Author: Times of bayaluseeme
ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತ ದಿಂದ ಸಾವನ್ನಪ್ಪುವ ಪ್ರಕರಣ ಹೆಚ್ಚುತ್ತಿದ್ದು, ಭಾನುವಾರ ಮತ್ತೆ ಆರು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆ ಮೂ ಡಿಗೆರೆ ತಾಲೂಕಿನ ಭಾರೀಬೈಲು ಗ್ರಾಮದ ಯುವತಿ ಮೀನಾಕ್ಷಿ ಹಾಗೂ ಬಿ. ಹೊಸಹಳ್ಳಿಯ ಸುಮಿತ್ರೇಗೌಡ ಮೃತ ಪಟ್ಟಿದ್ದಾರೆ. ಸುಮಿತ್ರೇಗೌಡ ಮನೆಯಲ್ಲಿ ಕುಸಿದು ಬಿದ್ದು ಅಸುನೀಗಿದರು.ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಹೃದಯಾ ಘಾತವಾಗಿ ಬೆಂಗಳೂರಿನ ಜಯನಗರದ ನಿವಾಸಿ ರಂಗನಾಥ್ ಅಸುನೀಗಿದ್ದಾರೆ. ಪತ್ನಿ, ಪುತ್ರಿ ಜೊತೆ ಮಂಗಳೂರಿಗೆ ಪ್ರವಾಸಕ್ಕೆ ತೆರಳಿದ್ದರು. ಟ್ರಿಪ್ ಮುಗಿಸಿ ಬೆಂಗಳೂರಿಗೆ ವಾಪಸ್ ಬರುತ್ತಿದ್ದಾಗ ಎದೆ ನೋವು ಕಾಣಿ ಸಿಕೊಂಡಿತು. ಹಾಸನದ ಹೊಳೆನರಸೀಪುರ ತಾಲೂಕಿನ ಕೊಂಗಲಬೀಡಿನ ಆನಂದ್ ಹೃದಯಾಘಾತದಿಂದ ಸಾವನ್ನ ಪ್ಪಿದ್ದಾರೆ. ಭಾನುವಾರ ಮುಂ ಜಾನೆ 4ರ ಸುಮಾರಿಗೆ ತೀವ್ರ ಎದೆನೋವು ಕಾಣಿಸಿದೆ. ಯಾದಗಿರಿ ಜಿಲ್ಲೆಯ ಶೆಟ್ಟಿಕೇರಾ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ಅಗ್ನಿ ಕುಂಡ ತುಳಿದ ಕೆಲ ಗಂಟೆಗಳಲ್ಲೇ ಹಳ್ಳೆಪ್ಪ ಪೂಜಾರಿ ಹಠಾತ್ ಹೃದಯಾಘಾತ ದಿಂದ ಮೃತಪಟ್ಟಿ ದ್ದಾರೆ. ಅಗ್ನಿಕುಂಡ ತುಳಿದ ನಂತರ ದೇಗುಲ ಪಕ್ಕದ ಕೊಠಡಿಯಲ್ಲಿ ಕುಳಿತು…
ನೆಲಮಂಗಲ: ಬಡತನ, ಪತಿಯ ಕುಡಿತದ ಚಟದಿಂದ ಕುಟುಂಬ ನಿರ್ವಹಣೆ, ಮಗುವಿನ ಆರೈಕೆ ಕಷ್ಟವಾಗಿ ಹೆತ್ತ ತಾಯಿಯೇ ಒಂದೂವರೆ ತಿಂಗಳ ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ವಿಶ್ವೇಶ್ವರಪುರದ ರೇಣುಕಾನಗರ ನಿವಾಸಿ ರಾಧಾಳನ್ನು ಬಂಧಿಸಲಾಗಿದೆ. ಒಂದೇ ಬಡಾವಣೆಯ ಪವನ್ ಕುಮಾರ್ ಹಾಗೂ ರಾಧಾ ಸ್ನೇಹ ಬೆಳೆದಿದ್ದು, ಬಳಿಕ, ವಿವಾಹವಾಗಿದ್ದರು. ಭಾನುವಾರ ಸಂಜೆ ಪತಿ ಪವನ್, ಕೆಲಸ ಮುಗಿಸಿ, ಮದ್ಯ ಸೇ ಮಾಡಿ ಮನೆಗೆ ಬಂದಿದ್ದ. ಮನೆ ಮುಂಭಾಗದ ಸ್ನೇಹಿತರ ಆಟೋದಲ್ಲಿ ಮಲಗಿದ್ದ. ಇದರಿಂದ ಬೇಸತ್ತ ಆಕೆ, ಸೋಮವಾರ ಬೆಳಗ್ಗೆ 4:30ರ ವೇಳೆ ಮಗುವನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿದ್ದಾಳೆ. ಬಳಿಕ ಮಗುವಿಲ್ಲ. ಯಾರೋ ಇಬ್ಬರು ಬಂದು, ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ನಾಟಕವಾಡಿದ್ದಾಳೆ. ಬಳಿಕ, ಪೊಲೀಸರು ಬಂದು, ಹುಡುಕಾಟ ನಡೆಸಿದಾಗ ಮಗುವಿನ ಪತ್ತೆಯಾಗಿದೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಬೆಂಗಳೂ ದಿನ ಶೇಷಾದ್ರಿಪುರದ ಆಸ್ಪತ್ರೆಯಲ್ಲಿ ಆರೋಗ್ಯ ಸಾಮಾನ್ಯ ತಪಾಸಣೆಗೆ ಒಳಗಾದರು.ಸೋಮವಾರ ಬೆಳಗ್ಗೆ ಪುತ್ರ ಹಾಗೂ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಸಚಿವ ರಾದ ಬೈರತಿ ಸುರೇಶ್, ಜಮೀರ್‌ಅಹಮದ್ ಖಾನ್ ಅವರೊಂದಿಗೆ ಆಸ್ಪತ್ರೆಗೆ ಆಗಮಿಸಿದ ಸಿದ್ದರಾಮಯ್ಯ ಅವರು ಆರೋಗ್ಯ ಪರೀಕ್ಷೆ ಮಾಡಿಸಿಕೊಂಡರು. ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ.18 ವರ್ಷಗಳ ಹಿಂದೆ ಹೃದಯದಲ್ಲಿ ಸ್ಟೆಂಟ್ ಅಳವಡಿಕೆ ಆಗಿರುವುದರಿಂದ ಆಗಾಗ್ಗೆ ತಪಾಸಣೆಗೆ ಒಳಗಾಗುತ್ತಾರೆ ಎನ್ನಲಾಗಿದೆ.
ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆ ವ್ಯಾಪ್ತಿಯ ಎಲ್ಲಾ ಆಸ್ಪತ್ರೆಗಳು ತಮ್ಮ ವ್ಯಾಪ್ತಿಯಲ್ಲಿ ವರದಿಯಾದ ಎಂಎಲ್‌ಸಿ (ಅಪರಾಧಿಕ ವೈದ್ಯಕೀಯ ಪ್ರಕರಣ) ಹಾಗೂ ಮರಣೋತ್ತರ ಪರೀಕ್ಷೆ ವರದಿಗಳನ್ನು “Medleapr.nic.in’ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ಅಪ್ ಲೋಡ್ ಮಾಡುವಂತೆ ಆರೋಗ್ಯ ಇಲಾಖೆ ಆದೇಶಿಸಿದೆ. ಈ ಸಂಬಂಧ ಆರೋಗ್ಯ ಇಲಾಖೆ ಅಡಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ವಿಭಾಗ ದಿಂದ ಸುತ್ತೋಲೆ ಹೊರಡಿಸಿದ್ದು, ಮರಣೋತ್ತರ ಪರೀಕ್ಷೆ ವರದಿಯನ್ನು Medleapr ಪೋರ್ಟಲ್‌ನಲ್ಲಿಯೇ ಸಿದ್ಧಪಡಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಯಾವ ಕಾರಣಕ್ಕೂ ಕೈಯಲ್ಲಿ ಬರೆಯುವ ಮೂಲಕ ಸಿದ್ಧಪಡಿಸುವಂತಿಲ್ಲ. ಪೋರ್ಟ ಲ್‌ನಲ್ಲಿಯೇ ಸಿದ್ಧಪಡಿಸಿ ಅಪ್ಲೋಡ್ ಮಾಡಬೇಕು. ನೆಟ್ವರ್ಕ್, ಪೋರ್ಟಲ್ ಸಮಸ್ಯೆ ಯಿದ್ದರೆ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ 24 ಗಂಟೆಯೊಳಗೆ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು. ರಾಜ್ಯ ಆರೋಗ್ಯ ಇಲಾಖೆ ವ್ಯಾಪ್ತಿಯ ಸಂಬಂಧಪಟ್ಟ ಆಸ್ಪತ್ರೆ ಗಳ ವೈದ್ಯಾಧಿಕಾರಿಗಳು ಹಾಗೂ ವೈದ್ಯರು ಪೋರ್ಟಲ್‌ಗೆ ಲಾಗಿನ್ ಆಗಬೇಕು. ನೋಡಲ್ ಅಧಿಕಾರಿಗಳು ಪರಿಶೀಲಿಸಿ 2 ದಿನ ಒಳಗಾಗಿ ಅಪ್ರೊ ವಲ್ ನೀಡಬೇಕು. ಬಳಿಕ ವೈದ್ಯರು ತಮ್ಮ ಲಾಗಿನ್‌ನಲ್ಲಿಯೇ ವರದಿ ಸಿದ್ಧಪಡಿಸಬೇಕು…
ನವದೆಹಲಿ: ಭಾನುವಾರ ಯುಪಿಯ ಝಾನ್ಸಿಯಲ್ಲಿ ಕ್ಲಿಪ್ ಮತ್ತು ಸಣ್ಣ ಚಾಕುವಿನಿಂದ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿ ಎರಡು ಜೀವ ಉಳಿಸಿದ್ದ ಸೇನಾ ವೈದ್ಯ ಮೇಜರ್ ಡಾ. ರೋಹಿತ್ ಬಚ್ಚಾಲಾ ಅವರ ನಡೆ ಯನ್ನು ಭಾರತೀಯ ಸೇನಾ ಮುಖ್ಯಸ್ಥ ಜ. ಉಪೇಂದ್ರ ದ್ವಿವೇದಿ ಶ್ಲಾಘಿಸಿದ್ದಾರೆ. ಜು.5ರಂದು ರೈಲು ನಿಲ್ದಾಣದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದ ಮಹಿಳೆಗೆ ಕ್ಲಿಪ್ ಮತ್ತು ಜೇಬಿನಲ್ಲಿಡಬಹುದಾದ ಸಣ್ಣ ಚಾಕುವಿನಿಂದ ಹೆರಿಗೆ ಮಾಡಿಸಿದ್ದರು. ಇದನ್ನು ಶ್ಲಾಘಿಸಿ ರುವ ಜ. ದ್ವಿವೇದಿ ಅವರು ರೋಹಿತ್ ಅವರ ವೃತ್ತಿಪರತೆ ಮತ್ತು ನಿಸ್ವಾರ್ಥ ಬದ್ದತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಚಿತ್ರದುರ್ಗ: ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ 26ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ತಿಳಿಸಿದೆ. ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ದೇವರಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರ ಮಾಡಲಾಗುವುದು. ಬೆಳಿಗ್ಗೆ 10.30ಕ್ಕೆ ಲಕ್ಷ್ಮಿ ನಾರಾಯಣ ಹೃದಯಾ ಹೋಮ 12.30 ಗಂಟೆಗೆ ಪೂರ್ಣವತಿ ನೆರವೇರಿಸಲಾಗುವುದು. ಇನ್ನು ಪೂರ್ಣಾವತಿಗೆ ಭಕ್ತಾದಿಗಳು ಸೀರೆ,ಕುಪ್ಪಸ, ಹಣ್ಣುಗಳು, ದವಸ ಧಾನ್ಯಗಳು