ಈ ಕುರಿತು ಮಾಹಿತಿ ಕೋರಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯ್ಕ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸೋದರಿ ಎಂದು ಹೇಳಿಕೊಂಡು ಹಲವರಿಗೆ ಐಶ್ವರ್ಯ ಗೌಡ ವಂಚಿಸಿರುವ ಆರೋಪವಿದೆ. ಈ ವಂಚನೆ ಪ್ರಕರಣಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ಈ ತನಿಖೆಯಲ್ಲಿ ಸಿನಿಮ: ನಿರ್ಮಾಣದ ಮಾಹಿತಿ ಪತ್ತೆಯಾದ ಹಿನ್ನಲೆಯಲ್ಲಿ ವಾಣಿಜ್ಯ ಮಂಡಳಿಯಿಂದ ಮಾಹಿ…

Read More

ಬೆಂಗಳೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರೇ ನೀವು ನನ್ನ ತಂದೆ ಬಗ್ಗೆ ಟೀಕೆಮಾಡಿದ್ದೀರಿ. ಆದರೆ, ಅವರ ಹೆಸರು ಹೇಳಲು ನನಗೆ ಹೆಮ್ಮೆ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ವೇಳೆ ಪ್ರತಾಪ್ ಸಿಂಹ ತಮ್ಮ ವಿರುದ್ಧ ನೀಡಿರುವ ಹೇಳಿಕೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೆಲ ಪ್ರಾಡಕ್ ಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದಾಗ ಪ್ರಚಾರಕ್ಕೆ ಹೀರೋಗಳನ್ನು ಬ್ರಾಂಡ್ ಅಂಬಾಸಿಡ‌ರ್ ಮಾಡಿ ಜಾಹೀರಾತು ನೀಡುತ್ತಾರೆ. ಹಾಗೆ ಬಿಜೆಪಿಯ ಕೆಲ ಕಳಪೆ ಪ್ರಾಡಕ್ಟ್‌ಗಳಿಗೆ ಪ್ರಚಾರಕ್ಕಾಗಿ ನಾನು ಅಂಬಾಸಿಡರ್ ಆಗಿದ್ದೇನೆ. ಪ್ರತಾಪ್ ಸಿಂಹ, ಛಲವಾದಿ, ಅಶೋಕ್, ಮಾಜಿ ಶಾಸಕ ರಾಜೀವ್, ಇತರರ ಪ್ರಚಾರಕ್ಕಾಗಿ ನಾನು ಬೇಕಾಗಿದೆ ಎಂದು ವ್ಯಂಗ್ಯವಾಡಿದರು.

Read More

ಬೆಂಗಳೂರು: ಸಮಾಜ ತಿದ್ದುವ, ಜನರಿಗೆ ಆಶೀರ್ವಾದ ಮಾಡುವ ಕೆಲಸಮಠಾಧೀಶರದ್ದು. ಅದನ್ನು ಬಿಟ್ಟು ಸಿಎಂ ಬದಲಾವಣೆಯಂತಹ ರಾಜ ಕೀಯ ಬಗ್ಗೆ ಹೇಳಿಕೆ ನೀಡಬಾರದು. ಅದಕ್ಕೂ ಅವರಿಗೂ ಸಂಬಂಧವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತ ನಾಡಿ, ಒಪ್ಪಂದದ ಪ್ರಕಾರ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂದು ರಂಬಾಪುರಿ ಸ್ವಾಮೀಜಿ ಹೇಳಿಕೆ ನೀಡಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿ ಸಿಎಂ ಬದಲಾವಣೆ ವಿಚಾರ ಪಕ್ಷ, ಹೈಕ ಮಾಂಡ್‌ ಗೆ ಬಿಟ್ಟದ್ದು. ಇವರು ಹೇಳಿದಕ್ಕೆ ನಾಳೆ ಇನ್ಯಾರೋ ಸ್ವಾಮೀಜಿಗಳು ಮುಂದುವರೆಯಬೇಕೆಂದು ಎನ್ನಬಬಹುದು. ಹಾಗಾಗಿ ಸಿದ್ದರಾಮಯ್ಯ ಸ್ವಾಮೀಜಿಗಳು ಇಂತಹ ಹೇಳಿಕೆ ನೀಡಬಾರದ ಎಂದರು.

Read More

ಟಾಲಿವುಡ್ ನಟಿ ಸಮಂತಾ ಮತ್ತು ನಿರ್ದೇಶಕ ರಾಜ್ ನಿಧಿಮೋರು ನಡುವಿನ ಪ್ರೇಮ ಸಂಬಂಧವು ಇತ್ತೀಚೆಗೆ ವೈರಲ್ ಆಗಿರುವ ಫೋಟೋಗಳಿಂದ ಖಚಿತವಾದಂತೆ ಕಾಣುತ್ತಿದೆ. ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು, ಹತ್ತಿರದಿಂದ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಇದು ಅವರ ಸಂಬಂಧವನ್ನು ಸ್ಪಷ್ಟಪಡಿಸಿದೆ. ಆದರೂ ಅಧಿಕೃತ ಘೋಷಣೆ ಇನ್ನೂ ಬಾಕಿ ಇದೆ. ಸಮಂತಾ ಹಾಗೂ ನಿರ್ದೇಶಕ ರಾಜ್ ನಿಧಿಮೋರು ಮಧ್ಯೆ ಪ್ರೀತಿ ಮೂಡಿದೆ ಎಂಬ ವಿಚಾರ ಈ ಮೊದಲಿನಿಂದಲೂ ಹರಿದಾಡುತ್ತಿದೆ. ಆದರೆ, ಇದನ್ನು ಅವರು ಇಷ್ಟು ದಿನ ಖಚಿತಪಡಿಸಿರಲಿಲ್ಲ. ಆದರೆ, ಈಗ ಇವರು ಇದನ್ನು ಬಹುತೇಕ ಒಪ್ಪಿಕೊಂಡಿದ್ದಾರೆ. ಸಮಂತಾ ಹೆಗಲಮೇಲೆ ಕೈ ಹಾಕಿ ರಾಜ್ ಬರುತ್ತಿದ್ದರೆ, ಅವರನ್ನು ಸಮಂತಾ ತಮ್ಮ ಕೈ ಮೂಲಕ ಹಿಡಿದುಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ.ಅಮೆರಿಕದ ಮಿಚಿಗನ್ನ ಡೆಟ್ರಾಯ್ಟ್ನಲ್ಲಿರುವ ತೆಲುಗು ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಮಂತಾ, ರಾಜ್ ಹಾಗೂ ಇತರರು ತೆರಳಿದ್ದಾರೆ. ಈ ವೇಳೆ ಖುಷಿಯಿಂದ ಸಮಯ ಕಳೆದಿದ್ದಾರೆ. ಈ ಫೋಟೋಗಳನ್ನು ಸಮಂತಾ ಅವರು ಹಂಚಿಕೊಂಡಿದ್ದಾರೆ.…