ತುಪ್ಪ ಹಾಗೂ ಇನ್ನಿತರೆ ಪೂಜಾ ಸಾಮಗ್ರಿಗಳನ್ನು ನೀಡಬಹುದಾಗಿದ್ದು, ಜೊತೆಗೆ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮವು ನೆರವೇರಲಿ ಎಂದು ದೇವಸ್ಥಾನ ಸೇವಾ ಟ್ರಸ್ಟ್ ತಿಳಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶರಣ್ ಕುಮಾರ ವಹಿಸಲಿದ್ದು, ಇದೆ ವೇಳೆ ಕಾರ್ಯದರ್ಶಿಎಂ.ಪಿ.ವೆಂಕಟೇಶ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್, ನಿರ್ದೇಶಕರು ಹಾಗೂ ಮಲ್ಲಿಕಾರ್ಜುನ ಸ್ವಾಮಿ, ಹನುಮಂತರೆಡ್ಡಿ ಭಾಗಿಯಾಗುವರು.ಈ ಎಲ್ಲಾ ಪೂಜಾ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಸಮಸ್ತ ಭಕ್ತಾದಿಗಳು ಆಗಮಿಸಿ ಪೂಜೆಯನ್ನು ಯಶಸ್ವಿಗೊಳಿಸಬೇಕಾಗಿ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ಮನವಿ…
ಕೆಲವರಿಗೆ ಸಾಮಾನ್ಯವಾಗಿ ದೀರ್ಘಕಾಲ ಕುಳಿತು ಅಥವಾ ಮಲಗಿದ ನಂತರ ಅವರ ಕಾಲುಗಳು ಮತ್ತು ತೋಳುಗಳಲ್ಲಿ ಸೆಳೆತ ಉಂಟಾಗುತ್ತದೆ. ವಿಶೇಷವಾಗಿ ರಾತ್ರಿಯಲ್ಲಿ ಕಾಲು ಸೆಳೆತ ಕಂಡುಬರುತ್ತದೆ. ರಾತ್ರಿಯಲ್ಲಿ ಬರುವ ಈ ಸಮಸ್ಯೆ ನಿದ್ರೆಯ ಜೊತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು. ಈ ಸಮಸ್ಯೆ ಏಕೆ ಉಂಟಾಗುತ್ತದೆ? ಇದರಿಂದ ಹೊರಬರಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ.ಕಾಲುಗಳ ಸೆಳೆತಕ್ಕೆ ಕಾರಣಗಳೇನು?ರಾತ್ರಿ ಕಾಲುಗಳಲ್ಲಿ ಸೆಳೆತಕ್ಕೆ ಹಲವು ಕಾರಣಗಳಿವೆ ಎನ್ನುತ್ತಾರೆ ಖ್ಯಾತ ನರರೋಗ ತಜ್ಞ ಡಾ.ವೇಮುಲ ಶ್ರೀಕಾಂತ್. ನಿರ್ಜಲೀಕರಣ: ದೇಹವನ್ನು ತೇವಾಂಶದಿಂದಿಡಲು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಆದರೆ, ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದೇ ಇದ್ದರೆ ನಿರ್ಜಲೀಕರಣ ಉಂಟಾಗಿ ಕಾಲುಗಳಲ್ಲಿ ಸೆಳೆತ ಉಂಟಾಗುತ್ತದೆ. ಸ್ನಾಯುವಿನ ಆಯಾಸ: ಕೆಲವು ಅಧ್ಯಯನಗಳ ಪ್ರಕಾರ, ಸ್ನಾಯುಗಳು ಹೆಚ್ಚು ವ್ಯಾಯಾಮ ಮಾಡುವಾಗ ಅಥವಾ ಅತಿಯಾಗಿ ವ್ಯಾಯಾಮ ಮಾಡುವಾಗ ಒತ್ತಡದಲ್ಲಿದ್ದಾಗ ಆಯಾಸ ಉಂಟಾಗುತ್ತದೆ. ರಾತ್ರಿ ವೇಳೆ ಕಾಲು ಸೆಳೆತಕ್ಕೆ ಇದೇ ಕಾರಣವಂತೆ. ಹೆಚ್ಚು ಹೊತ್ತು ಕುಳಿತುಕೊಳ್ಳುವುದು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ…
ಇತ್ತೀಚೆಗೆ ಮಾಧ್ಯಮಗಳಲ್ಲಿ ಹದಿ ಹರೆಯದ ಯುವಕ, ಯುವತಿಯರು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಸುದ್ದಿ ಪ್ರತಿಕ್ಷಣದ ಹಾಗೂ ಪ್ರತಿದಿನದ ಪ್ರಮುಖ ಸುದ್ದಿಯಾಗುತ್ತಿವೆ.ಈ ಸಾವನ್ನು ಹಲವು ಆಯಾಮಗಳಲ್ಲಿ ಚರ್ಚಿಸಲಾಗುತ್ತಿದೆ.ನಾನು ವೈದ್ಯ ಅಥವಾ ಹೃದಯತಜ್ಞನಲ್ಲ, ಮೇಲಾಗಿ ಆಹಾರ ತಜ್ಞ ಖಂಡಿತಾ ಅಲ್ಲ. ಇಲ್ಲಿ ಗಮನಿಸಬೇಕಾದ ಬಹು ಮುಖ್ಯ ಸಂಗತಿಯೆಂದರೆ, ದಕ್ಷಿಣ ಕರ್ನಾಟಕದ ಮತ್ತು ಅರೆ ಮಲೆನಾಡಿನಲ್ಲಿ ಇಂತಹ ಸಾವಿನ ಸುದ್ದಿಗಳು ಹೆಚ್ಚಾಗಿವೆ. ಕಳೆದ ಮೂರು ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ 22 ಸಾವುಗಳು ಹಾಗೂ ಹಾಸನ ಜಿಲ್ಲೆಯಲ್ಲಿ 37 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಇದನ್ನು ಹೊರತು ಪಡಿಸಿದರೆ, ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿಯಲ್ಲಿ ಐದಾರು ಸಾವುಗಳು ಸಂಭವಿಸಿರಬಹುದು. ಇಲ್ಲಿ ಪ್ರಶ್ನೆ ಇರುವುದು ಮಂಡ್ಯ ಮತ್ತು ಹಾಸನದಲ್ಲಿ ಏಕೆ ಹೃದಯಾಘಾತದ ಸಾವು ಹೆಚ್ಚಾಗಿವೆ ಎಂಬುದು.ಹೈದರಾಬಾದ್ ಕರ್ನಾಟಕ ಅಥವಾ ಉತ್ತರ ಕರ್ನಾಟಕದಲ್ಲಿ ಬಳ್ಳಾರಿ,ರಾಯಚೂರು, ಗುಲ್ಬರ್ಗಾ, ಕೊಪ್ಪಳ, ಬೀಜಾಪುರ, ಗದಗ ಹೀಗೆ ಬಹುತೇಕ ಜಿಲ್ಲೆಗಳಲ್ಲಿ ಈ ಪ್ರಕರಣ ಶೂನ್ಯ ಎನ್ನಬಹುದು. ಅಥವಾ ಒಂದೆರೆಡು ಸಂಭವಿಸಿದ್ದರೆ, ಸಹಜ ಸಾವು ಎನ್ನಬಹುದು.ಇಡೀ ದಕ್ಷಿಣ ಕರ್ನಾಟಕದಲ್ಲಿ…
ಹೈದರಾಬಾದ್: ರೇಣು ದೇಸಾಯಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರಿಂದ ಬೇರ್ಪಟ್ಟು ಸುಮಾರು 13 ವರ್ಷಗಳಾಗಿವೆ. ಎರಡನೇ ಮದುವೆಯಾಗದೆ ಅವರು ಇನ್ನೂ ಒಂಟಿಯಾಗಿದ್ದಾರೆ. ಅವರು ತಮ್ಮ ಮಗ ಅಕಿರಾ ನಂದನ್ ಮತ್ತು ಮಗಳು ಆಧ್ಯಾಳನ್ನು ನೋಡಿಕೊಳ್ಳುತ್ತಾ ಒಂಟಿ ಜೀವನ ನಡೆಸುತ್ತಿದ್ದಾರೆ. ಆದರೆ, ಅವರು ತಮ್ಮ ಎರಡನೇ ಮದುವೆಗೆ ಸಂಬಂಧಿಸಿದಂತೆ ಆಗಾಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಇದಕ್ಕೆ ಸ್ಪಷ್ಟೀಕರಣ ನೀಡಿದರು. ನಟಿ ತಾವು ಎರಡನೇ ಬಾರಿಗೆ ಯಾವಾಗ ಮದುವೆಯಾಗುತ್ತಾರೆ ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ರೇಣು ದೇಸಾಯಿ ʼಎರಡನೇ ಮದುವೆಯಾಗಲು ಸಿದ್ಧಳಾಗಿದ್ದೇನೆ.. ಆದರೆ ಇಲ್ಲಿ ಒಂದು ಸಣ್ಣ ತಿರುವು ಇದೆ. ಮದುವೆಯಾಗಲು ಇನ್ನೂ ಕೆಲವು ದಿನ ಬೇಕು..ʼ ಎಂದಿದ್ದಾರೆ.. ಮುಂದಿನ ಎರಡು ಮೂರು ವರ್ಷಗಳಲ್ಲಿ ಖಂಡಿತವಾಗಿಯೂ ಮದುವೆಯಾಗುವುದಾಗಿ ರೇಣು ದೇಸಾಯಿ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ I LOVE YOU ಎಂದು ಅಶ್ಲೀಲ ಮೆಸೇಜ್ ಮಾಡಿರುವ ಆರೋಪ ಕೇಳಿ ಬಂದಿದೆ. ರಾಶ್ಚೆರುವು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿಗೆ ಪಿಡಿಓ ಅಶೋಕ್ ಎಂಬುವವರು I LOVE YOU ಎಂದು ಮೆಸೇಜ್ ಕಳುಹಿಸಿದ್ದಾರೆ. ಈಗಾಗಲೇ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಮದುವೆಯಾಗಿದೆ. ಅಲ್ಲದೇ ಪಿಡಿಓ ಆಗಿರೋ ಅಶೋಕ್ ಗೂ ಮದುವೆಯಾಗಿದೆ. ಅಲ್ಲದೇ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇವತಿಗೆ ಅಶ್ಲೀಲ ಮೆಸೇಜ್ ಹಾಗೂ ಖಾಲಿ ಚೆಕ್ಗಳಿಗೆ ಸಹಿ ಹಾಕುವಂತೆ ಅಶೋಕ್, ಮಾಜಿ ಅಧ್ಯಕ್ಷೆ ನೀಲಾವತಿ ಪತಿ ಎ ಎನ್ ಬಾಬು ರೆಡ್ಡಿ, ಹಾಲಿ ಸದಸ್ಯ ನಾಗೇಶ್ ಹಾಗೂ ಭಾನು ಪ್ರಕಾಶ್ ಎಂಬುವವರಿಂದ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪ ಕೇಳಿ ಬಂದಿದೆ. ಹೀಗಾಗಿ ನಾಲ್ವರ ವಿರುದ್ಧ ಚೇಳೂರು ಪೊಲೀಸ್ ಠಾಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ದೂರು ನೀಡಿದ್ದಾರೆ. ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
Subscribe to Updates
Get the latest creative news from FooBar about art, design and business.