Read More

ಬಿಗ್ ಬಾಸ್ ಹೊಸ ಸೀಸನ್‌ ಆರಂಭಕ್ಕೆ ಕ್ಷಣಗಣನೆ   ಶುರುವಾಗಿದೆ. ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಎಂದು ಖ್ಯಾತಿ ಪಡೆದಿದೆ. ಈ ಬಾರಿ ಬಿಗ್ ಬಾಸ್ ಹಿಂದಿ ಸೀಸನ್ 19 ಪ್ರಸಾರವಾಗಲಿದ್ದು, ಇದರ ಬಗ್ಗೆ ಕಳೆದ ಕೆಲವು ಸಮಯದಿಂದ ಚರ್ಚೆಗಳು ನಡೆಯುತ್ತಿವೆ. ಬಿಗ್ ಬಾಸ್ 19ಗೆ ಸೇರುವ ಸ್ಪರ್ಧಿಗಳ ಬಗ್ಗೆ ಪ್ರತಿದಿನ ಹೊಸ ಹೆಸರುಗಳು ಹೊರಬರುತ್ತಿವೆ. ಈಗ ಈ ವಿವಾದಾತ್ಮಕ ಚೆಲುವೆ ಬಿಗ್ ಬಾಸ್ ಸೀಸನ್ 19 ಗೆ ಪ್ರವೇಶಿಸಲು ಸಿದ್ಧವಾಗಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. ವರದಿಗಳ ಪ್ರಕಾರ, ದಿ ರೆಬೆಲ್ ಕಿಡ್ ಅಂದರೆ ಅಪೂರ್ವ ಮುಖಿಜಾ ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 19 ಮನೆಗೆ ಹೋಗಬಹುದು ಎಂದು ಹೇಳಲಾಗುತ್ತಿದೆ. ಇನ್ನೂ ಅಧಿಕೃತ ಆಗಿಲ್ಲ. ಅಪೂರ್ವ ಅವರ ಹೆಸರು ಹಿಂದೆ ಸಾಕಷ್ಟು ವಿವಾದಗಳಲ್ಲಿತ್ತು. ಇದರಿಂದಾಗಿ ಅವರು ಬಿಗ್ ಬಾಸ್ ಸೀಸನ್ 19 ಗೆ ಸೇರುವ ಸಾಧ್ಯತೆಗಳು ತುಂಬಾ ಹೆಚ್ಚಿವೆ. ಬಿಗ್ ಬಾಸ್ 19…

Read More

ಗಂಟಲು ನೋವಿಗೆ ಮನೆಮದ್ದುಗಳಾಗಿ ಉಪ್ಪು ನೀರಿನಿಂದ ಗಾರ್ಗ್ಲ್ ಮಾಡುವುದು, ಜೇನುತುಪ್ಪದೊಂದಿಗೆ ಬೆಚ್ಚಗಿನ ದ್ರವಗಳನ್ನು ಕುಡಿಯುವುದು, ಮತ್ತು ಗಿಡಮೂಲಿಕೆ ಚಹಾಗಳನ್ನು ಸೇವಿಸುವುದು ಉಪಯುಕ್ತವಾಗಿದೆ. ಉಪ್ಪು ನೀರಿನಿಂದ ಗಾರ್ಗ್ಲ್ ಮಾಡುವುದು: ಒಂದು ಲೋಟ ಉಗುರುಬೆಚ್ಚಗಿನ ನೀರಿನಲ್ಲಿ 1/2 ಚಮಚ ಉಪ್ಪು ಬೆರೆಸಿ ಗಾರ್ಗ್ಲ್ ಮಾಡುವುದರಿಂದ ಗಂಟಲಿನ ಊತ ಮತ್ತು ನೋವನ್ನು ಕಡಿಮೆ ಮಾಡಬಹುದು. ಜೇನುತುಪ್ಪದೊಂದಿಗೆ ಬೆಚ್ಚಗಿನ ದ್ರವಗಳು: ಜೇನುತುಪ್ಪವು ಗಂಟಲು ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಬೆಚ್ಚಗಿನ ನೀರು, ಚಹಾ ಅಥವಾ ನಿಂಬೆ ರಸದೊಂದಿಗೆ ಬೆರೆಸಿ ಕುಡಿಯಬಹುದು. ಗಿಡಮೂಲಿಕೆ ಚಹಾಗಳು: ಕ್ಯಾಮೊಮೈಲ್, ಪುದೀನಾ ಅಥವಾ ಲವಂಗ ಚಹಾ ಗಂಟಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿರುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್: ರೋಗಗಳ ವಿರುದ್ಧ ಹೋರಾಡಲು ಮತ್ತು ಗಂಟಲಿನ ಲೋಳೆಯನ್ನು ಒಡೆಯಲು ಸಹಾಯ ಮಾಡುತ್ತದೆ. ಲೋಝೆಂಜಸ್: ಗಂಟಲನ್ನು ತೇವವಾಗಿಡಲು ಮತ್ತು ನೋವನ್ನು ಕಡಿಮೆ ಮಾಡಲು ಲೋಝೆಂಜಸ್ ಗಳನ್ನು ಬಳಸಬಹುದು. ಹೆಚ್ಚುವರಿ ಸಲಹೆಗಳು:…

Read More

ಕಳೆದ ಕೆಲ ದಿನಗಳಿಂದ ಭಾರೀವರ್ಷಧಾರೆಯಲ್ಲಿ ಮಿಂದೇಳುತ್ತಿರುವ ಹಿಮಾಚಲಪ್ರದೇಶದಲ್ಲಿ ನಾಯಿಯೊಂದರ ಬೊಗಳುವಿಕೆಯಿಂದ 20 ಕುಟುಂಬಗಳ 67 ಜನರ ಜೀವ ಉಳಿದ ಅಚ್ಚರಿಯ ಘಟನೆ ನಡೆದಿದೆ. ಇದು ಶ್ವಾನಗಳ ನಿಯತ್ತು ಮತ್ತು ಆಪತ್ತನ್ನು ಗ್ರಹಿಸುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಮತ್ತೊಮ್ಮೆಸ್ಪೋಟ, ದಿಢೀರ್ ಪ್ರವಾಹ, ಭೂಕುಸಿತಗಳಿಂದ ಧರಮ್‌ಪುರದ ಸಿಯಾತಿ ದುಃಸ್ಥಿತಿಗೆ ತಲುಪಿತ್ತು. ಈ ವೇಳೆ ಇದ್ದಕ್ಕಿ ದ್ದಂತೆ ಕಟ್ಟಡವೊಂದರ 2ನೇ ಮಹಡಿಯಲ್ಲಿ ಮಲಗಿದ್ದ ನಾಯಿ ರಾಕಿ ಜೋರಾಗಿ ಬೊಗಳುತ್ತ ಊಳಿಡಲು ಶುರುವಿಟ್ಟುಕೊಂಡಿತ್ತು. ಇದರಿಂದ ಎಚ್ಚರಗೊಂಡ ನರೇಂದ್ರ ಎಂಬುವರು ಹೊರಬಂದು ನೋಡಿದಾಗ, ಅವರಿದ್ದ ಮನೆಯ ಗೋಡೆಯಲ್ಲಿ ಬಿರುಕೊಂದು ಮೂಡಿದ್ದು, ನೀರು ನುಗ್ಗಲು ಶುರುವಾಗಿತ್ತು. ಕೂಡಲೇ ನರೇಂದ್ರ ಹಳ್ಳಿಯವರನ್ನೆಲ್ಲಾ ಎಚ್ಚರಿಸಿದ್ದಾರೆ. ತಕ್ಷಣ ಜನರೆಲ್ಲ ತಮ್ಮತಮ್ಮ ಮನೆಯಿಂದ ಹೊರಬಂದು ಸುರಕ್ಷಿತ ಸ್ಥಳದತ್ತ ಧಾವಿಸಿದ್ದಾರೆ.ಇದಾದ ಕೆಲವೇ ಗಂಟೆಗಳಲ್ಲಿ ಸಂಭವಿಸಿದ ಭೂಕುಸಿತಕ್ಕೆ ಇಡೀ ಹಳ್ಳಿಯೇ ಕೊಚ್ಚಿಕೊಂಡು ಹೋಗಿತ್ತು. ಇತ್ತ ಸಕಾಲಕ್ಕೆ ಮನೆಯಿಂದ ಹೊರಗೋಡಿಬಂದಿದ್ದ ಜನ ತ್ರಿಯಂಬಲ ಜಿಲ್ಲೆಯ ನೈನಾ ದೇವಿ ದೇಗುಲದಲ್ಲಿ ಆಶ್ರಯ ಪಡೆದು ಜೀವ ಉಳಿಸಿಕೊಂಡಿದ್ದಾರೆ.

Read More